ಅಪ್ಪ

ನನ್ನ ತಂದೆ ವ್ರತ್ತಿಯಿಂದ ಡಾಕ್ಟರ್, ಆದರೆ ಕೆಲವು ಕುಟುಂಬದ ಸಮಸ್ಯೆಗಳಿಂದಾಗಿ ಆ ವೃತ್ತಿಯಲ್ಲಿ ಮುಂದುವರೆಯಲಾಗಲಿಲ್ಲ. ಹಾಗಾಗಿ ಬೆಳಗ್ಗೆ ಸಮಯದಲ್ಲಿ ಹರ್ಬಲ್ ಜ್ಯೂಸ್ ಸಂಟರ್ ನಡೆಸುತ್ತಿದ್ದರು. ಅವರು ತಮ್ಮ ತಂದೆ ತಾಯಿಗಾಗಿ ತಮ್ಮ ಕರಿಯರ್ ತ್ಯಾಗ ಮಾಡಿದವರು, ಯಾರ ಜೊತೆ ಜಾಸ್ತಿ ಮತಾಡಲ್ಲ, ಒಬ್ಬರೆ ಬೆಳೆದವರು. ಅವರ ಬಹುಪಾಲು ಜೀವನ ತಂದೆ ತಾಯಿಯ ಸೇವೆಯಲ್ಲೆ ಕಳೆದುಹೊಯಿತು, ಸಿಟ್ಟು ಯಾವಾಗಲು ಮೂಗಿನ ಮೇಲೆ, ಅವರು ವಂಥರಾ ತೆಂಗಿನಕಾಯಿಯ ಹಾಗೆ ಹೊರಗೆ ಬಿರುಸು ಆದರೆ ಒಳಗೆ ಮೃದು. ಅವರನ್ನ ಅರ್ಥ ಮಾಡಿಕೊಳ್ಳೊದು ಅಸಾಧ್ಯ, ಆದರೆ ಅ ಅಸಾಧ್ಯವನ್ನು ಸಾಧ್ಯ ಮಾಡಿದ್ದು ನನ್ನ ಅಮ್ಮ.

ಅವರು ಸ್ವಭಾವದಲ್ಲಿ ಅಪ್ಪನ ತದ್ವಿರುಧ್ದ, ಯವಾಗಲು ವಟವಟ ಎನ್ನುತ್ತಿರುತ್ತಾರೆ, ಅವರು ತುಂಬಾ ಮೃದು, ಯಾರಿಗೂ ಕೇಡು ಬಯಸಿದವರಲ್ಲ, ಅವರೆ ಕಾರಣ ನಮ್ಮ ಮನೆಯ ಸುಖ-ಶಾಂತಿಗೆ. ಎಲ್ಲರಿಗೂ ಅಪ್ಪ ಅಮ್ಮ ಅಗ್ರ ಸ್ಥಾನದಲ್ಲಿರುತ್ತಾರೆ. ಹಾಗೆ ನನಗೂ, ನಾನು ಕೂಡ ಅಪ್ಪನ ಮಗಳೆ, ಚಿಕ್ಕಂದಿನಿಂದಲು ನನಗೆ ಯಾವುದೆ ಕೆಲಸಕ್ಕೂ ಅಪ್ಪ ಬೇಕು, ನನಗೆ ಕೆಮ್ಮು ಬಂದರಂತು ಮುಗಿದೇ ಹೋಯಿತು, ಅಪ್ಪ ತನ್ನ ಎದೆಯ ಮೇಲೆ ನನ್ನ ಮಲಗಿಸಿಕೊಂಡಾಗಲೆ ನನಗೆ ನಿದ್ದೆ ಹತ್ತುತ್ತಿತ್ತು, ಅಪ್ಪ ಎಂದರೆ ಪ್ರಾಣ ನನಗೆ, ಅವರು ನಾನು ಕೇಳಿದ್ದನ್ನೆಲ್ಲ ಕೊಟ್ಟಿದ್ದಾರೆ, ನಾನು ನಾನಾಗಿರಲು ಅವರೆ ಕಾರಣ, ಬೆರೆಯವರ ಹಾಗೆ ಹೆಣ್ಣು ಮಗಳು ಎಂದು ಯಾವುದಕ್ಕು ಗೆರೆ ಎಳೆದಿಲ್ಲ, ನಾನು ಮಾಡುವುದು ಸರಿ ಇದೆ ಎಂದು ಅವರಿಗೆ ಅನಿಸಿದರೆ ಸಾಕು ಯಾರು ಅಡ್ಡ ಬಂದರು ಅವರು ನನ್ನ ಜೊತೆ ನಿಂತಿದ್ದಾರೆ, ನನಗೆ ಯಾವಾಗಲು ನನ್ನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಬಿಟ್ಟು ಜೀವನದ ಅಡೆತಡೆಗಳನ್ನು ಎದುರಿಸುವ ಮಟ್ಟಕ್ಕೆ ಏರಿಸಿದ್ದು ಅವರೆ.

ಹೀಗಿದ್ದ ನನ್ನ ತಂದೆ ಎರಡು ಮೂರು ವರ್ಷಗಳಿಂದ ಬದಲಾಗಿ ಬಿಟ್ಟಿದ್ದರು ಏಕೋ ಗೊತ್ತಿಲ್ಲ. ಹೊರಗಡೆ ಸುತ್ತಾಡಲು ಕರೆದುಕೊಂಡು ಹೊಗುವುದು ದೂರದ ಮಾತು. ಮನೆಯಲ್ಲಿ ಯಾರ ಜೊತೆಯು ಸರಿಯಾಗಿ ಮಾತಾಡುತ್ತಿರಲಿಲ್ಲ, ನನ್ನ ಜೊತೆ ಅಂತು ಮತಾಡಿದರೆ ಜಗಳದ ಹಾದಿ ಹುಡುಕಿದಂತಿರುತ್ತಿತ್ತು, ನನ್ನ ಅಪ್ಪನ ಕಳೆದುಕೊಂಡಂತೆ ಭಾಸವಾಗುತ್ತಿತ್ತು, ಸಮಯ ಕಳೆದಂತೆ ನನಗೂ ಅವರಿಗು ಮಾತೆ ಕಡಿಮೆಯಾಗುತ್ತಿತ್ತು, ಇದು ಮಾನಸಿಕ ಬದಲಾವಣೆ ಒಂದೆಡೆ, ಇನ್ನೋಂದು ಕಡೆ ಅವರು ದೈಹಿಕವಾಗೆಯೂ ಕುಗ್ಗುತ್ತಿದ್ದರು, ಅವರ ಊಟ ಕಡಿಮೆಯಾಗಿತ್ತು, ದೈಹಿಕ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿತ್ತು. ಡಾಕ್ಟರ್ ಹತ್ತಿರ ತೋರಿಸುಕೋಂಡು ಬರೋಣ ಎಂದರೆ ನನ್ನ ಮೇಲೆ ಯಗರಾಡಿದರು, ಆವಾಗನಿಂದ ನಾನು ಅವರಿಗೆ ಹೆಳುವುದನ್ನೇ ಬಿಟ್ಟು ಬಿಟ್ಟೇ.

ಹೇಳಿದ ಮಾತನನ್ನು ಕೇಳದೆ ಈ ಪರಿಸ್ಥಿತಿಗೆ ಬಂದಿದ್ದರು, ನಮ್ಮ ಮನೆ ಅವರಿಂದ ನಡೆಯತ್ತೆ, ಅವರಿಗೆ ಹೆಚ್ಚು ಕಮ್ಮಿ ಆದರೆ ನಾವೇನು ಮಾಡಬೇಕು!!! ಅವರಿಗೆ ಇದನ್ನು ತಿಳಿಸಿದರು ತಿಳಿದುಕೊಳ್ಳಲಿಲ್ಲ, ಸ್ಕ್ಯಾನ್ ರಿಪೋರ್ಟ ರಾತ್ರಿ 8.30ಗೆ ಬರುತ್ತದೆ ಎಂದು ಹೇಳಿದ್ದರು, ನಾನು ಅಮ್ಮ ಕಾಯುತ್ತ ಕುಳಿತಿದ್ದೆವು, ಅಪ್ಪನನ್ನ ಮತ್ತೆ ಐ.ಸಿ.ಯುಗೆ ವೈದಿದ್ದರು, ಕಣ್ಣಿನ ನೀರು ನಿಲ್ಲುತ್ತಿರಲಿಲ್ಲ, ಮುಂದೆ ಜೀವನ ಹೇಗೆ ನಡೆಸೋದು? ಅಪ್ಪನ ಚಿಕಿತ್ಸೆಗೆ ದುಡ್ಡು ಹೇಗೆ ಹೋಂದಿಸೋದು, ಏನು ಮಾಡೊದು, ಒಂದು ತೋಚುತ್ತಿರಲಿಲ್ಲ, ಕೆಲವೇ ಗಂಟೆಗಳಲ್ಲಿ ಜೀವನ ಮೇಲೆ ಕೆಳಗಾಗಿತ್ತು, ಅಮ್ಮ ಅಳುತ್ತಾ ಕೂತಿದ್ದರು, ನಾನು ಅಳು ಬಂದರು ಮನಸ್ಸನ್ನು ಕಲ್ಲು ಮಾಡಿಕೊಂಡು, ಡಾಕ್ಡರ್ ಹೇಳಿದನ್ನೆಲ್ಲ ತಂದು ಕೊಡಲು ಒಡಾಡುತ್ತಿದ್ದೆ.

ಇಷ್ಟರೊಳಗೆ ನನ್ನ ತಮ್ಮ ಮನೆಗೆ ಬಂದಿದ್ದ. ಅವನಿಗೆ ವಿಷಯ ತಿಳಿದಿತ್ತು, ಗೌರಿ ಅವನ ಜೊತೆ ಇದ್ದಳು, ಅವನು ಒಬ್ಬನೆ ಟೇರೆಸ್ ಮೇಲೆ ಕೂತು ಅಳುತ್ತಿದ್ದನಂತೆ, ಅವನು ತುಂಬಾ ಮೃದು ಅವನಿಗೆ ಅಪ್ಪನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿರುವುದು ಒಂದು ಶಾಕ್ ಆಗಿತ್ತು. ಇಷ್ಟು ಹೆದರಿದ್ದನೆಂದರೆ ಆಸ್ಪತ್ರೆಗೆ ಬಂದು ಅಪ್ಪನನ್ನು ನೋಡಲೂ ಸಹ ಬರೋದಿಲ್ಲ ಎಂದು ಕುಳಿತಿದ್ದ. ಹಾಗೋ ಹೀಗೋ ಗೌರಿ ಅವನಿಗೆ ತಿಳಿಸಿ ಆಸ್ಪತ್ರೆಗೆ ಕಳಿಸಿದಳು. ಅವನು ಮಂಕಾಗಿದ್ದ, ನನಗೆ ಏನೂ ತೊಚುತ್ತಲೇ ಇರಲಿಲ್ಲ, ಜೀವನದ ಅನುಭವ ಇರಲಿಲ್ಲ ನನಗೆ. ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸೋದು ಎಂದು ತಿಳಿಯಲೇ ಇಲ್ಲ, ಕೊನೆಗೆ ಸುಮ್ಮನೆ ಕೂತು ಚಿಂತಿಸಿದಾಗ ಏನೂ ತಿಳಿಯದಾಗ ಒಂದು ನಿರ್ಧಾರಕ್ಕೆ ಬಂದೆ! ಇನ್ನು ಮುಂದೆ ಏನೇ ಆಗಲಿ ನಾನು ಈಗ ಬರುವ ಯಾವುದೆ ಅಡೆತಡೆ ಇರಲಿ ಏನೇ ಆಗಲಿ ಎದುರಿಸಬೇಕು, ನನ್ನ ಕುಟುಂಬಕ್ಕೆ ನನ್ನ ಸಪೋರ್ಟ ಬೇಕಿತ್ತು, ಈ ಹೊತ್ತಿನಲ್ಲಿ ನಾನು ಕುಗ್ಗಿದರೆ ನಮ್ಮ ಮನೆ ಕುಗ್ಗುತ್ತದೆ ಎಂಬ ಅರಿವಾಗಿತ್ತು.

ಯಾರ ಜೊತೆಯಾದರು ಮಾತಾಡಬೇಕಿತ್ತು. ನಾನು ನನ್ನ ಮನಸನ್ನು ತಿಳಿದುಕೋಳ್ಳುವವರು ಬೇಕಿದ್ದರು. ಆವಾಗ ನೆನಪಾಗಿದ್ದು ಕೃಷ್ಣ, ಫೋನ್ ಮಾಡಿ ಅವನನ್ನ ಕರೆಸಿದೆ, ಅವನು ನನ್ನ ಮನಸಿಗೆ ತುಂಬಾ ಹತ್ತಿರ, ಅವನಿಗೆ ನಾನು ಏನು ವಿವರಿಸಿಲ್ಲ ಅಂದರು ನನ್ನನ್ನ ತಿಳಿದುಕೋಳ್ಳುತ್ತಾನೆ, ನನ್ನನ್ನು ಹಾಗೋ ಹೀಗೊ ನಗಿಸಿ, ನನ್ನ ತಮ್ಮನನ್ನು ನಗಿಸಿ, ರಾತ್ರಿ 10 ಗಂಟೆಯವರೆಗೆ ಅಲ್ಲೆ ಇದ್ದು ಹೋದ, ಅಷ್ಟರಲ್ಲಿ ಸ್ಕ್ಯಾನ್ ರಿಪೋರ್ಟ ಬಂದಿತ್ತು, ನನ್ನ ಹೆದರಿಕೆ ನಿಜವಾಗಿತ್ತು, ಅಪ್ಪನ ದೇಹದ ಬಲ ಭಾಗ ಪ್ಯಾರಲೈಸ್ ಆಗಿತ್ತು, ಡಾಕ್ಟರ್ ಅವರು ಗುಣವಾಗಲು ಒಂದು, ಎರಡು ಅಥವಾ ಒಂದು ವರ್ಷ ಕೂಡ ಆಗಬಹುದು ಎಂದು ಹೇಳಿದರು. ಜೀವನ ಹೀಗೆ ಪಲ್ಟಿ ಹೊಡೆಯತ್ತೆ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ, ಸಿ.ಎ ಆಗುವ ಕನಸು ನುಚ್ಚುನೂರಾಗಿತ್ತು, ಎಲ್ಲವೂ ನುಚ್ಚುನೂರಾಗಿತ್ತು, ನನ್ನ ಜೀವನದ ಅತೀ ದೊಡ್ಡ ಟರ್ನಿಂಗ್ ಪಾಯಿಂಟ್.........

**************

(ಮುಂದುವರೆಯುತ್ತದೆ......)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.