ಅನುಲೇಖಾ

​ಅನುಲೇಖಾ,
ಅದು ಅವಳ ಹೆಸರು. ನಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ .ಶ್ರೀಮಂತ ಮನೆತನದ ಬಡ ಹುಡುಗಿ .ಅಮ್ಮ ಸರ್ಕಾರಿ ಆಸ್ಪತ್ರೆಯ ವಾರ್ಡ್ ನಂಬರ್ 22 ರ್ ಖಾಯಂ ರೋಗಿ .ಅಪ್ಪ ಸಾರಯಿ ದಾಸ .ಹೇಳಿಕೊಳ್ಳಲು ದೊಡ್ಡ ಮನೆತನ,ಮನಸ್ಸಿನಲ್ಲಿ ಸಾವಿರಾರು ಕನಸುಗಳು ,ಮನೆ ಅಲ್ಲಿ ಬರಿ ಇಲ್ಲಾಗಳು .ಜೀವನ ನಿರ್ವಹಣೆಗೆ ಅನುಲೇಖ ಕಂಡುಕೊಂಡ ದಾರಿ ಬಿಡಿ ಕಟ್ಟುದು.

ಹೌದು ,ಬಿಡಿ ಕಟ್ಟಿ, ಬದುಕಿನ ಬಂಡಿಯನ್ನ ಸಾಗಿಸಿದುರ ಜೊತೆಗೆ, ಕಾಲೇಜಿನಲ್ಲಿ ತನ್ನ ದುಡಿಮೆ ಇಂದಲೇ ಓದುತ್ತಿರುವ ಬಡ ಪ್ರತಿಭಾವಂತ ಅನುಲೇಖಾ ನನ್ನ ಬಹಳಷ್ಟು ಆಕರ್ಷಿಸಿದಳು.

ತನ್ನ ತಂದೆ ತಾಯಿಯ ಪ್ರೀತಿಯಿಂದ ವಿಮುಖಳಾದ ಅನುಲೇಖಾ, ನೈಜ ಪ್ರೀತಿಯ ಹುಡುಕಾಟದಲ್ಲಿ, ನನ್ನ ಪ್ರೀತಿಗೆ ಸೆರೆಯಾಳಾದಳು.. .ಕಷ್ಟಗಳೇ ತುಂಬಿದ ಅವಳ ಜೀವನದಲ್ಲಿ ಬಹಳಷ್ಟು ಕನಸುಗಳು ತುಂಬಿದವು .ತಾನು ಕೂಡ ತನ್ನ ಸಂಬಂದಿಕರಂತೆ ಸುಂದರ ಬದುಕನ್ನ ಬದುಕ ಬೇಕು, ಆ ಬದುಕನ್ನ ನೀನು ಕಾಣಿಕೆಯಾಗಿ ಕೊಡ್ತಿಯಲ್ಲ? ಎಂದಾಗ ನನ್ನ ಹುಡುಗಾಟದ ಪ್ರೀತಿಗೆ ಅವೆಲ್ಲ ಅಷ್ಟು ಅರ್ಥವಾಗಲಿಲ್ಲ..
ಎಲ್ಲಾ ಪ್ರೇಮಿಗಳಂತೆ ನಾನು ಅನುಲೇಖಾ ಕೂಡ ಕುಂದಾಪುರದ ಎಲ್ಲ ಬೀಚ್ಗಳಾ ಮರಳಿನಲ್ಲಿ ನಮ್ಮ ಹೆಸರನ್ನ ಬರೆದು ಮರಳಿನ ಗುಬ್ಬಚ್ಚಿ ಗೂಡು ಕಟ್ಟಿದ್ವಿ, ಆನೆಗುಡ್ಡೆ ಜಾತ್ರೆ, ಕೋಟೇಶ್ವರದ ಕೊಡಿ ಹಬ್ಬದಲ್ಲಿ ತಿರುಗುವ ತೊಟ್ಟಿಲಲ್ಲಿ ಕೂತು ಮಂಡಕ್ಕಿಯಾ ರುಚಿ ನೋಡಿದ್ವಿ. ಮಳೆಯಲ್ಲಿ ನಿಂತು ತಿಂದ ಗಡ್ ಬಡ ಐಸ್ ಕ್ರೀಮ್, ಪ್ರೇಮಿಗಳ ದಿನದ ವಿಶೇಷವಾಗಿ ವಿನಾಯಕ ಥಿಯೇಟರ್ ನಲ್ಲಿ ನೋಡಿದ ಸಿನಿಮಾ, ಬರಿ ಕಾಡುವ ನೆನಪುಗಳಾಗಿ ಉಳಿಯುವ ಸಮಯ ಬಂದೆ ಬಿಟ್ಟಿತ್ತು .

ಅನುಲೇಖಾಳ ತಂದೆ ಒಂದು ಸಂಬಂಧವನ್ನ ಹುಡುಕಿ ತಂದರು .ಸ್ವಲ್ಪ ಕಪ್ಪಗೆ ನೆಲವತ್ತರ ಅಸು -ಪಾಸಿನ ಶ್ರೀಮಂತ ಕುಟುಂಬದ ಹುಡುಗ,sorry sorry ಯುವಕ, sorry ಅಂಕಲ್.. .ಎರಡನೇ ಸಂಬಂಧವಂತೆ , ಬೆಂಗಳೂರಲ್ಲಿ ಹೋಟೆಲ್ ಅಂತೆ, ಮದುವೆಯ ಎಲ್ಲ ಖರ್ಚು ಅವ್ರೆ ನೋಡ್ಕೋತಾರಂತೆ .ತನ್ನ ಮಗಳಿಗೆ ವಯಸ್ಸು ಮೀರಿದ ಹುಡುಗನನ್ನ ಹುಡುಕಿ ತಂದದ್ದು ಅವಳ ತಂದೆ, ವಾಸ್ಕೋಡಿಗಾಮ ಇಂಡಿಯಾವನ್ನ ಕಂಡುಹಿಡಿದಷ್ಟೇ ಖುಷಿಪಟ್ಟರು .ಆ ಖುಷಿಯ ಉತ್ತುಂಗದಲ್ಲಿ ಅವರು ಮಗಳ ಅಭಿಪ್ರಾಯ ಕೇಳದೆ ಮದುವೆಯ ನಿರ್ಧಾರ ಮಾಡಿಯೇ ಬಿಟ್ಟರು..

ಮಧ್ಯಮ ವರ್ಗದ ಸಾಮಾನ್ಯ ಹೆಣ್ಣು ಮಗು, ಜೀವನದ ಮಹತ್ವದ ನಿರ್ಧಾರವಾದ, ಮದುವೆಯ ವಿಷಯ ಬಂದಾಗ ಅನುಭವಿಸುವ ಸಾಮಾನ್ಯ ಸಮಸ್ಯೆ " ಅವಳ ನಿರ್ಧಾರ "
ಒಂದು ಕಡೆ ಅರಳುವ ವಯಸ್ಸು ಅನುಲೇಕಾಳದ್ದು, ಬಾಡುವ ವಯಸ್ಸು ವರ ಮಹಾಶಯನದ್ದು, ಇನ್ನೊಂದು ಕಡೆ ನಮ್ಮಿಬ್ರ ಪ್ರೀತಿ ಪ್ರೇಮ ,ಬಡತನವೇ ಬಂಡವಾಳವಾಗಿರುವ ಮನೆ, ಕುಡುಕ ತಂದೆ, ಅಸ್ತಮಾ ರೋಗಿ ತಾಯಿ,ಮನಸ್ಸಿನಲ್ಲಿ ಕಿಚ್ಚಿನಂತೆ ಕಾದು ಕೂತಿರುವ ಗುರಿ"" ತಾನು ಕೂಡ ತನ್ನ ಸಂಬಂದಿಕರಂತೆ ಸುಂದರ ಬದುಕನ್ನ ಬದುಕ ಬೇಕು"
ಆಯ್ಕೆ ನಾನೋ ಇಲ್ಲ ನೆಲವತ್ತರ ಅಂಕಲ್ ಹಾ ..

ತನ್ನ ಆಸೆ ಆಕಾಂಶೆಗಳನ್ನ ಈಡೇರಿಸಿ ಕೊಳ್ಳಲು ಆ ವರ ಮಹಾಶಯನನ್ನ ಮದುವೆ ಯಾಗಲೊ?ಇಲ್ಲ ಪ್ರೀತಿಗೆ ಬೆಲೆಕೊಟ್ಟು ಜೀವನವೆಂದರೆ ಏನು ಎಂದೇ ಅರ್ಥವಾಗದ ಹುಡುಗಾಟದ ಹುಡುಗ ನನ್ನ ಜೊತೆ ಬಂದು, ಮತ್ತೆ ಅದೇ ಬಿಡಿ ಕಟ್ಟಿ ,ಹಳೆ ನೈಟಿ ತೊಟ್ಟು ,ಅಮ್ಮನನ್ನ ಅದೇ ಸರ್ಕಾರೀ ಆಸ್ಪತ್ರೆ ವಾರ್ಡ್ ನಂಬರ್ ಇಪ್ಪತ್ತೆರಡರಲ್ಲಿ ಮಲಗಿಸಲ್ಲಾ ?
ಇಂತಹ ದ್ವಂದ್ವ ಆಲೋಚನಯಲ್ಲಿ ಸಿಕ್ಕಿಹಾಕಿಕೊಂಡ ಅನುಲೇಖಾ, ಸುಂದರ ಜೀವನದ ಸ್ವಪ್ನ ಕಟ್ಟಿಕೊಂಡು ತನ್ನ ತವರಿನ ಕಷ್ಟಕ್ಕೆ ಅಂತ್ಯ ಹಾಡಲು ವಯಸ್ಸಿನ ಅಂತರವನ್ನೇ ಮರೆತು ಆ ಹುಡುಗನೊಂದಿಗೆ ಮದುವೆಯಾಗಿ ಬೆಂಗಳೂರಿಗೆ ಹಾರಿಯೇ ಬಿಟ್ಟಳು .

ಮೊದ ಮೊದಲು ನಂಗೆ ಅನುಲೇಖಾಳ ನಿರ್ಧಾರ ತಪ್ಪಾಗಿ ಕಂಡಿತ್ತು .ಅವಳು ಪ್ರೀತಿ ಕೊಂದ ಕೊಲೆಗಾರ್ತಿಯಾಗಿ ಕಂಡಳು. ಎಲ್ಲ ಹುಡುಗರಂತೆ ನಾನು ಕೂಡ ,ನನ್ನ ಪ್ರೀತಿ ಮರೆಯಲು ಕಂಡು ಕೂಂಡ ದಾರಿ, ಕುಂದಾಪುರದ ಗಲ್ಲಿಯೊಳಗಿನ ಸುಮಾ ಬಾರ್ ಅಂಡ್ ರೆಸ್ಟೋರೆಂಟ್. ನಾನು ಕುಡಿಸುತಿದ್ದ ಒಂದು ಬಿಯರಿಗೋ ಇಲ್ಲ ಕೂಡಿಸುತಿದ್ದ ಒಂದು ಸಿಗೇರೆಟಿಗೋ "" ಹೌದು ಮಗ ನಿನ್ನ ಜೀವನ ಹಾಳಾಗಿದ್ದು ಆ ಹುಡುಗಿ ಇಂದಲೇ " ಎನ್ನುತಿದ್ದ ಸ್ನೇಹಿತರು ನನ್ನ ಭವಿಷ್ಯದ ದಾರಿ ದೀಪದಂತೆ ಕಂಡರು . ಬರು ಬರುತ್ತಾ ನಂಗು ಕೂಡ ಅನುಲೇಖಾಳ ನಿರ್ಧಾರ ಸರಿಯೆನಿಸಿತು .ಜೀವನದ ಅರ್ಥವೇ ತಿಳಿಯದ ಈ ವಯಸ್ಸಿನಲ್ಲಿ ಅನುಲೇಖಾ ನನೊಂದಿಗೆ ಬಂದಿದ್ದಾರೆ, ಅವಳಿಗೆ ಸಿಗುತಿದದ್ದು ಮತ್ತೆ ಅದೇ ಬಡತನವೆಂಬ ಗಿಫ್ಟ್ .

ಕಾಲಗಳು ಉರುಳಿದವು ನಾನು ಕೂಡ ಪದವಿ ನಂತರ ಬೆಂಗಳೂರಿಗೆ ಬಂದು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ .ವಯಸ್ಸಿನ ಜೊತೆ ಮನಸ್ಸು ಕೂಡ ಬೆಳೆದಿದೆ ಮನಸ್ಸು ಮಾಗಿದೆ .ನನ್ನಲೂ ಬಹಳಷ್ಟು ಬದಲಾವಣೆಯಾಗಿದೆ ಹುಡುಗಾಟದ ಬುದ್ದಿ ಮರೆಯಾಗಿ ಜವಾಬ್ದಾರಿ ಜೀವದ ಜೊತೆ ಯಾಗಿದೆ .ಬೆಂಗಳೂರಿನ ಬ್ಯುಸಿ ಜೀವನದ ಪರಿಣಾಮವಾಗಿ ನನ್ನ ಸ್ಮತಿ ಪಟಲದಿಂದ ಅನುಲೇಖಾಳ ನೆನಪು ಮಾಸಿ ಹೋಗಿದೆ .
ಆರು ವರ್ಷಗಳ ನಂತರ ಮತ್ತೆ ಅನುಲೇಖಾ ನೆನಪಾಗಿದ್ದು ಅವಳ ಸ್ನೇಹಿತೆ ಸವಿತಾ ಸಿಕ್ಕಿದಾಗಲೇ .
ಸವಿತಾ ಅನುಲೇಖಾಳ ಮದುವೆಯ ನಂತರದ ಜೀವನದ ಚಿತ್ರಣವನ್ನೇ ಬಿಡಿಸಿಟ್ಟಳು
ಸುಂದರ ಬದುಕಿನ ಸ್ವಪ್ನದೊದಿಗೆ ಬೆಂಗಳೂರಿಗೆ ಬಂದಿಳಿದ ಅನುಲೇಕಾಳಿಗೆ ಬರಸಿಡಿಲು ಬಡಿದಂತಾಗಿತ್ತು , ಅದಾಗ್ಲೇ ಅವಳ ಗಂಡ ಕುಡಿತದ ದಾಸನಾಗಿದ್ದ ,ಸಿಗೇರೆಟಿನಾ ಸೆರೆಯಾಳಾಗಿದ್ದ,ದುಶ್ಚಟಗಳ ಅಧಿಪತಿಯಾಗಿದ್ದ, ವೈಶೆಯ ಮನೆಯ ಸರ್ದಾರನಾಗಿದ್ದ.. ಜೊತೆಗೆ ವಯಸ್ಸಿನ ಅಂತರದ ಪರಿಣಾಮವಾಗಿ ಹುಟ್ಟಿಕೊಂಡ ಅನುಮಾನಗಳು, ಇಬ್ಬರಲ್ಲೂ ವಿಭಿನ್ನ ಆಲೋಚನೆಗಳು . ರೊಟ್ಟಿ ಕಾವಲಿಯಿಂದ ಜಾರಿ ಬೆಂಕಿಗೆ ಬಿದ್ದ ಹಾಗೆ ಆಗಿತ್ತು ಅನುಲೇಖಾಳ ಬದುಕು .
ತವರು ಮನೆಯಿಂದ ಬಡತನವನ್ನ ಬಳುವಳಿಯಾಗಿ ಪಡೆದು ಬಂದ ಹುಡುಗಿಗೆ ಗಂಡನಿಂದ ಸಿಕ್ಕಿದು ಬರಿ ಕಣ್ಣೀರು ಅನುಮಾನದ ಉರುಳು . ಸಾಲದಕ್ಕೆ ಒಂದು ಹೆಣ್ಣು ಮಗುವಿನ ತಾಯಿ ಬೇರೆಯಾಗಿದ್ದಾಳೆ . ಗಂಡನ ದುಶ್ಚಟಗಳ ವರದಾನ ,ವಯಸ್ಸಿನ ಅಂತರದ ಪರಿಣಾಮ ಎರಡು ಒಟ್ಟಾಗಿ ಹುಟ್ಟಿದ ಮಗಳು ಅಂಗವಿಕಲೆ ಬೇರೆ ,ಸಾಲ ಎಂಬ ಚಂಡ ಮಾರುತಕ್ಕೆ ಗಂಡನ ಹೋಟೆಲ್ ಆಸ್ತಿ ಪಾಸ್ತಿ ಒಡವೆಗಳು ಕೊಚ್ಚಿ ಹೋಗಿ ವರ್ಷಗಳೇ ಆಗಿವೆ. ಅನಿವಾರ್ಯವಾಗಿ ಅನುಲೇಖಾ ಮತ್ತೆ ಕೆಲಸಕ್ಕೆ ಹೋಗುವ ಹಾಗೆ ಹಾಗಿದೆ .ಸಮಾಜದ ದ್ರಷ್ಟಿಗೆ ಬರಿ ಗಂಡನಾಗಿ ಇದ್ದ ಆ ಗಂಡ ಎಂಬ ಪ್ರಾಣಿ ಕೂಡ ಖಾಹಿಲೆ ಇಂದ ಸತ್ತು ಹೋದ .ವರ್ಷದ ಹಿಂದೆ ಅವಳ ತಂದೆ -ತಾಯಿ ಕೂಡ ತೀರಿಕೊಂಡರು . ಮಗಳನ್ನ ಯಾವೋದು ಆಶ್ರಮದಲ್ಲಿ ಬಿಟ್ಟು ಓದಿಸುತ್ತಿದ್ದಳಂತೆ .ಸಂತಾರಾಮನ ಪಾಳ್ಯದ ಯಾವದೂ ಬಾಡಿಗೆ ಮನೆಯಲ್ಲಿ ಇದ್ದಳಂತೆ.
ಮನಸ್ಸು ತಡೆಯಲಿಲ್ಲ ಸಂತಾರಾಮನ ಪಾಳ್ಯಕ್ಕೆ ಹೋಗಿ ಅನುಲೇಖಾಳನ್ನು ಭೇಟಿ ಮಾಡಿದ್ದೆ .ಸಂಬಂದಿಕರ ಮುಂದೆ ಎದೆ ತಟ್ಟಿ ಬದುಕಬೇಕು ಎಂದು ಹೇಳಿ ಬಂದ ಹುಡುಗಿ ಇಂದು ಬಣ್ಣ ಮಾಸಿದ ನೈಟಿ ಗೆ ತನ್ನ ಕೈಯಲ್ಲಿ ಇದ್ದ ಸೋಪಿನ ನೊರೆಯನ್ನ ಒರೆಸಿಕೊಂಡು ಮಸಿ ಇಂದ ಬಳಿದ ಪಾತ್ರೆಯಲ್ಲಿ ಕುಡಿಯಲು ನೀರು ಕೊಟ್ಟಾಗ, ಮಸಿ ತುಂಬಿದ ಪಾತ್ರೆ, ಬಣ್ಣ ಮಾಸಿದ ಹಳೆ ನೈಟಿಯಲ್ಲಿ ಮಿನುಗುತಿದ್ದ ಸೋಪಿನ ನೊರೆಯಲ್ಲಿ ಅವಳ ವಾಸ್ತವ ಬದುಕು ಎದ್ದು ಕಾಣುತಿತು.
ದೇವರು ಕಷ್ಟದ ಮೇಲೆ ಕಷ್ಟ ಕೊಡುತಾನಂತೆ ಒಂದು ಕಡೆ ಬಡತನ ಇನ್ನೊಂದು ಕಡೆ ಸಮಾಜದ ನಿಷ್ಠುರ ಮಾತುಗಳು .ಅದಾಗಲೇ ಅಹ ಏರಿಯಾದ ಜನತೆ, ಒಬ್ಬಂಟಿ ಹೆಣ್ಣಿಗೆ ಅನೈತಿಕ ಸಂಬಂಧ ಕಲ್ಪಿಸಿಯಾಗಿತ್ತು. ಅದು ತನ್ನ ತಂದೆಯ ವಯಸ್ಸಿನ ಅವಳ ಫ್ಯಾಕ್ಟರಿ owner ಜೊತೆ . ಪಾಪ ತನ್ನ ಮಗಳ ಸುಂದರ ಭವಿಷ್ಯಕ್ಕೆ ಓ .ಟಿ ಮಾಡಿ ತಡವಾಗಿ ಮನೆಗೆ ಬರುತಿದ್ದದ್ದೇ ಕಾರಣವಾಗಿಸಿ, ಆ ಏರಿಯಾದ ಜನ ಅನುಲೇಖಾಳಿಗೆ ವೇಶ್ಯೆ ಎಂಬ ಬಿರುದು ಕೊಟ್ಟಿದ್ದರು .ನಾನು ಎರಡು ಮೂರೂ ಸಲ ಅವಳ ಮನೆಗೆ ಬಂದು ಹೋದ ನಂತರವಂತು ,ಆ ಪ್ರಚಾರ ಕಾರ್ಯ ಜೋರಾಗಿಯೇ ನಡೆಯಿತ್ತು.


ಅಂದು ಅನುಲೇಖಾ ತನ್ನ ಹೆತ್ತವರಿಗಾಗಿ ವಯಸ್ಸಿನ ಹಂಗನ್ನ ತೊರೆದು ಯಾರೋ ಅಪರಿಚಿತನಿಗೆ ಎರಡನೇ ಹೆಂಡತಿ ಯಾದಳು .ಇಂದು ಯಾಕೆ ಮುಗ್ದ ಹುಡುಗಿಯಾ ಬದುಕಿಗೆ ಎರಗಿದ ಕಷ್ಟದ ಸಂಕೋಲೆಯನ್ನ ಬಿಡಿಸಲು, ಅವಳ ಮಗಳ ಬದುಕಿಗೆ ದಾರಿದೀಪವಾಗಲು, ಸಮಾಜದ ಹಂಗನ್ನು ತೊರೆದು ನಾನು ಅನುಲೇಖಾಳಿಗೆ ಎರಡನೇ ಗಂಡನಾಗ ಬಾರದು??
ಹೌದು ನನ್ನ ನಿರ್ಧಾರವನ್ನ ಅವಳಿಗೆ ತಿಳಿಸಲು, ಅವಳ ಇಷ್ಟದ ಹಸಿರು ಬಣ್ಣದ ಸೀರೆ, ಕಿತ್ತಳೆ ಬಣ್ಣದ ಗಾಜಿನ ಬಳೆ, ಕೆಂಪು ಕುಂಕುಮ, ಬಿಳಿ ಮಲ್ಲಿಗೆಯನ್ನ ಅವಳ ಮನೆಗೆ ತೆಗೆದುಕೊಂಡು ಹೋದೆ .ಆದರೆ ನನ್ನ ಎರಡನೇ ಪ್ರೇಮ ನಿವೇದನೆಯನ್ನ ಅನುಲೇಖಾ ಖಾರವಾಗಿಯೇ ತಿರಸ್ಕರಿಸಿದಳು.

" ಮೊದಲೇ ನನ್ನ ಬಾಳು ಹಾಳಾಗಿದೆ ,ಹಾಳಾದ ನನ್ನ ಬಾಳನ್ನ ಸರಿ ಮಾಡ್ತಿನಿ ಎಂಬ ಹುಂಬ ಧೈರ್ಯದಲ್ಲಿ ನಿನ್ನ ಬಾಳನ್ನ ಹಾಳು ಮಾಡ್ಕೋ ಬೇಡ.ನಾನು ಬದುಕಿರೋದು ನನ್ನ ಮಗಳಿಗಾಗಿ .ಏನು ಮಾಡದ ನನಗೆ ಈ ಜನ ವೈಶೆಯನ್ನುವ ಬಿರುದು ಕೊಟ್ಟಿದಾರೆ. ನೀನು ಪದೇ ಪದೇ ಈ ರೀತಿ ಬಂದು ಹೋಗಿ ಅದನ್ನ ಪುಷ್ಟಿಕರಿಸಬೇಡ. pleas ಮತ್ತೆ ನಿನ್ನ ಮುಖ ನನಗೆ ತೋರಿಸ ಬೇಡ" . ಅವಳ ಈ ಕಟುವಾದ ಮಾತುಗಳನ್ನ ಕೇಳಿ ಏನು ಉತ್ತರಿಸಲಾಗದೆ ತಂದ ಸೀರೆ ಬಳೆಯನ್ನ ಅಲ್ಲೇ ಬಿಟ್ಟು ಹೊರ ನೆಡೆದೆ ..

ಮತ್ತೆ ಅದೇ ಏರಿಯಾದಲ್ಲಿ ಇದೀನಿ, ಅದೇ ಜನರ ಮುಂದೆ ಅನುಲೇಖಾಳನ್ನ ತಬ್ಬಿ ಎದೆಗೆ ಅಪ್ಪಿ ಹಿಡಿದು ನಿಂತಿದೀನಿ.. ಆದರೆ
ಆದರೆ,

ಆದರೆ,
ಆದರೆ ಜೀವಂತ ಅನುಲೇಕಾಳನ್ನ ಅಲ್ಲ .

ಭಾವಪೂರ್ಣ ಶ್ರದ್ಧಾಂಜಲಿ ಎಂಬ ಅವಳ ಕಟೌಟ್ ಅನ್ನ.
ನಾನು ಅವಳ ಮನೆಗೆ ಬಂದು ಹೋದದನ್ನ ನೋಡಿದ ಆ ಏರಿಯಾದ ಜನ " ಏನೆ ಗಿರಾಕಿಯನ್ನ ಮನೆಗೆ ಕರ್ಕೊಂಡ್ ಬರ್ತೀಯ ,ನಿನ್ನಿಂದ ನಮ್ಮಂತಯ ಸಂಸಾರಸ್ಥರು ಬದುಕುವ ಹಾಗಿಲ್ಲ ಎಂದು ಬೀದಿಯಲ್ಲಿ ನಿಂತು ಗಲಾಟೆ ಮಾಡಿದರು, ಯಾರೋ ಇಬ್ಬರು ಅನುಲೇಖಾಳನ್ನ ಹಿಗ್ಗಾ ಮುಗ್ಗ ಥಳಿಸಿದರು, ಇನ್ನಾರೋ ಪೊರಕೆ ಹುಡುಕಿದರು ,ಮತ್ತೆಯಾರೋ ಚಪ್ಪಲಿ ಬಿಚ್ಚಿದರು,ಮೊಲೆ ಇಂದ ಯಾರೋ ಪೊಲೀಸ್ ಗೆ ಹಿಡಿದು ಕೊಡಿ ಅಂದ್ರು.
ಇದರಿಂದ ಮನನೊಂದ ಅನುಲೇಖಾ ನಾನು ಕೊಟ್ಟ ಹಸಿರು ಸೀರೆಯನ್ನ ಉಡುವ ಬದಲು ಅದನ್ನ ನೇಣಿನ ಕುಣಿಕೆಯಾಗಿ ಬದಲಾಯಿಸಿದಳು.
ನಾನು ಇಂದು ಅದೇ ಏರಿಯಾದಲ್ಲಿ ಕಟೌಟ್ ಹಾಕ್ತ ಇದೀನಿ ಯಾಕೆಂದ್ರೆ ನನಗೆ ಅನುಲೇಖಾಳ ಮೇಲೆ ಇದ್ದ ನೈಜ ಪ್ರೀತಿಯನ್ನ ಪ್ರಪಂಚಕ್ಕೆ ಪರಿಚಯಿಸಲು ಅಲ್ಲ ಅಥವಾ ನನ್ನಿಂದ ಅನುಲೇಖಾಳ ಬದುಕು ಅಂತ್ಯವಾಹಿತು ಎಂಬ ಪಶ್ಚತಾಪದಿಂದಲೂ ಅಲ್ಲ ,ಅನುಲೇಖಾ ಪತಿವ್ರತೆ ಅಂತ ಈ ಹಾಳು ಸಮಾಜಕ್ಕೆ ತೋರಿಸಲು ಅಲ್ಲ ,ನಮ್ಮ ನಿಮ್ಮಗಳ ನಡುವೆ ಅನುಲೇಖಾಳಂಥಾ ಸ್ವಾಭಿಮಾನದಿಂದ, ಒಬ್ಬಂಟಿಯಾಗಿ ಬದುಕುವ ಸಾವಿರಾರು ಹಣ್ಣು ಮಕ್ಕಳು ಇದ್ದಾರೆ ಅವರನ್ನ ಸಮಾಜ ನೋಡುವ ದ್ರಷ್ಟಿಕೋನ ಬದಲಾಗಲಿ ಅಂತ .ನಂಗೆ ಗೊತ್ತು ನನ್ನ ಒಂದು ಕಟೌಟ್ ಸಮಾಜವನ್ನ ಬದಲಾಯಿಸಲಿಕ್ಕೆ ಸಾಧ್ಯವಿಲ್ಲ, ಕೊನೆ ಪಕ್ಷ ಸಂಜೆ ಹೊತ್ತು ಕೆಲಸ ಮುಗಿಸ್ಕೊಂಡು ಒಬ್ಬಂಟಿಯಾಗಿ ಮನೆ ಕಡೆಗೆ ನೆಡದುಕೊಂಡು ಬರುವ ಹೆಣ್ಣು ಮಕ್ಕಳನ್ನ ನೋಡುವ ದ್ರಷ್ಟಿಕೋನವಾದರೂ ಬದಲಾಗಲಿ ಎಂಬುವ ಆಶಯ ​

**ಸುದೀಪ್ ಶೆಟ್ಟಿ ಶಾನಾಡಿ **


--

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.