ದ ಬುಕ್ ಆಫ್ ದಿ ಡೆತ್....

ದ ಬುಕ್ ಆಫ್ ದಿ ಡೆಡ್ - ಪದ್ಮಸಂಭವ ಎಂಟನೇ ಶತಮಾನದಲ್ಲಿ ಬರೆದಂತಹ ಪುಸ್ತಕ ಇದಾಗಿದೆ.

ತಾನು ಬರೆದ ಈ ಪುಸ್ತಕವನ್ನು ಟಿಬೆಟ್ ಜನರು ಓದುವ ಅರ್ಹತೆಯನ್ನು ಇನ್ನೂ ಪಡೆದಿಲ್ಲ ಅಂತ ಪದ್ಮಸಂಭವ ಇದನ್ನು ಹಿಮಾಲಯದ ಗುಹೆಯಲ್ಲಿ ಅಡಗಿಸಿಟ್ಟು, ಇದು ಎಲ್ಲಿದೆ ಅಂತ ರಹಸ್ಯ ನಕ್ಷೆ ತಯಾರಿಸಿ, ಇದು ಎಷ್ಟೇ ಹುಡುಕಿದರೂ ಇನ್ನೂ ಆರು ನೂರು ವರ್ಷ ಯಾರಿಗೂ ಸಿಗುವುದಿಲ್ಲ ಅಂತ ಜ್ಯೋತಿಷ್ಯ ನುಡಿದು ಹೋದ.

ಪದ್ಮಸಂಭವ ಹುಟ್ಟಿದ್ದು ಯಾವಾಗ? ಕತೆಯ ಪ್ರಕಾರ ಪದ್ಮಸಂಭವ ಹುಟ್ಟಲೇ ಇಲ್ಲ. ಧನಕೋಶ ಎಂಬ ಸರೋವರದಲ್ಲಿ ಒಂದು ಕಮಲದ ಹೂವಿನಲ್ಲಿ ತೇಲುತ್ತಾ ಎಂಟು ವರ್ಷದ ಬಾಲಕನಾಗಿ ಸಂಭವಿಸಿದ. ಪದ್ಮದಲ್ಲಿ ಸಂಭವಿಸಿದವ - ಪದ್ಮಸಂಭವ.

ಇದು ಓಡಿಯಾನಾ ರಾಜನ ರಾಜ್ಯವಾಗಿತ್ತು. ಈಗಿನ ಸ್ವಾತ್ ವ್ಯಾಲಿ, ಪಾಕಿಸ್ತಾನ. ಕೆಲವರು ಓರಿಸ್ಸಾ ಅಂತನೂ ಅಂತಾರೆ. ಓಡಿಯಾನ ರಾಜನಿಗೆ ಮಕ್ಕಳು ಇರಲಿಲ್ಲ. ಈತನಿಗೇ ಪಟ್ಟ ಕಟ್ಟಬೇಕು ಅಂತ ಮಾಡಿದರೆ ಬೇಡವೆಂದು ಹೊರಟು ಹೋದ. ನಂತರ ಉತ್ತರ ಭಾರತದ ಯಾವುದೋ ಕಡೆ ಈತ ಮಂದಾರವ ಎಂಬ ರಾಜಕುಮಾರಿಗೆ ತಂತ್ರ ವಿದ್ಯೆ ಕಲಿಸುತ್ತಿದ್ದ. ಆಕೆಯ ತಂದೆಗೆ ಭಯಂಕರ ಕೋಪ ಬಂದು ಈತನನ್ನು ಸುಟ್ಟು ಹಾಕಲು ನೋಡಿದ. ಬೆಂಕಿ ಈತನನ್ನು ಸುಡದೇ ನಂದಿ ಹೋಯಿತು. ತಂದೆ ತನ್ನ ಮಗಳನ್ನು ಮತ್ತು ರಾಜ್ಯವನ್ನು ಇವನಿಗೇ ಕೊಟ್ಟ.

ನಂತರ ಈತ ಹೋಗಿದ್ದು ಟಿಬೆಟ್. ಅಲ್ಲಿನ ರಾಜ ಬೌದ್ಧ ಧರ್ಮದ ಪುಸ್ತಕಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸುವಂತೆ ಕೇಳಿಕೊಂಡ. ಪದ್ಮಸಂಭವ ಮತ್ತು ಶಾಂತರಕ್ಷಿತ ಸೇರಿದಂತೆ 108 ಜನ ಅನುವಾದ ಮಾಡಿದರು. ಪದ್ಮಸಂಭವ ಮತ್ತು ಮಂದಾರವ ಹಿಮಾಲಯದಲ್ಲಿ ಇನ್ನೂ ಬದುಕಿಯೇ ಇದ್ದಾರೆ ಅಂತ ನಂಬಿಕೆ.

ಈತನ ಭವಿಷ್ಯದಂತೆ ಹದಿನಾಲ್ಕನೇ ಶತಮಾನದಲ್ಲಿ ಒಂದು ನಕ್ಷೆ ಯನ್ನು ಅನುಸರಿಸಿ ಈ ಪುಸ್ತಕವನ್ನು ಶೋಧಿಸಿದ.

1927ರಲ್ಲಿ ಈ ಪುಸ್ತಕ ಮೊದಲ ಬಾರಿಗೆ ಎವೆನ್ಸ್ ವೇನ್ಸ್'ನಿಂದ ಪಾಶ್ಚಾತ್ಯ ದೇಶಗಳಿಗೆ ಹೋಯಿತು. ನಂತರ 1964ರಲ್ಲಿ ಇಂಗ್ಲಿಷ್'ಗೆ ಭಾಷಾಂತರ ಆಯಿತು.

ಈಗ ಸಾವಿನ ಅನುಭವ ಪಡೆದು ಮರಳಿ ಬಂದ ಅನೇಕರು ಹೇಳುವ - ಬೆಳಕಿನ ಸುರಂಗ ಕಾಣುತ್ತದೆ. ಚಿತ್ರಗಳು ಕಾಣುತ್ತವೆ ಇತ್ಯಾದಿಗಳ ಸಂಪೂರ್ಣ ವಿವರಣೆ ಈ ಪುಸ್ತಕದಲ್ಲಿ ಇದೆಯಂತೆ. ಆತ್ಮ ನಲವತ್ತೊಂಬತ್ತು ದಿನ ಪಡೆಯುವ ಅನುಭವಗಳು. ಯಮ ಇವರ ಪಾಪ ಪುಣ್ಯದ ಲೆಕ್ಕ ಮಾಡುವುದು ಇತ್ಯಾದಿ. ಈ ಪುಸ್ತಕಗಳು ಆನ್ ಲೈನ್ ನಲ್ಲಿ ಲಭ್ಯ ಇವೆ.

ಮಹಾಯಾನ ಬೌದ್ಧರು ಹೆಣವನ್ನು ಗುಹೆಯಲ್ಲಿ ಇಡುತ್ತಾರೆ ಅಥವಾ ನೀರಿನಲ್ಲಿ ಬಿಡುತ್ತಾರೆ. ಆದರೆ ಟಿಬೆಟಿಯನ್ ಜನ ಹೆಣದ ಬೆನ್ನೆಲುಬು ಮುರಿದು, ಕೈಕಾಲುಗಳನ್ನು ಭ್ರೂಣದಂತೆ ಕಟ್ಟಿ ಹದ್ದುಗಳಿಗೆ ತಿನ್ನಲು ಇಡುತ್ತಾರೆ. ಪಾರಸಿಗಳೂ ಹೆಚ್ಚು ಕಡಿಮೆ ಹೀಗೇ ಮಾಡುತ್ತಾರೆ.kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.