ಎದುರುಗಡೆ ಕುಳಿತ ವ್ಯಕ್ತಿ ಮೀರಾ ಬೆಳಿಗ್ಗೆ ತಾನೆ ಕಾರಿನ ಅಪಘಾತದಲ್ಲಿ ಬೇಟಿಯಾಗಿದ್ದ ಮಾಧವನಾಗಿದ್ದ. ಅವನನ್ನು ನೋಡುತ್ತಲೇ ಗಾಬರಿಗೊಂಡ ಮೀರಾ ಬಾಗಿಲ ಬಳಿಯೇ ನಿಂತಿದ್ದಳು. ಒಳಗೆ ಕರೆದರೂ ಯಾರು ಬರದಿದ್ದನ್ನು ತಿಳಿದ ಮಾಧವ ಬಾಗಿಲಿನ ಕಡೆ ನೋಡಿದ, ಮೀರಾ ಗೊಂಬೆಯಂತೆ ಅಲುಗಾಡದೆ ಇವನನ್ನೆ ನೋಡುತ್ತಾ ನಿಂತಿರುವುದು ನೋಡಿ ಒಮ್ಮೆ ತನ್ನ ಕಣ್ಣನ್ನು ತಾನೇ ನಂಬದಾದ!

ಇತ್ತಾ ಮೀರಾ ವಾಸ್ತಾವಕ್ಕೆ ಬಂದು ನಿಧಾನವಾಗಿ ಕುರ್ಚಿಯ ಬಳಿ ಬಂದು ನಿಂತಳು. ತಲೆತಗ್ಗಿಸಿ ನಿಂತ ಮೀರಾಳನ್ನು ನೊಡಿದ ಮಾಧವನಿಗೆ ಅವಳ ಮುಖದಲ್ಲಿನ ಮುಗ್ಧತೆಯನ್ನು ಕಂಡು ಮತ್ತಷ್ಟು ಅವನ ಮನಸ್ಸು ಅವಳ ಕಡೆ ಜಾರಿತ್ತು. ಕರ್ತವ್ಯ ಪ್ರಜ್ಞೆ ನೆನಪಾಗಿದ್ದರಿಂದ ಅವಳನ್ನು ಕುಳಿತುಕೊಳ್ಳುವಂತೆ ಹೇಳಿದ.

ಬೆಳಿಗ್ಗೆ ತಾನು ಬೈದಿದ್ದನ್ನು ಎಲ್ಲಿ ಇವನು ಮನಸ್ಸಿನಲ್ಲಿ ಇಟ್ಟುಕೊಂಡು ತನಗೆ ಕೆಲಸಕೊಡಲು ಒಪ್ಪದೆ ಇರಬಹುದು ಎಂದು ಗಾಬರಿಯಲ್ಲಿ ಯೊಚಿಸುತ್ತಿದ್ದವಳಿಗೆ ಮಾಧವ ಆಕೆಯ ಫೈಲನ್ನು ತಾನೆ ತೆಗೆದುಕೊಂಡು, ಅವಳ ರೆಸ್ಯೂಮ್ ಅನ್ನು ಓದಿ ಮತ್ತೆ ಅವಳ ಫೈಲನ್ನು ಅವಳ ಬಳಿ ಇಟ್ಟಾಗಲೇ ಅವಳು ವಾಸ್ತಾವಕ್ಕೆ ಬಂದಿದ್ದು.

ತಾನು ಬೆಳಿಗ್ಗೆ ನಡೆದುಕೊಂಡಿದ್ದರ ಬಗ್ಗೆ ಕ್ಷಮೆ ಕೇಳಬೇಕೆಂದು ಇವಳು ಬಾಯಿ ತೆರೆಯುವುದರ ಮೊದಲೆ ಅವನು "ಮೀರಾ you r selected to dis post" ಎಂದ ಅವನ ಬಾಯಿಂದ ಬಂದ ಆ ಮಾತನ್ನು ಕೇಳುತ್ತಿದ್ದಂತೆ ಅವಳ ಕಣ್ಣಲ್ಲಿ ಆನಂದಬಾಷ್ವ. ಇದನ್ನು ನೋಡಿದ ಮಾಧವ "ಏನಾಯ್ತು ಯಾಕೆ ಈ ಕಣ್ಣೀರು ಎಂದ. ಅದಕ್ಕೆ ಮೀರಾ... ತಾನು ಇಷ್ಟು ದಿನ ಕೆಲಸ ಹುಡುಕುತ್ತಿದ್ದರ ಬಗ್ಗೆ ಅಲ್ಲಿ ತನ್ನನ್ನು ಬೇರೆ ರೀತಿಯೇ ಬಳಸಿಕೊಳ್ಳುಲು ನೋಡಿದ್ದರ ಬಗ್ಗೆ ತನ್ನ ಮನೆಯ ಪರಿಸ್ಥಿತಿಯ ಬಗ್ಗೆ ಒಂದೇ ಸಮನೆ ಹೇಳುತ್ತಾ ಹೋದಳು.

ಇದನ್ನೆಲ್ಲಾ ಕೇಳಿದ ಮಾಧವನಿಗೆ ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟೆಲ್ಲಾ ನೋವನ್ನು ಅನುಭವಿಸಿರುವ ಮೀರಾಳ ಬಗ್ಗೆ ಅನುಕಂಪ ಮೂಡಿದರೂ, ಇಷ್ಟು ಬಡತನದಲ್ಲೂ ಆಕೆ ಹಾದಿ ತಪ್ಪದೆ ತನ್ನುನ್ನು ಕಾಪಾಡಿಕೊಂಡು ಬಂದಿರುವುದರ ಬಗ್ಗೆ ಹೆಮ್ಮೆ ಎನಿಸಿತು.ಅವಳನ್ನು ಸಮಾಧಾನ ಪಡಿಸುತ್ತಾ ನಾಳೆಯಿಂದ ಕೆಲಸಕ್ಕೆ ಬರುವಂತೆ ಸೂಚಿಸಿದ.

ಕೆಲಸ ಸಿಕ್ಕ ಖುಷಿಯನ್ನ ತಮ್ಮ ತಂಗಿಯರಲ್ಲಿ ಹೇಳಬೇಕು ಎಂದುಕೊಂಡವಳೇ ಮನೆಗೆ ಹೊರಟಳು. ಬೆಳಿಗ್ಗೆ ಆಫೀಸಿನ ಬಳಿ ಮಾಧವನೇ ಬಿಟ್ಟಿದ್ದರಿಂದ ಬಸ್ ಚಾರ್ಜ್ ಹಾಗೆಯೇ ಉಳಿದಿತ್ತು. ತಮ್ಮ ತಂಗಿಗೆ ಸ್ವೀಟ್ ತೆಗೆದುಕೊಂಡು ಹೋದಳು.

ಇತ್ತಾ ಮೀರಾಳ ಬಗ್ಗೆ ಯೋಚಿಸುತ್ತಾ ಕುಳಿತ ಮಾಧವನಿಗೆ ಮೀರಾ ಸೌಂದರ್ಯದಲ್ಲಿ ಅಷ್ಟೆ ಅಲ್ಲ ಗುಣದಲ್ಲು ದೇವತೆ, ಇಷ್ಟು ದಿನ ಎಷ್ಟೊ ಹುಡುಗಿಯರನ್ನು ನೋಡಿದರೂ ಮೂಡದ ಒಲವಿನ ನವಿರು ಭಾವನೆ ಒಂದು ದಿನದ ಭೇಟಿಗೆ ಮೂಡಿರುವುದನ್ನ ನೋಡಿ ಅವನಿಗೆ ಆಶ್ಚರ್ಯ ತಂದಿತ್ತು.

ಕೆಲಸ ಮುಗಿಸಿ ಮನೆಗೆ ಬಂದವನ ಮುಖದಲ್ಲಿ ಇದ್ದ ಖುಷಿಯನ್ನ ಗಮನಿಸಿದ ಮಾಧವನ ತಂದೆ "ಎಷ್ಟೊ ದಿನದ ಮೇಲೆ ಮಗ ಖುಷಿಯಿಂದ ಇರುವುದನ್ನು ಕಂಡು ನೆಮ್ಮದಿ ಅನಿಸಿತು.

ಮಾಧವ ಶ್ರೀಪತಿ ರಾಯರ ಒಬ್ಬನೇ ಗಂಡು ಮಗ. ತಾಯಿ ಪಾರ್ವತಿಯವರು ಸ್ಮಿತಾಳಿಗೆ ಜನ್ಮ ನೀಡುವಾಗ ಹೆರಿಗೆ ನೋವು ತಾಳಲಾರದೇ ಪ್ರಾಣ ಬಿಟ್ಟಿದ್ದರು. ಅದ್ರುಷ್ಟಕ್ಕೆ ಸ್ಮಿತಾ ಬದುಕಿ ಉಳಿದಿದ್ದಳು. ತಂದೆ ಪ್ರೀತಿಯಲ್ಲೆ ಇಬ್ಬರು ಮಕ್ಕಳು ಬೆಳೆದಿದ್ದರು. ಮತ್ತೊಬ್ಬಳನ್ನು ಮದುವೆಯಾದರೆ ಬರುವವಳು ಮಲತಾಯಿಯಾಗಿ ತನ್ನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದಿಲ್ಲ ಎಂದು ಮತ್ತೊಂದು ಮದುವೆ ಆಗದೆ ಮಕ್ಕಳ ಸಲುವಾಗಿ ತಾವೇ ತಂದೆ ತಾಯಿ ಇಬ್ಬರ ಪ್ರೀತಿಯನ್ನು ನೀಡಿ ಬೆಳೆಸಿದ್ದರು.

ಸ್ಮಿತಾ ಮಾತಿನ ಮಲ್ಲಿ. ಅದೇ ತಾನೇ ಪಿಯುಸಿ ಮುಗಿಸಿ ಡಿಗ್ರಿಗೆ ಸೇರಿದ್ದಳು. ಜೊತೆಗೆ ಶ್ರೀಮಂತಿಕೆಯ ದರ್ಪವು ಇತ್ತು. ಆದರೆ ಮಾಧವ ಸ್ಮಿತಾಳಿಗೆ ತದ್ವಿರುದ್ದ ತುಂಬಾ ಮೌನಿ ಶ್ರೀಮಂತಿಕೆಯ ಗರ್ವ ಯಾವತ್ತಿಗೂ ಯಾರ ಮುಂದೆಯು ತೋರುತ್ತಿರಲಿಲ್ಲ. ತಂದೆ ಮಗ ಮಗಳು ಕೆಲಸದವರು 3 ಜನ... ಇಷ್ಟೆ ಜನ ಆ ದೊಡ್ಡ ಬಂಗಲೆಯಲ್ಲಿ.

ಶ್ರೀಪತಿ ರಾಯರು ಮಾಧವನಿಗೆ ಮದುವೆ ಮಾಡುವ ಸಲುವಾಗಿ ತುಂಬಾ ಹುಡುಗಿಯರನ್ನು ನೋಡಿ ಅವನಿಗೂ ತೋರಿಸಿದ್ದರು. ಆದರೂ ಮಾಧವನ ಮನಸ್ಸಿಗೆ ಯಾರು ಹಿಡಿಸಿರಲಿಲ್ಲ. ತನಗೆ ಒಪ್ಪುವ ಹುಡುಗಿ ಸಿಕ್ಕಾಗ ತಾನೆ ಕರೆದುಕೊಂಡು ಬಂದು ಪರಿಚಯ ಮಾಡಿಸುವುದಾಗಿ ನಂತರ ಮದುವೆ ಬಗ್ಗೆ ಮಾತಾನಾಡಬೇಕಾಗಿ, ಅಲ್ಲಿವರೆಗೆ ಯಾವುದೆ ಹುಡುಗಿ ನೋಡುವ ಶಾಸ್ತ್ರ ಬೇಡ ಎಂದಿದ್ದ. ಮಗನ ಮಾತಿಗೆ ಶ್ರೀಪತಿರಾಯರು ಸಮ್ಮತಿಸಿದ್ದರು.

ಮೀರಾಳನ್ನು ಬೇಟಿಯಾದ ಬಳಿಕ ಅವನ ಮನಸ್ಸು ಏನೊ ಒಂದು ರೀತಿ ಖುಷಿಯಲ್ಲಿ ಇತ್ತು. ಆದರೆ ಅವಳ ಮನಸ್ಸು ಪ್ರೀತಿ ಪ್ರೇಮ ಮದುವೆ ವಿಚಾರವಾಗಿ ಹೇಗೆ ಎಂದು ತಿಳಿಯದೇ ಯಾವುದೇ ಕನಸುಗಳನ್ನು ಕಟ್ಟಿಕೊಳ್ಳಬಾರದು ಎಂದು ಸುಮ್ಮನೆ ಮಲುಗಿದ.

ಬೆಳಿಗ್ಗೆ ಎದ್ದವನೇ ಇಂದಿನಿಂದ ಮೀರಾ ಕೆಲಸಕ್ಕೆ ಬರುವುದನ್ನು ನೆನೆದು ದಿನ ಪೂರ್ತಿ ಅವಳ ಮುಗ್ಧ ಮುಖ ನೋಡುತ್ತಾ ಇರಬಹುದು, ಸಮಯ ಸಿಕ್ಕಾಗ ಅವಳ ಇಷ್ಟಕಷ್ಟಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದುಕೊಂಡು ರೆಡಿಯಾಗಿ ಮಾಮೂಲಿ ದಿನಕಿಂತ ಸ್ವಲ್ಪ ಬೇಗ ಆಫೀಸಿಗೆ ಹೊರಟ.

ಆಫೀಸಿಗೆ ಬಂದವನೇ ಸೀದಾ ಮೀರಾಳ ಚೆಂಬರಿನ ಬಳಿ ಹೋದವನಿಗೆ ಮೀರಾ ಇನ್ನು ಕೆಲಸಕ್ಕೆ ಬಾರದೇ ಇದ್ದದ್ದನ್ನು ನೋಡಿ ಒಂದು ಕಡೆ ಬೇಸರವಾದರೂ ಮಾದಲ ದಿನನೇ ಕೆಲಸಕ್ಕೆ ಲೇಟಾ?! ನಾನು ಈ ಹುಡುಗಿಗೆ ಕೊಟ್ಟ ಸಲುಗೆ ಹೆಚ್ಚಾಯಿತು ಎಂದುಕೊಂಡು ತನ್ನ ಕ್ಯಾಬಿನಿಗೆ ಹೋಗಿ ಮೀರಾ ನೆನ್ನೆ ಕೊಟ್ಟಿದ್ದ ರೆಸ್ಯೂಮ್ ತೆಗೆದುಕೊಂಡು ಅದರಲ್ಲಿ ಇದ್ದ ಅವಳ ನಂಬರಿಗೆ ಕಾಲ್ ಮಾಡಿದ.

ಅತ್ತ ಕಡೆ ಮೀರಾಳ ತಮ್ಮ ಕರೆ ಸ್ವೀಕರಿಸಿದ. ಮೊದಲೇ ಮೀರಾ ಅವಳ ಕುಟುಂಬದ ಬಗ್ಗೆ ಹೇಳಿದ್ದರಿಂದ ಮಾಧವ ತನ್ನ ಪರಿಚಯ ಹೇಳಿ ಮೀರಾ ಯಾಕೆ ಇನ್ನಾ ಕೆಲಸಕ್ಕೆ ಬಂದಿಲ್ಲಾ ಎಂದು ಕೇಳಿದ"

ಅತ್ತ ಕಡೆಯಿಂದ ಮೀರಾಳ ತಮ್ಮ ಕೊಟ್ಟ ಉತ್ತರ ಕೇಳಿ ತಾನೇ ಕೋಪದ ಕೈಗೆ ಬುದ್ದಿ ಕೊಟ್ಟೆ ಎಂದುಕೊಂಡು ಕಾರಿನ ಕೀ ತೆಗದುಕೊಂಡು ಮೀರಾಳ ಮನೆಕಡೆ ಕಾರು ತಿರುಗಿಸಿದ.
ನೆನ್ನೆ ಬಿದ್ದು ಏಟು ಮಾಡಿಕೊಂಡಿದ್ದರಿಂದ ಮೀರಾಳಿಗೆ ಆ ನೋವಿನಿಂದ ಜ್ವರ ಬಂದಿತ್ತು. ಅದರ ಸಲುವಾಗಿ ಹಾಸಿಗೆ ಹಿಡಿದಿದ್ದಳು. ಮೀರಾಳ ಮನೆಗೆ ಬಂದ ಮಾಧವನಿಗೆ ಮೀರಾಳ ಬಾಡಿದ ಮುಖ ನೋಡಿ ಅಯ್ಯೊ ಅನಿಸಿತು.

ಮುಂದೆ ಹೋಗಿ ಮೀರಾಳಿಗೆ ಎದುರಾಗಿ ನಿಂತ ಇವನ ಅನಿರೀಕ್ಷಿತ ಆಗಮನದಿಂದ ಮೀರಾ ಗಾಬರಿಗೊಂಡಳು.

**************
(ಮುಂದುವರೆಯುತ್ತದೆ.....)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.