ಬದುಕಿನ ಶೀರ್ಷಿಕೆ...


ಅದೇನೋ ಚಡಪಡಿಕೆ,
ಅದೇನೋ ಕನವರಿಕೆ,
ಅದೇನೋ ಬೇಕೆಂಬ ಹಂಬಲ ಮನಕೆ,
ಅದೇನೋ ಆಸೆಯ ಬೇಡಿ ಮಾಡುವ ಹರಕೆ,
ಅದೇನೋ ನೋವು ಕಳೆದುಕೊಂಡಂತೆ ಲವಲವಿಕೆ,
ಬೇಕೇ ಇಂತಹ ಗೊಂದಲ ನಗುವಿನ ಸ್ವಪ್ನಕೆ?

ಜೀವನದ ಪ್ರತಿ ಹೆಜ್ಜೆಯೂ ಭಾರವಾದಂತೆ,
ನೋವಿನ ನರ್ತನ ಕಾಲ್ಗಳ ಎಳೆದಂತೆ,
ಕಂಬನಿಯ ಮುಳ್ಳು ಕಂಗಳ ಚುಚ್ಚಿದಂತೆ,
ಅಸಹಾಯಕ ನಗುವು ಮನವ ಬಿರಿದಂತೆ,
ಬದುಕಿನ ಕ್ಷಮತೆ ಕಳೆದುಹೋದಂತೆ,
ನೆಮ್ಮದಿಯ ಬಾಳ ಆಕಾಂಕ್ಷೆ ಕೈ ಬಿಟ್ಟಂತೆ...

ನನ್ನ ಬದುಕಿನ ಶೀರ್ಷಿಕೆ ಏನು?
ಒಮ್ಮೊಮ್ಮ ಸಣ್ಣ ಕಥೆ,
ಕೆಲವೊಮ್ಮೆ ಕಾದಂಬರಿ...!!
ನನ್ನ ಬಾಳಿನ ಸಾರಾಂಶವೇನು?
ದಿನಕ್ಕೊಂದು ತಿರುವು,
ಕ್ಷಣಕ್ಕೊಂದು ದಾರಿ...!!
ಬದುಕು ಜೀವಕೆ ಕೊಟ್ಟಿದ್ದಾದರೂ ಏನು?
ಒಂದಿಷ್ಟು ವ್ಯಾಕುಲತೆ,
ಅಷ್ಟಿಷ್ಟು ನಗುವಿನ ಮಾರಿ...!!?

- ನೈದಿಲೆ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.