ಸಾವಿನ ದಾರಿ

ಅದೊಂದು ಮಂಗಳೂರಿನ ಶಿಕ್ಷಣ ಕ್ಷೇತ್ರಗಳಲ್ಲಿಯೇ ಹೆಸರುವಾಸಿಯಾಗಿದ್ದ ಕಾಲೇಜು. ಎಲ್ಲ ಕಾಲೇಜುಗಳಲ್ಲಿ ನಡೆಯುವಂತ ಪ್ರೀತಿ ಪ್ರೇಮ ಮೋಜು ಮಸ್ತಿ ಇಲ್ಲಿ ಕೂಡಾ ಸಾಮಾನ್ಯವಾಗಿತ್ತು. ಅಲ್ಲಿ ಪ್ರಾಣ ಸ್ನೇಹಿತರಾಗಿದ್ದ ಮೂರು ಯುವಕರು ಹಾಗೂ ನಾಲ್ಕು ಯುವತಿಯರ ಒಂದು ತಂಡವಿತ್ತು. ಅದರಲ್ಲಿ ಅವೀನಾಶ್ ಹಾಗೂ ಪ್ರೀತಿ ಪರಸ್ಪರ ಪ್ರೀತಿಸುತ್ತಿದ್ದರು. ಉಳಿದವರು ಆತ್ಮೀಯ ಸ್ನೇಹಿತರಾಗಿದ್ದರು. ಕಾಲೇಜು ಬಂಕ್ ಹಾಕಿ ಸಿನಿಮಾ, ಮಾಲ್ ಎಂದು ತಿರುಗುತ್ತಿದ್ದರು. ಎಲ್ಲರೂ ಶ್ರೀಮಂತ ಕುಟುಂಬದಿಂದಲೇ ಬಂದವರಾದ್ದರಿಂದ ಹಣದ ಸಮಸ್ಯೆ ಇರಲಿಲ್ಲ ಯಾರಿಗೂ.

ರಜಾ ಬಂದರೆ ಸಾಕು ಟೂರ್ ಟ್ರಕಿಂಗ್ ಗುಡ್ಡ ಬೆಟ್ಟ ಸುತ್ತಾಡುತ್ತಿದ್ದರು. ಹೀಗೆ ಈ ಗೆಳೆಯರ ಗುಂಪು ಕಾಲೇಜು ಕ್ಯಾಂಟಿನ್ ನಲ್ಲಿ ಮುಂದಿನ ರಜಾ ಸಮಯದಲ್ಲಿ ಟ್ರಕಿಂಗ್ ಹೋಗುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬ ಹೇಳಿದ ಈ ಸಲ ಟ್ರಕಿಂಗ್ ಬೇಡ ನಾವು ಫಾಲ್ಸ್ಗೆ ಹೋಗೋಣವೆಂದು ಈತನ ಮಾತಿಗೆ ಯಾರು ತಲೆ ಆಡಿಸಲಿಲ್ಲ. ಈತನು ಸುಮ್ಮನೆ ಕುಳಿತು ಹೇಳಿದೆ ಸಾಯ್ಲಿ ನೀವೇ ಹೇಳಿ ಎಂದು ಮುಖ ಊದಿಸಿ ಕುಳಿತ. ಒಬ್ಬಬ್ಬೊರು ಒಂದೊಂದು ಕಡೆ ಸ್ಥಳ ಹೇಳಿದರು ಯಾರೋಬ್ಬರಿಗೂ ಹಿಡಿಸಲಿಲ್ಲ. ಕಡೆಗೆ ಐಶ್ವರ್ಯ ಎನ್ನುವ ಹುಡುಗಿ. ಈಕೆ ತೀರ್ಥಹಳ್ಳಿಯಿಂದ ಬಂದವಳಾಗಿದ್ದಳು. ಈಕೆ ಒಂದು ಸ್ಥಳದ ಬಗ್ಗೆ ಹೇಳಲು ಮಾತು ಮುಂದುವರಿಸಿದಳು! ನಮ್ಮೂರಿಗಿಂತ ಸುಮಾರು 20ಕಿ.ಮೀ ದೂರದಲ್ಲಿ ಒಂದು ಭಯಾನಕ ಕಾಡಿದೆ. ಆ ಕಾಡಿನ ಬಗ್ಗೆ ಇಡೀ ತೀರ್ಥಹಳ್ಳಿಗೆನೆ ತುಂಬಾನೇ ಭಯ ಇದೆ. ನನ್ನ ಅಜ್ಜಿ ಆ ಕಾಡಿನ ಬಗ್ಗೆ ಕಥೆ ಹೇಳುತ್ತಿದ್ದರು ಎಂದು ಕಥೆ ಹೇಳಲು ಶುರು ಮಾಡಿದಳು.

ಹಿಂದಿನ ಕಾಲದಲ್ಲಿ ಶಿಕಾರಿಗೆಂದು ಆ ಕಾಡಿನ ಕಡೆ ರಾತ್ರಿ ಹೊತ್ತು ಹೋಗುತ್ತಿದ್ದರಂತೆ. ಆದರೆ ಆ ದಿನ ನನ್ನ ಮುತ್ತಜ್ಜ ಹಾಗೂ ಅವರ ತಂಡ ಬೇಟೆಗೆಂದು ಹೋದವರು ಮತ್ತೆ ಹಿಂತಿರುಗಿ ಬಂದೇ ಇಲ್ವಂತೆ. ರಾತ್ರಿ ಹೊತ್ತು ವಿಚಿತ್ರ ಬೊಬ್ಬೆಗಳು ಈಗಲೂ ಕೇಳಿಸತ್ವೆ ಅಂತೆ ಎಂದು ಕಥೆ ಮುಗಿಸಿದಳು. ಎಲ್ಲರೂ ಇಂತಹ ಸ್ಥಳವೇ ಬೇಕಾಗಿದ್ದು ನಮಗೆ ಎಂದು ಕುಶಿಯಿಂದ ಒಪ್ಪಿಗೆ ಸೂಚಿಸಿದರು. ಆದರೆ ಇದಕ್ಕೆ ಜೋಡಿಗಳು ಅವೀನಾಶ್ ಮತ್ತು ಪ್ರೀತಿ ಮಾತ್ರ ಒಪ್ಪಲಿಲ್ಲ. ಅದಕ್ಕೆ ಹರೀಶ ಎಂಬುವಾತ ಹೇಳಿದ ಅವಳು ಅಜ್ಜಿ ಕಥೆ ತಾನೇ ಹೇಳಿದ್ದ ನೀವ್ ಯಾಕೇ ಭಯ ಪಡ್ತೀರ ಎಂದು ಅವರನ್ನು ಒಪ್ಪಿಸಿ ಒಂದು ದಿನ ನಿಗದಿ ಮಾಡಿದರು. ಆದರೆ ಹೊರಗಿನ ಹಾಗೂ ಮನೆಯ ಯಾರಿಗೂ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳಲಿಲ್ಲ. ಟ್ರಕಿಂಗ್ ಗೆ ನಿಗದಿಪಡಿಸಿದ ದಿನ ಅಂದು ಬಂದೇ ಬಿಟ್ಟಿತು. ಎಲ್ಲರೂ ಸಕಲ ಸಿದ್ಧತೆಯಿಂದ ಹೊರಟು ನಿಂತರು. ಕಾರ್ ಕೂಡ ಅವರ ಜತೆಗಿದ್ದ ದಿನೇಶ್ ಎಂಬುವನ ಹತ್ತಿರ ಇದ್ದುದರಿಂದ ಅಷ್ಟು ಸಮಸ್ಯೆಯಾಗಲಿಲ್ಲ. ಹೀಗೆ ಸಾಗುತ್ತ ಸುಮಾರು ಮಧ್ಯಾಹ್ನ 3ಗಂಟೆಯ ಹೊತ್ತಿಗೆ ತೀರ್ಥ ಹಳ್ಳಿ ತಲುಪಿದರು ಅಲ್ಲಿ ಹೋಟೇಲ್ ಒಂದರಲ್ಲಿ ಊಟ ಮುಗಿಸಿ ಆ ಕಾಡಿನಡೆ ಸಾಗಿದರು.

ಆ ಕಾಡಿನ ಕಡೆ ಹೋಗುವ ರಸ್ತೆಯ ಬಗ್ಗೆ ಜನರ ಬಳಿ ಕೇಳಿದರು. ಕೆಲವರು ಅಲ್ಲಿ ಹೋಗಬೇಡಿ ಎಚ್ಚರಿಸಿದರು, ಕೆಲವರು ಬಯ್ದರು. ಆದರೂ ಆ ಕಾಡಿನ ಒಳಗಡೆ ಹೋಗಲೇಬೇಕಿಂದ್ದ ತಂಡ ಆ ಭಯಾನಕ ಕಾಡಿನ ಮುಂದೆ ಸುಮಾರು 6•30ಹೊತ್ತಿಗೆ ಬಂದೆ ಬಿಟ್ಟಿತು. ಹೆಣ್ಮಕ್ಕಳು ಮೊದಲಿಗಾಗಿ ಸೆಲ್ಪಿ ತೆಗೆಸಿಕೊಂಡರು. ಹುಡುಗರು ಬ್ಯಾಗನ್ನು ಕಾರಿಂದ ಇಳಿಸಿ ಆ ಏಳು ಜನರ ತಂಡ ಕಾಡಿನೊಳಗಡೆ ಹೆಜ್ಜೆ ಹಾಕಿದರು. ಕಾಡಿನೊಳಗಡೆ ಕತ್ತಲು ಕಾವಿದಿದ್ದರಿಂದ ಮೊಬೈಲ್ ಟಾರ್ಚ್ ಬಳಸಿ ಮುಂದೆ ಸಾಗುತ್ತಿದ್ದರು. ಕಾಡನ್ನು ಕಂಡು ಒಮ್ಮೆ ಎಲ್ಲರೂ ಹೆದರಿದ್ದರೂ ಯಾಕಾದ್ರೂ ಈ ಹಾಳಾದ್ ಉಪಾಯ ಕೊಟ್ಟಿಯಮ್ಮ ಎಂದು ಬಯ್ಯುತ್ತಿದ್ದ ಅವಿನಾಶ್ ಮುಂದೆ ಸಾಗುತ್ತಿದ್ದಂತೆ ಸಣ್ಣ ಬೆಳಕೊಂದು ಕಾಣಿಸಿತು. ಆ ಕಡೆ ಎಲ್ಲರೂ ಹೆಜ್ಜೆ ಹಾಕಿದರು. ಅಲ್ಲಿ ನೋಡಿದರೆ ಬೆನ್ನು ಬಾಗಿ ಕುಳಿತಿದ್ದ ಮುದುಕಪ್ಪ ಸಣ್ಣ ಮುಗುಳ್ನಗೆಯಿಂದ ಸ್ವಾಗತಿಸಿದ!

ಬನ್ನಿ ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ ಸಣ್ಣ ಗುಡಿಸಿಲಿನ ಒಳಗೆ ಹೋಗಿ ನೀರು ತಂದು ಕೊಟ್ಟ. ಎಲ್ಲರಿಗೂ ಆಶ್ಚರ್ಯ ತಮ್ಮ ತಮ್ಮ ಮುಖ ನೋಡಿಕೊಂಡರು. ದಿನೇಶ ಆ ಮುದುಕಪ್ಪನ ಬಳಿ ಕೇಳಿದ ನೀವೇನು ಈ ಕಾಡಲ್ಲಿ ಒಬ್ರೇ ಭಯ ಆಗಲ್ವ ಅಂದ. ಅದಕ್ಕೆ ಮುದುಕಪ್ಪ ನಗುತ್ತಾ ಹೇಳಿದ... ಹೊರಗಿನ ಆ ಹಾಳು ಪ್ರಪಂಚಕ್ಕಿಂತ ಇಲ್ಲೇ ಸುಖವಾಗಿದ್ದೀನಿ, ಮುಂದೆ ಹೋಗಿ ನೀವು ನನಗೆ ಬೇಕಾದವರು ತುಂಬ ಜನ ಇದ್ದಾರೆ ಎಂದು! ಆ ಮುದುಕನಿಗೆ ತಲೆ ಕೆಟ್ಟಿರಬೇಕು ಏನೇನು ಮಾತಾಡ್ತೀದ್ದಾನೆ ಎಂದು ಮುಂದೆ ಸಾಗಿದರು. ಹೀಗೆ 5ನಿಮಿಷ ಮುಂದೆ ಸಾಗಿದ ಇವರು ಪ್ರೀತಿ ತನ್ನ ಬ್ಯಾಗನ್ನು ಆ ಮುದುಕಪ್ಪನ ಗುಡಿಸಲಿನ ಮುಂದೆ ಬಿಟ್ಟು ಬಂದಿದ್ದಳು. ಅದನ್ನು ತರಲು ಹೋದ ಪ್ರೀತಿ ಮತ್ತು ಅವೀನಾಶ್ ಅಲ್ಲಿಗೆ ಹೋಗಿ 15ನಿಮಿಷ ಕಳೆದರೂ ವಾಪಾಸ್ ಬರದನ್ನೂ ಕಂಡು ಗಾಬರಿಗೊಂಡ ಉಳಿದವರು ಆ ಗುಡಿಸಲಿನ ಕಡೆ ಹೆಜ್ಜೆ ಹಾಕಿದ್ದರು.

ಆ ಕಡೆ ಅವೀನಾಶ್ ಮತ್ತು ಪ್ರೀತಿ ಬೊಬ್ಬಿಡುವುದು ಕೇಳಿಸಿತು. ಎಲ್ಲರೂ ಅಲ್ಲಿ ಹೋಗಿ ನೋಡಿದರೆ ಇವರು ಭಯಭೀತರಾಗಿದ್ದರು ಏನ್ರೋ ಏನಾಯಿತು ನಿಮಗೆ ಎಂದು ಕೇಳಿದಾಗ ಅವೀನಾಶ್ ಹೇಳಿದ ಬ್ಯಾಗ್ ಇದ್ದ ಸ್ಥಳದಲ್ಲಿ ಮುದುಕಪ್ಪನು ಇಲ್ಲ, ಆ ಗುಡಿಸಲು ಇಲ್ಲ ಕಣ್ರೋ ಎಂದು ಎಲ್ಲರೂ ಕ್ಷಣ ಕಾಲ ದಂಗಾದರು. ಅದಕ್ಕೆ ದಿನೇಶ್ ಹೇಳಿದ ಹಾಗಾದ್ರೇ ಹಿಂದೆ ಹೋಗೋಣ ಇಲ್ಲಿ ಇರೋದು ಬೇಡ ಎಂದು ಎಲ್ಲರು ಒಪ್ಪಿಗೆ ಸೂಚಿಸಿದರು. ಆದರೆ ಅವೀನಾಶ್ ಮತ್ತು ಪ್ರೀತಿ ಮಾತ್ರ ಇವತ್ತು ಇಲ್ಲೇ ಇರೋಣ ಬೆಳಗಿನ ಜಾವ ಎದ್ದು ಹೋಗೋಣವೆಂದು ಎಲ್ಲರಿಗೂ ಒಂದು ಕ್ಷಣ ಆಶ್ಚರ್ಯವಾದರು ಇವರ ಮಾತು ಸರಿ ಎನಿಸಿ ಸ್ವಲ್ಪ ಮುಂದೆ ಬಂದು ರಾತ್ರಿ ಉಳಿಯಲು ಜಾಗವನ್ನು ಹುಡುಕುತ್ತಿದ್ದಾಗ ದೂರದಲ್ಲೋಂದು ಅರಮನೆಯಂತಹ ಪಾಳು ಮನೆ ಅವರ ಕಣ್ಣಿಗೆ ಕಾಣೆಸಿತ್ತು!

ಯಾರಪ್ಪ ಈ ಭಯಾನಕ ಕಾಡಲ್ಲು ಇಷ್ಟು ದೊಡ್ಡ ಮನೆ ಕಟ್ಟಿಸಿದ್ದು ಎಂದು ಗೊಣಗಾಡಿದ ದಿನೇಶ್ ನಾವೆಲ್ಲ ಆ ಮನೆಯಲ್ಲಿ ಇವತ್ತು ಇರೋಣ ಎಂದ ಅವೀನಾಶ್ ಎಲ್ಲರೂ ಮನೆ ಕಡೆ ನಡೆದರು. ಮನೆಯ ಗೇಟನ್ನು ತೆಗೆದು ಒಳಗೆ ಹೋದರು. ಮನೆಯ ಒಳಗಡೆ ದೀಪ ಕಾಣಿಸುತ್ತಿತ್ತು. ಮನೆಯ ಬೆಲ್ ಒತ್ತಿದಾಗ ಒಬ್ಬಳು ಮಧ್ಯ ವಯಸ್ಸಿನ ಹೆಂಗಸು ಬಾಗಿಲು ತೆಗೆದು ಯಾರು ನೀವು ಇಲ್ಲಿ ಯಾಕೇ ಬಂದೀರುವೀರಿ ಎಂದು ಕೇಳಿದಳು. ಆಗ ಅಲ್ಲೇ ಇದ್ದ ಐಶ್ವರ್ಯ ನಡೆದ ವಿಷಯವನ್ನು ವಿವರಿಸಿ ಹೇಳಿದಳು. ಅದಕ್ಕೆ ಆ ಮಹಿಳೆ ಆಯಿತು, ಇವತ್ತು ರಾತ್ರಿ ಇಲ್ಲೇ ಉಳಿದುಕೊಳ್ಳಿ, ನಾಳೆ ಹೊರಡುವಿರಂತೆ ಎಂದು ಹೇಳಿ ಒಳಗೆ ಕರೆದುಕೊಂಡು ಹೋಗಿ ತನ್ನ ಇಳಿ ಪ್ರಾಯದ ಗಂಡ ಹಾಗೂ ತನ್ನಿಬ್ಬರು ಮಕ್ಕಳನ್ನು ಪರಿಚಯಿಸಿದರು. ಹಾಗೂ ಮಾತು ಮುಂದುವರಿಸಿದ ಮಹಿಳೆ ಬನ್ನಿ ಊಟ ಮಾಡೋಣ ಮಾಂಸದ ಊಟ ತಯಾರಿಸಿದ್ದೇನೆ ಎಂದು ಹೇಳಿದಾಗ ಎಲ್ಲರೂ ನಿರಾಕರಿಸಿದಾದರು. ಮಹಿಳೆಯ ಒತ್ತಾಯದ ಮೇರೆಗೆ ಊಟ ಮಾಡಿ ಮುಗಿಸಿದರು. ಇದಾದ ಮೇಲೆ ವಾಶ್ ರೂಮ್ ಎಲ್ಲಿದೆ ಎಂದು ಮಹಿಳೆ ಬಳಿ ಐಶ್ವರ್ಯ ಕೇಳಿದಾಗ ಆ ಮಹಿಳೆ ಅಲ್ಲೇ ಕಿಚನ್ ಪಕ್ಕ ಇದೆ ಆದರೆ ಕಿಚನ್ ಒಳಗೆ ಮಾತ್ರ ಹೋಗಬೇಡಿ ಎಂದು ಎಚ್ಚರಿಸಿದಳು. ಮೂವರು ಹುಡುಗಿಯರು ಹೊರಟರು. ಪ್ರೀತಿಯನ್ನು ಕರೆದರು ಆಕೆ ಮಾತ್ರ ಇಲ್ಲ ನೀವು ಹೋಗಿ ಬನ್ನಿ ಎಂದು ನಿರಾಕರಿಸಿದಳು. ಆಯ್ತು ಎಂದು ಮೂವರು ಹುಡುಗಿಯರು ತಪ್ಪಿ ಕಿಚನ್ನ ಒಳಗೆ ಹೋದಾಗ ದಂಗಾಗಿಹೋದರು. ಅಲ್ಲಿ ಅವೀನಾಶ್ ಮತ್ತು ಪ್ರೀತಿಯ ರುಂಡ ಮಾತ್ರ ನೇತಾಡುತ್ತಿತ್ತು. ತಾವು ತಿಂದದ್ದು ಅವರ ಮಾಂಸವೇ ಎಂದು ಅರಿವಾಗಿತ್ತು!!!

ತಿಂದದೆಲ್ಲ ವಾಂತಿ ಮಾಡಿ ಭಯಗೊಂಡರು. ಯಾರಿಗೂ ವಿಷಯ ತಿಳಿಸದೆ ಮೆಲ್ಲಗೆ ಬಂದು ಕೂತರುಅಲ್ಲಿ ಬಂದು ನೋಡಿದರೆ ಅವೀನಾಶ್ ಮತ್ತು ಪ್ರೀತಿ ಇರಲಿಲ್ಲ! ಅವರೆಲ್ಲಿ ಎಂದೂ ಕೇಳಿದಾಗ ದಿನೇಶ್ ಇಲ್ಲೇ ಸುತ್ತಾಡ್ಕೊಂಡು ಬರ್ತೀವಿ ಅಂತ ಹೇಳಿದ್ರು ಅಂದ. ಉಳಿದ ಹುಡುಗಿಯರು ತಮ್ಮ ತಮ್ಮ ಮುಖ ನೋಡಿಕೊಂಡು ದಿನೇಶ್ ಮತ್ತು ಹರೀಶನ್ ಬಳಿ ಕಿಚನ್ನ ಒಳಗೆ ನೋಡಿದ ವಿಷಯವನ್ನು ಹೇಳಿ, ಇಲ್ಲಿ ಇದ್ರೇ ನಾವು ಬದುಕಿ ಉಳಿಯಲ್ಲ ಅವರ ಕಣ್ಣು ತಪ್ಪಿಸಿ ಓಡಿ ಹೋಗೋಣವೆಂದು ನಿರ್ದರಿಸಿದರು. ಇವರ ಮುಖದಲ್ಲಿ ಆತಂಕ ನೋಡಿ ಆ ಹೆಂಗಸಿಗೂ ಅರ್ಥವಾಯಿತು. ತನ್ನ ಮಕ್ಕಳು ಹಾಗೂ ಗಂಡನಿಗೆ ಕಣ್ ಸನ್ನೆ ಮಾಡಿ ಅವರನ್ನು ಹೊರಗೆ ಹೋಗದಂತೆ ತಡೆದರು. ಇದರಿಂದ ಮತ್ತಷ್ಟು ಗಾಬರಿಗೊಂಡ ರೇಖಾ ಎನ್ನುವ ಹುಡುಗಿ ಓಡಲು ಹೆಜ್ಜೆ ಮುಂದೆ ಹೆಜ್ಜೆ ಹಾಕಿದಾಗ ಅವಳನ್ನು ಎಳೆದು ತಂದು ಅವರ ಮುಂದೆನೇ ತಲೆಯನ್ನು ಕತ್ತರಿಸಿ ಹಾಕಿದರು!

ತಮ್ಮ ಕಣ್ಣೆದುರು ತಮ್ಮ ಗೆಳತಿಯ ಕೊಂದದ್ದು ನೋಡಿ ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿತ್ತು! ಅಲ್ಲೇ ನಾಲ್ಕು ಜನ ಕೂತರು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಆ ಹೆಂಗಸು ಮಕ್ಕಳು ಮಲಗಲು ರೂಮ್ಗೆ ಹೊರಟರು. ಇದೇ ಸರಿಯಾದ ಸಮಯ ಎಂದು ತಿಳಿದ ನಾಲ್ವರು ಮೆಲ್ಲಗೆ ಬಾಗಿಲನ್ನು ತೆಗೆದು ಓಡಿಬಂದರು. ಎಷ್ಟು ದೂರ ಓಡಿ ಬಂದರೋ ಅವರಿಗೆ ತಿಳಿಯದಾಯಿತು. ಅರ್ಧ ಗಂಟೆ ಓಡಿಬಂದ ಮೇಲೆ ಒಂದು ಕಡೆ ನಿಂತರು! ಆದರೆ ಮೂವರು ಮಾತ್ರ ಹರೀಶ ಕಾಣಿಸಲೇ ಇಲ್ಲ. ಮತ್ತೆ ಹಿಂದೆ ಬಂದ ಇವರು ಮೊಬೈಲ್ ಟಾರ್ಚ್ ಹಿಡಿದು ನೋಡಿದಾಗ ಮರದಲ್ಲಿ ಹರೀಶನ ಹೆಣ ನೇತಾಡುತ್ತಿತ್ತು. ಇದನ್ನು ಕಂಡು ಮತ್ತಷ್ಟು ಹೆದರಿದ ಮೂವರು ಅಲ್ಲಿಂದ ಓಡಲು ಶುರು ಮಾಡಿದರು. ಕತ್ತಲೆಯಲ್ಲಿ ಬೆಳಕು ಇಲ್ಲದೆ ಒಬ್ಬೋಬ್ಬರು ಒಂದೊಂದು ದಾರಿಯಲ್ಲಿ ಹೋದರು. ಐಶ್ವರ್ಯ ಮಾತ್ರ ಓಡಿ ಹೋಗಿ ಒಂದು ಕಡೆ ಕುಸಿದು ಬಿದ್ದಳು. ತಲೆ ಎತ್ತಿ ನೋಡಿದಾಗ ಅವೀನಾಶ್ ಮತ್ತು ಪ್ರೀತಿ ವಿಕಾರ ರೂಪದೊಂದಿಗೆ ಕುತ್ತಿಗೆ ಹಿಡಿಯಲು ಮುಂದಾದರು! ಐಶ್ವರ್ಯ ಭಯದಿಂದ ದಯವಿಟ್ಟು ಏನೂ ಮಾಡಬೇಡಿ ಅಮ್ಮ ಎಂದು ಕಿರುಚಿದಳು. ಏನಾಯ್ತೇ ನಿಂಗೆ ಎಂದು ಬದಿಯಲ್ಲಿ ಸ್ವರ ಕೇಳಿ ಎಚ್ಚೆತ್ತ ಐಶ್ವರ್ಯ ಎದ್ದು ನೋಡಿದಾಗ ತನ್ನ ಸುತ್ತ ಗೆಳೆಯರು ನಿಂತಿದ್ದರು. ಇಷ್ಟು ಹೊತ್ತು ಕಂಡದ್ದು ಕನಸು ನಾನೀವಾಗ ಕ್ಲಾಸ್ ನ ಒಳಗೆ ಇದ್ದೇನೆ ಎಂದು ವಾಸ್ತವ ಅರಿವಾಗಿ ತಾನೂ ಕಂಡ ಕನಸ್ಸನ್ನು ಗೆಳೆಯರ ಜೊತೆ ಹಂಚಿ ಬಿದ್ದು ಬಿದ್ದು ನಕ್ಕರು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.