ಮತ್ತೆ ಅರಳಿತು ಕನಸು.....!!

ಬಾರದೇ ಇರುವ ಮನಸ್ಸಿಗೆ , ಬಂದಿರುವ ಅವಕಾಶವನ್ನು ಕಂಡು ಬರಲೇಬೇಕೆಂಬ ಹಂಬಲ. ಇನ್ನೇನು ಕನಸು ಮುರದೇ ಹೋಯಿತು ಅನ್ನುವಷ್ಟರಲ್ಲಿ ಒಂದು ಹೊಸ ಆಶಾಕಿರಣ ಮುಡಿತು .ಮನದಲ್ಲಿ ಮತ್ತೆ ಹೊಸ -ಹೊಸ ಆಶಯಗಳು ಚಿಗುರಿದವು.

ಕಳೆದು ಹೋದ ಸಮಯ ನೆನಸಿಕೊಳ್ಳಬಾರದೆಂದು ಎಷ್ಟೋ...!! ಪರಿಶ್ರಮ ಮಾಡಿದೆವು. ಆದರೂ, ಜೀವನದಿಂದ ಮತ್ತೆ ಹೊಸ ಪರಿಚಯದಿಂದಾಗಿ ನನಗೆ ತುಂಬಾನೆ ಸಂತೋಷವಾಯಿತು. ಆ ಖುಷಿಯಿಂದಲೇ ನನಗೆ ಹೊಸ ಜೀವನ ಸಿಕ್ಕಂತಾಗಿದೆ. ಇನ್ನೇನು ನನ್ನ ಕನಸನ್ನು ಹಿಡಿಯುವವರು ಯಾರು ಇಲ್ಲಾ ಅಂಥಾ ಗೊತ್ತಾದ ಮೇಲೆ ಜೀವನಕ್ಕೊಂದು ಬೆಳಕು ಸಿಕ್ಕಂತಾಯಿತು.

ಆ ಬೆಳಕು ನನ್ನ ಜೀವನದಲ್ಲಿ ತುಂಬಾನೇ ಮುಖ್ಯವಾಗಿ ಪರಿಣಮಿಸುತ್ತದೆ. ಒಂದು ಹೆಣ್ಣು ತಾನು ತಾಯಿ ಆಗುವ ಮುನ್ನ ತನ್ನ ಜೀವನದಲ್ಲಿ ಏನೆಲ್ಲಾ ಮಾಡಬೇಕೆಂದು ಕನಸನ್ನು ಇಟ್ಟುಕೊಂಡಿರುತ್ತಾಳೆ.ಆದರೆ, ಮನೆಯವರು ಆ ಹೆಣ್ಣಿನ ಆಸೆಯನ್ನು ತಿಳಿಯದೆ ಮದುವೆ ಮಾಡಿ ಕಳಿಸಿಕೊಡುತ್ತಾರೆ. ಮದುವೆಯಾದ ಮೇಲೆ ಯಾವ ಕೆಲಸವು ಸಾಧ್ಯವಾಗುದೆ ಇಲ್ಲಾ. ಅವಳ ಪೂರ್ತಿ ಜೀವನ ತನ್ನ ಫ್ಯಾಮಿಲಿಗೆ ಅಂಥಾ ಮಿಸಲಿಡುತ್ತಾಳೆ. ಅವರ ದುಃಖವನ್ನು ಅರ್ಧ ಗೊತ್ತಾಳಿಸುತ್ತಾಳೆ. ಎಲ್ಲರಿಗೂ ಖುಷಿಯನ್ನು ಹಂಚುತ್ತಾ ಅದರಲ್ಲಿಯೇ ತನ್ನ ಖುಷಿಯನ್ನು ಹುಡುಕುತ್ತಾಳೆ.

ಹೆಣ್ಣು ನಿಜವಾಗ್ಲೂ ಗೆಲ್ಲುವುದು ಒಂದು ತಾಯಿಯಾದಾಗ. ಆಗ ಆಕೇಗೆ ತನ್ನ ಬಾಲ್ಯದಲ್ಲಿ ಏನೆಲ್ಲಾ ಮಾಡಬೇಕೆಂದು ಕನಸನ್ನು ಇಟ್ಟು ಕೊಂಡಿರುತ್ತಾಳೆ, ಅದೆಲ್ಲಾ ಪೂರ್ತಿಮಾಡುವ ಒಂದು ಇಚ್ಛೆ ಮನೆಮಾಡುತ್ತದೆ. ಅದಕ್ಕಾಗಿ ದೇವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯೇ ಅನ್ನಿಸುತ್ತದೆ. ತಾಯಿಯಾಗುವ ಆ ಖುಷಿಯಲ್ಲಿ ತನ್ನ ದುಃಖಕ್ಕೆ ಕೊನೆ ಕಾಣುತ್ತಾಳೆ.

ತನ್ನ ಆಸೆಯನ್ನು ಈಡೇರಿಸುವ ಇನ್ನೊಂದು ಚಾನ್ಸ್ ಸಿಕ್ಕದಕ್ಕೆ ಸಂತಸ ಪಡುತ್ತಾಳೆ. ಅದರ ಜೊತೆಗೆ ಅವಳಿಗೆ ಹೆಚ್ಚಿನ ಜವಾಬ್ದಾರಿ ಕೂಡ ಸಿಗುತ್ತದೆ. ಅದರಿಂದ ಅವಳು ಎಷ್ಟೇ ಓಡತೊಡಗಿದರು ಅದು ಅವಳಿಂದ ಸಾದ್ಯವಾಗುದಿಲ್ಲಾ. ತನ್ನ ಕನಸು ಪೂರ್ತಿಯಾಗುವಷ್ಟರಲ್ಲಿ, ತಾನು ಪಟ್ಟ ಪರಿಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಚಂದ್ರನನ್ನು ಕೈಯಲ್ಲಿ ಹಿಡಿದಷ್ಟು ಆನಂದ -ಉಲ್ಲಾಸ ಮನೆ ಮಾಡುತ್ತದೆ. ಮನಸ್ಸಿಗೆ ಹಿಡಿಯಲಾರದಷ್ಟು ಜೀವನದಲ್ಲಿ ಉತ್ಸಾಹ ತುಂಬುತ್ತದೆ. ಸಂತೋಷದ ಕಂಬನಿಗೆ ಕೊನೆ ಇಲ್ಲಂತಾಗುತ್ತದೆ. ಉಸಿರಿಗೆ ಉಸಿರೆ ಸಿಗುವಂತ ಆ ಅನುಭವ ಜೀವನದ ಅತ್ಯಂತ ಮುದ್ದಾದ ಕ್ಷಣವಾಗುತ್ತದೆ......!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.