ಹೆಣ್ಣು-6

'ಬೇಲಿಯೆ ಎದ್ದು ಹೊಲ ಮೆಯ್ದರೆ ಗತಿಯೇನು' ಎಂದು ಹಿರಿಯರು ಯಾವಾಗಲೂ ಹೇಳಿದ್ದು ನನಗೆ ಈಗಲೂ ನೆನಪಿದೆ. ನಾವು ಅವರ ಮಾತನ್ನು ಕೇಳಿದ್ದೆವೆ ಹೊರತು ಎಂದಿಗೂ ಫಾಲೋ ಮಾಡಲಿಲ್ಲ. ಹೆಣ್ಣು ಮಕ್ಕಳು ಸಮಾಜದ ಕಣ್ಣುಗಳಿದ್ದಂತೆ. ಗಂಡು ಮಕ್ಕಳನ್ನು ಅತೀರೇಕದಿಂದ ಕಾಣುವುದು, ಹೆಣ್ಣು ಮಕ್ಕಳನ್ನು ವಕ್ರದೃಷ್ಠಿಯಿಂದ ಕಾಣುವುದು ಮಾಡಬಾರದು ಅಂತಲೂ ಅವರು ಹೇಳಿ ಹೋಗಿದ್ದಾರೆ. ಆದರೆ ಇಂದೇನಾಗುತ್ತಿದೆ! ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಿ ಇವಳಲ್ಲ, ಸಲಾಮು ಹೊಡೆಯೊಲ್ಲ ಎಂದು ಮನೆಯಿಂದ ಹೊರಬಿದ್ದು ಅಧಿಕಾರ ಮತ್ತು ಹಕ್ಕುಗಳು ಹಾಗೂ ಜೊತೆಯಲ್ಲಿ ಕರ್ತವ್ಯ ಹಾಗೂ ಜವಾಬ್ಧಾರಿಗಳನ್ನು ಅರಿತುಕೊಂಡಿದ್ದಾಳೆ. ದಕ್ಷತೆ ಎಂಬುದೇನು ಎನ್ನುವುದನ್ನು ಅರಿತಿದ್ದಾಳೆ. ಎಲ್ಲಾ ರಂಗದಲ್ಲೂ ಸಫಲತೆಯನ್ನು ಕಂಡುಕೊಂಡಿದ್ದಾಳೆ. ಇವೆಲ್ಲವೂ ಸಂತೋಷದ ವಿಚಾರವೇ ಆಗಿದೆ. ಆದರೆ ಇಂದು ಅದೇ ಹೆಣ್ಣು ದುಶ್ಚಟಗಳಿಗೆ ದಾಸಿಯಾಗಿ ಸಂಸ್ಕೃತಿಯೆಂಬ ಗೆರೆ ದಾಟಿ ಅನಾಚಾರಕ್ಕೆ ಲಗ್ಗೆ ಇಡುತ್ತಿರುವುದು ಭಯ ತರಿಸುತ್ತದೆ. ಜಗತ್ತು ಬದಲಾಗಿದೆ. ಎಲ್ಲವೂ, ಎಲ್ಲರೂ ಬದಲಾವಣೆಯ ಗಾಳಿಗೆ ಸಿಲುಕಿದ್ದಾರೆ. ನಾಗರಿಕತೆಯು ಬದಲಾಗಿದೆ.

ಹಾಕೋ ಡ್ರೆಸ್‍ನಿಂದ ಹಿಡಿದು ಮಾತಾಡೋ, ಜೀವನ ನಡೆಸೋ ಶೈಲಿಯವರೆಗೂ ಬದಲಾಗಿದೆ. ಹೆಣ್ಣಿನ ಜೀವನಕ್ಕೆ ಬಂದರೆ ಇದು ಇನ್ನೂ ಜಾಸ್ತಿ ಅಳವಡಿಕೆ ಕಂಡಿದೆ ಏನಿಸುತ್ತದೆ. ಆದರೆ ಇಂದಿನ ಹುಡುಗಿಯರ ಅಬ್‍ನಾರ್ಮಲ್ ಏದೆಗಾರಿಕೆಯನ್ನು ಕಂಡಾಗ ಅಚ್ಚರಿ, ಬೆರಗು, ಮೂಡಿ ಎಲ್ಲಾ ಹಾರ್ಮೋನುಗಳ ಮಹಿಮೆ ಎನಿಸುತ್ತದೆ. ಎಲ್ಲೆಂದರಲ್ಲಿ ಬಟ್ಟೆಬಿಚ್ಚಿ ಅರೆಬೆತ್ತಲಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳುವ, ಅದನ್ನು ಯಾರೂ ಗಮನಿಸಿಲ್ಲ ಎಂದು ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಏನಿಸುತ್ತದೆ. ಹಿಂದೆಲ್ಲಾ ಎಲ್ಲೋ ಫೋಟೋಗಳಲ್ಲಿ ಕುಡಿಯುತ್ತಿರುವ, ಸಿಗರೇಟ್ ಸೇದುತ್ತಿರುವ ಫಾರಿನ್ ಹುಡುಗಿಯನ್ನು ಕಂಡರೆ ಬಾಯಿ ಮೇಲೆ ಕೈಯಿಟ್ಟುಕೊಂಡು ಅಬ್ಬಾ ಎಂಥಾ ಕಾಲ ಬಂದಿತಪ್ಪಾ! ಎಂದು ಆಶ್ಚರ್ಯಚಕಿತರಾಗುತ್ತಿದ್ದೆವು. ಆದರಿಂದು ಇಂತಹ ಸೇವನೆಗಳು ನಮ್ಮ ಭಾರತಕ್ಕೂ ಲಗ್ಗೆ ಇಟ್ಟು ಕಾಮನ್ ಎನ್ನುವ ಹಂತಕ್ಕೆ ತಲುಪಿದೆ.

ಸಾಮಾನ್ಯವಾಗಿ ಐಟಿಬಿಟಿ ಕಂಪೆನಿಗಳ ಆವರಣದಲ್ಲಿ ನೀವು ಒಂದು ವಾಕ್ ಮಾಡಿ ನೋಡಿದರೆ ಹುಡುಗಿಯರ ಸಿಗರೇಟ್ ಸೇವನೆಯ ಶೋಕಿ ನಿಮಗೆ ಶಾಕ್ ನೀಡುವುದು ಗ್ಯಾರಂಟಿ. ಹೌದು! ಸಿಗರೇಟ್ ಸೇವನೆ ಕೆಲವರಿಗೆ ಚಟವಷ್ಟೆ ಅಲ್ಲ ಅದೊಂದು ಶೋಕಿಯೂ ಹೌದು. ಎನಾದರೂ ಇದು 21ನೇ ಶತಮಾನ ನೋಡಿ! ಇಲ್ಲಿ ಮಾನಕ್ಕಿಂತ ಶೋಕಿಯೇ ಇಂಪಾರ್ ಟೆಂಟ್. ಫಾರಿನ್ ಸಂಸ್ಕೃತಿಯವರು ಏನಾದರೂ ಮಾಡಿಕೊಂಡು ಸಾಯಲಿ ಆದರೆ ನಮಗಿದು ಸಮಂಜಸವೇ ಎಂಬುದನ್ನು ನಾವರಿಯಬೇಕು. ಕೇವಲ ಸಿಗರೇಟ್ ಸೇವನೆಯೊಂದರಿಂದಲೇ ತಲೆದೊರುವ ಸಮಸ್ಯೆಗಳನ್ನು ಏಣಿಸಿದರೆ ಇದೆಲ್ಲಾ ಬೇಕಾ ಎನಿಸುತ್ತೆ. ಉಸಿರಾಟದ ಸಮಸ್ಯೆ, ಕಿಡ್ನಿ ವೈಫಲ್ಯ, ಬಂಜೆತನ, ಗರ್ಭಪಾತ, ಕಡಿಮೆ ತೂಕ, ಶಿಶುಮರಣ, ಲೈಂಗಿಕ ನಿರುತ್ಸಾಹತೆ ಹೀಗೆ ಇನ್ನೂ ಅನೇಕ ಸಮಸ್ಯೆ ಈ ಚಟದಿಂದ ನಾವೇ ಆಮುದು ಮಾಡಿಕೊಳ್ಳಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಿಶ್ವದ ಶೇಕಡಾ 20ರಷ್ಟು ಅಂದರೆ ಸುಮಾರು 100 ಕೋಟಿಗೂ ಹೆಚ್ಚು ಮಹಿಳೆಯರು ಸಿಗರೇಟು ಸೇದುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆಯಂತೆ. ಇನ್ನಾದರೂ ಚಿಂತಿಸಿ ಹೆಣ್ಣುಮಕ್ಕಳೆ ನಿಮ್ಮ ಒಂದು ಪರಿವರ್ತನೆ ನಮ್ಮ ದೇಶ, ರಾಜ್ಯ, ಊರು, ಮನೆ, ಇತ್ಯಾದಿಗಳನ್ನು ಬದಲಿಸಿ ಸುಖದ ಬೆಳಕಾಗಬಹುದು, ಸಾರಿ!!, ಈ ಮಾತುಗಳು ಮಧ್ಯ ಮತ್ತು ಧೂಮಲೀಲೆಗೆ ಇಳಿದಿರುವ ನಾರಿಗೆ ಮಾತ್ರಾ. ಮನೆಬೆಳಗುವ ಹೆಣ್ಣು ಸಿಗರೇಟ್ ಬೆಳಗಿದರೆ ಮನೆಗೆ ಜೊತೆಗೆ ದೇಶಕ್ಕೆ ಬೆಂಕಿ ಇಡುತ್ತಿದ್ದಾಳೆ ಎಂದರ್ಥ ಕಾರಣ ಮಾನ ಹಾಗೂ ಜೀವನ ಎರಡು ಹಾರಾಜಾಗುವುದು ಪ್ರಭುತ್ವದ್ದೆ ಹೊರತು ಹುಡುಗಿಯರದಲ್ಲ!..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.