ಒಲವಿನ ಗೆಳೆಯನಿಗೊಂದು ಮನಸ್ಸಿನ ಮಾತು"ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ನಾನು ಸ್ನೇಹಜೀವಿ, ನೀನು ಸ್ನೇಹಜೀವಿ, ಲೋಕದಲ್ಲಿ ಸ್ನೇಹ ಚಿರಂಜೀವಿ "ಎಂಬ ಸಿಪಾಯಿ ಸಿನಿಮಾ ಹಾಡಿಗೆ ಸರಿಸಾಟಿಯಾಗುವಂತೆ ಇತ್ತು ನಮ್ಮ ಸ್ನೇಹ. ಅವನಿಗಾಗಿ ನಾನು, ನನಗಾಗಿ ಅವನು. ಅವನ ಬೇಕು ಬೇಡಗಳನ್ನು ನಾನು ಅರಿತಿದ್ದೆ. ನನ್ನ ಬೇಕು ಬೇಡಗಳನ್ನು ಅವನು ತಿಳಿದುಕೊಂಡಿದ್ದ. ಪ್ರಾಣಕ್ಕೆ ಪ್ರಾಣ, ಜೀವಕ್ಕೆ ಜೀವ ಕೊಡುವಂತೆ ಇತ್ತು ನಮ್ಮಿಬ್ಬರ ಸ್ನೇಹ. ಒಂದೇ ಉಸಿರು ಎರಡು ದೇಹಗಳಂತೆ ಇದ್ವಿ.

ಅಂತಹುದರಲ್ಲಿ ಅದು ಯಾರ ಕಣ್ಣು ತಾಕಿತ್ತು ಗೊತ್ತಿಲ್ಲ. ಈಗ ಅವನ ಕಂಡರೆ ನನಗೆ ಆಗುವುದಿಲ್ಲ. ನನ್ನ ಕಂಡರೇನೇ ಅವನಿಗೂ ಆಗುತ್ತಿಲ್ಲ. ಅದೇನು ಆಯಿತೋ ಎಂಬುದೇ ತಿಳಿಯುತ್ತಿಲ್ಲ. ಈಗ ಅವನು ನನ್ನ ಮಾತನಾಡಿಸುತ್ತಿಲ್ಲ, ಹಾಗೆ ನಾನು ಕೂಡಾ ಅವನನ್ನು ಮಾತನಾಡಿಸುತ್ತಿಲ್ಲ.

ಆದರೂ ಮನಸ್ಸಿನ ಮೂಲೆಯಲ್ಲಿ ಅವನಿಗೆ ಒಂದು ಸ್ಥಾನವಿದೆ. ಸರಿ ಸುಮಾರು ಮೂರು ವರ್ಷಗಳ ಕಾಲ ಹೀಗೆ ಮುಂದುವರೆದಿದೆ. ಯಾವತ್ತೂ ಕೊನೆಗೊಳ್ಳುತ್ತದೆ ಎಂಬುದು ಇನ್ನೂ ತಿಳಿಯುತ್ತಿಲ್ಲ.

ಆ ದಿನ ಒ.ಎಮ್.ಆರ್ ತುಂಬಲು ಕೊನೆಯ ದಿನವಾಗಿತ್ತು. ನನ್ನ ಒ.ಎಮ್.ಆರ್. ಹಿಂದಿನ ದಿನವೇ ಭರ್ತಿ ಮಾಡಿದ್ದೆ. ಆದರೆ ನನ್ನ ಗೆಳೆಯ ಮಾತ್ರ ಇನ್ನೂ ತುಂಬಿದ್ದೆ ಇಲ್ಲ! ಅವನಿಗೆ ಆರೋಗ್ಯದ ಸ್ಥಿತಿ ಸರಿಯಿರಲಿಲ್ಲ. ಈ ಕಾರಣಕ್ಕೆ ಅವನು ಒ.ಎಮ್.ಆರ್ ಭರ್ತಿ ಮಾಡಿರಲಿಲ್ಲ. ಹೀಗಾಗಿ ಅವನ ಫಾರಂನ್ನು ನಾನೇ ತುಂಬಲು ಮುಂದಾದೆ. ಆದರೆ ಹನುಮನ ಬಾಲದಂತೆ ದೊಡ್ಡ ಸರತಿಯೇ ಸಾಲಿತ್ತು. ಅದೇ ಸಾಲಿನಲ್ಲಿ ನಾನು ಬೆಳ್ಳಿಗೆ ಎಂಟು ಗಂಟೆಯಿಂದಲೇ ನಿಂತಿದ್ದೆ. ಹನ್ನೊಂದು ಗಂಟೆಯಾದ್ರು ಬ್ಯಾಂಕು ಬಾಗಿಲು ತೆರೆಯಲೇ ಇಲ್ಲ. ನಾನು ಬೆಳಗಿನ ಉಪಹಾರವನ್ನು ಸಹ ಸೇವಿಸಿರಲಿಲ್ಲ. ನಿಂತು ನಿಂತು ಕಾಲುಗಳ ಶಕ್ತಿಯೇ ಇಲ್ಲದಂತಾಗಿ ಬಿಟ್ತು. ಸ್ವಲ್ಪ ಉಪಹಾರ ಮಾಡಿಕೊಂಡು ಬರೋಣ ಎಂದೂ ಕೊಳ್ಳುವಷ್ಟರಲ್ಲಿ ಬ್ಯಾಂಕು ಬಾಗಿಲು ತೆಗೆದೆ ಬಿಟ್ತು.

ಮತ್ತೆ ಸರಿದು ನನ್ನ ಜಾಗದಲ್ಲಿ ನಿಂತುಕೊಂಡೆ. ಸಾಲು ದೊಡ್ಡದಾಗಿ ಇದ್ದದ್ದರಿಂದ ಅಷ್ಟು ಬೇಗ ಮುಂದೆ ಸರಿಯಲ್ಲೆ ಇಲ್ಲ. ನಿಂತ ಜಾಗದಲ್ಲಿ ನಿಂತುಕೊಂಡು ಸಾಕಾಗಿ ಹೋಯ್ತು! ಗಡಿಯಾರದ ಮೇಲೆ ಕಣ್ಣು ಹಾಯಿಸಿದಾಗ ಒಂದು ಗಂಟೆ ಎಂದು ತೋರಿತು. ಇನ್ನೇನು ಬ್ಯಾಂಕಿನವರು ಊಟಕ್ಕೆ ಬಿಡುವ ಸಮಯ ಬಂದೇ ಬಿಡತೈತಿ ಎಂದು ನಾನು ಮಾಡಲು ಹೋದೆ.

ಹಾಸ್ಟೆಲಗೆ ಹೋಗಿ ಊಟ ಮಾಡಿ ಬರುವಷ್ಟರಲ್ಲಿ ಮತ್ತೆ ಒಂದು ಗಂಟೆ ಸಮಯ ಹಿಡಿದೆ ಬಿಟ್ತು. ಬ್ಯಾಂಕಿನ ಮುಂದಿನ ಸಾಲು ಮಾತ್ರ ಸಣ್ಣದಾಗಿರಲಿಲ್ಲ. ಮತ್ತೆ ಸಾಲಿನಲ್ಲಿ ಹೋಗಿ ನಿಂತುಕೊಂಡೆ. ನನ್ನ ಮುಂದೆ ಸುಮಾರು ಐವತ್ತಕ್ಕೂ ಹೆಚ್ಚು ಜನ ನಿಂತಿದ್ದರು. ಎಷ್ಟೇ ಸಮಯ ಆದ್ರು ಸರಿ ಇವತ್ತು ಒ.ಎಮ್.ಆರ್. ತುಂಬಿಯೇ ಹೋಗಬೇಕು ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿಕೊಂಡೆ.

ಸಮಯ ನಾಲ್ಕು ಕಾಲು ಆಗಿಯೇ ಬಿಟ್ತು. ಅಂತಹುದರಲ್ಲಿ ನನ್ನ ಮುಂದೆ ಇನ್ನೂ ಇಪ್ಪತ್ತು ಜನರು ನಿಂತು ಕೊಂಡಿದ್ದರು. ಇವತ್ತು ಒ.ಎಮ್.ಆರ್. ತುಂಬೋದಕ್ಕೆ ಆಗುವುದಿಲ್ಲ ಎಂದು ಮನದಲ್ಲಿ ನಿಶ್ಚಯವಾಯಿತು. ಐದು ಗಂಟೆ ಆಗಿಯೇ ಬಿಟ್ತು. ಎಲ್ಲರಿಗೂ ನಾಳೆ ಬನ್ನಿ ಎಂದು ಬ್ಯಾಂಕಿನ ಸಿಬ್ಬಂದಿ ಹೇಳಿ ಬಿಟ್ರು.

ಮರಳಿ ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದೆ. ಗೆಳೆಯನಿಗೆ ಇವತ್ತು ಒ.ಎಮ್.ಆರ್. ತುಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ. ಅವನು ಹೋಗಲಿ ಬಿಡು ಎಂದ. ನಾಳೆ ನಾನೇ ತುಂಬತ್ತೀನಿ ಎಂದ್ಹೇಳಿ ನನ್ನ ರೂಮಿಗೆ ಹೋದೆ.

ಮರುದಿನ ಗೆಳೆಯ ಬ್ಯಾಂಕಿಗೆ ಹೋಗ್ತಿನಿ ಎಂದೆ. ಅದಕ್ಕೆ ಅವನು ನೀನು ಇಷ್ಟು ಲೇಟಾಗಿ ಬಂದ್ರೆ ನನ್ನ ಒ.ಎಮ್.ಆರ್. ತುಂಬಿದ್ಹಂಗೆ ಎಂದ. ನಾನು ಈ ಮೊದಲೇ ಒ.ಎಮ್.ಆರ್. ತುಂಬೋದ್ದಕ್ಕೆ ಕೊಟ್ಟಾಯ್ತು.

ಅವತ್ತೇ ಕೊನೆ ಮತ್ತೆ ಒಬ್ಬರಿಗೊಬ್ಬರು ಮಾತನಾಡಿಯೇ ಇಲ್ಲ. ಮೂರು ವರ್ಷಗಳ ಕಳೆದರೂ ಸಹ ಭೇಟಿಯೇ ಆಗಿಲ್ಲ. ಅಂದು ನಾನು ಒ.ಎಮ್.ಆರ್. ಕಟ್ಟದೆ ಇರುವುದೇ ಇಷ್ಟಕ್ಕೆಲ್ಲಾ ಕಾರಣವಾಯ್ತಾ? ಒಂದು ತಿಳಿಯದ ಹಾಗೆ ನಡೆದು ಹೋಯ್ತು. ಗೆಳೆಯ ಅಂದು ನಾನು ಮಾಡಲಾಗದ ಒಂದು ಕೆಲಸದಿಂದ ನಮ್ಮಿಬ್ಬರ ಸ್ನೇಹ ಹಾಳಾಯಿತು. ಗೆಳೆಯ ನನ್ನನ್ನು ಕ್ಷಮಿಸು.ಮತ್ತೆ ನಾನು ನಿನ್ನ ಗೆಳೆತನಕ್ಕಾಗಿ ಕಾಯುತ್ತಿರುವೆ..!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.