ಪ್ರಮಥಿನಿ

ಪಾರ್ಥಸಾರಥಿ ನರಸಿಂಗ ರಾವ್

ಪ್ರಮಥಿನಿ
(224)
ಓದುಗರು − 2508
ಓದಿರಿ

ಸಾರಾಂಶ

"ನಿಮ್ಮ ಮನೆಯಲ್ಲಿ ಪ್ರಮಥಿನಿ ಎಂಬುವರ ಜೊತೆ ಮಾತಾಡಬೇಕಿತ್ತು". ಅವರ ಮುಖ ಗಂಭೀರವಾಯಿತು. "ಈಗ ಹೊರಹೋದಳಲ್ಲ ನನ್ನ ಮಗಳು ಅವಳೇ ಪ್ರಮಥಿನಿ ಅವಳ ಹತ್ತಿರ ನಿಮಗೇನು ಮಾತು?" ಅಂದರು. ನಾನು ಕಕ್ಕಾವಿಕ್ಕಿಯಾದೆ ಇದು ಹೇಗೆ ನಾನು ನಿರೀಕ್ಷಿಸಿದ ಪ್ರಮಥಿನಿ ಸುಮಾರು 48-49 ವಯಸ್ಸಿನವಳು...... ಇವಳಾದರೊ 20-21 ಇರಬಹುದು ಅಷ್ಟೆ. ಹಾಗಾಗಿ ನಾನು ಮತ್ತೆ ಕೇಳಿದೆ "ಇವರೊಬ್ಬರೇನಾ ಪ್ರಮಥಿನಿ ಅಂದರೆ , ಇನ್ಯಾರಾರು ಇದ್ದಾರ ಸುಮಾರು 49ರ ಪ್ರಾಯದವರು" ಅವರು ಸ್ವಲ್ಪ ಆಶ್ಚರ್ಯಪಟ್ಟು ಏಕೆ ಎಂದರು. ಆಗ ನಾನು ಎಲ್ಲ ತಿಳಿಸಿ ನನ್ನ ಹತ್ತಿರವಿದ್ದ ಪತ್ರ ಅವರಿಗೆ ನೀಡಿದೆ. ಅವರು ಅದನ್ನು ಓದುತ್ತ ವಿಷಾದಭಾವ ತಾಳಿದರು. ನಮ್ಮನ್ನು ಒಳಗೆ ಬನ್ನಿ ಎನ್ನುತ್ತ ಒಳಗಿನ ಹಜಾರಕ್ಕೆ ಕರೆದೋಯ್ದು ಸೋಫ ತೋರಿಸಿ ಕುಳಿತುಕೊಳ್ಳಿ ಎನ್ನುತ್ತ , "ಕುಡಿಯಲು ಕಾಫಿ ಆದೀತ" ಎಂದರು. ನನ್ನಲ್ಲಿ ಕುತೂಹಲ ಜಾಸ್ತಿಯಾಗುತ್ತಿತ್ತು. ಅವರು ನುಡಿದರು "ನೀವು ಹುಡುಕುತ್ತ ಬಂದಿರುವ ಪ್ರಮಥಿನಿ ಬಹುಷಃ ನನ್ನ ಅಕ್ಕ, ಆಕೆ ಮರಣ ಹೊಂದಿ ಸುಮಾರು 22 ವರ್ಷಗಳೇ ಆದವು".

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Mahananda Kurabet
poorti kathena mugisi kalsidre chennagi irtittu
ಪ್ರತಿಕ್ರಿಯೆ
sandhya sreeharsha
ತುಂಬ ಚೆನ್ನಾಗಿ ಮೂಡಿ ಬಂದಿದೆ
JASH CREATION
ತುಂಬ ಚೆನ್ನಾಗಿದೆ..
geeta yalagi
ಪ್ರಮಥಿನಿ ಹೆಸರೇ ಚಂದವಿದೆ. ಬರಹ ಓದಿಸಿಕೊಂಡು ಹೋಗುತ್ತದೆ. ನೈಸ್.
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.