ಕರ್ಣ ಮತ್ತು ಅವನ ಸ್ನೇಹಿತರೆಲ್ಲಾ ಮಂಗಳೂರಿಗೆ ಒಂದು ಮದ್ವೆಗೋಸ್ಕರ ಹೋಗಿದ್ರು. ಅಲ್ಲಿಗೆ ಒಂದು ಹುಡುಗಿನ ನೋಡಿ ಕರ್ಣನಿಗೆ ಮಾತಾಡಿಸಬೇಕು ಅಂತ ಅನಿಸಿತು. ಅವಳ ನಗು ಅಪ್ಸರೆ ಥರ ಇತ್ತು. ಅವಳ ಧ್ವನಿ ಅವನಿಗೆ ಇಷ್ಟವಾಗಿತ್ತು. ಮೊದಲ ನೋಟಕ್ಕೆ ಅವನು ತನ್ನ ಮನಸನ್ನು ಅವಳಿಗೆ ಒಪ್ಪಿಸಿಬಿಟ್ಟಿದ್ದ. ಅವಳು ಮತ್ತವಳ ತಮ್ಮ ಆಟವಾಡುತ್ತಿದ್ದ ಚೆಂಡು ಕರ್ಣನ ಹತ್ರ ಬಂದು ಬಿತ್ತು. ಅದನ್ನು ತಗೊಳ್ಳೋಕೆ ಅವಳೇ ಬಂದಳು. ಮಾತಾಡಿಸಬೇಕು ಅಂತ ಅನಿಸ್ತಾ ಇತ್ತು. ಆದ್ರೆ ಭಯ ಜಾಸ್ತಿ.. ಆದ್ರೂ ತುಂಬಾ ಧೈರ್ಯ ಮಾಡಿ “ನಿಮ್ಮ ಹೆಸರು ಏನು” ಅಂತ ಕೇಳಿದ. ಅವಳು ತೀಕ್ಷ್ಣವಾದ ನೋಟವೊಂದನ್ನು ಬೀರಿ ಹೊರಟು ಹೋದಳು. ಅಲ್ಲಿಂದ ವಾಪಸ್ ರೂಮಿಗೆ ಬಂದ. ಆದ್ರೆ ಅವಳದೇ ನೆನಪು.
ಸ್ನೇಹಿತರೆಲ್ಲಾ ಮಲಗಿದ್ದರು. ಆದ್ರೆ ಕರ್ಣನಿಗೆ ಮಾತ್ರ ಅವಳ ನೆನಪಿನಲ್ಲಿ ನಿದ್ದೆ ಬರಲಿಲ್ಲ. ಆಚೆ ಸಣ್ಣಗೆ ಮಳೆ ಹನಿ ಬೀಳುತ್ತಿತ್ತು, ತಣ್ಣನೆ ಗಾಳಿ ಬೀಸುತ್ತಿತ್ತು. ಇದ್ದಕ್ಕಿದ್ದಂತೆ ಹಿಂದುಗಡೆಯಿಂದ excuse me ಎಂದು ಯಾರೋ ಕರೆದಂತಾಯಿತು. ತಿರುಗಿ ನೋಡಿದರೆ ಆಶ್ಚರ್ಯ. ಅದೇ ಹುಡುಗಿ ಮುಗುಳುನಗುತ್ತ ನಿಂತಿದ್ದಳು. ಅವನಿಗೆ ಮಾತುಗಳೇ ಹೊರಡಲಿಲ್ಲ. ಹಾಗೆ ನಾಚುತ್ತ “ಹೇಳಿ” ಅಂತ ಅಂದ ಕರ್ಣ ಅವಳಿಗೆ ಕರ್ಣನ ಪರಿಸ್ಥಿತಿ ಅರ್ಥವಾಯ್ತು ಅಂತ ಅನಿಸತ್ತೆ, ಅವಳೇ ಮಾತಿಗೆ ಶುರು ಮಾಡಿದಳು.
“ಬೆಳಿಗ್ಗೆ ನೀವು ಬೆಳಿಗ್ಗೆ ನನ್ನ ಹೆಸರು ಕೇಳಿದ್ರಲ್ಲ ಯಾಕೆ” ಅಂತ ಕೇಳಿದ್ಳು. ಅದಿಕ್ಕೆ ಅವನು “ಅದೇನೋ ಗೊತ್ತಿಲ್ಲ ನಿಮ್ಮನ್ನು ನೋಡಿದ ತಕ್ಷಣ ಮಾತಾಡಿಸಬೇಕು, ನಿಮ್ಮ ಜೊತೆ ಫ್ರೆಂಡ್ ಶಿಪ್ ಮಾಡಬೇಕು ಅಂತ ಅನಿಸಿತು.. ಅದಿಕ್ಕೆ ನಿಮ್ಮ ಹೆಸರು ಕೇಳಿದೆ ಅಷ್ಠೇ ಇನ್ನೇನೂ ಇಲ್ಲ” ಅಂತ ಹೇಳಿ ತಲೆ ತಲೆ ತಗ್ಗಿಸಿದ.ಅವನ ಮುಗ್ಧತೆ ಅವಳಿಗೆ ತುಂಬಾ ಇಷ್ಟವಾಯ್ತು. ಆಗ ಅವಳು ತನ್ನ ಕೈ ಮುಂದೆ ಮಾಡಿ ನನ್ನ ಹೆಸರು ಸಾನ್ವಿ ಅಂತ ಅಂದ್ಳು, ನಾನು ನನ್ನ ಕೈ ಮುಂದೆ ಮಾಡಿ ಕರ್ಣ ಅಂತ ಅಂದ ಹಾಗೆ ಸ್ವಲ್ಪ ಹೊತ್ತು ಮಾತನಾಡಿದರು.
ಇಬ್ಬರದ್ದೂ ಒಂದೇ ಜಾತಿ ಅಂತ ತಿಳಿದು ಖುಷಿಯಾಯಿತು. ಆದ್ರೆ ಮಾರನೆಯ ದಿನ ಅವನು ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಹೋಗೋ ಮೊದಲು ಅವಳಿಗೆ ತನ್ನ ಮೊಬೈಲ್ ನಂಬರ್ ಕೊಟ್ಟು ಬೆಂಗಳೂರಿಗೆ ಬಂದ್ರೆ ಸಿಗ್ರಿ .ಅಂತ ಹೇಳಿ ಭಾರವಾದ ಮನಸಿನಿಂದ ಬೆಂಗಳೂರಿಗೆ ಹೊರಟ.
ಬೆಂಗಳೂರಿಗೆ ಬಂದ.. ಆದ್ರೆ ಅವಳು ಕಾಲ್ ಮಾಡ್ಲೇ ಇಲ್ಲ. ಆಗ ಗೊತ್ತಾಯ್ತು.. ಬಹುಶಃ ಅವಳಿಗೆ ಇಷ್ಟ ಇಲ್ಲ ಅನಿಸುತ್ತೆ ಬಿಡು ಅಂತ ತಿಳ್ಕೊಂಡು ಸುಮ್ಮನಾದ.. ಎರಡು ದಿನದ ನಂತರ ಕರ್ಣನ ಮೊಬೈಲ್ ಗೆ ಒಂದು ಫೋನ್ ಬಂತು, ಅದು ಅವಳದ್ದೇ ಫೋನ್. ಕೇಳಿ ತುಂಬಾ ಖುಷಿ ಆಯ್ತು.. ಆ ಮಾತುಗಳಲ್ಲಿ ಅದೇನಿತ್ತೋ ಗೊತ್ತಿಲ್ಲ.. ಇಬ್ರೂ ತುಂಬಾ ಕ್ಲೋಸ್ ಆದ್ರು.
ದಿನೇ ದಿನೇ ಫೋನಿನ ಮಾತುಗಳು ತುಂಟ ಜಗಳಗಳು ಜಾಸ್ತಿ ಆಗ್ತಾನೇ ಇದ್ವು. ಆದ್ರೆ ಕರ್ಣ ತನ್ನ ಮನಸ್ಸಿನಲ್ಲಿನ ಪ್ರೀತಿಯನ್ನು ಮಾತ್ರ ಹೇಳಲಿಲ್ಲ. ಆವತ್ತು ಫೆಬ್ರುವರಿ 13.. ಪ್ರೇಮಿಗಳ ದಿನಾಚಾರಣೆಯ ಹಿಂದಿನ ದಿನ
ಆ ಲವರ್ಸ್ ಡೇ ದಿನ ತನ್ನ ಪ್ರೀತೀನ ಹೇಳಿ ಬಿಡಬೇಕು ಅಂತ ನಿರ್ಧಾರ ಮಾಡಿದ್ದನು. ಅವಳಿಗೆ ಸರ್ಪ್ರೈಸ್ ಕೊಡಬೇಕು ಅಂತ ಗುಲಾಬಿ ಹೂ, ಗ್ರೀಟಿಂಗ್ ಎಲ್ಲವನ್ನೂ ತಗೊಂಡಿದ್ದ. ಅದೇ ಸಮಯಕ್ಕೆ ಅವಳು ಫೋನ್ ಮಾಡಿದ್ಳು. “ನಾನು ನಾಳೆ ನಿನಗೆ ಒಂದು ಶಾಕಿಂಗ್ ನ್ಯೂಸ್ ಕೊಡ್ತೀನಿ ಕಣೋ ಅಂದ್ಳು. ಆದ್ರೆ ಇವನಿಗೆ ಅದೇನು ಅಂತ ಗೊತ್ತಾಯ್ತು.
ಲವರ್ಸ್ ಡೇ ದಿನ ಪ್ರಪೋಸ್ ಮಾಡ್ತೀನಿ ಅನ್ನೋದನ್ನೇ ಇನ್ ಡೈರೆಕ್ಟಾಗಿ ಹೇಳಿದ್ದಾಳೆ ಸಾನ್ವಿ ಅಂತ ಅವನಿಗೆ ಗೊತ್ತಾಯ್ತು. ಮಾರನೆಯ ದಿನ ಲಾಲ್ ಬಾಗ್ ಗೆ ಬಾ ಅಂದ್ಳು.. ಅವನು ಎಲ್ಲಾ ಗಿಫ್ಟ್ ಗಳನ್ನು ತಗೊಂಡು ಹೋದ. ಲಾಲ್ ಬಾಗ್ ಗೇಟಿನಲ್ಲಿ ಅವನಿಗೋಸ್ಕರ ಕಾಯ್ತಾ ಇದ್ಳು. ಅವನು ಖುಷಿಯಿಂದ ಅವಳ ಹತ್ರ ಹೋದ. ಹತ್ರ ಹೋದ ನಂತರ ಅವಳ ಹಿಂದೆ ಯಾರೋ ಬಾಡಿಗಾರ್ಡ್ ನಿಂತಿದ್ದ.. “ಅವಳು ನನ್ನನ್ನು ಹೊಡಿಸೋದಕ್ಕಾಗಿ ಅವಳ ಅಣ್ಣಂದಿರನ್ನು ಕರೆದುಕೊಂಡು ಬಂದಿದ್ದಾಳೆ" ಅಂತ ಕರ್ಣನಿಗೆ ಗೊತ್ತಾಯ್ತು.
ಆದದ್ದು ಆಗಲಿ. ಹೊಡೆದ್ರೂ ಅವಳಿಗಾಗಿ ಹೊಡಿಸಿಕೊಳ್ತೀನಿ. ಅಮೇಲೆ ಅವಳನ್ನು ಪ್ರೀತಿ ಮಾಡ್ತಿದ್ದೀನಿ ಅಂತ ಗೋಗರೆದಾದ್ರೂ ಅವರನ್ನು ಒಪ್ಪಿಸೋಣ ಅಂತ ಗಟ್ಟಿ ನಿರ್ಧಾರ ಮಾಡಿದ. ಅವರ ಹತ್ರ ಹೋದ.. ಅವಳು ಅವನನ್ನು ನೋಡಿ.. “ಹೇ ಎಷ್ಟೋತ್ತೋ ಬರೋದು.. ನಾನು ನಿನಗೆ ಒಂದು ಶಾಕ್ ಕೊಡ್ತೀನಿ ಅಂತ ಹೇಳಿದ್ದೆ ಅಲ್ವಾ..? ಅದು ಇವರೇ ಕಣೋ... ಇವರನ್ನು ನಾನು ಮದ್ವೆ ಆಗ್ತಿದ್ದೀನಿ... ಇವರ ಹೆಸರು ಕುಮಾರ್ ಅಂತ ಹೇಳಿದ್ಳು..
ಕರ್ಣನಿಗೆ ಸಿಡಿಲು ಬಡಿದಂತಾಯ್ತು.. ಏನು ಹೇಳಬೇಕೋ ಅಂತ ಗೊತ್ತಾಗಲಿಲ್ಲ.. ದಂಗಾಗಿ ನಿಂತುಬಿಟ್ಟ.
ನಂತರ ಸಾನ್ವಿ ಕರ್ಣನ ಬಳಿಯಿದ್ದ ಆ ಗಿಫ್ಟು ನೋಡಿ ಏನೋ ಯಾರಿಗೋ ಕೊಡೋಕೆ ಏನೋ ಗಿಫ್ಟು ತಂದಿದ್ದೀಯ ಅನಿಸುತ್ತೆ..? ಅಂತ ಅದನ್ನು ಬಲವಂತವಾಗಿ ಅವನಿಂದ ಇಸ್ಕೊಂಡು ಅದನ್ನು ತೆಗೆದಳು.. ಅವನು ಬೇಡ ಬೇಡ ಅಂತ ಅಂದ್ರೂ ಅವಳು ಕೇಳಲಿಲ್ಲ.. ಅದನ್ನು ಓಪನ್ ಮಾಡಿದಾಗ ಅದ್ರಲ್ಲಿ ಗುಲಾಬಿ ಹೂವಿತ್ತು.. ಲವ್ ಗ್ರೀಟಿಂಗ್ ಇತ್ತು.. ಕ್ಷಣ ಕಾಲ ಅವನು ಏನೂ ಮಾತನಾಡದೇ ಸುಮ್ಮನಾದ.
ಅವಳಿಗೆ ಶಾಕ್ ಆಯ್ತು.. “ನನ್ ಹತ್ರಾನೇ ನಿನ್ ವಿಷಯ ಮುಚ್ಚಿಟ್ಟಿದ್ದೀಯ ಅಲ್ವಾ..? ಅಂತ ಕೋಪದಿಂದ ಕೇಳಿದ್ಳು. ತನ್ನ ಲವರ್ ಬಾಯ್ ಕುಮಾರ್ ಹತ್ರ ಹೋಗಿ “ನೋಡಿ ಕುಮಾರ್ ಇವನು ನನ್ ಹತ್ರ ಅವನ ಲವ್ ವಿಷಯ ಮುಚ್ಚಿಟ್ಟಿದ್ದಾನೆ. ಮೋಸ ಮಾಡಿದ.. ಅಂತ ಗೋಗರೆದಳು. ಆದ್ರೂ ಕರ್ಣ ಏನೂ ಹೇಳದೇ ಮೂಕನಾದ.
“ಆ ಲವ್ ವಿಷಯ ಹೇಳಬೇಕು ಅಂತಾನೇ ಈವತ್ತು ಬಂದೆ.. ಆದ್ರೆ... ಅಂತ ಹೇಳಿ ಕಣ್ಣಲ್ಲಿ ನೀರು ಹಾಕಿದ ಕರ್ಣ. ಆಗ ಸಾನ್ವಿ ಅವನ ಕಣ್ಣೀರು ಒರೆಸಿ “ಈಗಲಾದ್ರೂ ಹೇಳೋ.. ಈ ಗ್ರೀಟಿಂಗ್ ಯಾರಿಗೋಸ್ಕರ ತಂದಿದ್ದೀಯ.? ಕೊನೆ ಪಕ್ಷ ನೀನು ಇಷ್ಟ ಪಡೋ ಹುಡುಗಿ ಹೆಸರಾದ್ರೂ ಹೇಳೋ. ಇಷ್ಟು ದಿನ ಕ್ಲೋಸ್ ಫ್ರೆಂಡ್ ಆಗಿದ್ದೀವಿ ಆದ್ರೂ ನಿನ್ ಹುಡುಗಿ ಹೆಸರು ಯಾಕೋ ನನ್ ಹತ್ರ ಮುಚ್ಚಿಟ್ಟೆ ಅಂತ ಕೇಳಿದ್ಳು.
ಇದನ್ನು ಕೇಳಿದ ಕರ್ಣನಿಗೆ ದಿಗ್ಭ್ರಾಂತವಾಯ್ತು. ಇಷ್ಟಾದ್ರೂ ಇವಳು ಅರ್ಥ ಮಾಡಿಕೊಳ್ಳಲಿಲ್ಲವಲ್ಲ. ಅಂತ ಮತ್ತಷ್ಟು ದುಖಿತನಾದ.
ಏನಿಲ್ಲ.. ಅವಳಿಗಾಗಿ ಈ ಗಿಫ್ಟ್ ಕೊಡೋಣ ಅಂತ ಬಂದೆ.. ಆದ್ರೆ ಅವಳು ಊರಿಗೆ ಹೋಗಿದ್ದಾಳೆ. ಬಂದ ಮೇಲೆ ನಿಮ್ಮ ಜೊತೆ ಮೀಟ್ ಮಾಡಿಸ್ತೀನಿ.
ಕೋಪ ಮಾಡ್ಕೋಬೇಡಿ. ಅಂತಾ ಕರ್ಣ ಹೇಳ್ತಾನೆ. ಆವತ್ತೆ ಕೊನೆ. ತನ್ನ ಪ್ರೀತೀನ ಬಿಟ್ಟು ಕೊಡಲಾಗದೇ ಪ್ರೀತಿಯ ನೋವನ್ನು ತಾಳಲಾರದೇ. ಕರ್ಣ ಊರು ಬಿಟ್ಟು ಹೋದ.. ಎಲ್ಲಿಗೆ ಹೋದ. ಏನಾದ ಅಂತ ಯಾರಿಗೂ ಗೊತ್ತಾಗಲೇ ಇಲ್ಲ. ಅದು ನಿಗೂಡವಾಗಿ ಉಳಿದಿದೆ____
_____________ಸಮಾಪ್ತಿ_____________