ಪ್ರತಿ ಕ್ಷಣಕ್ಕೂ ನೆನಪಾಗುವ ನೀನು, ನಿನ್ನ ನೆನಪಲ್ಲೇ ಕನಸು ಕಾಣುವ ನಾನು, ಮರೆತರೂ ಸವಿ ನೆನಪಾಗಿ ಕಾಡುವ ನೀನು, ನನಸಾಗದ ಕನಸುಗಳಲ್ಲಿ ಕೊರಗುವ ನಾನು ಏನೇನೋ ಯೋಚನೆಗಳು ಇವತ್ತು ಬರೀ ಅವಳ ನೆನಪೇ ಕಾಡುತ್ತಿದೆ.
ಆಫೀಸ್ ಗೆ ರಜೆ ಹಾಕಿದೆ. ನಿನ್ನ ನೆನಪಲ್ಲೇ ಈ ದಿನಾವನ್ನು ಕಳಿಬೇಕು ಅಂತ ಎಲ್ಲಿಗೂ ಹೋಗದೆ ರೂಮಾಲ್ಲೆ ಕುಳಿತೆ. ನನ್ನ ವಿಚಿತ್ರವಾದ ವರ್ತನೆಯನ್ನು ಕಂಡು ಗೆಳೆಯನಿಗೆ ಆಶ್ಚರ್ಯವಾಯಿತು. ಅವಳ ಮೊದಲ ಭೇಟಿಯ ಕುರಿತು ನನ್ನ ಡೇರಿಯಲ್ಲಿ ಓದುತ್ತಾ ಓದುತ್ತಾ ನನ್ನಲ್ಲೇ ನಾನು ಕಳೆದೋದೆ . 2 ವರ್ಷ ಹಿಂದೆ ಹೋದೆ.

ಅಂದೊಂದು ದಿನ ನಾನು ಕೆಲಸಕ್ಕಾಗಿ ಇಂಟರ್ವ್ಯೂ ಗೆ ಹೋಗಿದ್ದೆ. ಇದಕ್ಕಿಂತ ಮೊದಲು ತುಂಬಾ ಕಡೆ ಕೆಲಸಕ್ಕೆ ಪ್ರಯತ್ನ ಪಟ್ಟಿದ್ದೆ ಆದರೆ ನನಗೆ ಎಲ್ಲೂ ಸರಿಯಾದ ಕೆಲಸ ಸಿಗಲಿಲ್ಲ. ಇವತ್ತು ಹಾಗೆ ಇಂಟರ್ವ್ಯೂ ಗಾಗಿ ಟಿಪ್ ಟಾಪ್ ಆಗಿ ರೆಡಿ ಆಗಿದ್ದೆ. ಆಫೀಸ್ ಎದುರುಗಡೆ ಬೈಕ್ ಪಾರ್ಕ್ ಮಾಡಿ ಬರುತಿದ್ದಾಗ ನನ್ನ ಎದುರಲ್ಲಿ ಒಂದು ಬಸ್ ಬಂದು ನಿಂತಿತು. ನನ್ನ ಕಣ್ಣುಗಳು ಏಕೋ ಬಸ್ ಕಡೆ ನೋಡುತ್ತಿದ್ದ್ದವು. ಆಕಸ್ಮಿಕವೋ ಎಂಬಂತೆ ಕಿಟಕಿಯ ಪಕ್ಕದಲ್ಲಿ ಕುಳಿತು ಗಾಳಿಯಲ್ಲಿ ಹಾರುತಿದ್ದ ಮುಂಗುರಳನ್ನು ಸರಿ ಮಾಡುತಿದ್ದ ದಂತದ ಗೊಂಬೆಯಂತಿರುವ, ಬೆಳದಿಂಗಳ ಚಂದ್ರ ಕೂಡ ನಾಚುವ, ಮುದ್ದಾಗಿರುವ ನಿನ್ನ ಮುಖ, ಮಿಂಚಿನಂತೆ ಹೊಳೆಯುವ ಕಣ್ಣುಗಳು, ಅರಳಿದ ತುಟಿಗಳ ಮರೆಯಲ್ಲಿ ಇಣುಕಿ ನೋಡುವ ನಿನ್ನ ದಂತಗಳು, ಪ್ರಕೃತಿಯ ಎಲ್ಲ ಸೌಂದರ್ಯದ ಸೊಬಗನ್ನು ಆ ದೇವರು ನಿನಗೆ ಕೊಟ್ಟಿರಬಹುದು ಎಂದುಕೊಂಡೆ.

ಆ ಒಂದು ನಿಮಿಷ ನನ್ನಲ್ಲಿ ನಾನು ಕಳೆದೋದೆ. ನೋಡು ನೋಡುತ್ತಿದ್ದಂತೆಯೇ ಬಸ್ ಹೊರಟಿತು. ನನ್ನ ಕಣ್ಣುಗಳು ಮಾತ್ರ ನಿನ್ನನ್ನೇ ನೋಡುತಿದ್ದವು. ರೀ ಮಿಸ್ಟರ್ ಎಂದು ಒಬ್ಬಾತ ಕರೆದಾಗಲೇ ನಾನು ವಾಸ್ತವಕ್ಕೆ ಬಂದದ್ದು. ಇಂಟರ್ವ್ಯೂ ಗಾಗಿ ಅರ್ಧ ಗಂಟೆ ಬೇಗನೆ ಬಂದಿದ್ದೆ.

ನಾನೆ ಮೊದಲು ಬಂದದ್ದು ಅಂದುಕೊಂಡಿದ್ದೆ ನನಗಿಂತ ಮೊದಲೇ 10 ಜನ ಬಂದಿದ್ದರು. ನನಗಿಂತ ಮೊದಲು ಬಂದವರಲ್ಲಿ ಮಾತಾಡುತ್ತ ಅವರ ಜಾಬ್ ಎಕ್ಸ್ಪೀರಿಯೆನ್ಸ್ ಕೇಳಿದೆ ಅವರೆಲ್ಲ 2-3 ವರ್ಷ ಕೆಲಸದಲ್ಲಿ ಅನುಭವ ಉಳ್ಳವರು . ಏಕೋ ನನ್ನಲ್ಲಿ ಸ್ವಲ್ಪ ನಕಾರಾತ್ಮಕ ಯೋಚನೆಗಳು ಬಂದವು. ಮುಂದೆ ಯಾರಲ್ಲೂ ಮಾತಾಡದೆ ನಿನ್ನ ನೋಡಿದ ಕ್ಷಣವನ್ನು ನೆನಪಿಸುತ್ತ ನನ್ನಲ್ಲಿ ಮರೆತೋದೆ.ನನ್ನಲ್ಲಿ ಹೊಸ ಉತ್ಸಾಹ ಮೂಡಿತು. ಅರ್ಧ ಗಂಟೆ ಕಳೆದದ್ದು ತಿಳಿಯಲೇ ಇಲ್ಲ . ಇಂಟರ್ವ್ಯೂ ಆರಂಭವಾಯಿತು.ನೋಡ್ತಾ ಇದ್ದಂತೆ ನನ್ನ ಹೆಸರನ್ನು ಕೂಗಿದರು. ಪೂರ್ತಿ ಆತ್ಮವಿಶ್ವಾಸದಿಂದ ಇಂಟರ್ವ್ಯೂ ಮುಗಿಸಿ ಬಂದೆ. ಫಲಿತಾಂಶ ಎರಡು ದಿನಗಳ ನಂತರ ಅಂತ ಹೇಳಿದರು. ಮನೆಗೆ ಹೊರಟು ಬಂದೆ.

ಮೊದಲೆಲ್ಲ ಇಂಟರ್ವ್ಯೂ ಆದ ಮೇಲೆ ರಿಸಲ್ಟ್ ಗಾಗಿ ಮನಸ್ಸು ಕಾಯುತ್ತಾ ವಿಲ ವಿಲ ಅಂತ ಒದ್ದಾಡುತಿತ್ತು . ಈ ಸಲ ಬರಿ ನಿನ್ನದೇ ನೆನಪು .ಆ ನೆನಪಲ್ಲಿ ಎರಡು ದಿನ ಕಳೆದು ಫಲಿತಾಂಶ ಬಂದದ್ದೇ ತಿಳಿಲಿಲ್ಲ. ಪೋಸ್ಟ್ ಮುಖಾಂತರ ಸೆಲೆಕ್ಷನ್ ಲೆಟರ್ ಕಳಿಹಿಸಲಾಗುದು ಎಂದಿದ್ದರು. ಪೋಸ್ಟ್ ಬಂದ ಕೂಡಲೇ ಸೈನ್ ಹಾಕಿ ಲೆಟರ್ ನೋಡಿ ಓದಿದೆ . ನನ್ನ ಕಣ್ಣುಗಳಿಂದ ನಂಬಲಾಗುತ್ತಿಲ್ಲ ನಾನು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸಾಫ್ಟ್ ವೇರ್ ಕಂಪನಿ ಯಲ್ಲಿ ಅಯ್ಕೆ ಆಗಿದ್ದೆನೆಂದು ಮನೆಯಲ್ಲಿ ಎಲ್ಲರಿಗು ಖುಷಿಯೇ ಖುಷಿ. ನನ್ನ ಮನಸ್ಸು ಆಕೆಯ ನೆನಪಲ್ಲಿ ಜಾರಿತು.

ಮುದ್ದಾದ ಚೆಲುವೆ ನೀನೆಂತ ಮಾಯವೋ ತಿಳಿಯದಾದೆನು ನೀ ನನ್ನ ಬದುಕಲ್ಲಿ ಅದೃಷ್ಟ ದೇವತೆಯಂತೆ ಬಂದೆ, ನನ್ನ ಜೀವನಾದ ಅಪ್ಸರೆ ನೀನು, ನೀ ಯಾರು ನಿನ್ನ ಹೆಸರೇನು? ಯಾವುದು ಕೂಡಾ ನನಗೆ ಗೊತ್ತಿಲ್ಲ .ಆದ್ರೂ ನನ್ನ ಮನಸ್ಸು ನಿನ್ನನ್ನ ಪರಿತಪಿಸುತ್ತಿದೆ.
ನೀ ನನ್ನ ಜೀವನದಲ್ಲಿ ಸಂಗಾತಿಯಾಗಿ ನನ್ನೊಡನೆ ಏಳೇಳು ಜನ್ಮದಲ್ಲೂ ಜೊತೆಗಿರು ಕಣೇ ನಾನು ನಿನ್ನ ನೋಡಿದ ಪ್ರತಿಕ್ಷಣದಿಂದ ನಿನ್ನ ಪ್ರೀತಿಸ್ತಾ ಇದ್ದೀನಿ. ನನ್ನ ಬದುಕಲ್ಲಿ ಸಂಗಾತಿಯಾಗಿ ನನ್ನ ಜೀವನದ ಜ್ಯೋತಿ ಮತ್ತು ಮನೆಗೆ ನಂದ ದೀಪವಾಗಿ ಬೆಳಗಿಸು ನನ್ನ ಚೆಲುವೆ ಎಂದು ನನ್ನಲ್ಲೇ ಅಂದುಕೊಂಡೆ.

ನನ್ನ ಆಫೀಸ್ ಮನೆಯಿಂದ 50 ಕಿ ಮೀ ಇದ್ದ ಕಾರಣ ನ ಅಲ್ಲೇ ಇದ್ದ ವಸತಿ ಗೃಹದಲ್ಲೇ ಉಳಿದೆ. ಅದಕ್ಕಾಗಿ ಬಟ್ಟೆ ಬರೆಗಳನ್ನು ಬ್ಯಾಗ್ ನಲ್ಲಿ ತುಂಬಿಟ್ಟು ಹೊರಟೆ.
ನಿನ್ನ ನೆನಪಲ್ಲೇ 2 ವರ್ಷ ಕಳಿತು ಆದರೆ ನೀನು ಮಾತ್ರ ಮಾತ್ರ ನನಗೆ ನೋಡಲು ಸಿಗಲೇ ಇಲ್ಲ. 2 ವರ್ಷಗಳ ನಂತರ ಆಫೀಸ್ ಗೆ ಹೋಗ್ತಾ ಇರುವಾಗ ಸಿಗ್ನಲ್ ಕೆಂಪು ಬಣ್ಣ ತೋರಿದಕ್ಕಾಗಿ ನಿಂತೆ .ಪಕ್ಕದಲ್ಲಿ ಕಾರ್ ಬಂದು ನಿಂತಿತು. ಅದರ ಪಕ್ಕದಲ್ಲೇ ರೇಡ್ ಸ್ಕೂಟಿ ಯಲ್ಲಿ ನೀನಿದ್ದೆ. ಒಹ್... ಮೈ ...ಗಾಡ್... ನನ್ನ ಸಂತೋಷಕ್ಕೆ ಪದಗಳೇ ಇಲ್ಲ. ನನ್ನ ಹೃದಯ ಬಡಿತ ಮುಗಿಲು ಮುಟ್ಟಿತ್ತು.
ನಿನ್ನೊಂದಿಗೆ ಮತಾಡಬೇಕು ಎನ್ನುವಷ್ಟರಲ್ಲಿ ಸಿಗ್ನಲ್ ನಿಯಮ ಹಸಿರು ಬಣ್ಣವನ್ನು ತೋರಿಸುತಿತ್ತು. ನೋಡು ನೋಡುತ್ತಿದ್ದಂತೆಯೇ ನೀನು ತುಂಬಾ ದೂರ ಹೋದೆ.

ನೀ ಸಿಕ್ಕಿದೆ ಅಂತ ಖುಷಿ ಪಡ್ಲಾ ಅಥವಾ ನಿನ್ನ ಜೊತೆ ಮಾತಾಡಿಲ್ಲ ಅಂತ ದುಃಖ ಪಡ್ಲಾ, ಮನಸ್ಸು ಮಾತ್ರ ಹುಚ್ಚೆದ್ದು ಕುಣಿಯುತಿತ್ತು. ಏನೋ ಉತ್ಸಾಹದಲ್ಲಿ ಕೆಲಸಕ್ಕೆ ಬಂದೆ ಮ್ಯಾನೇಜರ್ ಪೋಸ್ಟ್ ಗೆ ಪ್ರಮೋಷನ್ ಸಿಕ್ಕಿತು. ಅಬ್ಬಾ.... ಡಬಲ್ ಧಮಾಕ.
ನಿನ್ನ ಬೆಳಂದಿಗಳ ಮುಖ ಮತ್ತೆ ಮತ್ತೆ ನೆನಪಾಗುತಿತ್ತು. ನನ್ನ ಅದೃಷ್ಟ ದೇವೆತೆಯೇ ಒಂದು ಸಲ ನನ್ನೊಂದಿಗೆ ಮಾತಾಡು ಅಂತ ಮನಸ್ಸು ಸಾವಿರ ಬಾರಿ ಹೇಳುತಿತ್ತು.
ಈಗಂತೂ ಮನೆಯಲ್ಲಿ ಮದುವೆ ಆಗು ಅಂತ ಒಂದೇ ರಾಗ. ನಾನು ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗ್ತಾ ಇದ್ದೆ ಎಲ್ಲಾ ಹುಡುಗೀರನ್ನ ಬೇಡವೆನ್ನುತಿದ್ದೆ .
ಡೇರಿ ಯಾ ಲೋಕದಿಂದ ವಾಸ್ತವ ಪ್ರಪಂಚಕ್ಕೆ ಬಂದೆ. ಫೋನ್ ರಿಂಗಾಗತೊಡಗಿತು. ಕಾಲ್ ತೆಗೆದು ಹಲೋ ಎಂದೆ. ಆ ಕಡೆಯಿಂದ ಅಮ್ಮನ ಧ್ವನಿ ಇವತ್ತು ಮನೆಗೆ ಬಾರೋ ನಾಳೆ ರಜೆ ಅಲ್ವಾ. ಹೆಣ್ಣು ನೋಡುವುದಕ್ಕೆ ಹೋಗೋಣ ಎಂದರು.ಈ ಸಲ ಕೂಡ ಹೆಣ್ಣು ನೋಡಿ ಬೇಡ ಅಂತ ವಾಪಾಸ್ ಬಂದ್ರೆ ಆಯಿತು ಎಂದುಕೊಂಡೆ.

ನನ್ನ ಭಾಗ್ಯದ ದೇವತೆ ನನ್ನ ಎದೆಯಲ್ಲಿರುವಾಗ ಬೇರೆ ಹೆಣ್ಣಿಗೆ ಎಲ್ಲಿಯ ಜಾಗ ಅಂತ ಅಂದುಕೊಂಡು ಹೊರಟೆ. ಮುಖ ಸಪ್ಪಗೆ ಮಾಡಿ ಕುಳಿತೆ. ಹೆಣ್ಣಿನ ಮನೆಯಲ್ಲಿ ಅತಿಥಿ ಉಪಚಾರ ಚೆನ್ನಾಗಿ ಮಾಡಿದ್ರು ಹೆಣ್ಣನ್ನು ಕರೀರಿ ಅಂತ ನಮ್ಮ ಅಪ್ಪ ಹೇಳಿದ ಮೇಲೆ ಅವಳು ಜ್ಯೂಸು ಹಿಡಿದು ಬಂದಳು. ನನ್ನ ಜೀವನದ ಸಂಗತಿಯನ್ನು ನೆನೆದೆ ಮನಸ್ಸಿಗೆ ಹಿತವೆನಿಸಿತು .ಅವಳು ಬಂದು ಜ್ಯೂಸು ಕೊಟ್ಟಾಗ ಜ್ಯೂಸು ತಗೊಂಡೆ ಅವಳನ್ನು ನೋಡಲೇ ಇಲ್ಲ. ಅವಳು ನನ್ನ ಎದುರುಗಡೆ ಕುಳಿತಳು. ನನ್ನ ಅಮ್ಮ ಮಾತ್ರ ಹೆಣ್ಣು ನೋಡು ಮಹಾಲಕ್ಷ್ಮಿ ತರ ಇದ್ದಾಳೆ ಅಂತಂದ್ರು. ನನ್ನ ಒಳ ಮನಸ್ಸು ನನ್ನವಳನ್ನೇ ಆರಾದಿಸುತಿತ್ತು . ಅವಳನ್ನು ನೋಡಿದೆ... ಒಹ್... ಮೈ ...ಗಾಡ್...ಆಕೆ ನನ್ನ ಸಂಗಾತಿ .ನನ್ನ ಮನ ಮೆಚ್ಚಿದ ಹುಡುಗಿ, ಮನಸ್ಸು ಉಲ್ಲಾಸದಲ್ಲಿ ಕುಣಿಯಿತು.

ಅಮ್ಮ ಹೇಳಿದ ಹಾಗೆ ಆಕೆ ಮಹಾಲಕ್ಷ್ಮಿಯೇ . ಹೆಣ್ಣು ಒಪ್ಪಿಗೆಯ ಅಂತ ನನ್ನಲ್ಲಿ ಕೇಳಿದರು. ನನ್ನ ಒಪ್ಪಿಗೆ ತಿಳಿಸಿದೆ ನನ್ನ ಅಮ್ಮನಿಗೆ ಖುಷಿಯೇ ಖುಷಿ. ನಂತರ ಆಕೆಯಲ್ಲಿ ನಾನು ಒಪ್ಪಿಗೆನಾ ಅಂತ ಕೇಳಿದರು. ನನ್ನ ಎದೆ ಬಡಿತ ಜಾಸ್ತಿ ಆಗಿತ್ತು. ಆಕೆ ನನ್ನನ್ನು ಬೇಡ ಅಂದ್ರೆ ನನ್ನ ಹೃದಯ ಚೂರಾಗುತ್ ತೆ.ಆ ಹೊತ್ತಲ್ಲಿ ನಂಗೆ ಗೊತ್ತಾದದ್ದು ನಾನು ಎಷ್ಟು ಹುಡುಗಿಯರನ್ನು ಬೇಡ ಅಂದಿದ್ದೆ ಅವ್ರಿಗೆ ಎಷ್ಟು ನೋವಾಗಿರಬಹುದ್ ಅಂದುಕೊಂಡೆ. ನನ್ನ ಕಿವಿ ಆಕೆಯ ಮಾತುಗಳಿಗಾಗಿ ಕಾಯುತಿತ್ತು . ಕೊನೆಗೂ ಆಕೆಗೆ ಒಪ್ಪಿಗೆ ಅಂತ ಹೇಳಿದ್ರು. ನನಗೆ ಸ್ವರ್ಗಕ್ಕೆ ಮೂರೇ ಗೇಣು ಇದ್ದಂಗಾಯ್ತು. ಮಾತಾಡಿ ಅಂತ ನಮ್ಮನ್ನು ಇಬ್ಬರನ್ನು ಹೊರಗೆ ಕಳಿಸಿದರು. ಆಕೆಯೊಂದಿಗೆ ಮಾತಾಡಲು ಕಾತರಿಸುತಿದ್ದ ನನ್ನ ಹೃದಯದ ಮಾತು ಮೌನವಾಗಿತ್ತು. ಆದ್ರೂ ಮಾತಾಡಿದೆ ನಿಮ್ ಹೆಸರು ಅಂತ ಸ್ಟಾರ್ಟ್ ಮಾಡಿ ಸುಮಾರ್ ಹೊತ್ತು ಮಾತಾಡಿದೆ. ನಂತರ ಫೋನ್ ನಲ್ಲಿ ಮಾತಾಡಿದ್ದೆ ಮಾತಾಡಿದ್ದು. ಈ ವರೆಗೂ ನಾನವಳಿಗೆ ಹೇಳಿಲ್ಲ ಆಕೆಯ ಪರಿಚಯ ಮೊದಲಿತ್ತೆಂದು.
ಮದುವೆಯ ದಿನ ಕೂಡ ಹತ್ರ ಬಂತು. ಮದುವೆಯ ದಿನ ಹಸೆಮಣೆಯಲ್ಲಿ ಹೇಳಿದ್ದೆ.

"ಓ ನನ್ನ ಭಾಗ್ಯದ ದೇವತೆ ನೀ ನನ್ನ ಬದುಕಲ್ಲಿ ಬಂದು 3 ವರ್ಷ ಆಗಿದೆ. ಇವತ್ತು ನನ್ನ ಸಂಗಾತಿಯಾಗಿ ಕೈ ಹಿಡಿವೆ.
ನನ್ನ ಬದುಕಲ್ಲಿ ಬಂದು ನನ್ನ ಬದುಕನ್ನು ಬೆಳಗು" ಎಂದೇ.

ಮೂರು ವರ್ಷನಾ.!!!! ಹಹ್ಹಹ್ಹ .... ನಿಮ್ಮ ಪರಿಚಯ ಬರೀ 6 ತಿಂಗಳ ಹಿಂದೆ... ಎಂದಳು. ನಾನು ನಕ್ಕು ನನ್ನ ಬದುಕಲ್ಲಿ ನೀ ಹೆಜ್ಜೆಯಿಟ್ಟು 3 ವರ್ಷಗಳಾದವು. 3 ವರ್ಷದ ಹಿಂದೆ ನಾನಿನ್ನ ನೋಡಿದ್ದೇ ಎಂದೇ. ಮದುಮಗಳಾಗಿ ರಂಗೇರಿದ್ದ ನನ್ನಾಕೆ ಇನ್ನೂ ಕೆಂಪಾದಳು .

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.