ಸ್ವಾರ್ಥ ತುಂಬಿದ ಈ ಪ್ರಪಂಚದಲ್ಲಿ ಒಬ್ಬರೂ ಬದುಕಬೇಕು ಎಂದರೆ ಮತ್ತೊಬ್ಬರನ್ನು ತುಳಿದು ಬದುಕುತ್ತಿರುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಬದುಕಲು ನಮ್ಮ ದೇಹಕ್ಕೆ ಪ್ರತಿದಿನ ನೀರು, ಗಾಳಿ, ಆಹಾರ ಹೇಗೋ ಹಾಗೆ ನಮ್ಮ ಈ ಸಮಾಜದಲ್ಲಿ ಅತ್ಯಾಚಾರ, ಕೊಲೆ ಸುಲಿಗೆ, ದೌರ್ಜನ್ಯ ಎಲ್ಲ ದಿನ ನಿತ್ಯದ ಕಾರ್ಯಗಳಂತೆ ಆಗಿಬಿಟ್ಟಿದೆ. ಎಷ್ಟೇ ಧ್ವನಿ ಎತ್ತಿದರೂ ದೌರ್ಜನ್ಯ ನಡೆಯದ ಹಾಗೇ ತಡೆಗಟ್ಟಲು ಪ್ರಯತ್ನ ಪಟ್ಟರು ಒಬ್ಬರು ಇಬ್ಬರನ್ನು ಬದಲಾಯಿಸಬಹುದು. ಹೊರತು ನಮ್ಮ ಈ ಸಮಾಜವನ್ನು ಇಲ್ಲಿನ ಕೆಲವು ಕಟ್ಟುಪಾಡುಗಳನ್ನು ಬದಲಾಯಿಸಲು ಸಾಧ್ಯವಿಲ್ಲ.

ದಿನದಿನಕ್ಕೂ ಅತ್ಯಾಚಾರ, ಬಿಕ್ಷಾಟನೆಗೆ ಮಕ್ಕಳ ಬಳಕೆ, ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಾ ಇದೆ, ಅತ್ಯಾಚಾರ, ಭಿಕ್ಷಾಟಣೆಗೆ ಹೆಣ್ಣು ಮಕ್ಕಳನ್ನು ಬಳಸಿಕೊಂಡರೆ ಬಾಲಕಾರ್ಮಿಕ ಪದ್ದತಿಗೆ ಗಂಡುಮಕ್ಕಳನ್ನು ಅತಿ ಹೆಚ್ಚಾಗಿ ಬಳಕೆ ಮಾಡಿಕೊಂಡು ಏನು ಅರಿಯದ ಆ ಮುಗ್ದ ಮಕ್ಕಳಿಗೆ ಹಿಂಸೆ ನೋವು ಕೊಟ್ಟು ದೌರ್ಜನ್ಯ ನಡೆಸುತ್ತಿದ್ದಾರೆ. ಇನ್ನು ಪ್ರಪಂಚವನ್ನೇ ಅರಿಯದ ಪುಟ್ಟ ಪುಟ್ಟ ಕಂದಮ್ಮಗಳ ಮೇಲೂ ಅತ್ಯಾಚಾರ ನಡೆಸಿ ಆ ಮಕ್ಕಳನ್ನು ಬಾರದ ಲೋಕಕ್ಕೆ ಕಳುಹಿಸುವ ಕೆಟ್ಟ ಕಾಮುಕ ವ್ಯಾಘ್ರರು ಕೂಡಾ ಈ ನಮ್ಮ ಸಮಾಜದಲ್ಲಿ ಅವಿತಿದ್ದಾರೆ. ಪಾಪ ಆ ಮಕ್ಕಳು ಪಡುವ ನೋವಿಗೆ ಪಾರವೇ ಇಲ್ಲ. ನಮ್ಮನ್ನು ಸೃಷ್ಠಿ ಮಾಡಿದ ಆ ದೇವರು ಕೂಡಾ ಮೂಕ ವಿಸ್ಮಿತವಾಗಿ ನೋಡುತ್ತ ಕಲ್ಲಿನಂತೆ ನಿಂತಿಹನು ಅನ್ನಿಸುತ್ತೇ.

ತಾಯಿ-ಅಕ್ಕ-ತಂಗಿಯರ ನಡುವೆ ಬೆಳೆದಿರುತ್ತೇವೆ. ಅವರಿಗೆ ಕೊಡುವ ಗೌರವ ಅವರ ಸ್ಥಾನ ಗೊತ್ತಿದ್ದು ಕೂಡ ತಪ್ಪು ನಡೆಯುತ್ತಲೇ ಇರುತ್ತೆ. ಹೋರಾಟ ಮಾಡ್ತೀವಿ ಕೂಗಾಡಿ ಕಿರುಚಾಡ್ತೀವಿ. ಆದರೂ ಏನೂ ಪ್ರಯೋಜನ ಇಲ್ಲ ಸರ್ಕಾರದ ಪಾಡಿಗೆ ಸರ್ಕಾರನಮ್ಮ ಪಾಡಿಗೆ ನಾವು ಸುಮ್ಮನೆ ನೋಡುತ್ತಾ ಹೊರಟು ಹೋಗುತ್ತೇವೆ. ಇದಕ್ಕೆಲ್ಲಾ ನಮ್ಮ ಸಮಾಜದಲ್ಲಿರುವ ನಾವು ಮತ್ತು ನಮ್ಮ ಸರ್ಕಾರ ಒಂದು ರೀತಿ ಕಾರಣ.

ಇನ್ನು ಬಿಕ್ಷಾಟಣೆಗೆ, ಬಾಲ ಕಾರ್ಮಿಕರ ಪದ್ದತಿಗೆ ಕೆಲವು ಮಕ್ಕಳ ತಂದೆ ತಾಯಿಗಳೇ ಕಾರಣ ಆಗಿರುತ್ತಾರೆ. ತಮ್ಮ ಬಡತನ ಕೂಲಿ ಮಾಡಿಕೊಂಡು ಒಂದೊಂತ್ತು ಊಟಕ್ಕೂ ಬೇಡಿ ತಿನ್ನುವ ಸ್ಥಿತಿ ಇಂತಹ ಜೀವನ ನಡೆಸುವವರು ಗೊತ್ತಿದ್ದೇ ಮಕ್ಕಳನ್ನು ಹಣಕ್ಕೋಸ್ಕರ ಮಾರಿಬಿಡುತ್ತಾರೆ. ಅವರಿಗೆ ಗೊತ್ತಿಲ್ಲ ಬಡತನ ಹಸಿವಿನ ನೋವಿಗಿಂತ ಅಲ್ಲಿ ಮಕ್ಕಳು ನರಕ ಅನುಭವಿಸುತ್ತಾರೆ ಎಂದು. ತಂದೆ ತಾಯಿಯ ಬೇಜವಬ್ದಾರಿ ಎಷ್ಟೇ ಮಕ್ಕಳನ್ನು ಅಪಹರಿಸಿ ಬೇರೆಯವರಿಗೆ ಮಾರಾಟ ಮಾಡಿ ಭಿಕ್ಷಾಟಣೆಗೋ ಬಾಲಕಾರ್ಮಿಕ ಪದ್ದತಿಗೋ ಒಳಪಡಿಸಿರುವ ಜನರು ನಮ್ಮ ಸುತ್ತ ಮುತ್ತಲೇ ಇರುತ್ತಾರೆ.
ಹಣದಾಸೆಗೆ ಮುದ್ದು ಮಕ್ಕಳ ಕೈ ಕಾಲುಗಳನ್ನು ಕತ್ತರಿಸಿ ಬಿಕ್ಷೆ ಬೇಡಲು ಬಿಡುತ್ತಾರೆ. ಅವರ ಮನಸ್ಸು ನಿಜಕ್ಕೂ ಕಲ್ಲು, ಸ್ವತಹ ಇಂತಹ ಕೆಲಸಗಳನ್ನೆಲ್ಲಾ ಕೈಯಾರೆ ಮಾಡುತ್ತಾರೆ. ಎಂದರೆ ಅವರೆಷ್ಟು ಪಾಪಿಗಳು, ತಿಂಗಳ ಕೂಸು, ವರ್ಷದ ಕೂಸು, 5 ವರ್ಷದೊಳಗಿನ ಕೂಸು ಹೀಗೆ ಪ್ರತಿಯೊಂದು ಮಗುವಿನ ಭವಿಷ್ಯುವನ್ನು ನುಚ್ಚು ನೂರು ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಇಂತವರಿಗೆಲ್ಲಾ ನಮ್ಮ ಈ ಸಮಾಜವೇ ಆಸರೆಯಾಗಿದೆ ಎಂದರೆ ಇದಕ್ಕಿಂತ ನಾಚಿಗೆಕೇಡಿನ ವಿಷಯ ಬೇರ್ಯಾವುದು ಇಲ್ಲ.

ನಮಗೆ ಗೊತ್ತು, ನಮ್ಮ ಸಮಾಜಕ್ಕೆ ಗೊತ್ತು, ನಮ್ಮ ಪೋಲೀಸ್ ಅಧಿಕಾರಿಗಳಿಗೆ ಗೊತ್ತು, ಬಿಕ್ಷಾಟಣೆಗೆ, ಬಾಲಕಾರ್ಮಿಕ ಪದ್ಧತಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು. ಆದರೂ ನಾವೇನು ಮಾಡುವುದಿಲ್ಲ. ಕಾರಣ ನಮ್ಮ ನಮ್ಮ ಭವಿಷ್ಯ ಕುಟುಂಬದ ಭವಿಷ್ಯ ಮಾತ್ರ ನಮಗೆ ಮುಖ್ಯವಾಗಿರುತ್ತದೆ. ಈ ರೀತಿ ಮಕ್ಕಳನ್ನು ಬಿಕ್ಷಾಟಣೆಗೆ, ಬಾಲಕಾರ್ಮಿಕ ಪದ್ಧತಿಗೆ ಬಳಸಿಕೊಳ್ಳುತ್ತಾರೆ ಎಂದರೆ ಇದು ಕೇವಲ ಒಬ್ಬರಿಂದ ಮಾತ್ರ ಅಲ್ಲ ನೂರಾರು ಜನರ ಕೈವಾಡದಿಂದ ನಡೆಯುತ್ತದೆ. ನಮ್ಮ ಸುತ್ತ ಮುತ್ತಲಿನಲ್ಲೇ ಖಂಡಿತ ಅವಿತು ಇಂತಹ ಹೀನಕಾರ್ಯಗಳನ್ನು ಮಾಡುತ್ತಿರುತ್ತಾರೆ.
ನಮ್ಮ ಸಮಾಜ ಎಚ್ಚೆತ್ತುಕೊಂಡು ಅಧಿಕಾರಿಗಳ ಸಹಾಯದಿಂದ, ಜನರ ಸಹಾಯದಿಂದ ಮುನ್ನಡೆದು ಸಾವಿರಾರು ಮಕ್ಕಳನ್ನು ರಕ್ಷಿಸಬೇಕು. ಆಗ ಮಾತ್ರ ಇಂತಹ ದೌರ್ಜನ್ಯಗಳನ್ನು ನಾಶಮಾಡಲು ಸಾಧ್ಯ, ಆದರೆ ನಮ್ಮ ಸಮಾಜ, ನಮ್ಮ ಮಅಧಿಕಾರಿಗಳು, ನಮ್ಮ ಜನರು ಮನಸ್ಸು ಮಾಡುವುದಿಲ್ಲ. ಈ ಕೆಲಸವನ್ನು ಕಾರ್ಯರೂಪಕ್ಕೆ ತರುವುದಿಲ್ಲ.

ಏನೂ ತಪ್ಪೇ ಮಾಡದೇ ಮಕ್ಕಳು ಶಿಕ್ಷೆ ಅನುಭವಿಸಿ ಸಾಯುತ್ತಲೇ ಇರುತ್ತಾರೆ. ಹೆತ್ತವರು ನೋವು ಪಡುತ್ತಲೇ ಸಾಯುತ್ತಾರೆ ಇಷ್ಟೇ ಕೊನೆಗೆ ಆಗುವುದು, ಯಾರಾದರೂ ಒಬ್ಬರು ತಮ್ಮ ಜೀವ ಪಣಕ್ಕಿಟ್ಟು ಇಂತಹ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನೆರೆ ಹೊರೆಯವರ ಸಹಾಯದಿಂದ ತುಂಬಾ ಚಾಲಕಿ ತನದಿಂದ ಎಲ್ಲವನ್ನು ಗಮನಿಸುತ್ತಾ, ಮಕ್ಕಳನ್ನು ಅಪಹರಿಸುವವರು ಯಾರು, ಅವರನ್ನು ಮಾರಾಟ ಮಾಡುವವರ್ಯಾರು, ಅವರನ್ನು ಕೊಂಡುಕೊಳ್ಳುವವರ್ಯಾರು ಎಂಬ ವಿಚಾರಗಳನ್ನು ಹೊರಗೆ ತೆಗೆದರೆ ಮಾತ್ರ.
ಸಾವಿರಾರು ಮಕ್ಕಳ ಜೀವ ಉಳಿಯಲು ಸಾಧ್ಯ, ಆದರೆ ಯಾರು ಕೂಡು ಈ ಸಾಹಸಕ್ಕೆ ಕೈ ಹಾಕುವುದಿಲ್ಲ. ಇನ್ನೂ ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಣಗಳಲ್ಲಿ ಕಣ್ಣ ಮುಂದೆಯೇ ಕೊಲೆ, ಸುಲಿಗೆ, ದೌರ್ಜನ್ಯ ಅತ್ಯಾಚಾರ ನಡೆದರೆ ನಮಗೆ ಯಾಕೆ ಎಂದು ಸುಮ್ಮನಾಗುವ ಸ್ಥಿತಿಗೆ, ಇಲ್ಲ ನೋಡುತ್ತಾ ನಿಲ್ಲುವ, ಇಲ್ಲ ತಮ್ಮ ಮೊಬೈಲ್‍ಗಳಲ್ಲಿ ಅಲ್ಲಿ ನಡೆಯುವ ದೃಶ್ಯಗಳನ್ನು ತೆಗೆದು ವಾಟ್ಯಾಪ್, ಪೇಸ್‍ಬುಕ್‍ಗೆ ಹಾಕಿ ತಾವೇ ಗ್ರೇಟ್ ಎಂದುಕೊಳ್ಳುವ ಪರಿಸ್ಥಿತಿಗೆ ನಮ್ಮ ಸಮಾಜದ ಜನರು ಬದಲಾಗಿ ಬಿಟ್ಟಿದ್ದಾರೆ.

ನಾವು ನಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು, ಬೇರೆಯವರ ವಿಷಯ ನಮಗೇಕೆ ಯಾರು ಏನಾದರೂ ಮಾಡಲಿ, ಹೇಗಾದರು ಸಾಯಲಿ, ನಮ್ಮ ಪಾಡು ನಮಗೆ ಎನ್ನುವಷ್ಟು ನಾವೆಲ್ಲ ಸ್ವಾರ್ಥಿಗಳಾಗಿ ಬಿಟ್ಟಿದ್ದೇವೆ. ಕೆಲವರಿಗೆ ಅದರಿಂದ ತಮಗೆಲ್ಲ ಅಪಾಯ ಎನ್ನುವ ಭಯ, ಇನ್ನೂ ಕೆಲವರಿಗೆ ಇಂತಹ ವಿಚಾರಗಳು ಬೇಕೆ ಆಗಿಲ್ಲ ಆದ್ದರಿಂದ ಯಾರು ಈ ವಿಚಾರಗಳ ಬಗ್ಗೆ ತಲೆಕೆಸಿಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ.
ಅಮವಾಸೆ, ಹುಣ್ಣಿಮೆಯಂತೆ ನೂರಕ್ಕೆ ಒಬ್ಬರಂತೆ ಮಾನವೀಯತೆ ಮೆರೆಯುತ್ತಾರೆ. ಅಷ್ಟೇ ಆದ್ದರಿಂದ ಇಂತಹ ನೀಚ ಪದ್ಧತಿ, ದೌರ್ಜನ್ಯ ನಡಯುವುದು ನಾಶವಾಗಬೇಕೆಂದರೆ ಕೇವಲ ಒಬ್ಬರು, ಹತ್ತು ಜನರಿಂದ ಮಾತ್ರ ಅಲ್ಲಾ ನಮ್ಮ ಸಮಾಜದಲ್ಲಿರುವ ಪ್ರತಿಯೊಬ್ಬರಿಂದ ಮಾತ್ರ ಸಾಧ್ಯ, ಇದೆಲ್ಲಾ ಕೊನೆಗಾಣಬೇಕೆಂದರೆ ನಮ್ಮ ಈ ಸಮಾಜವೇ ಬದಲಾಗಬೇಕು. ಅದು ಸಾಧ್ಯವಿಲ್ಲ ಅನ್ನಿಸುತ್ತದೆ. ಏನೇ ಅಗಲಿ ಸಾಧ್ಯವಾದರೆ ನಮ್ಮ ಅಕ್ಕಪಕ್ಕದವರನ್ನಾದರು ಬದಲಾಯಿಸುವ ಪ್ರಯತ್ನ ಮಾಡೋಣ. ನೂರು ದೌರ್ಜನ್ಯಗಳಲ್ಲಿ 10 ದೌರ್ಜನ್ಯಗಳು ನಡೆಯುವುದಾದರು ತಪ್ಪಲಿ ಅಷ್ಟೇ.

ಇಂತಿ
ಮದುಶ್ರೀ ರಮೇಶ್

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.