ಬಿಂಕದ ಹೆಜ್ಜೆಯ ಹೆಣ್ಣು ಕೆರೆಯೆಂದ
ನೀರು ತರುತಿರಲು ಕೇಳಿದೆನು ನೀರು ಬೇಕೆಂದು
ಸ್ವಲ್ಪವೇಕೆ, ಕೊಡದ ನೀರೆಲ್ಲಾ ನಿನಗೆ
ಹೇಳುತಾ ನಕ್ಕಳಾ ಜಾಣೆ.


ಜಾತ್ರೆಯ ದಿನದಂದು
ತೇರಿನಾ ಬಳಿ ಬಂದು
ತೂರಿದಳು ಹೂವೊಂದು ನನ್ನ ಮೇಲೆ
ಹೇಳಿದಳು ಈ ಹೂವು ನಿನ್ನದೇನೆ.

ನನ್ನುನ್ನು ಕಂಡಾಗ ಕಣ್ಣಲ್ಲಿ ಮಿಂಚಾಡಿ
ಲಜ್ಜೆಯೆಂದ ವದನ ಕೆಂಪೇರಿದವಳ ಕಂಡು
ನಾ ಒಲವ ಬೇಡಿದಾಗ
ಮನವ ಕದ್ದು ಒಲವ ಬೇಡುವುದೇ
ನುಡಿದಳವಳು ನಾಚಿ.


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.