ಕಡಲ ಕಿನಾರೆಯಲ್ಲಿ ಬತ್ತಿದ ಪ್ರೀತಿ!

ಪ್ರೀತಿ ಪ್ರೇಮದ ಗುಂಗಿನಲ್ಲಿ ನಾ ಕಳೆದು ಹೋಗಿದ್ದೆ. ಎಷ್ಟರಮಟ್ಟಿಗೆ ಎಂದರೆ ಪ್ರಪಂಚದ ಅರಿವು ಕೂಡಾ ನನಗಿರಲಿಲ್ಲ. ಅಷ್ಟರಮಟ್ಟಿಗೆ ನಾ ಅವಳ ನೆನಪಿನ ಲೋಕದಲ್ಲಿ ಮುಳುಗಿ ಬಿಟ್ಟಿದ್ದೆ. ಅವಳ ಪ್ರೀತಿ ಬಿಟ್ಟು ಮತ್ತೇನೂ ಈ ಪ್ರಪಂಚದಲ್ಲಿ ನನಗೆ ಬೇಡ ಎನಿಸುವಷ್ಟು ಅವಳ ಪ್ರೀತಿಗೆ ನಾನು ಸಿಲುಕಿಕೊಂಡಿದ್ದೆ.

ಅವಳನ್ನು ಒಂದು ದಿನಾ ನೋಡಲಿಲ್ಲ ಅಂದರೆ ಮನಸ್ಸಿಗೆ ತಳಮಳ. ಆ ದಿನ ಕಳೆಯುವುದಾದರು ಹೇಗೆ ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಅವಳ ಪ್ರೀತಿಯ ಪಂಜರದಲ್ಲಿ ನಾನು ಗಿಣಿ ಹಾಗೆ ಇದ್ದೆ. ಅವಳು ತೋರಿಸುತ್ತಿದ್ದ ಪ್ರೀತಿಗೆ ಪಾರವೇ ಇರಲಿಲ್ಲ. ಅವಳ ಕೋಪ, ಸಿಟ್ಟು, ಸೊಡರು, ಎಲ್ಲವೂ ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದಳು. ಅವಳ ಹಟ ಅಂತಹದು! ಯಾರು ಏನೇ ಅಂದರು ಪರವಾಗಿಲ್ಲ, ನನಗೆ ಮಾತ್ರ ಅವಳು ಅಪರಂಜಿ ಚಿನ್ನವಾಗಿ ಬಿಟ್ಟಿದ್ದಳು.
ಅವಳ ಪ್ರೀತಿ ವಾತ್ಸಲ್ಯಕ್ಕೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ಅವಳ ಹೃದಯ ಗೂಡಿನಲ್ಲಿ ನನಗೊಂದು ಪುಟ್ಟ ಸ್ಥಾನವನ್ನು ನೀಡಿದ್ದಳು. ಆ ಹೃದಯ ಮಂದಿರದಲ್ಲಿ ನಾನೇ ರಾಜನಾಗಿದ್ದೆ. ನನ್ನ ಬಿಟ್ಟು ಒಂದು ದಿನ ಇರಲಾರದ ನನ್ನವಳು. ಇಂದು ನನ್ನನ್ನು ತೊರೆದು ಹೋಗಿದ್ದಾಳೆ. ಯಾವ ಕಾರಣಕ್ಕಾಗಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದಳು ನಾ ಕಾಣೆ.
ನಾ ಅವಳನ್ನು ಇಷ್ಟಪಡುವ ಮುನ್ನ ಅವಳೇ ನನ್ನನ್ನು ಪ್ರೀತಿಸುತ್ತಿದ್ದಳು. ಅದು ತಿಳಿದ ನಾನು ಅವಳ ಪ್ರೀತಿಗೆ ಮೋಸ ಮಾಡಲು ಮನಸ್ಸು ಬಯಸಲಿಲ್ಲ. ಅಂತಹುದರಲ್ಲಿ ಅವಳನ್ನು ದೂರಿದರೆ ಯಾವ ರೀತಿ ಆಗುತ್ತಿತ್ತು ಅವಳ ಪಾಡು ಎಂದು ನೆನೆದು ಸುಮ್ಮನಾದೆ. ಅವಳ ಪ್ರೀತಿ ಸಾಮ್ರಾಜ್ಯಕ್ಕೆ ಕಾಲಿಟ್ಟೆ. ಅವಳು ನನ್ನ ಪ್ರೀತಿಗಾಗಿ ಎಷ್ಟು ಹಂಬಲಿಸಿ ಕಾದಿದ್ದಳು ಎಂದರೆ ಅದು ಊಹೆಗೂ ಮೀರಿದ್ದು! ಪ್ರೀತಿ ಪಯಣದಲ್ಲಿ ನಾವಿಬ್ಬರೂ ಸಾಗುತ್ತಿದ್ದೇವು. ಆ ಪ್ರೀತಿಯ ಯಾನದಲ್ಲಿ ಯಾವ ತೊಂದರೆಗಳು ಇರಲಿಲ್ಲ. ಆದರೆ ಯಾವ ಕಡೆಯಿಂದ ಬಿರುಗಾಳಿ ಬೀಸಿತೊ, ನಮ್ಮ ಪ್ರೀತಿಯ ದೋಣಿ ಮುಳುಗಿ ಹೋಯಿತು. ಮನಸ್ಸಿನ ಮೂಲೆಯಲ್ಲಿ ಅವಳು ಇರದ್ದರಿಂದ ಮನ ನೊಂದುಕೊಂಡು ಬಿಕ್ಕಿ ಅಳುತ್ತಿತ್ತು. ಅವಳ ನೆನಪುಗಳು ಪದೇ ಪದೇ ಮನಸ್ಸನ್ನು ಘಾಸಿಗೊಳಿಸುತ್ತೀವೆ.
ಅವಳು ಕಟ್ಟಿದ ಪ್ರೀತಿಯ ಗೋಪುರದಲ್ಲಿ ಒಬ್ಬಂಟಿಯಾಗಿ ಕತ್ತಲೆ ಕೋಣೆಯಲ್ಲಿ ಜೀವನ ಸವೆಸುತ್ತಿರುವೆ. ಯಾಕೆ ಈ ತರಹ ಮಾಡಿದಳು ಎಂಬುದೆ ತಿಳಿಯುತ್ತಿಲ್ಲ. ಇನ್ನು ಎಷ್ಟು ದಿನಗಳ ಕಾಲ ಹೀಗೆ ಸಾಗಲಿ ಹೇಳು ಪ್ರಿಯೆ. ಆದರೂ ಒಂದು ಮಾತು ನೀನು ಎಲ್ಲೆ ಇರು, ನನ್ನ ಪ್ರೀತಿನಾ ಮರೆಯದಿರು ಎಂದು ಕೇಳಿಕೊಳ್ಳುವೆ. ಯಾಕಂದರೆ ನಮ್ಮ ಪ್ರೀತಿ ನಿಷ್ಕಳಂಕ, ನಿಷ್ಕಲ್ಮಶವಾದುದು. ಅದು ಯಾವತ್ತೂ ಸಾಯಿಯುವುದಿಲ್ಲ ಗೆಳತಿ.
ಪ್ರಿಯೆ ಕೊನೆಯದಾಗಿ ಒಂದು ಮಾತು ನೀ ಕಟ್ಟಿದ ಪ್ರೀತಿಯ ಗೋಪುರದಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಲು ನಿನಗೆ ಹೇಗಾದರೂ ಮನಸ್ಸು ಬಂದಿತು. ಪ್ರೀತಿಯ ಸಾಗರದಲ್ಲಿ ನಡುವೆ ನನ್ನ ತೊರೆದೆಯಲ್ಲಾ ಗೆಳತಿ. ಯಾಕೆ ನನ್ನಿಂದ ಏನಾದರೂ ತಪ್ಪಾದರೆ ಕ್ಷಮೆಯಾಚಿಸುವೆ. ಮರಳಿ ನಿನ್ನ ಪ್ರೀತಿಯ ಆಕಾಂಕ್ಷೆಯಲ್ಲಿ ನಾನು ಕುಳಿತಿರುವೆ. ನನ್ನ ಈ ಆಸೆಗೆ ತನ್ನೀರು ಎರಚದಿರೂ ಗೆಳತಿ!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.