ಸೋಜಿಗವು ಈ ಗೆಳೆತನ, ಮುಗಿಯದ ಭಾವಗೀತೆ...!!

ಸಂಬಂಧವಿಲ್ಲದವರ ಜೊತೆ ಸಂಧಿಯಾಗಿ,
ಭಾವ ಮಿಲನವೇ ಕೊಂಡಿಯಾಗಿ,
ಜೀವ ಉಳಿಸಿ ಬೆಳೆಸಲು ಅಣಿಯಾಗಿ,
ಮುತ್ತಾಗಿಸುವುದೀ ಬದುಕ ಜಂಟಿಯಾಗಿ..
ಸೋಜಿಗವೀ ಗೆಳೆತನ, ಮುಗಿಯದ ನವ್ಯಗೀತೆ...!!

ಇಳೆಗೆ ಮಳೆಯ ಸ್ನೇಹ,
ಬಂದೀತು ನೆಲವ ತಣಿಸಲು.,
ಬಾನಿಗೆ ಚುಕ್ಕಿ ಚಂದ್ರಮರ ಸ್ನೇಹ,
ಸೇರಿತು ನಭವ ಚಿತ್ತಾರಗೊಳಿಸಲು...!
ಅದ್ಭುತವೀ ಗೆಳೆತನ, ಮುಗಿಯದ ಮಧುರಗೀತೆ..!!


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.