ಜಾಗ್ವಾರ್ (ಸಿನಿಮಾ ವಿಮರ್ಶೆ)

ಎಚ್.ಡಿ.ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ ಜಾಗ್ವಾರ್'ನ ಜಾತಕ ಇಂದು ಬಯಲಾಗಿದೆ..

ಪ್ರಾರಂಭದಲ್ಲೇ ಟಿ.ವಿ ಚಾನಲ್ ವೊಂದನ್ನು ಹ್ಯಾಕ್ ಮಾಡಿ ಲೈವ್ ಆಗಿ ಕೊಲೆ ತೋರಿಸಿ, ಸಾಮಾನ್ಯ ಎಂಟ್ರೀ ಪಡೆಯುವ ನಿಖಿಲ್, ಆನಂತರದಲ್ಲಿ ಮೆಡಿಕಲ್ ಕಾಲೇಜ್ ಸ್ಟೂಡೆಂಟ್ ಆಗಿ ಲವರ್ ಬಾಯ್ ಥರ ಕಾಣಿಸಿಕೊಳ್ಳುವುದು ಹಾಗೂ ಸಸ್ಫೆನ್ಸ್ ಆಗಿ ಮೆಡಿಕಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸ್ಟೂಡೆಂಟ್ಸ್ ಮತ್ತು ಆಡಳಿತ ಮಂಡಳಿಯ ಒಳ ಆಟಗಳನ್ನು ತೋರಿಸುವುದು ಮತ್ತು ಅಂತಿಮದಲ್ಲಿ ಹೀರೋ ಯಾಕೆ ಆ ಥರ ಒಬ್ಬೊಬ್ಬರನ್ನೇ ಲೈವ್ ಮರ್ಡರ್ ಮಾಡುತ್ತಾನೆ ಎನ್ನುವುದು ಕಥೆಯ ಒಂದೆಳೆ...

ಸಿನಿಮಾ ರಿಚ್ ಆಗಿ ಮೂಡಿಬಂದಿದೆ. ಆದರೆ ಅಷ್ಟೊಂದು ಅವಶ್ಯಕತೆ ಇರಲಿಲ್ಲ ಅನಿಸುತ್ತದೆ.

ಚಿತ್ರ ಟ್ರಿಮ್ ಆಗಿಲ್ಲ. ಸಾಂಗ್ ಗಳು ಹೈ ಬಜೆಟ್'ನಲ್ಲಿದ್ದರೂ ಅಷ್ಟೊಂದು ಮನ ಸೆಳೆಯಲ್ಲ.

ಮೊದಲ ಚಿತ್ರದಲ್ಲಿ ನಟನಾಗಿ ನಿಖಿಲ್ ಪಾತ್ರಕ್ಕೆ ಶೇ.90 ರಷ್ಟು ಜೀವ ತುಂಬಿದ್ದಾರೆ. ಡಾನ್ಸ್, ಫೈಟ್'ನಲ್ಲಿ ಒಬ್ಬ ಸ್ಟಾರ್ ನಟನಿಗೆ ಸಡ್ಡು ಹೊಡೆಯುವ ಲಕ್ಷಣ ಕಾಣುತ್ತಾರೆ. ಡೈಲಾಗ್ ಓರಿಯಂಟಲ್'ನಲ್ಲಿ ಖದರ್ ಸಾಕಾಗಲ್ಲ ಅನಿಸುತ್ತೆ.

ನಿರ್ದೇಶಕ ಮಹದೇವ್ ನಿಯತ್ತಿನ ಕೆಲಸ ಮಾಡಿದ್ದಾರೆ. ಆದರೆ ಸಾಧುಕೋಕಿಲ, ಅವಿನಾಶ್ ಹಾಗೂ ಒಂದಿಬ್ಬರನ್ನು ಬಿಟ್ಟರೆ ಬಹುತೇಕ ಪರಭಾಷೆಯ ನಟರನ್ನು ಕಣಕ್ಕಿಳಿಸಿದ್ದು, ಅವರೆಲ್ಲರಿಗೂ ನಿಖಿಲ್ ಸೆಡ್ಡು ಹೊಡೆಯುತ್ತಾರೆ.

ಸಂಗೀತ ಸಾಕಾಗಿಲ್ಲ... ಮೆಲೋಡಿ ಚೆನ್ನಾಗಿಲ್ಲ. ಕ್ಯಾಮರಾ ವರ್ಕ್ ಸೂಪರ್, ತಮನ್ನಾ ಡಾನ್ಸ್ ಅವಶ್ಯಕತೆ ಇಲ್ಲದೇ ಬಂದು ಹೋಗುತ್ತದೆ.

ಚಿತ್ರದಲ್ಲಿ ತಾಂತ್ರಿಕ ವರ್ಗ ಚೆನ್ನಾಗಿ ಕೆಲಸ ಮಾಡಿದೆ. ಪರಭಾಷೆಯ ಮಾರುಕಟ್ಟೆಗೆ ಸೆಡ್ಡು ಹೊಡೆಯಲು ನಿಂತಂತಿದೆ.

ಚಿತ್ರದ ಮೊದಲರ್ಧ ಅಷ್ಟೊಂದು ಮನಸೆಳೆಯದಿದ್ದರೂ ದ್ವಿತಿಯಾರ್ಧ ಹಾಗೂ ಲಾಸ್ಟ್ ಸೀಕ್ವೇನ್ಸ್ ಸ್ಟೋರಿ ಮಾತ್ರಾ ಪ್ರತಿಯೊಬ್ಬನಿಗೂ ಇಷ್ಟವಾಗುವಂತಿದೆ.

*************

*ಸಿರಿ ರೇಟಿಂಗ್* 3/5

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.