ಆ ರಾತ್ರಿ!!!


ಸಮಯ ಆಯ್ತು ಮನೆಗೆ ಹೋಗಲ್ವ ...... ನನ್ನ friend ಸತೀಶ್ ಕೇಳಿದಾಗ ಸಮಯ 11 :00 ರಾತ್ರಿ. ನೀನು ಹೋಗು ನಾನು ಸ್ವಲ್ಪ ಕೆಲಸ ಮುಗಿಸಬೇಕು ಎಂದು ಕೆಲಸ ಮುಂದುವರಿಸಿದೆ. ಸ್ವಲ್ಪ ಹೊತ್ತಿನ ನಂತರ ನಾನು ಮನೆಗೆ ಹೊರಟೆ.ದಾರಿಯಲ್ಲಿ ನನ್ನ ಜೊತೆಗೆ ಓದಿದ ಸಿರಿ ಸಿಕ್ಕಿದಳು. ಈ ಹೊತ್ತಿನಲ್ಲಿ ಅವಳನ್ನು ಕಂಡು ನನಗೆ ಆಶ್ಚರ್ಯ. ಅವಳೇ ಬಂದು ಮಾತನಾಡಿಸಿದಳು .ಚೆನ್ನಾಗಿದ್ಯ ಅರುಣ್... ನೋಡಿ ಆಶ್ಚರ್ಯ ಆಯ್ತಾ... ಎಂದಳು. ನೀನು ಯಾವಾಗ USA ಯಿಂದ ಬಂದೆ ಎಂದು ಕೇಳಿದಾಗ ಅವಳು ಬೆಳಗ್ಗೆ ಎಂದಳು. ನಾನು ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿರುವೇ?? ಎಂದು ಕೇಳಿದಾಗ ಅವಳು ಸ್ನೇಹಿತರ ಜೊತೆ ಸಿನಿಮಾಗೆ ಹೋಗಿದ್ದೆ ಬರುವಾಗ ತಡವಾಯಿತು ಎಂದಳು.
ಮದುವೆಯ ದಿನವೇ ನಿನ್ನನ್ನು ನೋಡಿದ್ದು ಮತ್ತೇ ಇಂದೆ ನಿನ್ನನ್ನು ನೋಡಿದ್ದು....ಎಂದಾಗ ಅವಳು
ಆ ಮದುವೆಯ ನಂತರ ನಾನು USA ಗೆ ಹೋದೆ .... ಆದರೆ ನಿನ್ನನ್ನು ಮರೆಯಲಾಗಲಿಲ್ಲ ಎಂದಾಗ ಅವಳ ಕಣ್ಣಿಲ್ಲಿ ನೀರು ಜಿನುಗಿತ್ತು.


(
ಹೌದು.... ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಆದರೆ ಅವಳು ಮದುವೆಯಾಗು ಎಂದಾಗ ನಾನು ಮೊದಲು ದೊಡ್ಡ ಕೆಲಸ ಸಿಗಲಿ ಎಂದು ಮದುವೆ ಮುಂದೆ ಹಾಕಿದ್ದೆ.
ಆದರೆ ಅವಳ ಮನೆಯಲ್ಲಿ ಅವಳಿಗೆ ಮದುವೆ ನಿಶ್ಚಯ ಮಾಡಿದರು. ಹುಡುಗ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದ. ಅವಳು ಎಷ್ಟೇ ಕೇಳಿಕೊಂಡರು ಅವರ ಮನೆಯಲ್ಲಿ ಕೇಳಲಿಲ್ಲ. ನಮ್ಮ ಮನೆಯಲ್ಲಿ ನಾನು ನನ್ನ ತಂಗಿಯ ಮದುವೆ ಮಾಡಬೇಕಿತ್ತು. ಈ ಸಮಯದಲ್ಲಿ ನನ್ನ ಮದುವೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಾಗ ಅವಳು ಕೋಪದಿಂದ ಹೋರಟು ಹೋದಳು. ಅಂದೆ ನಮ್ಮ ಪ್ರೀತಿ ಅಂದೆ ಮುರಿದು ಬಿದ್ದಿತ್ತು.
ನಂತರ ಅವಳ ಮದುವೆ ಮುಗಿದು ಅವಳು ಅಮೇರಿಕಾಗೆ ಹೋದಳು. ಅವಳ ನೆನಪು ಕಾಡುತ್ತಿದ್ದರು ಸಮಯದ ನಂತರ ಅವಳ ನೆನಪು ಮಾಸಿತ್ತು.)
ಇಷ್ಟು ನೆನಸಿಕೊಂಡಾಗ ನನಗೆ ಗೊತ್ತಾಗದೆ ನನ್ನ ಕಣ್ಣಲ್ಲು ನೀರು ಬಂದಿತ್ತು.
ಅವಳು ಏಕೆ ಅಳುತ್ತೀಯ ಎಲ್ಲಾ ಮುಗಿದು ಹೋದದ್ದು ಎಂದಳು.

ನಾನು ಹೇಗಿದ್ದೀಯಾ....... ಎಂದೆ. ಅದಕ್ಕೆ ಅವಳು ನಕ್ಕು ಸುಮ್ಮನಾದಳು.ನನಗೆ ಅರ್ಥವಾಗಲಿಲ್ಲ...ಸುಮ್ಮನಾದೆ.
ಮನೆ ಸಮೀಪಿಸುತ್ತಿತು.ನಮ್ಮ ಮನೆಯ ಮುಂದೆಯೇ ಅವಳ ಮನೆ ಅಲ್ಲಿ ತುಂಬಾ ಜನ ಸೇರಿದ್ದರು. ನನಗೆ ಗಾಬರಿ ಆಯಿತು ಏನು ಎಂದು ನೋಡಲು ಮುಂದುವರೆದೆ. ನನ್ನ ಹಿಂದೆ ಬರುತ್ತಿದ್ದ ಅವಳು ಕಾಣಲಿಲ್ಲ. ಸುತ್ತಲು ನೋಡಿದೆ ಕಾಣಲಿಲ್ಲ ಹೋಗಿರ ಬಹುದು ಎಂದು ಮನೆ ಸಮೀಪಿಸಿದೆ. ಅಲ್ಲಿ ನೋಡಿದರೆ ಮನೆಯ ಮುಂದೆ ತುಂಬಾ ಜನ ಸೇರಿದ್ದರು. ಸಿರಿಯ ಅಮ್ಮ ಜೋರಾಗಿ ಅಳುತ್ತಾ ಇದ್ದರು ಎದುರು ಸಿರಿಯ ಮೃತದೇಹ!!! ನನ್ನ ಜಂಗಾಬಲವೇ ಕುಸಿಯಿತು ಅಲ್ಲೇ ಕೂತುಬಿಟ್ಟೆ. ಅಮ್ಮ ಬಂದು ನನ್ನನ್ನು ಒಳಗೆ ಕರೆದುಕೊಂಡು ಹೋದರು. ನಾನು ಏನಾಗಿದೆ ಎಂದು ಕೇಳಿದಾಗ ಅಮ್ಮ.... ಸಿರಿ &ಅವಳ ಗಂಡ ಇಂದು ಇಲ್ಲಿಗೆ ಬರುವಾಗ ಅಪಘಾತವಾಗಿ ಸಿರಿ ತನ್ನ ಪ್ರಾಣ ಕಳೆದುಕೊಂಡಳು ಎಂದರು.ನನಗೆ ದಿಗ್ಗಭ್ರಮೆ ಆಯಿತು. ಆಗಾದರೆ ನನ್ನ ಜೊತೆಗೆ ಬಂದವರಾರು ಎಂದು ಯೋಚಿಸುತ್ತಾ.......... ಕುಳಿತೆ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.