ಅಮ್ಮ.. ಕಾಲ್ಪನಿಕ..

ಎಲ್ ಇಂದಲೋ ಹಿತವಾದ ಮಗುವಿನ ಅಳು, ಪುಟ್ಟ ಪುಟ್ಟ ಕೈಗಳು, ಮಿಂಚಿನ ಕಣ್ಣುಗಳು. ಮುಗುಳ್ ನಗೆಯ ತಾಯಿಯ ಆನಂದಕ್ಕೆ ಮಿತಿಯೇ ಇಲ್ಲ. ಅಂದು ಕಣ್ ತುಂಬಿದ ಹನಿಗಳಿಗೆ ನಿಜವಾದ ಬೆಲೆ.

ಹುಟ್ಟಿದ ಮಗು ಯಾವ ಅಮ್ಮನಿಗಾಗಲಿ ಆತನೆ hero or heroine.. ಮಗಳೆ ಎಲ್ಲಾ ಅವಳಿಗೆ! she can lead the life without happy but not without daughter.. Because daughter is her happiness.

ಸಾವಿರಾರು ಕನಸುಗಳು ಅಮ್ಮನಲಿ. ನೂರಾರು ಕೀಟಲೆಗಳು ಮಗಳಲ್ಲಿ. ದಿನಗಳು ಕಳೆದು ಕಾಲೇಜ್ ಸೇರಿದಳು. ಮೋಜಿನ ದಿನಗಳು ಯಾರಿಗೆ ಆದರೂ ಗೆಳೆಯರ ಪರಿಸರ, ಪಾಠಕಿಂತ ಬೇರೆ ಎಲ್ಲಾ ಪ್ರಮುಖ. ಗೆಳೆತನದ ಪುಟ love ಆಗಿ ಶುರುವಾಯಿತು..

ಅಮ್ಮ ದಿನ ಕೆಲಸಗಳಲ್ಲಿ busy.. ತಂದೆ ಇಲ್ಲ ಎಂದು ಮಗಳಿಗೆ feel ಆಗದಂತೆ ನೋಡಿ ಕೊಂಡಳು. ಆದರೂ ಮಗಳಿಗೆ ಅವನ ಮೇಲೆ ಪ್ರಭಾವ.

ಅಂದು ಮುಂಜಾನೆ ಸಮಯವಾದರು ಮಗಳು ಎದ್ದು ready ಆಗಿಲ್ಲ, ಅಮ್ಮನ ಬೈಗುಳ ಶುರು. ಮಲಗೆ ಇದ್ದಿಯಾ ಏ ಟೈಮ್ ಆಗಿದೆ. ನಾಳೆ ಇಂದನೆ exam. ಆದರು ಮಾತಾಡದೆ ಮಲಗಿರುವುದನ್ನ ನೋಡಿ ಏನೋ ತಲ್ಲಣ ಅಮ್ಮನ ಮನಸಿನಲ್ಲಿ, ರಾತ್ರಿ ಕೊಟ್ಟ ಹಾಲು ಹಾಗೆಯೇ ಇದೆ. ತಕ್ಷಣ ಹಾಸಿಗೆ ಹತ್ತಿರ ಒಂದು ಪತ್ರ, ಕೈ ನಡುಗಿಸುತ್ತ ಪತ್ರ ಓದಿದಳು ಒಮ್ಮೆ, ಆದರೂ ನಡೆಯ ಬಾರದು ನಡೆದೆ ಹೋಯಿತು!

ಅಮ್ಮ ನಿನ್ನ ಮೇಲೆ ನನಗೆ ತುಂಬಾ ಮಮತೆ. ಆದರೆ ನೀನು ಅಂದು ಕೊಂಡ ಹಾಗೆ ನಾ ಇರಲಿಲ್ಲ. ನಿನ್ನ ಮುಂದೆ ನಟಿಸುತ್ತಲೆ ಬಂದೆ. ನಿನಗೆ ನನ್ನ ಮೇಲೆ ಕೊಂಚ ಕೂಡಾ ಅನುಮಾನ ಬಾರಲೇ ಇಲ್ಲ. ಏಕೆಂದರೆ ನಿ ನನ್ನಮ್ಮ. ಒಬ್ಬನನ್ನು ಇಷ್ಟ ಪಟ್ಟೆ. ಎಲ್ಲಾ ಮಗಿದ ಮೇಲೆ ನಿಜದ ಅರಿವಾಯಿತು.

ಇಂದು ಪತ್ರ ನೋಡಿ ‌ನಿನಗೆ ಕೋಪ ಬರುತ್ತಿರ ಬೇಕಲ್ವಾ, ಅದಕ್ಕೆ ನಿನಗೆ ತೊಂದರೆ ಕೊಡಬಾರದು ಎಂದು ನಾನೇ ಶಿಕ್ಷಿಸಿ ಕೊಂಡಿರುವೆ. ನನ್ನ ಅಮ್ಮನ ಬಿಟ್ಟು ದೂರ ಹೋಗಿರುವೆ. ಮುಂದೆ ಆಗುವ ಅವಮಾನಗಳಿಗೆ ಇಂದೆ ಉತ್ತರ ಹುಡಿಕಿರುವೆ.

ಇಂತಿ ನಿನ್ನ ಮಗಳು..

ಕಣ್ ತುಂಬಿದ ಹನಿಗಳು, ನಿಂತ ಹಿತವಾದ ಮಗುವಿನ ಅಳು, ಮುಗುಳ್ ನಗೆಯಿಲ್ಲದೆ ಕುಸಿದ ಅಮ್ಮ..

(ಮಗಳು) -

ಮಡಿಲಲ್ಲಿ ಮಗುವಾಗುವೆ

ಒಮ್ಮೆ ಜೋಗುಳವಾಡು...

ಚಂದ್ರನು ಕಾಲೂರಿ ನಿಂತು

ನನ್ನನ್ನು ನೋಡುವಂತೆ ಮಾಡು..

(ತಾಯಿ) -

ಉಸಿರು ಬಿಗಿದಿಡಿದಿರುವೆ

ತುಸು ಸಮಯ ನಾನು ಚಂದ್ರನ

ಜೊತೆ ನಿನ್ನ ಸೇರುವ..

"ನಿಜವಾದ ಮಮತೆ ತಾಯಿ ಯಲ್ಲಿ ಮಾತ್ರ, ಬೇರೆ ಎಲ್ಲವೂ ಕಾಲ್ಪನಿಕ.."

ಜೀವನದ ಹಾದಿಯಲ್ಲಿ ನಾವೆಲ್ಲರೂ ಒಮ್ಮೆ ಈ ಹಾದಿಯ ಸವಾರರೆ.. ಮುಂದಿನ ಹಾದಿ ಪತ್ರದಂತೆ ಆಗದಂತೆ ನೋಡಿಕೊಳ್ಳಿ.

(ಆರಾಧ್ಯ..)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.