ನೆನ್ನೆ ತಾನೆ Exam ಮುಗಿಸಿ ಬಂದು ಮಲಗಿದವನು ಇನ್ನೂ ಎದ್ದಿರಲಿಲ್ಲ ಅಷ್ಟರಲ್ಲಿ ನನ್ನ friend ಕಾಲ್ ಮಾಡಿ ಇನ್ನೂ ready ಆಗಿಲ್ವ ಬೇಗ ಏಳೋ ಎಂದ.

ಹೌದು,ನಾನು ನನ್ನ friends ಈಗಾಗಲೇ ನಿರ್ಧರಿಸಿದಂತೆ ನಾವು ನನ್ನ ಸ್ನೇಹಿತ ರಾಜೇಶ್ ಊರಿಗೆ ಹೋಗಬೇಕಾಗಿತ್ತು.ಅದು ಸುಂದರ ಊರು, ಪ್ರಕೃತಿಯ ರಮಣೀಯ ತಾಣ,ಹೊಲ,ತೋಟ, ಗದ್ದೆ, ಬೆಟ್ಟ ಹೀಗೆ ಹೇಳಿದ್ದ.

ನಮಗೂ ಬೆಂಗಳೂರು ಸಾಕಾಗಿತ್ತು ಸರಿ ಹೋಗೊಣ ಎಂದು ಮಾತು ಆಗಿತ್ತು.

ರೈಲು 11:30 pmಗೆ ಇದ್ದರಿಂದ ನಾನು ಸ್ವಲ್ಪ ಬೇಕಾದ ವಸ್ತುಗಳನ್ನು ತಂದು ಬ್ಯಾಗ್ ಗೆ ಹಾಕಿ,

ಬಟ್ಟೆ ಬ್ಯಾಗ್ ಗೆ ತುರುಕಿ ready ಆಗಿ ಎಲ್ಲರು ಅಂದರೆ,ನಾನು(ಪೃಥ್ವಿ) ರಾಜೇಶ್, ರಾಹುಲ್, ಸಚಿನ್, ನಾಗ ಎಲ್ಲರೂ ರೈಲ್ವೇ ಸ್ಟೆಷನ್ ಗೆ ಬಂದು ಟಿಕೆಟ್ ಪಡೆದವು.11:30ಗೆ ಬರಬೇಕಾಗಿದ್ದ ರೈಲು 12:30 ಗೆ ಬಂದತ್ತು.

ತಮ್ಮ ಸೀಟು ಸಿಕ್ಕಿದ ತಕ್ಷಣ ನಿದ್ದೆಗೆ ಜಾರಿದ್ದೆವು.4:30ಗೆ ನಾವೂ ಬರಬೇಕಾಗಿದ್ದ ಸ್ಥಳ ತಲುಪಿದ್ದೇವು.ರೈಲು ಇಳಿದು 2ಆಟೋ ಮಾಡಿ ಹೊರೆಟಿವು.2ಕೀ.ಮಿ ನಂತರ ರಾಜೇಶ್ ಇಲ್ಲೇ ನಿಲ್ಲಿಸಿ ಎಂದ.ಅಲ್ಲಿ ಒಂದು ಕಾಲುದಾರಿಯಲ್ಲಿ ನಡೆದು ಒಂದು ಭವ್ಯ ಬಂಗಲೆ ಮನೆಯ ಸೇರಿದವು ಅದು ರಾಜೇಶ್ ನ ಅಪ್ಪ ಹೊಸದಾಗಿ ಖರೀದಿಸಿದ ಬಂಗಲೆ ಅದೂ ಕೇವಲ 80ಲಕ್ಷ ಕ್ಕೆ. ಬಂದ ನಮ್ಮನ್ನು ನಗುತ್ತಾ ಸ್ವಾಗತಿಸಿದ್ದ ಅಲ್ಲಿ ಕೆಲಸ ಮಾಡುತ್ತಿದ್ದ ರಾಮಣ್ಣ.ಅದು ದೊಡ್ಡ ಬಂಗಲೆ ಸುತ್ತಾ 5ಎಕರೆ ತೋಟ ಅಡಿಕೆ,ತೆಂಗು,ಮಾವು ಇನ್ನೂ ಹಲವಾರು ಮರಗಳು.ಅದನ್ನು ನೋಡಿ ನಮಗೆ ಮಾತ್ರವಲ್ಲ ರಾಜೇಶ್ ಗೂ ಸಂತಸವಾಗಿತ್ತು.ಒಳಗೆ ಒಂದು ಭಾಗ clean ಆಗಿತ್ತು ಅಲ್ಲಿ ರಾಮಣ್ಣ ನ ಸಂಸಾರ ಇತ್ತು ರಾಮಣ್ಣ ಹಾಗು ಅವರ ಹೆಂಡತಿ ಸಾತಿ ಇಬ್ಬರು ವಯಸ್ಸಾದವರು ಮಕ್ಕಳು ಇರಲಿಲ್ಲ ರಾಜೇಶ್ ಅಪ್ಪ ಇಲ್ಲಿಗೆ ಅವರನ್ನು 2ತಿಂಗಳ ಹಿಂದೆ ನೇಮಿಸಿದ್ದರು.ಆಗಲೇ 7 ಗಂಟೆ ಆಗಿತ್ತು. ಸಾತಿ ನಮಗೆ ಚಹಕೊಟ್ಟರು.ನಾವು ಚಹಕುಡಿದು ನಮಗೆ ಮೊದಲೇ clean ಮಾಡಿದ್ದ room ಗೆ fresh ಆಗಲು ಬಂದೆವು ಆ room ತುಂಬಾ ದೊಡ್ಡದು 2ಮಂಚ ಇತ್ತು ಅದು ಬಹಳ ಹಳೇಯದು ಅನ್ನಿಸಿತು. ಅಲ್ಲಿನ ಯಾವುದೇ ವಸ್ತುಗಳನ್ನು ರಾಜೇಶ್ ಅಪ್ಪ ಖರೀದಿಸಿರಲಿಲ್ಲ ಅದು ಮನೆಯ ಜೊತೆಗೆ ಖರೀದಿಸಿದ್ದು.

ನಂತರ fresh ಆಗಿ ಸಾತಿ ನೀಡಿದ ತಿಂಡಿ ತಿಂದು ಹೊರಗೆ ಸುತ್ತಲು ಹೊರಟೇವು.ರಾಜೇಶ ಮಾತೂ ಶುರು ಮಾಡಿದ. ನನ್ನ ಅಪ್ಪ ಈ ಮನೆ clean ಮಾಡಿಸಿ ಬರಲೆಂದು ಕಳಿಸಿದ್ದರು.ಅ ವಿಷಯ ನಮಗೂ ಗೊತ್ತಿತ್ತು .

ರಾಜೇಶ್: ಮನೆ ನೋಡಿ ಎನೆನಿಸಿತು? ನಾವೇ ಮನೆ clean ಮಾಡಿಸಬಹುದ????

ರಾಹುಲ್: I think ಆಗಲ್ಲ ಮಗ !!!!

ನಾಗ:ಹೌದು. ನಮಗೆ ಒಬ್ಬರು ಸಹಾಯಕ್ಕೆ ಬೇಕಾಗ ಬಹುದು .

ರಾಜೇಶ್: ಅದಕ್ಕೆ ರಾಮಣ್ಣ ಇದ್ದಾರಲ್ಲಾ....

ನಾನು: ಆಗಾದರೆ ನಾಳೆ ಇಂದ ಕೆಲಸ ಶುರು ನಾ......

ಸಚಿನ್: ಅಂತೂ ನಮ್ಮ ಪಾಡು ಅಷ್ಟೇ!!!!!!!ಎಲ್ಲರೂ ಜೋರಾಗಿ ನಕ್ಕರು.

ನಂತರ ತೋಟ ಗದ್ದೆ ಸುತ್ತಾಡೀ ಮನೆ ತಲುಪಿದರು.

ರಾತ್ರಿ party ಮಾಡಿ ಮಲಗಿದೆವು. ಆದರೆ ನಾನು ಕುಡಿಯದ ಕಾರಣ ಊಟ ಮಾಡಿ ಮಲಗುವ ಹೊತ್ತಿಗೆ 12:30 ಆಗಿತ್ತು. ಎಲ್ಲರೂ ಮಲಗಿದ್ದರು ಹೊಸ ಜಾಗವಾದ್ದರಿಂದ ನನಗೆ ನಿದ್ದೆ ಬರಲಿಲ್ಲ. 2:00am ಯಾರೋ ಅಳುವ ಸದ್ದು ಕೇಳಿಸಿತು. ಕಿಟಕಿಯ ಬಳಿಬಂದು ನೋಡಿದೆ. ಯಾರು ಇಲ್ಲ. ಮತ್ತೇ ಬಂದು ಮಲಗಿದೆ. ಆದರೆ ಈ ಸಲ ಇನ್ನೂ ಜೋರಾಗಿ ಅಳುವ ಶಬ್ದ ಎದ್ದು ಕಿಟಕಿಯ ಬಳಿಬಂದೆ. ಅಲ್ಲಿ ಯಾರೋ ವಯಸ್ಸಾದ ಹೆಂಗಸು ಅಳುತ್ತಾ ಇದ್ದಳು. ನಾನು ಅದು ಸಾತಿ ಎಂದು ತಿಳಿದು ಬೆಳಿಗ್ಗೆ ವಿಚಾರಿಸಿದರಾಯಿತು ಎಂದು ಬಂದು ಮಲಗಿದೆ.

ಬೆಳ್ಳಗೆ ಸಾತಿ ಚಹ ತಂದಾಗ ನೆನ್ನೆ ನಡೆದದ್ದು ನೆನಪಾಗಿ friends ನ ಕೇಳಿದೆ. ಆದರೆ ಅವರಿಗೆ ಯಾವುದೇ ಶಬ್ದ ಬರಲಿಲ್ಲ ಎಂದರು. ನನಗೆ ಆಶ್ಚರ್ಯ!!! ಸರಿ ಎಂದು ಸಾತಿನ ಕೇಳಿದಾಗ ಅವರು ನನಗೆ ಈ ರೀತಿಯ ಅನುಭವ ನಾನು ಇಲ್ಲಿ ಬಂದದಿನ ಹಾಗಿತ್ತು ಅಷ್ಟೇ..... ಮತ್ತೇ ಆ ರೀತಿ ಇಲ್ಲ ಎಂದರು ನನಗೆ ಸಮಾಧಾನ ಆಗಲಿಲ್ಲ .

ಇವತ್ತು ಮೊದಲೇ ನಿರ್ಧರಿಸಿದಂತೆ ಮನೆ cleaning ಕೆಲಸ ಇತ್ತು. ತಿಂಡಿ ತಿಂದು ಮನೆ clean ಮಾಡಲು ಶುರು ಮಾಡಿದೆವು. ನಾನು ರಾಹುಲ್ ನಾಗ ಮೇಲಿನಮಹಡಿಯನ್ನು ಹಾಗೂ ರಾಜೇಶ್ ಸಚಿನ್ ರಾಮಣ್ಣ ಕೆಳಗಿನ ಮಹಡಿಯನ್ನು ಇವರು clean ಮಾಡಲು ಒಪ್ಪಿದರು.

ನಾನು ಮೇಲಿನ ಕೋಣೆಗಳನ್ನು clean ಮಾಡಿದೆವು. ಆದರೆ ಒಂದು room ಗೆ ಬೀಗಹಾಕಿತ್ತು ರಾಮಣ್ಣನನ್ನು ಕೀ ಕೇಳಿದಾಗ ಕೀ ಇಲ್ಲ ಎಂದರು.ನಾವು ಬೀಗ ಹೊಡೆಯಲು ನಿರ್ಧರಿಸಿ ದೊಡ್ಡ ಕಲ್ಲುತಂದು ರಾಮಣ್ಣ ಹೊಡೆಯಲು ಶುರು ಮಾಡಿದರು. ಆ ಕಲ್ಲು ರಾಮಣ್ಣನ ಕಾಲಮೇಲೆ ಬಿದ್ದು ರಕ್ತ ಸುರಿಯಲು ಆರಂಭಿಸಿತು ಎಲ್ಲರಿಗೂ ಭಯವಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ನಾವು ಆ ಕೆಲಸಬಿಟ್ಟು ಬಂದವು.

ರಾತ್ರಿ ಊಟಮಾಡಿ ಮಲಗಿದರು ನನಗೆ ನಿದ್ದೆ ಬರಲಿಲ್ಲ ನೆನ್ನೆ ಹಾಗೂ ಇವತ್ತು ನಡೆದ ಘಟನೆ ತಲೆಯಲ್ಲಿ ಕೋರೆಯುತ್ತಿತ್ತು.ರಾತ್ರಿ 2ಗಂಟೆ ಮತ್ತೇ ಅದೇ ಸದ್ದು friends ನ ಎಬ್ಬಿಸಿಲು ಮುಂದಾದೆ ತಕ್ಷಣ ಬೇಡ ಎನಿಸಿತು ನಾನೇ ಟಾರ್ಚ ಹಿಡಿದು ಹೊರಟೆ ಬಾಗಿಲು ತೆಗೆದು ಹೊರಬಂದೆ ಕಗ್ಗತ್ತಲು ಸುತ್ತಲು ಮರ ಗಿಡ ಹಾಗೂ ಗಾಳಿಯ ಅಬ್ಬರ ಚೀ.................ವ್ ಸದ್ದು. ಭಯಾನಕ ಕತ್ತಲು ಸುತ್ತಲು ನೋಡಿದೆ ಯಾರೂ ಇರಲಿಲ್ಲ. ಆದರೆ ಅಳುವ ಸದ್ದು ಮನೆ ಹಿಂದಿನಿಂದ ಕೇಳಿ ಬರುತ್ತಿತ್ತು ನಾನು ಅತ್ತಲೇ ಹೆಜ್ಜೆ ಹಾಕಿದೆ ಬಂಗಲೆ ಆದ್ದರಿಂದ ಹಾಗೂ ಗಿಡ ಪೊದೆ ಬೆಳೆದಿದ್ದು ನಡೆಯಲು ಕಷ್ಟ ಆಗುತ್ತಿತ್ತು ನಡೆದು ಮುಂದೆ ಹೋಗುವಾಗ ಯಾರೋ ಹಿಂದೆ ಬಂದಂತಾಯಿತು ಭಯದಿಂದಲೇ ತಿರುಗಿ ಟಾರ್ಚ ಹಾಕಿದೆ ಯಾರುಇಲ್ಲ ಮತೇ ಮುಂದೆತಿರುಗಿದೇ ಕಣ್ಣಿಗೆ ರಪ್ ಎಂದು ಬೆಳಕು ರಾಚಿ ಕಣ್ಣಿಗೆ ಕತ್ತಲು ಕವಿದಂತಾಯಿತು ಸುಧಾರಿಸಿಕೊಂಡು ಮುಂದೆಸಾಗಿದೆ ಸದ್ದು ಕೇಳುತ್ತಲೇ ಇತ್ತು ಮನೆ ಹಿಂದೆ ಒಂದು ಸಣ್ಣ ಮನೆ ಅಲ್ಲಿಂದಲೇ ಆ ಸದ್ದುಬರುತ್ತಿತ್ತು ಬಾಗಿಲು ಮುಚ್ಚಿತ್ತು.ನಾನು ಯಾರು ಅದು ಯಾರೆಂದು ಕಿರುಚಿದೆ ಆ ಮನೆಯಿಂದ ನಾನು ಯಾರ ಹಹಹಹ ಎಂದು ನಕ್ಕು ಇದು ನನ್ನ ಮನೆ ಇಲ್ಲಿಂದ ಹೊರಡಿ ಇಲ್ಲ ಎಂದರೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿತು ಇದರಿಂದ ಭಯಗೊಂಡುಹೋಡಿಹೋಗಿ ಮಲಗಿದೆ ಯಾವಾಗ ನಿದ್ದೆಗೆ ಜಾರಿದೆನೋ ಗೊತ್ತಿಲ್ಲ ಬೆಳಗ್ಗೆ ಎದ್ದಾಗ ಚಿಕ್ಕದಾಗಿ ಜ್ವರ ಬಂದಿತ್ತು.

ನನ್ನ friends ನನ್ನ ನಂಬಲಿಲ್ಲ ನನ್ನಆಸ್ಪತ್ರೆಗೆ ಕಳುಹಿಸಿದರು .ಅವರು ಆ room ನ ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲರಾದರು ಆಸ್ಪತ್ರೆಯಿಂದ ಬಂದ ನನಗೆ ಆroom ನ ಬಾಗಿಲು ತೆಗೆಯ ಬೇಡ ಎಂದು ಹೇಳಿದರು ಯಾಕೆಂದರೆ ಅವರಿಗೆ ಭಯಾನಕ ಅನುಭವ ಆಗಿತ್ತು ಆದರೆ ಇವನಿಗೆ ಹೇಳಲಿಲ್ಲ. ನನಗು ಸುಸ್ತಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ tablet ತೆಗೆದುಕೊಂಡು ಮಲಗಿದೆ.ಎದ್ದಾಗ ಸಂಜೆ 6ಗಂಟೆಯಾಗಿತ್ತು ಎಲ್ಲವೂ ಒಮ್ಮೆಲೇ ನೆನಪಾಯಿತು ಸರಿ ಇಂದು ರಾತ್ರಿ ಆ roOmನಲ್ಲಿ ಎನಿದೆ ನೋಡೋಣ ಅನ್ನಿಸಿತು. ರಾತ್ರಿ 11 ಗಂಟೆ ಎಲ್ಲರೂ ಮಲಗಿದ್ದರು ನಾನೂ ಎದ್ದು ಆ roomನ ಬಳಿಬಂದು ನೋಡಿದೆ ಆಶ್ಚರ್ಯ !!ಬೀಗ ತೆಗೆದ್ದಿತ್ತು ಮೆಲ್ಲಗೆ ಬಾಗಿಲು ತೆರೆದೆ ಯಾರೊ ಓಡಿಹೋಗಿದಂತಾಯಿತು ಒಳಗೆ ಹೋಗಿ ನೋಡಿದೆ ಯಾರೂ ಇಲ್ಲ. ಅಲ್ಲಿ ಯಾವುದೋ ಹಳೆಯ ವಸ್ತು ಕಣ್ಣಿಗೆ ಬಿತ್ತು ನೋಡೋಣ ಎಂದು ಮುಂದೆಹೋದೆ ಅಷ್ಟಲಲ್ಲೆ ರಾಜೇಶ್ ಎಲ್ಲರನ್ನೂ ಕೂಗಿದ ನಾನು ಅಲ್ಲಿಂದ ಬಾಗಿಲು ಮುಚ್ಚಿ ಓಡಿದೆ ರಾಜೇಶ್ voice ಮನೆಯಿಂದಿನಿಂದ ಕೇಳಿತು ಎಲ್ಲರೂ ಅಲ್ಲಿಗೆ ಹೋದೆವು ಅವನು ಭಯದಿಂದ ನಡುಗುತ್ತಾ ಆ ಕಡೆ ಕೈ ತೋರಿಸಿದ ಅಲ್ಲಿ ನಾಗ ವಿಕಾರವಾಗಿ ರಕ್ತದ ಮಡುವಲ್ಲಿ ಬಿದ್ದಿದ್ದ ನಮಗೆ ಭಯವಾಗಿತು ಏನಾಯಿತು ಎಂದು ರಾಜೇಶ್ ನ ಕೇಳಿದಾಗ ಅವನು ಹೀಗೆಂದ ರಾಜೇಶ್ ಮಲಗಿರುವಾಗ ಯಾರೋ ಕಿರುಚಿದ ಆಗೇ ಆಯಿತು ಇವನು ಬಂದು ನೋಡಿದಾಗ ನಾನೂ ನಡುಗಿಹೋದೆ ನಾಗ ವಿಕಾರವಾಗಿ ಕಿರುಚುತ್ತಾ, ನರಳುತ್ತ ಇಲ್ಲಿ ಯಾರು ಇರಬೇಡಿ ಇದ್ದರೆ ನನಗಾದ ಸ್ಥಿತಿ ನಿಮಗೂ ಆಗುತ್ತದೆ ಎಂದು ಕೊನೆಉಸಿರುಎಳೆದನು ನನಗೆ ಭಯವಾಗಿ ಕಿರುಚಿದೆ ಎಂದನು.ಎಲ್ಲರಿಗು ಭಯ ಮುಂದೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ ನಾಗನ ಸಾವನ್ನು ಅವನ ಮನೆಯವರಿಗೆ ತಿಳಿಸಿ ಅವರನು ಇಲ್ಲಿಗೆ ಕರೆಸಿ ಸಂಸ್ಕಾರವನ್ನು ಮುಗಿಸಿದರು.ಇದರಿಂದ ಎದರಿ ರಾಹುಲ್ &ಸಚಿನ್ ಬೆಂಗಳೂರಿಗೆ ಹೋದರು ಆದರೆ ನನಗೆ ಕೂತುಹಲ ಹೆಚ್ಚಿತು ನಾನು ಇಲ್ಲೇ ಉಳಿಯಲು ನಿರ್ಧರಿಸಿದೆ .ರಾಜೇಶ್ ಗೆ ಆ ಮನೆಬಿಟ್ಟು ಹೋಗುವುದು ಇಷ್ಟ ಇರಲಿಲ್ಲ ಏಕೆಂದರೆ ಆ ಮನೆಮಾರಿ ಬಂದ ಹಣದಲ್ಲಿ ಇ 5 friends business ಮಾಡುವ ಬಯಕೆ ಇತ್ತು ಅವನು ಅಲ್ಲಿಂದಹೋರಡುವ ಮನಸ್ಸು ಇರಲಿಲ್ಲ. ಆದರೆ ರಾಮಣ್ಣ &ಸಾತಿ ಅವರ ಊರಿಗೆ ಹೋಗಲು ತಯಾರಾಗಿ ರಾಜೇಶ್ ಮುಂದೆನಿಂತು ಹೇಳಿ ಹಣವನ್ನು ಪಡೆಯದೇ ಹೊರಟುಹೋದರು.ಅಲ್ಲಿ ನಾನೂ ಅವನೂ ಇಬ್ಬರೇ.......

ರಾಜೇಶ್ ಮಾತಿನಂತೆ 2ದಿನ ಊರ ಹೊರಗೆ ತಿರುಗಾಡಿ 3ನೇ ದಿನ ಮನೆಗೆ ಬಂದೆವು .

ರಾಜೇಶ್ ಮಾತಿನಂತೆ 2ದಿನ ಊರ ಹೊರಗೆ ತಿರುಗಾಡಿ 3ನೇ ದಿನ ಮನೆಗೆ ಬಂದೆವು ಊಟಮಾಡಿ ರಾತ್ರಿಗಾಗಿ ತಂದ್ದಿದ್ದೆವು.ಹಾಗೆ ನಡೆದ ಘಟನೆಯ ಬಗ್ಗೆ ಮಾತಾಡುತ್ತಾ ಕುಳಿತೇವು ಈ ಮನೆಯಲ್ಲಿ ಮೊದಲು ಯಾರು ಇದ್ದರು ಎಂದು ತಿಳಿದರೆ ಎಲ್ಲಾವಿಷಯ ತಿಳಿಯುತ್ತದೆ ಎಂದುಕೊಂಡೆವು ಆದರೆ ಅದನ್ನು ಹೇಗೆ ತಿಳಿಯೂವುದು ಎಂದು ಯೋಚಿಸಿ ಯಾರನ್ನದರೂ ಕೇಳಿದರಾಯಿತು ಎಂದು ರಾತ್ರಿ ಊಟ ಮಾಡಿ ಮಲಗಿದೆವು.ಆದರೆ ನನಗೆ ಆ room ನ ನೋಡುವ ಆಸೆ.......ರಾಜೇಶ್ ನ ಎಬ್ಬಿಸಿ ನಾನೂ ಅವನು ಆ roomನ ಬಳಿ ಬಂದೆವು ಬಾಗಿಲು ತೆಗೆದು ಒಳ ಹೋದೆವು ಕಗ್ಗತ್ತಲು ಟಾರ್ಚ ಆನ್ ಮಾಡಿಮುಂದೆ ನಡೆದವು.ನನ್ನಯಿಂದೆ ಯಾರೊ ಉಸಿರಾಡಿದಂತಾಗಿ ಹಿಂದೆ ತಿರುಗಿದೆ ಯಾರುಇಲ್ಲ ರಾಜೇಶ್ ಆಗಲೇ ತುಂಬಾ ಎದರಿದ್ದ ಅವನಿಗೆ ಹೇಳಲಿಲ್ಲ. ಅವನಿಗೂ ಯಾರೋ ಓಡಾಡಿದಂತಾಗಿ ನನಗೆ ಹೇಳಿದ ಇಬ್ಬರಿಗೂ ಭಯವಾಗಿ ಹೊರಗೆ ಹೋಗಲು ಮುಂದಾದಾಗ ಬಾಗಿಲು ಪಟ್ಎಂದು ಹಾಕಿಕೊಂಡಿತು ಭಯವಾಯಿತು ಇಬ್ಬರು ಬಿಗಿಯಾಗಿ ಹಿಡಿದುಕೊಂಡೆವು ಗಾಳಿಬಂದಂತಾಗಿ ಬೆಳ್ಳನೆ ಆಕೃತಿ ಬಂದು ನಮ್ಮನ್ನು ಎದುರಿಸಿತು ರಾಜೇಶ್ ನನ್ನು ಎತ್ತಿ ಹಿಡಿದು ಗೋಡೆಗೆ ಗುದ್ದಿ ದೂರಕ್ಕೆ ಎಸೆಯಿತು ನನಗೆ ಕಪಾಳಕ್ಕೆ ಪಟಪಟ ಹೊಡೆಯಿತು ಮೂಗಲ್ಲಿ ರಕ್ತ ಬಂತು ನಾನೂ ರಾಜೇಶ್ ನ ಬಳಿಹೋದೆ ಅವನ ಒಂದು ಕೈ ಮುರಿದಿತ್ತು ಆ ಆಕೃತಿ ಇಲ್ಲಿಂದ ಹೋಗಿ ಇದು ನನ್ನ ಮನೆ ಎಂದು ಮರೆಯಾಯಿತು.ನಾವೂ ಅಲ್ಲಿಂದ ಬಂದೆವು ಬೆಳಗ್ಗೆ ಎದ್ದು ಆಸ್ಪತ್ರೆಗೆ ಹೋಗಿ ಊಟಮಾಡಿ ರಾಜೇಶ್ ನ ತಂದೆಗೆ phoneಮಾಡಿ ವಿಷಯ ತಿಳಿಸಿದ ಅವರ ತಂದೆ ಒಬ್ಬ ಮಂತ್ರವಾದಿಯ ನಂಬರ್ ಕೊಟ್ಟು ಕರೆಸಲು ಹೇಳಿದರು. ರಾಜೇಶ್ ಕಾಲ್ ಮಾಡಿದಾಗ ನಾಳೆ ಬರುವುದಾಗಿ ಹೇಳಿದರು. ಬೆಳ್ಳಗೆ ಎದ್ದು ಅವರಿಗಾಗಿ ಕಾಯುತ್ತಾ ಇದ್ದಾಗ ಅವರೇ call address ಪಡೆದು ಬಂದರು ನಮ್ಮನ್ನು ನೋಡಿ ನಗುತ್ತಾ ಮನೆ ಒಳಗೆ ಹೋದರು ಮನೆಯಲ್ಲಿ ದೊಡ್ಡ ಸುದ್ದು ಹಾಗೂ ಗಾಳಿ ಇದನ್ನು ನಾವು ನೋಡುತ್ತಾ ನಿಂತಿದ್ದೆ ಅವರು ಹೊರ ಬಂದು 2ದಿನಗಳಲ್ಲಿ ಅಮವಾಸ್ಯೆ ಇದೆ ಅಂದು ನಾವು ಕಾರ್ಯ ಆರಂಭಿಸೋಣ ಎಂದು ಹೇಳಿ ಹೊರಟು ಹೋದರು. ಅಂದು ರಾತ್ರಿ ಮಲಗಿದ್ದಗಾ ನನ್ನನ್ನು ಕಾಲು ಹಿಡಿದು ಎಳೆಯುವ ಹಾಗೆ ಅನಿಸಿತು ಎದ್ದು ನೋಡಿದಾಗ ನಾನೂ ಮನೆ ಹಿಂದೆ ಇದ್ದೆ ಕಣ್ಣಮುಂದೆ ಅದೇ ಬೆಳಕು ಕಾಣಿಸಿತು ಮಾತು ಇಲ್ಲಿಂದ ಹೋಗಿ ಎಂದು ನಾನೂ ಎದರಿಕೆ ಇಂದಲೇ ನೀನೂ ಯಾರು ಎಂದು ಕೇಳಿದಾಗ ಅದು ನಗುತ್ತಾ ಇಲ್ಲಿಂದ ಹೋಗು ಎಂದು ಹೇಳಿ ಹೊರಟು ಹೋಯಿತು. ನಾನು ಪ್ರಜ್ಞೆ ತಪ್ಪಿ ಬಿದ್ದೆ. ಬೆಳಗ್ಗೆ ಎದ್ದಾಗ ನಾನೂ ಮಲಗಿದ ಜಾಗದಲ್ಲೇ ಇದ್ದೆ!!! ಈ ವಿಷಯವನ್ನು ನಾನೂ ರಾಜೇಶ್ ಹಾಗು ಮಂತ್ರವಾದಿಗೆ ಹೇಳಿದಾಗ ನಮಗೆ ಅವರು ತಾಯತ ಕೊಟ್ಟರು.

ಅಮಾವಾಸ್ಯೆ ಕತ್ತಲು ರಾತ್ರಿ ಪೂಜೆ ಶುರುವಾಯಿತು. ದೊಡ್ಡ ಯಜ್ಞಕುಂಡ ಸಿದ್ದ ಪಡಿಸಿದ ಮಂತ್ರವಾದಿ ಯಾವೂದೋ ಮಂತ್ರ ಹೇಳುತ್ತಾ ಇದ್ದ ಮನೆ ನಡುಗಲು ಆರಂಭಿಸಿತು ಜೋರಾದ ಗಾಳಿ ಬೀಸಿತು ಆ ಗಾಳಿಯಲ್ಲಿ ಬೆಳ್ಳನಯ ಆಕೃತಿ ಆ ಯಘ್ಞಕುಂಡದಲ್ಲಿ ಕಾಣಿಸಿಕೊಂಡಿತು .

ಮಂತ್ರವಾದಿ ಆ ಆತ್ಮಕ್ಕೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು ಆದರೆ ಅದು ಯಾವುದಕ್ಕು ಮಣಿಯಲಿಲ್ಲ. ನಂತರ ಯವುದೋ ಮಂತ್ರವನ್ನು ಜೋರಾಗಿ ಹೇಳಲ ಪ್ರಾರಂಭಿಸಿದರು. ಹಾಗ ಅದು ಉತ್ತರಿಸಿತು ಅದು ಹೆಣ್ಣು ಆತ್ಮ ತನ್ನ ತಂದೆ ತಾಯಿ ಜೊತೆಗೆ ಸುಖವಾಗಿ ಜೀವನ ಸಾಗಿಸುತ್ತಿದ್ದಾಗ ಕಾಲೇಜಿನಲ್ಲಿ ಪರಿಚಯವಾದ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಳು ಈ ಸಾಹಿತ್ಯ (ಆತ್ಮದ ಹೆಸರು)ಜೊತೆಯಲ್ಲಿ ಹೊರಗೆ ಓಡಾಡುತ್ತಿದ್ದರು. ಆದರೆ ಒಂದು ದಿನ ಆ ಹುಡುಗ ಬೇರೆ ಹುಡುಗಿಯನ್ನು ಮದುವೆಯಾಗಿ ಬೆಂಗಳೂರು ಸೇರಿದ ಇದರಿಂದ ಮನನೊಂದು ಸಾಹಿತ್ಯ ಆ room ನಲ್ಲೇ ಆತ್ಮಹತ್ಯೆ ಮಾಡಿಕೊಂಡಳು .ಇದರಿಂದ ಅತಿ ಪ್ರೀತಿಯಿಂದ ಸಾಕಿದ ಮಗಳನ್ನು ಕಳೆದುಕೊಂಡ ತಾಯಿ ಸಹ ನೋವು ತಡೆಯಲಾರದೆ ಸಾವನ್ನಪಿದರು .ತಂದೆ ಆತ್ಮಹತ್ಯೆ ಮಾಡಿಕೊಂಡರು ಇದರಿಂದ ನೊಂದ ಸಾಹಿತ್ಯ ಆತ್ಮ ನನ್ನ ತಂದೆ ತಾಯಿ ಗೆ ದ್ರೊಹ ಮಾಡಿದೆ ಎಂದು ನೊಂದುಕೊಂಡಿತೂ. ಹಾಗೂ ಮೋಸ ಮಾಡುವ ಹುಡುಗರ ಮೇಲೆ ದ್ವೇಷ. ಅದೇ ಕಾರಣಕ್ಕೆ ನಾಗನನ್ನು ಕೊಂದದ್ದು ಅವನು ಒಂದು ಹುಡುಗಿಗೆಮೋಸಮಾಡಿ ಇಲ್ಲಿಗೆ ಬಂದಿದ್ದ ಈ ವಿಷಯ ನನಗೆ ಹಾಗು ರಾಜೇಶ್ ಗು ಗೊತ್ತಿತ್ತು. ಸಾಹಿತ್ಯ ಳ ಪ್ರಕಾರ ಇದು ಅವಳ ಮನೆ ನಾನು ಇದನ್ನು ಬಿಟ್ಟು ಹೋಗುವುದಿಲ್ಲ ಎಂದು ಆದರೆ ಮಂತ್ರವಾದಿ ಈ ಮನೆಯನ್ನು ಇವರು ಖರೀದಿಸಿದ್ದಾರೆ ಇದು ಅವರ ಮನೆ ಹಾಗೂ ನಿನ್ನ ತಂದೆ ತಾಯಿ ನಿನಗೋಸ್ಕರ ಕಾಯ್ತಾ ಇದ್ದಾರೆ ನೀನು ನಿನ್ನ ಲೋಕವನ್ನು ಸೇರು ಎಂದರು ಸಾಹಿತ್ಯ ಗೂ ಅವರ ತಾಯಿ ಹೆಚ್ಚು ನೆನಪಾಗಿ ಹೋಗಲು ಒಪ್ಪಿತು .ಮಂತ್ರವಾದಿ ಅದಕ್ಕೆ ಮುಕ್ತಿಕೊಡಿಸಿದ.

ನಂತರ ಆ ಮನೆಯನ್ನು clean ಮಾಡಿಸಿ 2ಕೋಟಿಗೆ ಮಾರಿ ಇಬ್ಬರು business ಮಾಡಿಕೊಂಡು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಸುಖವಾಗಿ ಇದ್ದಾರೆ.

........................ THE END.......................


ಇದು ನನ್ನ ಮೊದಲ ಪ್ರಯತ್ನ ತಪ್ಪಿದ್ದರೆ ಕ್ಷಮಿಸಿ. ಇದು ನನ್ನ ಕಲ್ಪನೆಯ ಕಥೆ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.