ಮೂರೆ ಮೂರು ಪದಗಳಿಂದ ಮೂರಾ ಬಟ್ಟೆಯಾದ ಜೀವನ

ನಾ ಸಾಗಿ ಬಂದ ಹಾದಿಯ ತಿರುಗಿ ನೋಡುತ್ತಿರುವೆ; ಯಾರು ನನ್ನನ್ನು ಹಿಂಬಾಲಿತಿಲ್ಲವಲ್ಲ. ನಾನೇಕೆ ಈ ದಾರಿಯಲ್ಲಿ ಬಂದೆ? ಯಾರದ್ರೂ ಈ ದಾರಿಗೆ ನನ್ನ ತಳ್ಳಿದರ? ಈ ಎಲ್ಲ ಪ್ರೆಶ್ನೆಗಳು ಮೂಡಿದ್ದು ಮೂಲೆಯಲ್ಲಿ ಕೂತು ತನ್ನ ಜೀವನ ನೆಡೆದು ಬಂದ ಹಾದಿಯ ನೆನೆಯುತ್ತಿರುವ ಒಂದು ಜೀವದ ಮನದಲ್ಲಿ.

(ಬಾಲ್ಯದ ಮೆಲುಕು)

ನಾ ಹುಟ್ಟುವಾಗ ನನ್ನಮ್ಮ ಒಂದು ಬಾರಿ ಸತ್ತು ಬದುಕಿದ್ದಳು. ಅಲ್ಲದೆ, ನನ್ನಪ್ಪ ನಾ ಹುಟ್ಟುವಾಗ ಕ್ಷಣ ಕ್ಷಣವು ಸತ್ತು ಬದುಕಿದ್ದ, ಅಲ್ಲದೆ ನಾ ಹೆಣ್ಣಾಗಿ ಹುಟ್ಟಿದ್ದಕ್ಕೆ ಹಿರಿಯರೆಲ್ಲ ನನ್ನ ಹೀನಾಯವಾಗಿ ಕಂಡರು. ನನ್ನಪ್ಪ ಯಾರ ಮಾತಿಗೂ ಕಿವಿ ಕೊಡದೆ, ನನ್ನನು ಮಹಾರಾಣಿ ಅನ್ನೋ ರೀತಿಯಲ್ಲಿ ಹೆಗಲ ಮೇಲೆ ಕೂರಿಸಿ ಕೊಂಡು ಮೆರೆಸಿ ಸಂಭ್ರಮಿಸಿದ್ದ. ನನ್ನ ಸೋದರನ ಮೇಲೆ ತೋರಿಸುತಿದ್ದ ಪ್ರೀತಿಗಿಂತ ಒಂದು ಪಾಲು ಹೆಚ್ಚಾಗೆ ತೋರಿಸುತಿದ್ದ.
ನಾ ಆಟದಲ್ಲಿ ಗೆದ್ದರೆ ಅವನ ಗೆಲುವು ಅನ್ನೋ ರೀತಿ ಖುಷಿ ಪಡುತಿದ್ದ ನನ್ನಪ್ಪ.
ಬಾಲ್ಯವ ಕಳೆದು ಶಾಲೆ ಅನ್ನೋ ಪಂಜರದಿಂದ ಮುಕ್ತಿ ಸಿಕ್ಕಿ ಕಾಲೇಜು ಅನ್ನೋ ಬಣ್ಣದ ಲೋಕಕ್ಕೆ ಕಾಲಿಟ್ಟೆ, ಒಂದು ರೀತಿಯಲ್ಲಿ ಎಲ್ಲವೂ ಹೊಸದರಂತೇ ಭಾಸವಾಗುತಿತ್ತು.

ಹೀಗೆ ಕಾಲ ಕಳೆದಂತೆ ಸಂಪೂರ್ಣವಾಗಿ ನಾನು ಬದಲಾದೆ. ಎಲ್ಲದರಲ್ಲು ಅಪ್ಪನ ಮಾತು ಕೇಳುತಿದ್ದ ನನಗೆ ಅವರ ಮಾತಿನ ಮೇಲೆ ಕೋಂಚ ಅಸಡ್ಡೆ ತೋರಲಾರಂಬಿಸಿದೆ. ಜೀವನ ಅನ್ನೋ ಪಯಣದಲಿ ತಿರುವುಗಳು ಸಹಜ ಆದ್ರೆ ಆ ತಿರುವುಗಳಲ್ಲಿ ಒಮ್ಮೆ ಎಡವಿ ಬಿದ್ದರೆ ನಮ್ಮ ಆಸರೇಗೇ ಇದ್ದ ಕೈಗಳು ಕೂಡ ನಮ್ಮ ಕೈ ಹಿಡಿಯೋದಿಲ್ಲ.

ಅದೇ ನನ್ನ ಜೀವನದಲ್ಲೂ ಆಗಿದ್ದು!?

ಪ್ರೀತಿ ಅನ್ನೋದು ಮಾಯೆ. ಆ ಮಾಯೆಯೋಳಗೆ ಯಾರು ನಮ್ಮವರು ಯಾರು ಬೇರೆಯವರು ಅನ್ನೋದನ್ನ ತಿಳಿಯುವಲ್ಲಿಯು ನಾನು ದುಡುಕ್ಕಿದ್ದೆ.
ಆ.... ಪ್ರೀತಿ ಅನ್ನೋದರ ಮುಂದೇ ಯಾವ ಜಾತಿ, ಧರ್ಮವಿಲ್ಲ ಅನ್ನೋದು ಪ್ರೀತಿಯ ಭಲೆಯಲ್ಲಿ ಸಿಕ್ಕವರಲ್ಲಿ ಕೇಳುವ ಮಾತು. ನನ್ನ ಜೀವನದಲ್ಲು ನೆಡೆದದ್ದು ಅದೇ! ಪ್ರೀತಿ ಅನ್ನೋ ಮಾಯ ಜಾಲದೊಳಗೆ ನನ್ನ ಕೈ ಹಿಡಿದು ಕರೆದೊಯ್ದದ್ದು ಅನ್ಯ ಧರ್ಮದವ!
ಬಾಲ್ಯದಿಂದ ಬೆಳೆದು ದೊಡ್ಡವಳಾಗುವವೆರೆಗೂ ನನ್ನೆಲ್ಲ ವಿಷಯದಲ್ಲೂ ಅಪ್ಪನ ಆಯ್ಕೆಯೆ ಕೊನೆ ಅನ್ನೋ ರೀತಿ ಇದ್ದ ನನಗೆ ಈ ಒಂದು ವಿಷಯದಲ್ಲಿ ಅವರ ಅಭಿಪ್ರಾಯ ಕೇಳಬೇಕೆಂದೇನಿಸಲಿಲ್ಲ. ಯಾಕಂದ್ರೆ ಆ ನಿರ್ಧಾರ ತೆಗೆದು ಕೊಳ್ಳುವಲ್ಲಿ ನಾನೇ ಅವರಿಗಿಂತ ದೊಡ್ಡವಳೆನೋ ಅನ್ನೋ ರೀತಿ ಅನ್ನಿಸತೊಡಗಿತು.....

ಪ್ರೀತಿಯಲ್ಲಿ ಆಕರ್ಷಣೆ ಒಂದು ಮುಖವಾದರೆ, ಆಮಿಷ ಅನ್ನೋದು ಪ್ರೀತಿಯ ಇನ್ನೊದು ಮುಖ. ಆ ಆಮಿಷಗಳು ಯಾವ ರೀತಿ ನನ್ನ ಸೆಳೆದವೆಂದರೇ ಹೆತ್ತವರಿಂದ ಕ್ರಮೇಣವಾಗಿ ದೂರವಾಗೀಸುತ್ತ ಬಂತು, ದೈಹಿಕವಾಗಿ ಮನೆಯಲಿದ್ದರು ಮನಸ್ಸು ಮಾತ್ರ ಪ್ರೇಮ ಪಕ್ಷಿಯೊಡನೆ ಸಂಚರಿಸುತಿತ್ತು. ಎಲ್ಲರಿಂದಲು ದೂರಾದೇ, ಸ್ನೇಹಿತರೋಂದಿಗೆ ಎಲ್ಲ ವಿಷಯದಲ್ಲು ಸಕ್ರಿಯವಾಗಿ ಜೊತೆಗೂಡುತಿದ್ದ ನನಗೆ ಅವರು ಕೂಡ ಪರರಂತೆ ಕಾಣ ತೊಡಗಿದರು, ಎಲ್ಲರನ್ನು ಅವನೊಬ್ಬನಲ್ಲೆ ನೋಡುತಿದ್ದೇ, ಹೀಗೆ ಸಾಗುತಿತ್ತು ಜೀವನಕ್ಕೆ ತೆರೆ ಎಳೆಯುವ ಕಾಲ ದೂರವೇನಿರಲಿಲ್ಲ, ಬೆಳೆದು ನಿಂತ ನನಗೆ ನನ್ನ ಮನೆಯು ಬಂಧಿಖಾನೆಯಂತೆ ಕಾಣ ತೊಡಗಿತು, ಆ ಬಂಧಿಖಾನೆಯಿಂದ ಬಿಡುಗಡೆ ಬೇಕೆಂದು ಬಯಸಿದ ಮನಕ್ಕೆ ಮನೆ ಬಿಟ್ಟು ಹೊರಡುವ ಹುಚ್ಚು ಆಸೆ ಹೊಳೆದು, ಮನೆ ಬಿಟ್ಟು ನನ್ನವನೊಡನೆ ಹೊರಡುವ ತೀರ್ಮಾನಕ್ಕೆ ಬಂದು, ಮನೆ ಬಿಟ್ಟು ಹೊರಟೆ!! ಹೊರಡುವಾಗ ನನಗೆ ಬಾಲ್ಯದಲ್ಲಿ ತುತ್ತು ಕೊಟ್ಟು ಸಾಕಿದ್ದ ತಾಯಿಯನ್ನು ಕೂಡ ತಿರುಗಿ ನೋಡ ಬೇಕೆನಿಸಲಿಲ್ಲ, ಹೆಗಲ ಮೇಲೆ ಹೊತ್ತು ತಿರುಗಿದ ತಂದೆಯ ಮುಖವು ಕೂಡ ಕಣ್ಮುಂದೆ ಗೋಚರಿಸಲಿಲ್ಲ

ಬಾಲ್ಯದಿಂದ ನನ್ನೆಲ್ಲ ನೋವು ನಲಿವಿನಲ್ಲಿ ಪಾಲುದಾರನಾಗುತ್ತಿದ್ದ ಸೋದರನಿಗೆ ಸಣ್ಣ ಸುಳಿವನ್ನು ನೀಡದೆ ಹೊರಟೆ........ ಅಲ್ಲದೆ ನನ್ನ ಪ್ರಿಯಕರ ಮಾತಿನಂತೆ ಅವನ ಧರ್ಮದಂತೆ ಮದುವೆಯೂ ನೆಡೆಯಿತು! ನಾ ಮನೆಯಲ್ಲಿ ಕಾಣದಿದ್ದಾಗ ಪೋಲಿಸರ ಮೊರೆ ಹೋದ ಹೆತ್ತವರಿಗೆ ಎಲ್ಲರೆದುರು ನೀವ್ಯಾರು ಅನ್ನೋದು ಗೊತ್ತೇ ಇಲ್ಲವೇಂದು ಹೇಳಿದ ಮಾತು ಇನ್ನು ಮನದಿಂದ ಅಳಿಸದಂತೆ ಅಚ್ಚು ಮೂಡಿದೆ, ನನ್ನವರೆದುರು ಎಂದೂ ತಿರುಗಿ ಮಾತನಾಡದ ನಾನು, ಅಂದು ಮೊದಲು ಮಾತನಾಡಿದ್ದೆ! ಮತ್ತು ಅವರೊಡನೆ ಮಾತಾಡಿದ್ದು ಅಂದೇ ಕೊನೆ...... ಎಲ್ಲರೆದುರು ಅಪ್ಪನ ಮರ್ಯಾದೆ ಕಳೆದು ನಾನೇನೋ ಸಾಧಿಸಿದೆ ಅನ್ನೋ ಗರ್ವದಿಂದ ಹೊರ ನೆಡೆದೆ! ಬಂದ ಮೇಲೆ ತಿಳಿದಿದ್ದು ನನ್ನವರನ್ನು ತೊರೆದು ಬಹುದೂರ ನೆಡೆದು ಬಂದೆನೆಂದು.....

ಆ ದಿನ ಕಳೆದ ನಂತರ ಜೀವನ ಸುಖವಾಗೆ ಸಾಗುತಿತ್ತು, ನವಜೀವನದ ಹೊಸ್ತಿಲಲ್ಲಿ ಕಾಲಿಟ್ಟ ನನಗೆ ಸಂತಸಕ್ಕೆ ಪಾರವೇ ಇಲ್ಲದ ರೀತಿಯಲ್ಲಿ ನೆಡೆಯುತಿತ್ತು... ನಮ್ಮ ಪ್ರೀತಿಯ ಸಂಕೇತಕ್ಕೆ ನಮ್ಮದೇ ಕುಡಿಯೊಂದು ಜನಿಸಿತು. ಅಲ್ಲಿಯವರೆಗು ಹಾಲು ಜೇನಿನ ಹಾಗಿದ್ದ ಜೀವನದಲ್ಲಿ ಬಿರುಗಾಳಿ ಬೀಸಲಾರಂಬಿಸಿತು, ಸಣ್ಣ ಸಣ್ಣ ಜಗಳಗಳು ಮಾತಿನಲ್ಲೇ ಮೊದ ಮೊದಲು ಬಗೆ ಹರಿಯುತಿದ್ದವು. ಆದ್ರೆ ಕ್ಷುಲ್ಲಕ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ತಲಾಖ್ ಅನ್ನೋ ಗೋಡೆ ಗಟ್ಟಿಯಾಗ ತೊಡಗಿತು!!! ಇಲ್ಲಿಯವರೆಗು ಸಂಸಾರದ ಕಡಲಿನಲ್ಲಿ ಶಾಂತವಾಗಿ ಸಾಗುತಿದ್ದ ದೋಣಿಯು ತಲಾಖ್ ಅನ್ನೋ ಬಿರುಗಾಳಿಗೆ ಸಿಲುಕಿ ದಿಕ್ಕಿಲ್ಲದೆ ಸಾಗಲಾರಂಬಿಸಿತು, ಕೇವಲ ತಲಾಖ್, ತಲಾಖ್, ತಲಾಖ್, ಮೂರೇ ಮೂರು ಪದಗಳಲ್ಲಿ ಮೂರು ವರ್ಷದ ಜೀವನಕ್ಕೆ ಕೊನೆಗಾಣುವಂತಾಗಿತ್ತು..

ಇಲ್ಲಿಯವರೆಗೂ ನಾನು ನೆನೆದದ್ದು ನನ್ನ ಗೋಳಿನ ಕಥೆ. ಆದ್ರೆ ನಾನು ತೆಗೆದು ಕೊಂಡ ಒಂದೇ ಒಂದು ನಿರ್ಧಾರದಿಂದ ನನ್ನವರು ನನ್ನಿಂದ ದೂರಾದರು ಈಗ ಉಳಿದಿರೋದು ಯಾರೊಡನೆಯೂ ಹೇಳಲಾಗದ ನೋವುಗಳಷ್ಟೇ...............

ದುಡುಕಿ ತೆಗೆದು ಕೊಳ್ಳೋ ನಿರ್ಧಾರಗಳು ಸಂಬಂಧಗಳನ್ನು ದೂರ ಮಾಡುತ್ತವೆಯೆ ಹೊರತು ಹತ್ತಿರ ಮಾಡಲ್ಲ.........

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.