ಅಮ್ಮಾ... ನಿನಗೊಂದು ಪ್ರಶ್ನೆ...ದೂರದಲ್ಲಿ ಯಾರೋ ಬರ್ತಾ ಇದಾರೆˌ ನೋಡೋಕೆ ತುಂಬಾ ವಿಕಾರವಾಗಿದ್ದಾರೆˌ ಅಯ್ಯೋ ಹತ್ತಿರಾನೇ ಬಂದರುˌ ನನಗೆ ನೋಡೋಕಾಗ್ತಿಲ್ಲˌ ಅಮ್ಮಾ ಎಲ್ಲಿದೀಯ? ಭಯ ಆಗ್ತಿದೆˌ ನನ್ನ ಹತ್ರ ಬಾರಮ್ಮಾˌ ನನ್ನ ತಬ್ಕೋಳಮ್ಮಾ... ಅಮ್ಮಾ ಅಮ್ಮಾ.... ಎಚ್ಚರ ಆಗೋಯ್ತುˌ ನೋಡಿದ್ರೆ ಯಾರೂ ಇಲ್ಲ.... ಅಮ್ಮಾನೂ ಇಲ್ಲ.... ಬೆಳಗಿನ ಜಾವ! ಇಂತಹ ಅದೆಷ್ಟೋ ರಾತ್ರಿಗಳನ್ನು ಕಳೆದಿದ್ದೆˌ ಖಾಲಿ ಹಾಸಿಗೆಯಲ್ಲಿ ನನ್ನಮ್ಮನ್ನ ಹುಡುಕಿದ್ದೆˌ ಅವಳು ಸಿಗದಿದ್ದಾಗ ಜೋರಾಗಿ ಅತ್ತಿದ್ದೆ... ಎಲ್ಲರ ಹತ್ರಾನೂ ಇರೋ ಅಮ್ಮ ನನ್ನ ಹತ್ರ ಮಾತ್ರ ಯಾಕಿಲ್ಲ ಅಂತಾ ಯೋಚಿಸ್ತಾ ಇದ್ದೆˌ ನಾನು ಮಾಡಿದ ಅದ್ಯಾವ ತಪ್ಪಿಗೆ ಈ ಶಿಕ್ಷೆ ಅಂತ ಆ ದೇವರನ್ನು ಕೇಳ್ತಿದ್ದೆ... ಆದರೆ ನನ್ಯಾವ ಪ್ರಶ್ನೆಗೂ ಉತ್ತರ ಸಿಗಲೇ ಇಲ್ಲ....

ಹೇಳಮ್ಮಾ

ಅಪ್ಪನ ಹೊಡೆತಕ್ಕೆ ಹೆದರಿ ಸೀಮೆ ಎಣ್ಣೆ ಸುರ್ಕೊಂಡು ಸತ್ತು ಹೋದ್ಯಲ್ಲಾ.. ಆ ಬೆಂಕಿ ಉರಿಯನ್ನ ಸಹಿಸೋ ಶಕ್ತಿ ಇದ್ದ ನಿನಗೆ ಅಪ್ಪನ್ನ ಬಿಟ್ಟು ಸ್ವಾವಲಂಬಿಯಾಗಿ ಬದುಕೋ ಅಷ್ಟು ಶಕ್ತಿ ಇರಲಿಲ್ವಾ?? ಅಪ್ಪ ಹೊಡೀತಿದ್ರು ಅಂತ ಅವರಿಗೆ ಬುದ್ದಿ ಕಲಿಸೋಕೆ ಸಾಯೋ ನಿರ್ದಾರ ಮಾಡಿದೆ. ಆದರೆ ನಾನೇನಮ್ಮ ತಪ್ಪು ಮಾಡಿದ್ದೆ... ನಿನ್ನ ಆ ಒಂದು ನಿರ್ಧಾರ ಇವತ್ತು ನನ್ನೆಲ್ಲಾ ಕಣ್ಣೀರಿಗೆ ಕಾರಣ.....

ಈಗ ನೀನು ಇದ್ದಿದ್ರೆ ಹೇಗಿರ್ತಿದ್ದೆ? ನನ್ನ ಹಾಗೇ ಇರ್ತಿದ್ಯಾ! ನನ್ನ ತಲೆ ಬಾಚುತಿದ್ಯಾ? ಸ್ನಾನ ಮಾಡೋಕೆ ಹೋದಾಗ ಬೇಡ ಅಂದ್ರೂ ಬಂದು ಬೆನ್ನು ಉಜ್ಜುತಿದ್ಯಾ? ಹೊಟ್ಟೆ ತುಂಬಿದೆ ಕಣಮ್ಮಾ ಅಂದ್ರೂ ಬಲವಂತ ಮಾಡಿ ತಿನ್ನಿಸ್ತಿದ್ಯಾ? ಮನೆಗೆ ಬರೋದು ಲೇಟಾದ್ರೆ ಬಾಗಿಲಲ್ಲೇ ನಿಂತು ಕಾಯ್ತಿದ್ಯಾ? ನಿದ್ದೆ ಮಾಡಿರೋ ಹೊತ್ತಲ್ಲಿ ನನ್ನ ತಲೆ ಸವರಿ ಮುತ್ತು ಕೋಡ್ತಿದ್ಯಾ? ಹೇಳಮ್ಮಾ.... ಏನೇನ್ ಮಾಡ್ತಿದ್ದೆ ಹೇಳು....

ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಮುಖ ಹೇಗಿತ್ತು ಅಂತ ನೆನಪೇ ಆಗ್ತಿಲ್ಲಾ... ಬರೀ ಮೂರು ವರ್ಷದ ನನ್ನ ಬಿಟ್ಟು ಹೋಗಿದ್ದಲ್ವಾ ನೀನು... ನಿನ್ನ ಮುಖ ನೋಡಿದ ನೆನಪೇ ಇಲ್ಲ... ಆದರೆ ಈಗೊಬ್ಬ ಮಲತಾಯಿ ಇದಾರೆ ನನಗೆ "ತಾಯೀನ ತಿಂದುಕೊಂಡ ಬೇವರ್ಸಿ" ಅಂತ ಆಗಾಗ ನೆನಪಿಸ್ತಾ ಇರ್ತಾರೆ....

ಇವತ್ತು ನಿನ್ನ ಇಷ್ಟು ನೆನೆಸೋಕೆ ಕಾರಣ ನಾನು ದೈಹಿಕವಾಗಿ ಬದಲಾಗಿದ್ದೀನಿˌ ದೊಡ್ಡವಳಾಗಿದೀನಿ ಕಣಮ್ಮಾ... ಎಲ್ಲಾ ಹೆಣ್ಣಿಗು ಇಂತ ಸಮಯದಲ್ಲಿ ತಾಯಿ ಇರಬೇಕು ಅಲ್ವಾ? ನೀನೆಲ್ಲಮ್ಮಾ ಇದೀಯ? ರಾತ್ರಿಯಿಂದ ಅಳ್ತಾ ಕೂತಿದೀನಿˌ ಯಾಕೆ ಅಂತ ಕೇಳೋಕೂ ಯಾರೂ ಇಲ್ಲ... ಯಾರಿಗಮ್ಮಾ ಹೇಳೋದು ಇದನ್ನೆಲ್ಲಾ? ನನ್ನ ಮುಖ ಕಂಡರಾಗದ ಚಿಕ್ಕಮ್ಮಂಗ??

ಈ ಕಣ್ಣೀರಿಗೆ ಕೊನೆ ಯಾವಾಗ?? ನಾನು ಸತ್ತ ಮೇಲಾ? ಆದರೆ ನಾನು ನಿನ್ನ ಹಾಗೆ ಸಾಯೋ ನಿರ್ಧಾರ ಮಾಡಲ್ಲ.... ಬದುಕ್ತೀನಿˌ ಎಲ್ಲಾ ಕಷ್ಟಾನೂ ಎದುರಿಸ್ತೀನಿˌ...

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.