ತಾಯಿಯೇ ದೇವರು

【ಒಂದು ರೈಲಿನಲ್ಲಿ ತಂದೆ ಹಾಗೂ ಮಗಳು ಶಿವಮೊಗ್ಗ ದಿಂದ ಮೈಸೂರಿನ ಕಡೆಗೆ ಪ್ರಯಾಣ ಮಾಡುತ್ತಿರುವಗ ನಡೆಯುವ ಸಂಭಾಷಣೆ】
ಶಿವ ಎಂಬ ಮಧ್ಯಮ ವರ್ಗದ ಉದ್ಯಮಿ ಹಾಗೂ ಅವನ 10ನೇ ವಯಸ್ಸಿನ ಮಗಳು ಚಿತ್ರಾ ದಸರಾ ರಜೆ ಎಂದು ಮೈಸೂರಿಗೆ ಇಬ್ಬರು ಪ್ರಯಾಣ ಬೆಳಸಿದರು. ಮುಂಜಾನೆ ಚಿತ್ರಾಳಾ ತಾಯಿ ಇಡ್ಲಿಯನ್ನು ಮಾಡಿ ಡಬ್ಬಿಯಲ್ಲಿ ಹಾಕಿ ಕಳಿಸಿದ್ದರು. ತಂದೆ ಶಿವ ಹಾಗೂ ಮಗಳು ಚಿತ್ರಾ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಮುಂಜಾನೆ ರೈಲು ಹೊರಡುವ ಒಂದು ತಾಸು ಮುನ್ನವೇ ಬಂದು ಕುಳಿತಿದ್ದರು. ಆಗ ಚಿತ್ರ ತಂದೆ ಶಿವನಿಗೆ ಒಂದು ಪ್ರಶ್ನೆ ಕೇಳಿದಳು. ಅದು ಏನೆಂದರೆ ಅಪ್ಪ ನಿಮ್ಮ ತಂದೆ - ತಾಯಿ ಯಾರು?, ಅವರು ಎಲ್ಲಿದ್ದಾರೆ?, ಏನು ಮಾಡುತ್ತಿರುವರು? ಎಂದು ಕೇಳುವಳು. ಆಗ ಶಿವನು ಮೊದಲು ನನ್ನ ತಾಯಿ ಬಗ್ಗೆ ತಿಳಿಸುವೆನು ನಂತರ ತನ್ನ ತಂದೆ ಬಗ್ಗೆ ನಿನಗೆ ತಿಳಿಯುವುದು ಎಂದು ಉತ್ತರಿಸುವನು.

ಒಂದು ತುಂಬಿದ ಕುಟುಂಬದಲ್ಲಿ ತನ್ನ ತಾಯಿಯ ಜನನವಾಯಿತು, ತನ್ನ ತಾಯಿಗೆ ಕಷ್ಟವೆ0ದರೆ ಏನೆಂದು ತಿಳಿದಿರಲಿಲ್ಲ, ಅಷ್ಟು ಸುಖವಾಗಿ ಬೆಳೆದಿದ್ದರು. ಹೀಗೆ ಎಲ್ಲಾ ಹೆಣ್ಣು ಮಕ್ಕಳಂತೆ ತನ್ನ ತಾಯಿಗೂ ಹಲವಾರು ಕನಸ್ಸುಗಳಿದ್ದವು. ಮುಂದೆ ಕಾಲ ಕಳೆದಂತೆ ತನ್ನ ತಾಯಿಗೆ ವಿವಾಹ ನಿಶ್ಚಯವಾಯಿತು. ತಾಯಿಗೆ ವಿವಾಹವಾಗಿ ಒಂದು ವರ್ಷಕ್ಕೆ ಒಂದು ಹೆಣ್ಣು ಮಗು ಜನನವಾಯಿತು. ಹೆಣ್ಣು ಮಗಳ ಜನನ ಎರಡೂ ಕುಟುಂಬದ ಸಂತಸಕ್ಕೆ ಕಾರಣವಾಗಿತ್ತು. ಹೀಗೆ ತನ್ನ ತಾಯಿಯ ಜೀವನ ಮದುವೆಯಾಗಿ ಸಂತೋಷದಿಂದ ಸಾಗುತ್ತಿತ್ತು ಎಂದು ಶಿವ ತನ್ನ ಮಗಳು ಚಿತ್ರಾಳಿಗೆ ಹೇಳುವನು. ಮುಂದೆ ಮೈಸೂರಿಗೆ ಹೊರಡುವ ರೈಲು ಸಮಯಕ್ಕೆ ಹತ್ತು ನಿಮಿಷ ತಡವಾಗಿ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬಂದು ಸೇರಿತು. ಶಿವ ತನ್ನ ಮಗಳಿಗೆ ರೈಲಿನಲ್ಲಿ ಕುಳಿತು ತನ್ನ ತಾಯಿಯ ಕಥೆಯನ್ನು ಮುಂದುವರಿಸುವೆನು ಎಂದು ಹೇಳಿ ಹೇಳುವನು.

ಶಿವ ಹಾಗೂ ಮಗಳು ಚಿತ್ರಾ ರೈಲಿನ ಕಿಟಕಿಯ ಬದಿಯಲ್ಲಿ ಕುಳಿತರು. ಚಿತ್ರಾ ಮೊದಲ ಬಾರಿ ರೈಲಿನಲ್ಲಿ ಪ್ರಯಾಣಸುತ್ತಿರುವ ಕಾರಣ ಎಲ್ಲಿಲ್ಲದ ಸಂತೋಷ ಹಾಗೂ ಕುತೂಹಲ. ರೈಲು ಮುಂಜಾನೆ 6ಕ್ಕೆ ಸರಿಯಾಗಿ ಶಿವಮೊಗ್ಗ ನಿಲ್ದಾಣದಿಂದ ಹೊರಟಿತು.

ಮುಂದೆ ರೈಲು ತುಂಗಾ ನದಿಯ ಸೇತುವೆ ಹತ್ತಿರ ಬಂದು ಕೂಡಲೇ ಚಿತ್ರಾ ಸಂತೋಷದಿಂದ ಕೂಗಲು ಪ್ರಾರಂಭಿಸಿದಳು. ಆ ತುಂಗಾ ನದಿ, ಜೊತೆ ಆಕಾಶದಲ್ಲಿ ಸೂರ್ಯೋದಯ, ತಂಪಾದ ಗಾಳಿ ಮಲೆನಾಡಿನ ಹಸಿರು ಇವೆಲ್ಲಾ ನೋಡಿ ಕಣ್ಣು ತಂಪು ಎನಿಸಿತು. ನಂತರ ಚಿತ್ರಾ ತನ್ನ ಅಜ್ಜಿಯ ಕತೆಯನ್ನು ಮುಂದುವರಿಸಲು ಕೇಳಿದಳು. ಹೀಗೆ ಶಿವ ಹೇಳಲು ಮುಂದಾದ ತನ್ನ ತಾಯಿಗೆ - ತನ್ನ ಅಕ್ಕನನ್ನು ಮನೆಯಲ್ಲಿ ಬಿಟ್ಟು, ತನ್ನ ತಂದೆ ಒಂದೂರಿಂದ ಒಂದೂರಿಗೆ ಹೋಗಿ ಸಂತೆ ವ್ಯಾಪಾರಕ್ಕೆ0ದು ಹೋಗುತ್ತಿದ್ದರು. ಹೀಗೆ ಕುಟುಂಬದ ಜೀವನ ಸಾಗುತ್ತಾ ಇತ್ತು. ಒಂದಿನ ತನ್ನ ತಂದೆ ಸಂತೆಯಿಂದ ಬಂದಾಗ ಒಂದು ಸಂತಸದ ಸುದ್ದಿ ಕಾದಿತ್ತು. ಅದು ಏನೆಂದರೆ ತನ್ನ ತಾಯಿ ಮೂರು ತಿಂಗಳು ಗರ್ಭಿಣಿಯಾಗಿದ್ದಳು. ತನ್ನ ತಂದೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ತಂದೆ ತನ್ನ ತಾಯಿಯ ಬಾಯಿಗೆ ಬೆಲ್ಲವನ್ನು ತಿನಿಸಿ ಸಂತಸವನ್ನು ಹಂಚಿಕೊಂಡರು. ಹೀಗೆ ತನ್ನ ತಾಯಿಗೆ ಏಳು ತಿಂಗಳು ತುಂಬಿತು. ತನ್ನ ತಾಯಿಗೆ ಕೆಲಸ ಮಾಡಲು ಕಷ್ಟವೆನಿಸಿತು. ಆದ್ದರಿಂದ ತನ್ನ ತಂದೆ ಸಂತೆಗೆ ವ್ಯಾಪಾರ ಹೋಗೋದು ಕಮ್ಮಿ ಮಾಡಿದರು . ಮನೆಯಲ್ಲಿ ಇದ್ದು ತನ್ನ ತಾಯಿಯ ಆರೈಕೆ ಹಾಗೂ ತನ್ನ ಅಕ್ಕ ಮಗುವನ್ನು ನೋಡಿ ಕೊಳ್ಳುತ್ತಿದ್ದರು ಎಂದು ಚಿತ್ರಾಳಿಗೆ ಶಿವನು ರೈಲಿನಲ್ಲಿ ವಿವರಿಸುವನು.

ಇಬ್ಬರು ಮಾತಾಡುತ್ತ ಮಾತಾಡುತ್ತ ರೈಲು ಹಾಸನ ಬಂದಿದ್ದೇ ತಿಳಿಯಲಿಲ್ಲ. ನಂತರ ಚಿತ್ರಾ ತಂದೆ ಶಿವನಿಗೆ, ತನಗೆ ಹೊಟ್ಟೆ ಹಸಿವು ಎಂದಳು, ಪತ್ನಿ ಇಡ್ಲಿಯನ್ನು ಡಬ್ಬಿಯಲ್ಲಿ ಇಟ್ಟಿದ್ದು ನೆನಪಾಯಿತು. ಶಿವನು ಚಿತ್ರಾಳಿಗೆ ಇಡ್ಲಿಯನ್ನು ತಿನಿಸಿ ತಾನು ತಿನ್ನುತ್ತಾ, ತನ್ನ ತಂದೆ ತಾಯಿಯ ಕಥೆಯನ್ನು ಮುಂದುವರಿಸಿದನು. ಮುಂದೆ ತನ್ನ ತಂದೆಗೆ ಚಿಕ್ಕ ವಯಸ್ಸಿನಿಂದ ಕ್ಷಯ ರೋಗವಿತ್ತು. ತನ್ನ ತಾಯಿ ಗರ್ಭಿಣಿಯಾದ ಸಮಯದಲ್ಲಿ ಮನೆಯ ಕೆಲಸ ಹೆಚ್ಚಾಗಿ ತನ್ನ ತಂದೆಯೇ ಮಾಡಿದ ಕಾರಣ, ತನ್ನ ತಂದೆಗೆ ಕ್ಷಯ ಹೆಚ್ಚಾಯಿತು. ಕಷಾಯ ಮಾಡಿಕೊಂಡು ಕುಡಿದು ತನ್ನ ತಂದೆ ಮಲಗಿದರು. ಮಧ್ಯರಾತ್ರಿ ಕ್ಷಯ ಜಾಸ್ತಿಯಾಗಿ ಹೃದಯಕ್ಕೆ ನೋವು ಜಾಸ್ತಿಯಾಯಿತು, ತನ್ನ ತಾಯಿಗೆ ಇಂತ ಸ್ಥಿತಿಯಲ್ಲಿ ನಾನು ನಿನ್ನ ಬಿಟ್ಟು ಹೋದೆ, ನನ್ನನ್ನು ಕ್ಷಮಿಸು ಎಂದು ತನ್ನ ತಂದೆ ಕೂಗಿದರು. ತನ್ನ ತಾಯಿ ಗಾಬರಿಯಿಂದ ಬಂದರು, ಊರು ಹೊರಗೆ ಮನೆಯಾದ ಕಾರಣ ತನ್ನ ಸಂಬಂಧಿಕರು ಸುತ್ತಾ ಮುತ್ತಾ ಯಾರು ಇರಲಿಲ್ಲ. ಎಂಟು ತಿಂಗಳು ತುಂಬಿದ ಗರ್ಭಿಣಿಯಾದ ತನ್ನ ತಾಯಿಗೆ ಏನು ಮಾಡಬೇಕು ತೋಚಲಿಲ್ಲ, ಅಸಹಾಯಕತೆಯಿಂದ ನಾಲ್ಕು ತುಳಿಸಿ ದಳ, ಸ್ವಲ್ಪ ಉಪ್ಪು ತಿನಿಸಿದಳು. ಆಗ ಸ್ವಲ್ಪ ಕಮ್ಮಿ ಆಯ್ತು ನಂತರ ತನ್ನ ತಂದೆಗೆ ಮಲಗಿಸಿ ತಾನು ಮಲಗಿದಳು. ಮುಂಜಾನೆ ಎದ್ದಾಗ ತನ್ನ ತಾಯಿಗೆ ಒಂದು ಅನಾಹುತ ಕಾದಿತ್ತು. ಅದು ಏನೆಂದರೆ ತನ್ನ ತಂದೆಯ ಉಸಿರು ನಿಂತು ಹೋಗಿತ್ತು. ಎಂಟು ತಿಂಗಳು ಗರ್ಭಿಣಿಗೆ (3 ನೇ ಚಿತ್ರದಂತೆ )ಈ ರೀತಿ ನೋವು ಬರಬಾರದಿತ್ತು, ಆದರು ವಿಧಿಯಾಟದ ಮುಂದೆ ಎಲ್ಲಾರು ತಲೆ ಬಾಗಲೇ ಬೇಕು.

ಒಂದೆಡೆ ಮೂರು ವರ್ಷ ತನ್ನ ಅಕ್ಕ ಅಳುತ್ತಾ ಇದ್ದರೇ, ಇನ್ನೊಂದು ಬದಿಯಲ್ಲಿ ಎಂಟು ತಿಂಗಳು ತುಂಬಿದ ತನ್ನ ತಾಯಿ ಮೂಕ ವಿಸ್ಮಿತರಾಗಿದ್ದರು. ತನ್ನ ತಂದೆಯವರ ಕಡೆಯವರು ಕಾರ್ಯ ಮುಗಿಸಿದರು. ತನ್ನ ತಾಯಿಗೆ ತಂದೆ ಕಡೆಯವರು, ತನ್ನ ತಂದೆಯ ಆಸ್ತಿ ಹಾಗೂ ಮನೆಯನ್ನು ಮೋಸದಿಂದ ಕಬಳಿಸಿದರು, ನಿನ್ನಿಂದಲೇ ನಮ್ಮ ಮಗ ಸತ್ತು ಹೋದ ಎಂದು ಆಪಾದನೆ ಮಾಡಿ ಎಂಟು ತಿಂಗಳು ಗರ್ಭಿಣಿಯಾದ ತನ್ನ ತಾಯಿಗೆ ಕುಟುಂಬದಿಂದ ಹೊರ ಹೊರ ಹಾಕಿದರು. ಮುಂದೆ ಒಂದು ತಿಂಗಳು ನಂತರ ತನ್ನ ತಾಯಿಗೆ ಒಂದು ಮಗುವಿನ ಜನನವಾಯಿತು. ಆ ಜನನವಾದ ಒಂಟಿ ಮಗು ತಾನೇ ಎಂದು ಅಳುತ್ತಾ ಶಿವ ತನ್ನ ಮಗಳು ಚಿತ್ರಾಳಿಗೆ ಶಿವ ರೈಲಿನಲ್ಲಿ ಹೇಳುವನು.

ಮುಂದೆ ತನ್ನ ತಾಯಿ ಕೂಲಿ-ನಾಲಿ ಮಾಡಿ (1ನೇ ಚಿತ್ರದಂತೆ) ತನ್ನನ್ನು, ತನ್ನ ಅಕ್ಕನನ್ನು ಸಾಕಿದ್ದಾರೆ, ತನ್ನ ತಂದೆ ಮುಖವನ್ನು ಸಹ ನೋಡಿರದ ಶಿವ ತನ್ನ ತಾಯಿಯೇ ತನಿಗೆ ತಂದೆ ಹಾಗೂ ತಾಯಿಯಾಗಿದ್ದರು, ತನ್ನ ಪಾಲಿಗೆ ತಾಯಿಯೇ ದೇವರು ಎಂದು ಕಣ್ಣೀರು ಇಡುತ್ತಾ ಶಿವನು ತನ್ನ ಮಗಳಿಗೆ ತಿಳಿಸುವನು.


【ಆಗ ರೈಲು ಮೈಸೂರು ನಿಲ್ದಾಣಗೆ ಬಂದು ತಲುಪಿತ್ತು. ಈಗ ನಾವಿಬ್ಬರು ಮೈಸೂರು ಬಂದ ಕಾರಣ ತನ್ನ ತಾಯಿಯೆಂದರೆ ನಿಮ್ಮಅಜ್ಜಿಯನ್ನು ಭೇಟಿಯಾಗಲು ಎಂದು ಶಿವನು ತನ್ನ ಮಗಳು ಚಿತ್ರಾಳಿಗೆ ಹೇಳಿ ರೈಲುನಿಂದ ಇಳಿದು ಹೋಗುವರು】

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.