ಕವಲುದಾರಿ

ಈಗ ಅವಳು ೨೫ರ ವಯಸ್ಸಿನ ಯುವತಿ. ಬಡಕುಟುಂಬದಲ್ಲಿ ಜನಿಸಿದವಳಾದಾರೂ ಅವಳ ಕನಸುಗಳಿಗೆ ಬಡತನವಿರಲಿಲ್ಲ. ಬದುಕಿನಲ್ಲಿ ಎಲ್ಲಾ ರೀತಿಯ ಕಷ್ಟಗಳನ್ನು ನೋಡಿ ಬದುಕಿನಲ್ಲಿ ಏನಾದರೊಂದು ಸಾಧಿಸಬೇಕೆಂಬ ಛಲವಂತೆ.

ಒಂದು ಹಂತಕ್ಕೆ ಒಳ್ಳೆಯ ಶಿಕ್ಷಣ ಪಡೆದುಕೊಂಡವಳು, ಕೆಲಸವು ಕೂಡ ಆರಾಮವಾಗಿಯೆ ದೊರಕಿತ್ತು. ಆದರೆ ಅನಿವಾರ್ಯ ಕಾರಣಗಳಿಗಾಗಿ ಆ ಕೆಲಸವನ್ನು ಕಳೆದುಕೊಳ್ಳಬೇಕಾಗಿ ಬಂತು.

ಅವಳ ಜೀವನದ ಕಷ್ಟದ ಮತ್ತೊಂದು ಮಗ್ಗಲು ಅಂದಿನಿಂದ ಪ್ರಾರಂಭವಾಗಿತ್ತು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ, ಆಗ ತಾನೆ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಅಕ್ಕ, ಇವರೆಲ್ಲರ ಬೇಕು ಬೇಡಗಳ ಪೂರೈಕೆ ಮಾಡಬೇಕಾದ ಜವಾಬ್ದಾರಿ ಅವಳ ಮೇಲೆ ಇತ್ತು

ತಕ್ಷಣಕ್ಕೆ ಬೇರೆ ಕಡೆ ಕೆಲಸ ಹುಡುಕಲೆ ಬೇಕಾಗಿತ್ತು. ಅದರಂತೆ ತುಂಬಾ ಪ್ರಯತ್ನದ ನಂತರ ಒಂದು ಕಡೆ ಕೆಲಸವು ದೊರಕಿತು ಆದರೆ ಅವಳಿಗೆ ಕೆಲಸದಲ್ಲಿ ಯಾವುದೆ ಅನುಭವ ಇಲ್ಲದೆ ಇದ್ದಿದ್ದರಿಂದ ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ಅಲ್ಲಿ ಕೆಲಸಕ್ಕೆ ಸೇರಿದಳು

ಸಮಸ್ಯೆ ಉದ್ಭವ ಆಗಿದ್ದೆ ಅಲ್ಲಿ! ಅನಿವಾರ್ಯತೆ ಅಂತ ತನ್ನ ಓದಿಗೆ ಲಾಯಕ್ಕಲ್ಲದ ಸಂಬಳಕ್ಕೆ ಒಪ್ಪಿ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಮಾಲೀಕರು ಅವಳಿಗೆ ಸಂಬಂಧಪಡದ ಕೆಲಸಗಳನ್ನು ಅವಳಿಗೆ ಹೇಳುತ್ತಿದ್ದರು, ತನ್ನ ಅನಿವಾರ್ಯತೆಗೆ ತನ್ನನ್ನೆ ಶಪಿಸಿಕೊಂಡು ಹೇಗೋ ಎಲ್ಲಾ ಕೆಲಸವನ್ನು ನಿಭಾಹಿಸುತ್ತಿದ್ದಳು.

ಇದರ ಮಧ್ಯೆದಲ್ಲೆ ಅವನ ಪರಿಚಯ ಅವಳಿಗೆ ಆಗಿದ್ದು, ಅವರಿಬ್ಬರು ಒಬ್ಬರಿಗೊಬ್ಬರು ಗೊತ್ತಿದ್ದವರೆ... ಪ್ರಾಥಮಿಕ ಶಿಕ್ಷಣವನ್ನು ಒಟ್ಟಿಗೆ ಒಂದೆ ಶಾಲೆಯಲ್ಲಿ ಮುಗಿಸಿದ್ದವರು. ಅಲ್ಲಿ ಅವರಿಬ್ಬರಿಗೂ ಬಾಲ್ಯದ ವಯಸ್ಸದ್ದರಿಂದ ಸ್ನೇಹವಾಗಲಿ ಪ್ರೀತಿಯಾಗಲಿ ಇರಲಿಲ್ಲ.

ಈಗಿನ what's up ಮತ್ತೆ Facebook ಯುಗದಲ್ಲಿ ಯಾರಿಗೆ ಯಾರ ಜೊತೆಗಾದರೂ ನಂಟು ಬೆಳೆಯಬಹುದು. ಇವರಿಬ್ಬರ ನಡುವೆ ಆಗಿದ್ದು ಅದೆ.. ಇವಳ ಬಾಲ್ಯದ ಗೆಳತಿಯೊಬ್ಬಳು ಅವನ ಬಾಲ್ಯದ ಗೆಳಯನೊಬ್ಬನಿಗೆ ಪರಿಚಯವಿದ್ದರಿಂದ ಒಂದಷ್ಟು ಗೆಳಯ ಗೆಳತಿಯರು ಸೇರಿ ಒಂದು what's up ಗುಂಪು create ಮಾಡಿ, ಇವಳ ಗೆಳತಿ ಇವಳನ್ನು ಅವನ ಗೆಳಯ ಅವನ್ನನ್ನು ಆ ಗುಂಪಿಗೆ ಸೇರಿಸಿದರು

ಮೊದಮೊದಲು ಸಮಾನ್ಯ ವಿಚಾರಗಳ ಬಗ್ಗೆ ಗುಂಪಿನಲ್ಲಿ ನಡೆಯುತ್ತಿದ್ದ ಮಾತುಕತೆಯಲ್ಲಿ ಇವಳ ಅಭಿಪ್ರಾಯ ಇವಳು ಅವನ ಅಭಿಪ್ರಾಯ ಅವನು ಹೇಳುವುದು ಇದಷ್ಟೆ ನಡೆಯುತ್ತಿತ್ತು. ಇವಳ ನೇರ ಮಾತು ನಡವಳಿಕೆಯ ಬಗ್ಗೆ ಮೊದಲಿನಿಂದಲೂ ತಿಳಿದಿದ್ದ ಅವನು ತಾನೆ ಮುಂದುವರೆದು ಅವಳ ಜೊತೆ chat ಮಾಡಲು ಶುರು ಮಾಡಿದ

ಅವಳು ಅಷ್ಟೇ ಅವನ ಬಗ್ಗೆ ಇತರರಲ್ಲಿ ಒಳ್ಳೆಯ ಮಾತುಗಳನ್ನು ಕೇಳಿದ್ದರಿಂದ ಯಾವುದೆ ಮುಜುಗರವಿಲ್ಲದೆ ಮಾತನಾಡಿಸಲು ಶುರುಮಾಡಿದಳು what's up. Chat ನಲ್ಲಿ ಶುರುವಾದ ಮಾತು ಬರುಬರುತ್ತಾ Cal ಮಾಡುವುದು ಬೇಟಿ ಆಗುವುದು ಮಾಡತೊಡಗಿದರು

ಅವನಿಗೆ ಅವಳಲ್ಲಿ ತುಂಬಾ ಹಿಡಿಸಿದ ಗುಣ ನೇರವಂತಿಕೆ, ಸಹಜತನ. ಇವನಲ್ಲಿ ಅವಳಿಗೆ ಹಿಡಿಸಿದ ಗುಣ ಸದಾ ನಗುನಗುತ್ತಾ ಇರುವುದು, ಅವಳ ಇಷ್ಟ ಕಷ್ಟಗಳಿಗೆ ಬೇಗ ಸ್ಪಂದಿಸುವುದು.

ಒಬ್ಬರಿಗೆ ಮತ್ತೊಬ್ಬರ ಮೇಲೆ ಒಳ್ಳೆಯ ನಂಬಿಕೆ ವಿಶ್ವಾಸ ಇದ್ದಿದ್ದರಿಂದ ದಿನಕಳೆದಂತೆ ಇನ್ನಷ್ಟು ಹತ್ತಿರವಾಗುತ್ತ ಹೋದರು. ಇನ್ನೊ ಪ್ರೀತಿಯನ್ನು ವ್ಯಕ್ತಪಡಿಸದೆ ಇರಲು ಸಾಧ್ಯ ಇಲ್ಲ ಎನಿಸಿದ ಅವಳು ತಾನಾಗಿಯೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಳು!

ಪ್ರಾರಂಭದಲ್ಲಿ ಅವನು ಅವಳ ಪ್ರೀತಿ ಒಪ್ಪಿಕೊಳ್ಳುಲು ತಡವರಿಸಿದರೂ ಅನಂತರದಲ್ಲಿ ಒಪ್ಪಿದ್ದ. ಅವನು ಒಪ್ಪಿಗೆ ನೀಡಲು ಹಿಂಜರಿಯಲು ಕಾರಣವು ಇತ್ತು! ಜಾತಿ ಎಂಬ ಭೂತ ಅವರಿಬ್ಬರ ಪ್ರೀತಿಗೆ ಅಡ್ಡವಾಗಿತ್ತು! ಮೆಲ್ಜಾತಿಗೆ ಸೇರಿದ್ದ ಅವಳು ಕೆಳಜಾತಿಗೆ ಸೇರಿದ್ದ ಇವರಿಬ್ಬರ ಪ್ರೀತಿಗೆ ಜನರಿಂದ ವಿರೋಧ ವ್ಯಕ್ತಪಡಿಸಬಹುದೆಂಬ ಭಯ. ಆದರೂ ಅವಳಿಗೆ ಬೇಸರಗೊಳಿಸಲು ಮನಸ್ಸಗದೇ ಅವಳ ಪ್ರಿತಿಯನ್ನು ಒಪ್ಪಿದ್ದ. ಹೀಗೆ ನಿರಂತರವಾಗಿ ಯಾವುದೆ ಕೊರತೆ ಇಲ್ಲದ ಹಾಗೆ ಅವಳನ್ನು ಅವನು ನೋಡಿಕೊಳ್ಳುತ್ತಿದ್ದ ರೀತಿಗೆ ಅವಳು ತನ್ನ ಕುಟುಂಬದಲ್ಲಿನ ಕಷ್ಟ, ತನ್ನ ಕೆಲಸದ ಸ್ಥಳದಲ್ಲಿನ ಒತ್ತಡ ಎಲ್ಲಾವನ್ನು ಮರೆಯುತ್ತಿದ್ದಳು.

ಆದರೆ ಅವಳಿಗೆ ಉಳಿದಿದ್ದ ಅಲ್ಪಸ್ವಲ್ಪ ನೆಮ್ಮದಿಯನ್ನು ಕೆಡಿಸುವಂತ ಒಂದು ಘಟನೆ ಅವಳ ಕುಟುಂಬದಲ್ಲಿ ನಡೆದಿತ್ತು! ಅವಳ ತಂದೆಗೆ ಪಾಶ್ವವಾಯು ತಗುಲಿತ್ತು. ವಯಸ್ಸಾದ ತಂದೆಗೆ ಬಂದೆರಗಿದ್ದ ಸಮಸ್ಯೆ ಅವಳನ್ನು ಕುಗ್ಗಿ ಹೋಗುವಂತೆ ಮಾಡಿತ್ತು.

ಸಂಬಂಧಿಕರು ಎನ್ನುವವರು ದೂರವೆ ಉಳಿದರು. ಕಷ್ಟದ ಪರಿಸ್ಥಿತಿಯಲ್ಲಿ ಏನು ಮಾಡುವುದು ಎನ್ನುವುದೆ ತಿಳಿಯದಾಗಿತ್ತು. ಅಷ್ಟರಲ್ಲಾಗಲೆ ಅವಳು ಕೆಲಸಕ್ಕೆ ಸೇರಿ ೨ ವರ್ಷಗಳು ಮುಗಿಯುತ್ತ ಬಂದಿತ್ತು
ಆಕೆ ವಾಸಿಸುತ್ತಿದ್ದ ಪ್ರದೇಶದಲ್ಲಿ ಅವಳ ಓದಿಗೆ ಸಂಬಂಧಪಟ್ಟಂತ ಕೆಲಸಗಳು ತುಂಬಾ ಕಡಿಮೆ ಇದ್ದಿದ್ದರಿಂದ ಒಳ್ಳೆಯ ಕಡೆ ಕೆಲಸ ಅರಸಿ ಹೋಗಬೇಕಾದ ಪರಿಸ್ಥಿತಿ, ಅವಳಿಗೆ ತಾನು ಓದಿದ ವಿಷಯದಲ್ಲೆ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಹಠ.....

ಆದರೆ ಒಂದು ಕಡೆ ಅನಾರೋಗ್ಯದಿಂದ ಬಳಲುತ್ತಿರುವ ಅಪ್ಪ, ವಯಸ್ಸದ ಅಮ್ಮ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಹುಡುಗ... ಅವಳ ತಂದೆ ತಾಯಿಗೆ ಕಷ್ಟದಲ್ಲು ವಯಸ್ಸಿಗೆ ಬಂದ ಮಗಳ ಮದುವೆ ಮಾಡಿ ಕಳುಹಿಸಬೇಕೆಂಬ ಒತ್ತಡ, ಅವನಿಗೆ ತನ್ನುಡಿಗಿಯನ್ನು ಕಳೆದುಕೊಂಡು ಬಿಡುತ್ತೆನೆನೊ ಎಂಬ ಭಯ.....

ತಾನು ಮದುವೆ ಆಗಿ ಹೋದರೆ ತಂದೆತಾಯಿಯ ಮುಂದಿನ ಜೀವನದ ಗತಿ ಏನೆಂಬ ಚಿಂತೆ! ದೂರದ ಊರಿಗೆ ಕೆಲಸವರಸಿ ಹೊರಟರೆ ತನ್ನವರನ್ನು ತೊರೆಯಬೇಕೆಂಬ ಸಂಕಟ, ತನ್ನ ತಂದೆತಾಯಿಯ ಆಸೆ ತೀರಿಸುವ ಸಲುವಾಗಿ ಅವರು ತೋರಿಸಿದ ಹುಡುಗನನ್ನು ಮದುವೆ ಆದರೆ ತಾ ಪ್ರೀತಿಸಿದ ಹುಡುಗನಿಗೆ ಮೋಸ ಮಾಡಿದ ಹಾಗೆ ಎಂಬ ನೋವು! ಉದ್ಯೋಗ ಅರಸಿ ದೂರದ ಊರಿಗೆ ಹೋಗದಿದ್ದರೆ ತನ್ನ ಭವಿಷ್ಯ ತಾನು ಅಂದುಕೊಂಡಂತೆ ರೂಪಿಸಿಕೊಳ್ಳಲು ಆಗುವುದಿಲ್ಲ ಎಂಬ ಬೇಸರ.........

ಹೀಗೆ ಉತ್ತರವೇ ಸಿಗದ ಪ್ರಶ್ನೆಗಳಲ್ಲಿ ಸಿಲುಕಿದ್ದಾಳೆ ಕಥಾನಾಯಕಿ..... ನಿಮ್ಮಲ್ಲಿ ಸಲಹೆಗಳಿದ್ದರೆ ದಯವಿಟ್ಟು ತಿಳಿಸಿ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.