ಗೆಳೆಯನ ನೆನಪು

ದಿಕ್ಕು ದಿಕ್ಕುಗಳಲ್ಲಿ ಜನ್ಮ ಪಡೆದು , ಎಲ್ಲೋ ಒಂದು ಕಡೆ ತಿಳಿಯದೆ ಒಂದು ಗೂಡಿ ಜೊತೆಯಾಗುವುದೇ ಸ್ನೇಹ . ಕಂಬನಿಯ ಒರೆಸಿ , ಕನಸ್ಸಿನಲ್ಲೂ ಕಾಡಿ, ನಗುವಿನಲ್ಲೂ ಜೊತೆಯಾಗಿ , ದುಃಖ್ಖದಲ್ಲಿ ಬೆನ್ನೆಲುಬಾಗಿ ನಿಲ್ಲುವನೇ ಸ್ನೇಹಿತ.

【1】ಸ್ನೇಹಿತನ ಆಗಮನ :- ೧೯೯೭ ಆಗ ತಾನೆ ನಂಗೆ ಒಂದು ವರ್ಷ ತುಂಬುತ್ತಾ ಇತ್ತು, ನಮ್ಮ ಪಕ್ಕದ ಮನೆಯಲ್ಲಿ ನನ್ನ ವಯ್ಯಸ್ಸಿನ ಮಗುವಿತ್ತಂತೆ . ಆ ಮಗು ನಾನು ಸೇರಿ ಮನೆಯ ಮೂಲೆ ಮೊಲೆಯಲ್ಲಿ ಆಟವಾಡುತ್ತಿದ್ದವಂತೆ . ಮಾತೆ ಬರದ ನಾವು ಒಟ್ಟಿಗೆ ನಗುತ್ತಾ , ಅಳುತ್ತಾ , ಆಟಾಡ್ತ ಇದ್ವಿ , ಹೀಗೆ ನಮಗೆ ತಿಳಿಯದೆ ನಮ್ಮ ಮದ್ಯ ಸ್ನೇಹ ಹುಟ್ಟಿತ್ತು , ಹೀಗೆ ನನಗೆ ಗೊತ್ತಿಲ್ದೆ ನನ್ನ ಜೀವನದಲ್ಲಿ ಒಬ್ಬ ಸ್ನೇಹಿತನ ಆಗಮನವಾಗಿತ್ತು . ಹೀಗೆ ಪ್ರಾರಂಭವಾದ ಸ್ನೇಹಿತರ ಸರಪಳಿ ಹೆಚ್ಚಾಗುತ್ತಾ ಬಂತು.

【2】ಸ್ನೇಹಿತನ ನಿರ್ಗಮನ :- ಆಗ ಬೇಸಗೆ ಕಾಲ ಶಾಲೆಗಳಲ್ಲಿ ರಜೆ , ಪ್ರತಿದಿನ ಮುಂಜಾನೆ ತುಂಗಾ ನದಿಯಲ್ಲಿ ಕ್ರಿಕೆಟ್ ಆಡೋದು ಒಂದಿನ ತಪ್ತಿರಲಿಲ್ಲ . ಬೇಸಗೆ ಆದ್ದರಿಂದ ಹೊಳೆಯಲ್ಲಿ ನೀರು ಅಷ್ಟೊಂದು ಇರ್ಲಿಲ್ಲ. ಸ್ನೇಹಿತರು ಎಲ್ಲಾರು ಕ್ರಿಕೆಟ್ ಆಡಿ ನದಿಯಲ್ಲಿ ಸ್ನಾನ ಮಾಡಿಕೊಂಡ್ಡೆ ಮನೆಗೆ ಹೋಗ್ತಾ ಇದ್ದಿದ್ದು. ಮುಂಜಾನೆ ತಂಪಲ್ಲಿ ಹೊಳೆಯಲ್ಲಿ ಕ್ರಿಕೆಟ್ ಆಡೋ ಮಜಾನೇ ಬೇರೆ. ಹೊಳೆಯಲ್ಲಿ ಆ ಕಡೆ ದಡದ ಹುಡುಗರು ಗುಂಪು ಹೊಳೆ ದಾಟಿಕೊಂಡ್ಡು ನಮ್ಮ ವಿರುದ್ಧ ಕ್ರಿಕೆಟ್ ಆಡಲು ಬರತ್ತಿದ್ದರು. ಪ್ರತಿದಿನ ಹಣಾಹಣಿ ಜಿದ್ದಿ ನಡಿಯುತ್ತಲೇ ಇರ್ತಿತ್ತು , ಒಂದಿನ ಬಿರುಗಾಳಿ , ಅಕಾಲಿಕ ಮಳೆ ಆಟಕ್ಕೆ ಅಡ್ಡಿ ಪಡಿಸಿತ್ತು , ಮಳೆ ಬಂದಿದ್ದ ತಡ , ಎಲ್ಲಾ ಹುಡುಗರು ಸೂರು ಹುಡಿಕಿಕೊಂಡು ಕಕ್ಕ ಬಿಕ್ಕ್ಕಿಯಾಗಿ ಓಡಿದೆವು. ಒಬ್ಬ ಪ್ರಾಣ ಸ್ನೇಹಿತ ರಾಮು ಅಂತ ಅವನ ಮನೆ ತುಂಗಾ ನದಿಯ ದಂಡೆಯ ಮೇಲೆ ಇತ್ತು. ತಂದೆಗೆ ಅನಾರೋಗ್ಯದ ಕಾರಣದಿಂದಾಗಿ ಒಂದು ವಾರದಿಂದ ರಾಮು ಕ್ರಿಕೆಟ್ ಆಡಲು ಬಂದಿರಲಿಲ್ಲ .ದಡದಲ್ಲಿ ಅವನ ಮನೆ ಇದ್ದುದ್ದರಿಂದ ನಾವೊಂದು ನಾಲ್ಕು ಜನ ಅವರ ಮನೆ ಹೊಕ್ಕಿದೆವು . ರಾಮು ಮನೆಗೆ ಹೋದ ನಮಗೆ ಒಂದು ಅಚ್ಚರಿ ಕಾದಿತ್ತು . ಅದು ರಾಮು ತಂದೆ ಚಿರನಿದ್ರೆಗೆ ಜಾರಿದ್ದರು , ತಾಯಿ ನೊಂದುಕೊಂಡ್ಡು ಮೌನಕ್ಕೆ ಶರಣರಾಗಿದ್ದರು , ರಾಮು ಬಿಕ್ಕಿ ಬಿಕ್ಕಿ ಅಳುತ್ತಿದ್ದನು . ಇದನ್ನು ಕಂಡ ನಾವು ಒಂದು ಕ್ಷಣ ಕಣ್ಣು ಒದ್ದೆಯಾಯಿತು . ರಾಮುಗೆ ಸಮಾದಾನ ಮಾತುಗಳನ್ನಾಡಿ ನಾವು ಮಳೆಯಲ್ಲಿ ಮನೆ ಸೇರಿದೆವು . ಮುಂದೆ ಎರಡು ದಿನಗಳ ಬಳಿಕ ಸ್ನೇಹಿತರು ಎಲ್ಲಾ ಸೇರಿ ಅವನ್ನನು ಬೇಟಿಯಾದೆವು , ಅವನ್ನೂಳೆಗೆ ದುಃಖ್ಖ , ನೋವುಗಳು ಬಿಟ್ಟರೆ ಬೇರೇನೂ ಕಾಣಲಿಲ್ಲ. ರಾಮು ಮನಸ್ಸು ಹಗುರವಾಗಲಿ ಎಂದು ಅವನ ಜೊತೆ ಸ್ನೇಹಿತರು ಎಲ್ಲಾ ಸೇರಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದವು. ಹೀಗೆ ಒಂದು ವಾರ ಕಳೆಯಿತು. ತಂದೆ ತೀರು ಹೋಗಿ ೧೧ನೇ ದಿನಕ್ಕೆ ತಿಥಿ ಕಾರ್ಯವನ್ನು ಇಟ್ಟಿಕೊಂಡ್ಡಿದರು .ನಾಳೆ ಬೆಳಗ್ಗೆ ೮ ಗಂಟೆ ಸರಿಯಾಗಿ ಬನ್ನಿ ಎಂದು ನಮ್ಮೆಲ್ಲಾ ಸ್ನೇಹಿತರ ಗುಂಪಿಗೆ ಹೇಳಿದನು. ಹನ್ನೊಂದನೇ ದಿನ ನಾನು ಎದ್ದಾಗ ಸಮಯ ೧೧:೨೦ ಆಗಿತ್ತು .ರಾಮು ಪೂಜೆ ಇದೆ ಎಂದು ಹೇಳಿದ್ದು ನೆನಪುಯಾಯಿತು . ವಾಸುಕಿ ಎಂಬ ಜೀವದ ಗೆಳಯ ಓಡಿ ಬಂದ ಮನೆಗೆ , ಆಗ ನಾನು ಸ್ನಾನ ಮಾಡುತ್ತಿದ್ದೆ . ಅವನು ಮಾತು ಕೇಳಿ ಎದೆ ಓಡಿದು ಹೋಯಿತು. ಅದು ಏನೆಂದರೆ ಕಾರ್ಯದ ಬಳಿಕ ತಂದೆಯ ಕೆಲವು ಪೂಜಾ ಸಾಮಗ್ರಿಗಳನ್ನು ಮೂರು ಬಾರಿ ನೀರಿನಲ್ಲಿ ಮುಳುಗಿ ತೇಲಿ ಬಿಡಲು ಅರ್ಚಕರು ತಿಳಿಸಿದರು. ಅದಕ್ಕೆ ತೆರಳಿದ ರಾಮು ಒಂದು ಹಾಗೂ ಎರಡು ಸರಿ ಮುಳುಗಿ ಎದ್ದನು , ಮೂರನೇ ಬಾರಿ ಮುಳಿಗಿದ ರಾಮು ಮತ್ತೆ ಏಳಲೇ ಇಲ್ಲ ಎಂದು ವಾಸುಕಿ ಹೇಳಿದನು. ಆನಂತರ ವಾಸುಕಿ ಜೊತೆ ಹೊಳೆಗೆ ಹೋದೆನು , ನದಿಯಲ್ಲಿ ರಾಮುಗಾಗಿ ಹುಡುಕಾಟ ಜೋರು ಇತ್ತು. ಒಂದೆಡೆ ಪತಿ ಸಾವಿನಿಂದ ನೊಂದಿದ್ದ ರಾಮುವಿನ ತಾಯಿ , ಮಗನಿಗೆ ಏನಾಯ್ತು ದುಃಖ್ಖದಲ್ಲಿ ಮೌನಕ್ಕೆ ಜಾರಿದ್ದರು . ನಾವೆಲ್ಲರೂ ಸ್ನೇಹಿತರು ಏನು ಮಾಡಬೇಕು ತಿಳಿಯದೇ ಹುಚ್ಚರಾಗಿದ್ದೆವು . ಮುಂದೆ ಬೆಕ್ಕಿನ ಕಲ್ಮಠದ ಬಳಿ ರಾಮು ಶವವಾಗಿ ದೊರಕಿದನು ಎಂಬ ಸುದ್ಧಿ ಕೇಳಿದ್ದೇ ತಡ , ರಾಮುವಿನ ತಾಯಿ ಮೂರ್ಛೆ ಬಿದ್ದರು , ನಾವೆಲ್ಲ ಕಣ್ಣುವದ್ದೆ ಮಾಡಿಕೊಂಡು ಕಿರುಚಿದೆವು . ಹೀಗೆ ನನ್ನ ಪ್ರಾಣ ಸ್ನೇಹಿತನ ಪ್ರಾಣ ಈ ರೀತಿ ಹೋಗುವುದು ಎಂದು ಕಣ್ಣುಮನ್ಸಲ್ಲೂ ಯೋಚಿಸಿರಲಿಲ್ಲ . 5 ವರ್ಷಗಳ ಹಿಂದೆ ನಡೆದ ಘಟನೆ ಈಗಲೂ ಕಾಡುವುದು . ಇದಕ್ಕೆ ಕಾರಣ ಯಾವ ರಕ್ತ ಸಂಬಂಧವು ಅಲ್ಲ ಅದಕ್ಕಿಂಥ ಮೀರಿದ ಬಂಧವಿದು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.