ಸವಿ ದಿನ..

ಅದೊಂದು ಸುದಿನ,
ಆಯಿತು ಮನಸುಗಳ ಮಿಲನ..

ಎನ್ನರಸನಾದೆ ನೀ,
ನಿನ್ನರಿಸಿಯಾದೆ ನಾ,
ಕಾಡಿದೆ ನೆನಪಲ್ಲಿ ನೀ,
ನೊಂದೆ ವಿರಹದಲ್ಲಿ ನಾ...

ಕರೆದೆ ಬಾ ಎಂದು ಕರುವಿನ ಹಾಗೆ,
ಸೇರಲು ನಿನ್ನ ಮಡಿಲ ನದಿಯ ಹಾಗೆ,
ಇನ್ನೆಷ್ಟು ದಿನ ಇರುವುದು ಹೀಗೆ?
ಸಹಿಸಲಾರೆ ಈ ವಿರಹದ ಬೇಗೆ...

ನೀ ನನಗೆ ದೇವರು ನೀಡಿದ ವರ,
ಆಗುವೆ ನೀ ಈ ವಧುವಿಗೆ ವರ,
ನೀನಿಲ್ಲದೆ ನನ್ನ ಬಾಳು ನಶ್ವರ,
ನಮ್ಮ ಪ್ರೀತಿ ಬಹು ಸುಂದರ,
ಮಧುರ, ಎಂದೆಂದಿಗೂ ಅಮರ...

-ನೈದಿಲೆ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.