ಒಂದು ಕರೆಯ ಕಥೆಅವನು ಅವಳನ್ನು ತುಂಬಾ ಪ್ರೀತಿ ಮಾಡುತ್ತಿದ್ದ..ಆದರೆ ಮನಸ್ಸು ಬಿಚ್ಚಿ ಹೇಳೋಕೆ ಧೈರ್ಯವಿರಲಿಲ್ಲ..ಮನೆಯ ಕಷ್ಟ ನೋಡಿ ತನ್ನ ಪ್ರೀತಿಯನ್ನು ಆಗೇಯೇ ಮುಚ್ಚಿಟ್ಟಿದ್ದ..ಅವಳೂ ಅಷ್ಟೇ ಹೇಳಲಾರದೇ ಮುಚ್ಚಿಟ್ಟಿದ್ದಳು..ಹೀಗೇಯೇ ದಿನಗಳು ಉರುಳುತ್ತಿದ್ದವು..ಊರಿನಲ್ಲಿದ್ದರೆ ಏನೂ ಮಾಡಲಾಗದೆಂದು ಅರಿತು ಸಾಲ ಮಾಡಿ ಗಲ್ಫ್ ಗೆ ಹೊರಟೇ ಬಿಟ್ಟ..ವಿದಾಯದ ಸಮಯದಲ್ಲಾದರೂ ಹೇಳುವನೆಂಬ ನಿರೀಕ್ಷೆ ಇಟ್ಟಿದ್ದಳು...ಆದರೂ ಅವನಿಗೆ ಹೇಳಲು ಧೈರ್ಯ ಬರಲೇ ಇಲ್ಲ...ಗಲ್ಫಿಗೆ ಬಂದು ಒಂದು ವರ್ಷ ಆದ ಮೇಲೆ ತನ್ನ ಮೇಲೆ ನಂಬಿಕೆ ಹಾಗೂ ಸ್ವಲ್ಪ ಧೈರ್ಯಾನು ಬಂದಿತ್ತು..

ಇತ್ತ ಅವಳ ಮನೆಯಲ್ಲಿ ಅವಳಿಗೆ ಬೇರೆ ಹುಡುಗನ ನಿಶ್ಚಿತಾರ್ಥನೂ ಆಗಿತ್ತು...ಅವನ ಪತ್ತೇನೆ ಇಲ್ಲ ಪಾಪ ಇವಳು ಕಾದು ಕಾದು ಒಪ್ಪಿಗೆ ಸೂಚಿಸಿದ್ದಳು.ಮದುವೆ ದಿನಾನೂ ನಿಗದಿಯಾಯಿತು ಡಿಸೆಂಬರ್ 26/12/2016..

ಇತ್ತ ಇವನಿಗೆ ಅವಳದೇ ನೆನಪು ಹೇಗಾದರೂ ಕರೆ ಮಾಡಿ ಹೇಳ ಬೇಕೆಂದು ಅವಳ ನಂಬರ್ ಊರಿನ ಗೆಳೆಯರಿಂದ ಸಂಪಾದಿಸಿದ್ದ..

ಅಂತೂ 25 ನೇ ಡಿಸೆಂಬರ್ ರಾತ್ರಿ ಕರೆ ಮಾಡಿದ..ಕರೆ ಸ್ವೀಕರಿಸುತ್ತಿಲ್ಲ..ಎರಡನೇ ಬಾರಿನೂ ಮಾಡಿದ ಹ್ಮ್ ಎತ್ತುತ್ತಿಲ್ಲ..ಹತ್ತಾರು ಸಲ ಮಾಡೀನೂ ಕರೆ ಸ್ವೀಕರಿಸುತ್ತಿಲ್ಲ

ಬೆಳಗ್ಗಿನವರೆಗೂ ನಿದ್ದೆ ಬಿಟ್ಟು ಕರೆ ಮಾಡಿದ ಆದರೂ ಸ್ವೀಕರಿಸುತ್ತಿಲ್ಲ!!!!

ಪಾಪ ಇವನಿಗೂ ನಿದ್ದೆ ಬರಲಾರಂಬಿಸಿತು..ನಿದ್ರೆಗೆ ಜಾರಿದ!!


#ಕಾರಣವೇನು!!!?????

.

.

.

.

.

.

.

ನಿನ್ನೆ ರಾತ್ರಿ ಪಬ್ಲಿಕ್ ರಂ(ಮಂ)ಗ 777888999 ನಂಬರಿಂದ ಬಂದ ರಿಸೀವ್ ಮಾಡಿದ್ರೆ ಪೋನು ಸುಟ್ಟು ಸತ್ತು ಹೋಗ್ತಾರೆ ಅಂತ ಹೇಳಿದ್ದು ನೋಡಿ ಅವನ ಗಲ್ಫಿನ ನೆಟ್ಟ್ ನಂಬರ್+777689 ನೋಡಿ ರಿಸೀವ್ ಮಾಡಲೇ ಇಲ್ಲ😢😢..

ಅನ್ಯಾಯವಾಗಿ ಒಂದು ಪ್ರೀತಿಯನ್ನು ರಂಗ ಕೊಂದು ಬಿಟ್ಟಿದ್ದ.ಇಂದು ಅವಳ ಮದುವೆ ಆಗಿಹೋಗುತ್ತೆ..

😢😢😢😢😢😢


-ಎಂಥಾ_ಸಾವ_ರಂಗ😂😂


-ಅವಿಜ್ಞಾನಿ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.