ಗೌತಮ್ ಕುತ್ತೆತ್ತೂರ್
ಪ್ರಕಟಿತ ಸಾಹಿತ್ಯ
31
ಓದುಗರು
85,715
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ನಾನು ಕಡಲ ತಡಿಯ ಸುಂದರ ಊರು ಮಂಗಳೂರಿನವನು. ಓದುವುದು ನನ್ನ ಮೆಚ್ಚಿನ ಹವ್ಯಾಸವಾದರೆ, ಸಂಗೀತ ಭಾವದಲ್ಲಿ ಬೆರೆತು ಹೋಗಿರುವಂತಹುದು, ಬರವಣಿಗೆ ಬದುಕಿನಷ್ಟೇ ಪ್ರಿಯವಾದುದು. ಪೂರ್ಣಚಂದ್ರ ತೇಜಸ್ವಿಯವರ ಬರಹಗಳು ಹಾಗೂ ಹಂಸಲೇಖರ ಹಾಡುಗಳೆಂದರೆ ಜಗತ್ತು ಮರೆಯುವಷ್ಟು ಇಷ್ಟ. ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ಜೋಗಿಯವರ ಬರಹಗಳೂ ತುಂಬಾನೇ ಇಷ್ಟ. ಬದುಕಿನ ಕಡುಕಷ್ಟ ಕಾಲದಲ್ಲಿ ಕೈಹಿಡಿದು ನಡೆಸಿದ್ದು, ಚೈತನ್ಯ ತುಂಬಿದ್ದು ಓದಿದ ಪುಸ್ತಕಗಳು ಹಾಗೂ ಕೆಲವು ಅದ್ಭುತ ಹಾಡುಗಳು. ವಿದ್ಯೆಯ ಬಗ್ಗೆ ಹೇಳಬೇಕೆಂದರೆ ಜರ್ನಲಿಸಂ ಓದಬೇಕೆಂದುಕೊಂಡಿದ್ದವನು ಓದಿದ್ದು ಬಿಬಿಎಂ. ಓದಿಗೂ, ಕೆಲಸಕ್ಕೂ ಸಂಬಂಧವೇ ಇಲ್ಲ. 'ನೀ ಹಾಡಾದರೆ ನಾ ಶ್ರುತಿಯಾಗುವೆ' ನನ್ನ ಮೊದಲ ಕಾದಂಬರಿ. ಎರಡನೆಯ ಕಾದಂಬರಿ 'ಪರ್ಯಾಪ್ತ' ಬರೆದು ಮುಗಿಸಿದ್ದೇನೆ. ಎಪ್ರಿಲ್ ಒಳಗೆ ಬಿಡುಗಡೆಯಾಗಬಹುದು. ಕನ್ನಡ ಸಾಹಿತ್ಯವೆಂಬ ವಿಶಾಲ ಸಮುದ್ರದಲ್ಲಿ ನಾನೊಂದು ಪುಟ್ಟ ಬಿಂದು. ಬರವಣಿಗೆ ಚಾಲ್ತಿಯಲ್ಲಿದೆ. ಸಾಹಿತ್ಯಾಸಕ್ತರ ಒಡನಾಟ ಸಿಕ್ಕಾಗ ಮನಸು ಹಾರಾಡುವ ಹಕ್ಕಿಯಾಗುತ್ತದೆ. ಸರಳ ಬದುಕೇ ಸಂತಸದ ಬದುಕೆನ್ನುವ ನಂಬಿಕೆ ನನ್ನದು. ನಿಮ್ಮಂತೆಯೇ ಕನಸುಗಳು ನೂರಾರಿವೆ. ಈಡೇರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದೇನೆ. ಪರಿಚಯ ಇಷ್ಟೇ ಸಾಕು ಅನ್ಸುತ್ತೆ. ನಿಮ್ಮ ಪ್ರತಿಕ್ರಿಯೆಗಳನ್ನು ಮೇಲ್ ಮಾಡಲು ಇಚ್ಛಿಸುವುದಾದರೆ kuthethurgowtham5@gmail.com ಗೆ ಕಳುಹಿಸಿ. ಫೇಸ್ ಬುಕ್ಕಿನಲ್ಲಿ ಸಿಗಬೇಕೆಂದರೆ Gowtham Kuthethur ಎಂದು ಹುಡುಕಿದರೆ ಪ್ರತ್ಯಕ್ಷನಾಗುತ್ತೇನೆ. ಪ್ರೀತಿ ಇರಲಿ, ಪ್ರೋತ್ಸಾಹವಿರಲಿ...!


sowmya shree

4 ಹಿಂಬಾಲಕರು

ದೀಕ್ಷಾ ಧರಿತ್ರಿ

76 ಹಿಂಬಾಲಕರು

Ramya Achar

0 ಹಿಂಬಾಲಕರು

Niveditha .

4 ಹಿಂಬಾಲಕರು

Manasa Hegde

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.