ಭಯಾನಕ ಕನಸು...!!!!!

"ಪ್ರೀತೀಲಿ ಸೋತಿರೋ ಪ್ರತಿಯೊಬ್ಬ ಹುಡುಗರು"
"ಕಲ್ಲಾದ ಹೃದಯದಲಿ ನೋವೆಂಬ ಕವಿತೆ ಗೀಚೋ ಒಂದೊಳ್ಳೆ ಬರಹಗಾರರು" ಅಂತಾ ಈಗಷ್ಟೇ ಫೇಸ್ ಬುಕ್ ಅಲ್ಲಿ ಹಾಕಿದ ಕವನಕ್ಕೆ ಲೈಕ್ಸ್, ಕಮೆಂಟ್ಗಳ ಸುರಿಮಳೆಗೆ ಕಾಯ್ತಾ ಕೂತಿದ್ದ ನಿತಿನ್ ಪೂರ್ತಿ ಅದರಲ್ಲಿಯೇ ಮುಳುಗಿ ಬಿಟ್ಟಿದ್ದ....

ಛೇ..!!! ಎಷ್ಟೇ ಬರೆದ್ರು ಬರುವ ಲೈಕ್ಸ್ ಗಳು ಒಂದೆರಡಷ್ಟೆ..." ಅನ್ನೋ ಹಳೇ ಡೈಲಾಗ್ ಅವನ ಕೋಣೆಯ ಗೋಡೆಗಳಿಗೆ ಕಾಮನ್ ಆಗಿತ್ತು..
ಈಗಿನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬರಹದಿಂದ ಹೆಸರುವಾಸಿ ಯಾಗಬೇಕಂತ ಅಂದುಕೊಂಡವರಲ್ಲಿ ನಿತಿನ್ ಕೂಡ ಒಬ್ಬ.....ಹಾಗೆ ಅವನಿಗಿರುವ ಮತ್ತೊಂದು ವಿಶೇಶವಾದ, ಜಗತ್ತಲ್ಲಿ ಅತೀ ವಿರಳವಾಗಿರೋ ಆರು ಬೆರಳು ಇವನಿಗಿತ್ತು.. ಅದಿವನಿಗೋ ಲಾಭವೋ....?
ಇಲ್ಲ ನಷ್ಟವೋ...? ಇದುವರೆಗೆ ಅವನಿಗೆ ತಿಳಿದಿಲ್ಲ..

ಇತ್ತೀಚೆಗೆ ಓದಿದ ಕೆಲವು ಹಾರರ್ ಕಥೆಯಿಂದ ಪ್ರೇರೇಪಿತನಾಗಿ, ತಾನು ಕೂಡ ಬರೀಬೇಕಂತಾ ನಿರ್ಧರಿಸಿದ್ದ..
"ಹೇಗ್ ಬರೆಯೋದು...? ಇದುವರೆಗೂ ಬಂದ ಎಲ್ಲಾ ಕಥೆಗೂ ಲಿಂಕ್ ಆಗ್ತಿದ್ಯಲಾ. ಏನ್ ಮಾಡುವುದು..? ಅನ್ನೋ ತುಂಬಾ ಪ್ರಶ್ನೆಗೆ ಉತ್ತರ ಸಿಗದೇ ಒದ್ದಾಡ್ತಿದ್ದ..

ಹೀಗೆ ಒಂದು ರಾತ್ರಿ....ತನ್ನ ಫೇಸ್ ಬುಕ್ ಅಲ್ಲಿ ಲೀಲಾಜಾಲವಾಗಿ ಹರಿದಾಡ್ತಿದ್ದ, ಅಪ್ ಡೇಟ್ಸ್ ಗಳ ಮೇಲೆ ಕಣ್ಣಾಡಿಸ್ತಿದ್ದ ನಿತಿನ್ ಗೆ..... ತನ್ನದೇ ಊರಿನ ಹೆಸರಿನ ಪೇಜಿನಲ್ಲಿ ಬಂದಿದ್ದ ಒಂದು ಆರ್ಟಿಕಲ್ ತುಂಬಾ ಕೂತುಹಲ ಉಂಟುಮಾಡಿತ್ತು. ಕಾರಣ ಅದರ ಶೀರ್ಶಿಕೆ ಹೀಗಿತ್ತು. "ಸೀಕ್ರೆಟ್ಸ್ ಆಫ್ ಹ್ಯೂಮನ್ ಸಿಕ್ಸ್ತ್ ಫಿಂಗರ್ (ಮನುಷ್ಯನ ಆರನೇ ಬೆರಳಿನ ರಹಸ್ಯ)... ತನಗೂ ಕೂಡ ಆರು ಬೆರಳಿದಿದ್ದರಿಂದ ಏನುರಬಹುದೆಂದು ಓದಲು ಶುರು ಮಾಡಿದ.

"ಒಬ್ಬ ಮನುಷ್ಯನಿಗೆ ಆರು ಬೆರಳಿದ್ದರೆ ಅವನು ತುಂಬಾ ಧೈರ್ಯಶಾಲಿಯಾಗಿರುತ್ತಾನೆ.. ಹಾಗೆ ಅವನ ಆರನೇ ಬೆರಳಿನಲ್ಲಿ ಹರಿಯುವ ರಕ್ತವೂ ತುಂಬಾ ಶಕ್ತಿಯುತವಾಗಿದ್ದು..ದೆವ್ವಗಳ ಆಹ್ವಾನಿಕೆಗೆ ಉಪಯೋಗ ಅಂತಾ ಪುರಾತನ ಕಾಲದಲ್ಲಿ ನಂಬಿರೋ ವಾಡಿಕೆಯು ಇದೆ..ಆರು ಬೆರಳಿರುವ ವ್ಯಕ್ತಿ ಮಧ್ಯರಾತ್ರಿ ಯಾರಿಗೂ ತಿಳಿಯದೇ ಸ್ಮಶಾನಕ್ಕೆ ಹೋಗಿ ತನ್ನ ಆರನೇ ಬೆರಳಿನ ಒಂದು ತೊಟ್ಟು ರಕ್ತವನ್ನು ಸಮಾಧಿ ಮೇಲೆ ಚೆಲ್ಲಿ ಕುಳಿತರೆ ದೆವ್ವದ ಆಹ್ವಾನವಾಗುತ್ತೆ ...
ಇದಿಷ್ಟು ಆ ಆರ್ಟಿಕಲ್ ಅಲ್ಲಿ ಬರೆದಿತ್ತು...

"ನಿಜವಾಗಲೂ.... ನನಗೂ ಕೂಡ ಆರು ಬೆರಳು, ನಂಗೂ ಕಥೆ ಬೇಕಿತ್ತು.. ನಾನ್ಯಾಕ್ ಟ್ರೈ ಮಾಡಬಾರದು" ಅಂತಾ ನಿತಿನ್ ಒಬ್ಬನೇ ತನ್ನನ್ನೇ ತಾನೇ ಪ್ರಶ್ನಿಸಿಕೊಂಡಿದ್ದ.... ತಡಮಾಡದೇ... ಹಿಂದು ಮುಂದು ಯೋಚನೆ ಮಾಡದೆ ಅದೇ ದಿನ ರಾತ್ರಿ ಅದೇ ಊರಿನ ಸ್ಮಶಾನಕ್ಕೆ ಹೋದ. ಸುತ್ತಲಿನ ಕತ್ತಲು ಅವನನ್ನು ಭಯಪಡಿಸಿದರು, ಮನಸ್ಸಲ್ಲಿ ನಾನೊಬ್ಬ ಧೈರ್ಯಶಾಲಿ ಅನ್ನೊ ನಂಬಿಕೆ ಎಲ್ಲವನ್ನು ಹಿಂದಿಕಿತ್ತು... ಕತ್ತಲಲ್ಲಿ ಪಕ್ಕದಲ್ಲಿ ಏನೇ ಶಬ್ದವಾದ್ರು ಟಾರ್ಚಿನ ಬೆಳಕಿನ ಮೊರೆ ಹೋಗ್ತಿದ್ದ. ಕೊನೆಗೂ ಒಂದು ಸಮಾಧಿ ಆಯ್ಕೆ ಮಾಡಿ ಯಾರೂ ಇರದಿದ್ದನ್ನು ಗಮನಿಸಿ ತನ್ನ ಆರನೇ ಬೆರಳಿನ ಒಂದು ತೊಟ್ಟು ರಕ್ತವನ್ನು ಸಮಾಧಿ ಮೇಲೆ ಚೆಲ್ಲಿ ದೆವ್ವದ ಆಗಮನಕೆ ಕಾದು ಕುಳಿತ.... ಆದ್ರೆ ಎಷ್ಟೊತ್ತಾದರೂ ಯಾವ ಸುಳಿವು ಇವನಿಗೆ ತೋರಿ ಬರಲಿಲ್ಲ್....

"ಇದೆಲ್ಲಾ...ಸುಳ್ಳು ಇರಬೇಕು....ಮೋಸ ಹೋಗ್ಬಿಟ್ಟೆ... ಅಂತ ಮನಸ್ಸಲ್ಲೆ ಅಂದುಕೊಳ್ಳುವಾಗ ದೂರದಿಂದ ಯಾರೋ ಕೂಗಿದ ಧ್ವನಿ ಕೇಳಿ ಬರುತ್ತೆ...
"ಇಷ್ಟೊತ್ತಲ್ಲಿ ಈ ಸ್ಮಶಾನದಲ್ಲಿ ಯಾರಿರಬಹುದು...? ಅದು ಹುಡುಗಿಯ ಧ್ವನಿ...ಮೋಹಿನಿ ಏನಾದ್ರು...? ಏನೇ ಆಗ್ಲಿ ನೋಡಿಯೇ ಬಿಡುವ ಅಂತಾ ಭಂಡ ಧೈರ್ಯ ಮಾಡಿ ಆ ಧ್ವನಿಯ ಜಾಡನ್ನೇ ಹಿಂಬಾಲಿಸಿದ..ದೂರದ ೨ಜೆ ಅಂತಾ ಬರೆದ ಒಂದು ಸಮಾಧಿ ಮೇಲೆ ಒಂದು ಹುಡುಗಿಯು ಶವವಾಗಿ ಬಿದಿದ್ದು ನೋಡಿ ನಿತಿನ್ ಹೆದರಿ ಅಲ್ಲಿಂದ ಓಡುವಾಗ ಮರದ ಗೆಲ್ಲೊಂದು ತಲೆಗೆ ತಾಗಿ ಪ್ರಜ್ನೆ ತಪ್ಪಿ ಬೀಳ್ತಾನೆ.

ಬೆಳಗೆದ್ದು ನೋಡಿದಾಗ ನಿತಿನ್ ತಾನು ಸ್ಮಶಾನದಲ್ಲಿ ಇದ್ದದನ್ನೂ ಗಮನಿಸಿ ರಾತ್ರಿ ನಡೆದಿದ್ದೆಲ್ಲಾ ಎಣಿಸಿ ಹೆದರಿ ಮನೆಗೆ ಹೋಗ್ತಾನೆ...ತಾನೊಂದು ಶವ ನೋಡಿದ್ದೇನೆಂದು ಯಾರ್ ಜೊತೆಯಾದ್ರು ಹೇಳಿದ್ರೆ ತನಗೆ ತೊಂದರೆ ಅಂತಾ ಮನೆಲಿ ಯಾರ್ ಜೊತೆನೂ ಹೇಳೋದಿಲ್ಲ...ಆದ್ರೆ ಆ ಘಟನೆ ಆದ ಮೇಲೆ ನಿತಿನ್ ವಿಚಿತ್ರವಾಗಿ ಆಡೊಕ್ ಶುರು ಮಾಡ್ತಾನೆ..ತಾನು ನೋಡಿದ ಆ ಹುಡುಗಿ ಶವವೂ ಕೆಲವೊಮ್ಮೆ ತನ್ನ ರೂಮಲ್ಲೆ ನೋಡಿದ ಹಾಗೆ ಬೆಚ್ಚಿ ಬೀಳೋ ವರ್ತನೆ ಮಾಡುತಿದ್ದ...

"ಯಾಕ್ ಹೀಗ್ ಆಡ್ತಿದ್ದೀಯಾ ? ನಿತಿನ್ ಏನಾಗಿದೆ ನಿಂಗೆ ?
ಅಂತಾ ಅಮ್ಮ ಎಷ್ಟೇ ಮಾತಾಡಿಸಿದ್ರು ಮಂಕು ಬಡಿದಾಗೆ ಇರುತಿದ್ದ.
ಕೊನೆಗೆ ಪಕ್ಕದ ಮನೆಯವರ ಸಲಹೆ ಮೇರೆಗೆ ನಿತಿನ್ ಅನ್ನು ಅದೇ ಊರಿನ ಪ್ರಕ್ಯಾತ ಸೈಕಾಲಾಜಿ ಸ್ಪಶಲಿಸ್ಟ್ ಡಾ.ರಾವ್ ಬಳಿ ಕೌನ್ಸೆಲಿಂಗ್ ಗೆ ಕರೆದುಕೊಂಡು ಹೋಗ್ತಾರೆ.

ಅಲ್ಲಿ ಡಾ.ರಾವ್ ನ ವಿದ್ಯೆ ಶಕ್ತಿಗೆನೋ ನಿತಿನ್ ನಡೆದ ಅಷ್ಟು ವಿಷಯವನ್ನು ಚಾಚು ತಪ್ಪದೇ ಒಪ್ಪಿಸ್ತಾನೆ.
"ಇಸ್ ಇಟ್....ನಿಜವಾಗಲೂ..? ಇದೆಲ್ಲಾ ನಡೆದಿತ್ತಾ. ಅಂತಾ ಪ್ರಶ್ನಿಸಿದ ಡಾಕ್ಟರ್ ಪ್ರಶ್ನೆಯಲ್ಲಿ ಸಂಶಯವೇ ಅಡಗಿತ್ತು.ಪರಿಶೀಲನೆಗಂತಾ ಡಾಕ್ಟರ್ ನಿತಿನ್ ಬಳಿ ಶವ ನೋಡಿದ ಜಾಗ ತೋರಿಸಿಲಿಕ್ಕೆ ಹೇಳ್ತಾರೆ.ಅದಕ್ಕೊಪ್ಪಿದ ನಿತಿನ್ ಗೆ ಆ ಜಾಗದ ಬಳಿ ಒಂದು ಶಾಕ್ ಕಾದಿರುತ್ತೆ ಅದೇನಂದ್ರೆ ನಿತಿನ್ ಆರಿಸಿಕೊಂಡ ಸಮಾಧಿಯಾಗಲಿ ಅವನ ರಕ್ತದ ಕಲೆಯಾಗಲಿ ಎಲ್ಲಾ ಇತ್ತು. ಅದ್ರೆ ಆಶ್ಚರ್ಯವೇನಂದ್ರೆ ನಿತಿನ ನೋಡಿದ ೨ಜೆ ಸಮಾಧಿಯಾಗಲಿ, ಹುಡುಗಿ ಶವ ,ರಕ್ತದ ಕುರುಹು ಏನು ಇರುವುದಿಲ್ಲ.

ಇದನ್ನೆಲ್ಲಾ ಗಮನಿಸಿದ ಡಾ.ರಾವ್ ನಿತಿನ್ ಅನ್ನು ಡೀಪ್ ಟೆಸ್ಟಿಂಗೆ ಅಳವಡಿಸಿ ನಡೆದ ಸಂಗತಿಯನ್ನು ಅವನ ಬಾಯಿಂದಲೇ ಕೇಳಬೇಕಂತಾ ಎಲ್ಲರಾ ಸಮ್ಮುಖದಲ್ಲಿ ವಿಚಾರಣೆ ನಡೆಸ್ತಾರೆ.

"ನಿತಿನ್ ಆ ದಿನ ಏನೆಲ್ಲಾ ನಡೆದಿದ್ ನನ್ ಜೊತೆ ಹೇಳಿದ್ಯೋ ಅದನ್ನೆಲ್ಲಾ ಇವರ ಮುಂದೆ ಹೇಳು ಎಂದು ಡಾಕ್ಟರ್ ಮಾತು ಪ್ರಾರಂಭಿಸಿದ
"ಯಸ್ ...ಡಾಕ್ಟರ್ ನಾನ್ ಆ ದಿನ ಆರ್ಟಿಕಲಲ್ಲಿ ಇದ್ದ ಹಾಗೆ ಸ್ಮಶಾನಕ್ಕೆ ಹೋಗಿ ಒಂದು ಸಮಾಧಿ ಆರಿಸಿ ಅದರ ಮೇಲೆ ರಕ್ತ ಚೆಲ್ಲಿ ಆತ್ಮದ ಆಗಮನಕ್ಕೆ ಕಾದು ಕುಳಿತೆ"
"ನಿತಿನ್ ಕಾದು ಕುಳಿತೆ ಅಂದ್ಯಲ್ಲಾ ಅಂದಾಜು ಒಂದು ಎಷ್ಟು ಹೊತ್ತು ಕೂತಿದ್ದೆ" ಡಾಕ್ಟರ್ ಮಧ್ಯೆ ಬಾಯಿ ಹಾಕಿದರು
"ಒಂದು ಹತ್ತು ನಿಮಿಷ ಇರಬಹುದು ಅದಾದ್ ಮೇಲೆ ದೂರದಿಂದ ಬಂದ ಶಬ್ಧದಿಂದ ಕೂತುಹಲವಾಗಿ ಹುಡುಕಿಕೊಂಡು ಹೋದೆ.ಅಲ್ಲಿ ಒಂದು ಹುಡುಗಿ ಶವವಾಗಿ ಬಿದ್ದಿದ್ಲು ಹೆದರಿ ಓಡುವಾಗ ಏನೋ ತಾಗಿ ಅಲ್ಲಿಯೇ ಬೀಳ್ತೆನೆ .."
ಮುಂದಿದೆಲ್ಲಾ ನಿಮಗೆ ಗೊತ್ತುಂಟಲಾ ಅಂತಾ ನಿತಿನ್ ಮಾತು ನಿಲ್ಲಿಸುತ್ತಾನೆ.

"ಯಸ್ ನಿತಿನ್ ನೀನ್ ಹೇಳಿದ್ದೆಲ್ಲಾ ನಿಜ ನೀನ್ ಸ್ಮಶಾನಕ್ಕೆ ಹೋಗಿದ್ದೇನೋ ನಿಜ, ಅಲ್ಲಿ ರಕ್ತ ಚೆಲ್ಲಿರೋದೆನೋ ನಿಜ ,ಆದ್ರೆ ಅದಾದ್ ಮೇಲೆ ನೀನ್ ನೋಡಿದ ಹುಡುಗಿ ಶವವಾಗಲಿ ೨ಜೆ ಸಮಾಧಿಯಾಗಲಿ ಎಲ್ಲಾ ಸುಳ್ಳು ಅದೆಲ್ಲಾ ನೋಡಿದ್ದು ನೀನ್ ನಿನ್ನ ಕನಸಲ್ಲಿ .ನೀನು ಎಲ್ಲಿ ಕೂತಿದ್ಯೋ ಅಲ್ಲೇ ನೀನು ನಿದ್ದೆಗ್ ಹೋಗಿದ್ದೆ' ಎಂದು ಡಾಕ್ಟರ್ ಗಂಭೀರವಾಗಿಯೇ ನುಡಿದರು..

"ಏನೂ...ಕನಸಾ...? ಒಳ್ಳೆ ಕಾಮಿಡಿ ಡಾಕ್ಟರ್ " ಎಂದು ನಗುತ್ತಲೇ ಉತ್ತರಿಸಿದ ನಿತಿನ್.
"ಯಸ್ ನಿತಿನ್ ಕನಸೇ...ನೀನ್ ನಂಬಲೇ ಬೇಕು ನಿನ್ನ ಖಾಯಿಲೆ ಏನ್ ಗೊತ್ತಾ ನಿನ್ನ ನಿದ್ದೆ.ನೀನ್ ಯಾವಾಗ ಆರಾಮಾಗಿ ಮಲಗ್ತಿಯೋ ಆವಾಗ ಬೀಳೊ ಕನಸು ನಿಜ ಅಂತಾ ಅನಿಸಲ್ಲಾ...ಅದೇ ಯಾವಾಗ ನೀನ್ ಅನ್ ಕಂಫರ್ಟೆಬಲ್ ಅಂದ್ರೆ ನೀನ್ ಸ್ಮಶಾನದಲ್ಲಿ ಮಲಗಿದ್ದೀಯಲಾ ಹಾಗೆ ಮಲಗಿದಾಗ ಬೀಳೋ ಕನಸು ನಿಜ ಅಂತಾ ಅನಿಸುತ್ತೆ. ಹಾಗೆ ಕಾಡೋಕೆ ಶುರು ಮಾಡುತ್ತೆ.." ಡಾಕ್ಟರ್ ಇಷ್ಟೆಲ್ಲಾ ಹೇಳಿದ ಮೇಲೆ ತನ್ನಾ ರಿಪೋರ್ಟ ಅನ್ನು ಮುಂದಿಟ್ಟ ಮೇಲೆ ನಿತಿನ್ ನಂಬಲೇ ಬೇಕಾದ ಸ್ಥಿತಿ ಬಂದೊದಗಿತು. ತನ್ನ ಈ ವಿಚಿತ್ರ ಖಾಯಿಲೆಯನ್ನು ನೆನೆದು ಮನದೊಳಗೆ ನಗಲಾರಂಬಿಸಿದ....
ಇದಾದ್ ಮೇಲೆ ಒಂದೆರಡು ದಿನ ನಿತಿನ್ ಆರಾಮಾಗೇ ಇದ್ದ, ತನ್ನ ಲೈಫಲ್ಲಿ ನಡೆದ ಘಟನೆಯನ್ನ ಕಥೆಯನ್ನಾಗಿ ಬರೆಯೋದಕ್ಕೆ ಪ್ರಾರಂಬಿಸಿದ...ತಾನು ಬರಿತಿದ್ದ ಕಥೆ ಪೂರ್ತಿಯಾದರೂ ತನ್ನ ಲೈಫಲ್ಲಿ ಆದ ಕಥೆ ಪೂರ್ತಿಯಾಗಲಿಲ್ಲ ಅಂತಾ ಗೊತ್ತಾಗಿದ್ದು. ನ್ಯೂಸ್ ಪೇಪರಲ್ಲಿ ಬಂದ ಹುಡುಗಿಯ ಫೋಟೋ ಅದು ಕಾಣೆಯಾಗಿದ್ದಾಳೆ ಅನ್ನೋ ಪ್ರಕಟಣೆ ಮೂಲಕ...ಅದಲ್ಲದೇ ಆ ಹುಡುಗಿ ಬೇರೆ ಯಾರು ಅಲ್ಲ ನಿತಿನ್ ಸ್ಮಶಾನದಲ್ಲಿ ಶವವಾಗಿ ನೋಡಿದ ಹುಡುಗಿ... ನೋಡಿದವನಿಗೆ ಒಂದು ಕ್ಷಣ ಇದೆಲ್ಲಾ ನಿಜವೋ..? ಸುಳ್ಳೋ..? ಅಂತಾ ಅನಿಸೋಕೆ ಶುರುವಾಯ್ತು.

ಸ್ಮಶಾನದಲ್ಲಿದ್ದಾಗ ಕನಸಲ್ಲಿ ನೋಡಿದ ಹುಡುಗಿ ನಿಜವಾಗಲೂ ಇರೋದಕ್ಕೆ ಸಾಧ್ಯನಾ...? ಇದೆಲ್ಲಾ ಏನು? ಅನ್ನೋ ಗೊಂದಲ ಕಾಡೋಕೆ ಶುರುವಾಯ್ತು. ತಡಮಾಡದೇ ಪ್ರಶ್ನೆಯ ದಾರಿಯ ಬಿಟ್ಟು, ಉತ್ತರದ ದಾರಿಯನ್ನು ಹುಡುಕೋಕೆ ಶುರು ಮಾಡಿದ. ಪ್ರಕಟಣೆ ಕೆಳಗೆ ಹಾಕಿದ ವಿಳಾಸವನ್ನು ಹುಡುಕಿಕೊಂಡು ಹೋದ.... ಅಲ್ಲಿ ಅವನಿಗೆ ಆ ಹುಡುಗಿಯ ಮನೆಯವರ ಭೇಟಿಯಾಯಿತು.

"ಅವಳು ನಮ್ಮ ಮಗಳು ಕಾಣೆಯಾಗಿ ಮೂರು ದಿನವಾಯ್ತು.ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ವಿ ಆದ್ರೆ ಯಾವ ಪ್ರಯೋಜನವೂ ಆಗಲಿಲ್ಲ ಅದಕ್ಕೆ ಪೇಪರಲ್ಲಿ ಪ್ರಕಟಣೆ ಹಾಕಿದ್ವಿ.." ಎಂದು ಕಣ್ಣೊರೆಸುತ್ತಾ ಹುಡುಗಿ ತಂದೆ ನುಡಿದರು..

"ಅಲ್ಲಾ ಸಾರ್ ಕಾಣೆಯಾದ ಹಿಂದಿನ ದಿನ ಏನಾದ್ರು ಹೇಳಿದ್ರಾ ನಿಮ್ಮ ಮಗಳು..? ಯಾವುದಾದರು ವಿಷ್ಯದ ಬಗ್ಗೆ" ಎಂದು ನಿತಿನ್ ಅನುಮಾಸ್ಪದವಾಗಿ ಕೇಳಿದ

"ಹಾ...ಒಂದು ಆರ್ಟಿಕಲ್ ಬಗ್ಗೆ ಮಾತಾಡ್ತಿದ್ಲು. ಯಾವದಂತಾ ಗೊತ್ತಿಲ್ಲ....ಅಂದಾಗೆ ಅವಳಿಗೂ ಕೂಡ ನಿಮ್ಮ ಹಾಗೆ ಆರು ಬೆರಳು"
ಅಂತಾ ನಿತಿನ್ ನ ಬೆರಳು ನೋಡುತ್ತಾ ಹೇಳಿದರು....

ನಿತಿನ್ ಗೆ ಈಗ ಕಾರಣದ ಮೂಲ ಗೊತ್ತಾಯ್ತು....ಅದು ಫೇಸ್ ಬುಕ್ ಪೇಜಲ್ಲಿ ಬಂದಿದ್ದ ಆರು ಬೆರಳಿನ ಆರ್ಟಿಕಲ್...ಅದನ್ನು ಯಾರು ಹಾಕಿರಬಹುದು ಎಂದು ಹುಡುಕೋಕೆ ಶುರು ಮಾಡಿದ .ಅದು ತನ್ನದೇ ಊರಿನ ಪೇಜ್ ಆಗಿದ್ದರಿಂದ ಈ ಊರಿನವರೇ ಹಾಕಿದ್ದು ಅನ್ನೋದು ಗೊತ್ತಾಯ್ತ್ ಬಿಟ್ರೆ ಯಾರು ಹಾಕಿದ್ದಂತ ಗೊತ್ತಾಗಲಿಲ್ಲ....

ಇಷ್ಟೆಲ್ಲಾ ಆ ಆರ್ಟಿಕಲ್ ಬರೆದವನ ಹಿಂದೆ ಬಿದ್ದಿದ್ದ ನಿತಿನ್ ಗೆ ತನ್ನ ಕನಸಿನ ಖಾಯಿಲೆ ಬಗ್ಗೆ ತಲೆನೆ ಕೆಡಿಸಿಕೊಂಡಿರಲಿಲ್ಲ.... ಡಾಕ್ಟರ್ ಹೇಳಿದ ಪ್ರಕಾರ ಆ ದಿನ ಹುಡುಗಿನ ಕಂಡಿದ್ದು ಕನಸಲ್ಲಿ..ಆದ್ರೆ ಆ ದಿನ ನಾನು ಹುಡುಗಿನ ಕಂಡಿದ್ದು ಕನಸಲ್ಲಿ ಅಲ್ಲ . ಹಾಗಾದ್ರೆ ಡಾಕ್ಟರ್ ಯಾಕೆ ಸುಳ್ಳು ಹೇಳಿದರು..? ಇದರೆಲ್ಲಾದರ ಹಿಂದೆ ಡಾಕ್ಟರ್ ನ ಕೈವಾಡ...?

ತಕ್ಷಣ ತಡಮಾಡದೇ ಸ್ಟೇಶನಲ್ಲಿ ಪೋಲಿಸ್ ಹತ್ತಿರ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ ಪೋಲಿಸ್ ಡಾಕ್ಟರ್ ನ್ನು ವಿಚಾರಣೆಗೆ ಅಳವಡಿಸಿದರು. ಅಲ್ಲಿ ಡಾಕ್ಟರ್ ನಡೆದಿದ್ದೆಲ್ಲಾ ಬಾಯಿಬಿಟ್ಟರು....
ಡಾ.ರಾವ್ ಅವನು ವಿದ್ಯಾವಂತನಾಗಿದ್ರು, ಮೂಡನಂಬಿಕೆಯ ದಾಸನಾಗಿದ್ದನು... ತನ್ನ ಎನೇ ಕೆಲಸವಾಗಬೇಕಿದ್ದರು ಮಂತ್ರವಾದಿಯ ಮೊರೆ ಹೋಗ್ತಿದ್ದ....

"ನೀನು ಹೋದ ಜನ್ಮದಲ್ಲಿ ಮಾಡಿದ ಪಾಪದಿಂದ ನಿನಗೆ ಈ ಜನ್ಮದಲ್ಲಿ ಗಂಡಾಂತರ ಇದೆ....
ಕೆಲವು ಸಾವು ನೋವಿಗೆ ನೀ ಕಾರಣವಾದದ್ದರಿಂದ ಅವರ ಶಾಪವು ನಿಂಗೆ ಕಾಡೋಕ್ ಶುರುವಾಗುತ್ತೆ.. ಆದಷ್ಟು ಬೇಗ
ಎಂದು ಮಂತ್ರವಾದಿಯು ಡಾ.ರಾವ್ ಬಳಿ ಹೇಳಿದರು.
ಇದಕ್ಕೇನು ಪರಿಹಾರವಿಲ್ಲವೇನು ಎಂದು ಡಾ. ಕೇಳಿದಾಗ..

" ಆರು ಬೆರಳಿರುವ ಒಬ್ಬ ವ್ಯಕ್ತಿಯನ್ನು ಸ್ಮಶಾನದಲ್ಲಿ ಒಂದು ಸಮಾಧಿ ಬಳಿ ಬಲಿ ಕೊಟ್ಟರೆ ಸರಿಯಾಗುತ್ತೆ
ಎಂದು ಮಂತ್ರವಾದಿ ಸಲಹೆ ಕೊಟ್ಟಿದ್ದ....

ರಾವ್ ಪ್ರಸಿದ್ಧ ಡಾಕ್ಟರ್ ಆಗಿದ್ದು, ತನ್ನ ಹಾಸ್ಪಿಟಲ್ ಅಲ್ಲಿ ರಿಜಿಸ್ಟರ್ ಆಗಿದ್ದ ರೋಗಿಗಳ ದಾಖಲಾತಿಯನ್ನು ಪರಿಶಿಲಿಸುತ್ತಾನೆ.ಆದ್ರೆ ಯಾವ
ಪ್ರಯೋಜನವಾಗುವುದಿಲ್ಲ.ಕೊನೆಗೆ ಒಂದು ಆರ್ಟಿಕಲ್ ಬರೆದು ಫೇಸ್ ಬುಕ್ ನ ತನ್ನೂರಿನ ಪೇಜ್ ಗೆ ಪೋಸ್ಟ್ ಮಾಡ್ತಾನೆ. ಯಾರಾದ್ರು ಇದ್ದವರು ಸ್ಮಶಾನಕ್ಕೆ ಬಂದೆ ಬರ್ತಾರೆನ್ನೋ ನಂಬಿಕೆ ಅವನಿಗಿತ್ತು. ಅದರ ಮರುದಿನದ ರಾತ್ರಿಯೇ ಮುಂಚೆನೆ ಸ್ಮಶಾನಕ್ಕೆ ಹೋಗಿ ದೂರದ ಒಂದು ೨ಜೆ ಎಂದು ಬರೆದಿರುವ ಸಮಾಧಿ ಬಳಿ ಬಲಿ ಕೊಡಲು ವ್ಯವಸ್ಥೆ ಮಾಡುತ್ತಾನೆ.

ಮಧ್ಯರಾತ್ರಿಯ ನಂತರ ಅಲ್ಲೇ ಅಡಗಿ ಕುಳಿತು ಆರು ಬೆರಳಿರುವ ಮನುಷ್ಯರ ಬರುವಿಕೆ ಕಾದು ಕುಳಿತಿರ್ತಾನೆ...
ಅದೇ ಸಮಯಕ್ಕೆ ಆ ಹುಡುಗಿ ಬರ್ತಾಳೆ, ಡಾ. ಹಿಂದಿಂದ ತಲೆಗೆ ಬಲವಾಗಿ ಹೊಡೆದು ಸಾಯಿಸಿ ಆ ಸಮಾಧಿಗೆ ರಕ್ತಾಭಿಷೇಕ ಮಾಡ್ತಾನೆ.... ನಂತರ ಶವವನ್ನು ಅಲ್ಲಿಯೇ ಬಿಟ್ಟು ದೂರದಲಿ ನಿಂತಿದ್ದ ತನ್ನ ಸಹಚರರನ್ನು ಕರೆಯಲು ಹೋಗ್ತಾನೆ..
ಇದೇ ಸಮಯಕ್ಕೆ ದೂರದಲ್ಲಿದ್ದಾ ನಿತಿನ್ ಹುಡಿಗಿಯ ಧ್ವನಿ ಕೇಳಿ ಬಳಿ ಬಂದು ಹುಡುಗಿಯ ಶವ ನೋಡಿ ಹೆದರಿ ಓಡುವಾಗ ತಲೆಗೆನೋ ತಾಗಿ ಅಲ್ಲಿಯೇ ಬಿದ್ದು ಬಿಡ್ತಾನೆ... ಆದರೆ ಇದ್ಯಾವುದು ಡಾಕ್ಟರ್ ಗಮನಕ್ಕೆ ಬಂದಿರುವಿದಿಲ್ಲ....

ತದನಂತರ ಹುಡುಗಿಯ ಶವವನ್ನು ಮಣ್ಣು ಮಾಡಿ.. ಸಹಚರರ ಸಹಾಯದಿಂದ ಆ ೨ಜೆ ಸಮಾಧಿಯನ್ನು ಕೂಡ ಒಡೆದು ಅದು ಇಲ್ಲದಾಗೆ ಮಾಡ್ತಾರೆ...
ಎಲ್ಲ ಸರಿಯಾಯ್ತು ಯಾರಿಗೂ ಗೊತ್ತಾಗಲಿಲ್ಲ ಎಂದು ಡಾಕ್ಟರ್ ನಿಟ್ಟಿಸಿರು ಬಿಡುವಾಗಲೇ... ಎರಡು ದಿನದ ನಂತರ ನಿತಿನ್ ನ ವರ್ತನೆಯಿಂದ ಬೇಸತ್ತು ಅವರ ಅಮ್ಮ ಕೌನ್ಸೆಲಿಂಗ್ ಗೆ ಅದೇ ಡಾಕ್ಟರ್ ಬಳಿ ಕರೆದುಕೊಂಡು ಬರ್ತಾರೆ. ಆವಾಗ ನಿತಿನ್ ಡಾಕ್ಟರ್ ಮಾಡಿದಾ ಕ್ರತ್ಯವನ್ನೇ ಡಾಕ್ಟರ್ ಬಳಿ ಹೇಳಿದಾಗ. ಇವನನ್ನು ಬಿಟ್ಟರೇ ನನ್ನ ತಲೆಗೆ ತರಬಹುದು ಎಂದು ಭಾವಿಸಿ ನಿತಿನ್ ನೋಡಿದ್ದೆಲ್ಲಾ ನಿಜವಾಗಿ ಅಲ್ಲ ..ಕನಸಲ್ಲಿ ಅಂತಾ ಸುಳ್ಳು ಸರ್ಟಿಫಿಕೇಟ್ ರೆಡಿ ಮಾಡಿ ತನ್ನ ಹೀನ ಕ್ರತ್ಯವನ್ನು ನೆಲಸಮ ಮಾಡುವಂತೆ ಮಾಡ್ತಾನೆ. ಆದರೆ ಮಾಡಿದ ಪಾಪ ಒಂದಲ್ಲಾ ಒಂದು ದಿನಾ ಬೇರೆ ರೂಪದಲ್ಲಿ ಗೊತ್ತಾಗೇ ಆಗುತ್ತೆ ಅನ್ನೋದು ಇದರಿಂದ ತಿಳಿಬೇಕು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.