ಪ್ರೀತಿಯ ಓದುಗರೆ ಇದು ಜೀವನದ ಸವಾಲುಗಳನ್ನ ನಿಭಾಯಿಸಲಾರದೇ ಯಾರಲ್ಲು ತನ್ನ ನೋವನ್ನ ಹೇಳಿಕೊಳ್ಳದೇ ಆತ್ಮಹತ್ಯೆಯ ದಾರಿ ಹಿಡಿದ ನನ್ನ ಗೆಳತಿಗೆ ಬರೆಯುತ್ತಿರುವ ಪತ್ರ. ಇದರಲ್ಲಿ ಅವಳ ಬಗ್ಗೆ ಕೋಪವಿದೆ, ಅವಳನ್ನು ಕಳೆದುಕೊಂಡ ನೋವಿದೆ, ಒಳ್ಳೆಯವರಿಗೆ ಮೇಲಿಂದ ಮೇಲೆ ನೋವು ಕೊಡುವ ದೇವರು ಎನ್ನಿಸಿಕೊಂಡವನ ಬಗ್ಗೆ ಅಸಮಾಧಾನವಿದೆ.....

ಪ್ರೀತಿಯ ಅಪ್ಪು ನಿನ್ನನ್ನ ಈ ಸಂದರ್ಭದಲ್ಲಿ ಪ್ರೀತಿಯ ಅನ್ನಲು ಮನಸ್ಸಾಗುತ್ತಿಲ್ಲ. ಯಾಕೆಂದರೆ ಆ ಪ್ರೀತಿನ ನಂಬಿಕೆನ ನೀ ಕಳೆದುಕೊಂಡು ಬಿಟ್ಟೆ. ನಾನೇ ಧೈರ್ಯವಂತೆ ಎಂದು ಬೀಗುತ್ತಿದ್ದ ಆ ನಿನ್ನ ಗತ್ತಿನ ನಡವಳಿಕೆ ಕಳೆದು ಹೋದದ್ದಾದರೂ ಎಲ್ಲಿ? ಎಲ್ಲರೂ ನನ್ನವರು ಎಂಬಂತೆ ಎಲ್ಲರೂಡನೆ ಬೆರೆಯುತ್ತಿದ್ದರು ನಿನಗೆ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾರು ನೆನಪಾಗದೇ ಉಳಿದಿದ್ದು ಏಕೆ....?

ನಿಮ್ಮಣ್ಣನೇನಿಸಿಕೊಂಡವನು ಜವಾಬ್ದಾರಿ ನಿಭಾಯಿಸಲಾರದೇ ಆತ್ಮಹತ್ಯೆ ಮಾಡಿಕೊಂಡಾಗ ಅವನಂತೆ ನಾ ಆಗುವುದಿಲ್ಲ. ನನ್ನ ಅಪ್ಪ ಅಮ್ಮನಿಗೆ ನಾನೇ ಗಂಡುಮಗನಾಗಿ ನಿಂತು ಅವರನ್ನ ಸಾಕುತ್ತೇನೆ ಎಂದಿದ್ದ ನಿನ್ನ ಗಟ್ಟಿಗುಂಡಿಗೆ ನಲುಗಿದ್ದಾದರೂ ಎಲ್ಲಿ......

"ವಿದ್ಯಾಬ್ಯಾಸಕ್ಕೆ ಸಂಬಂಧಪಟ್ಟಂತೆ "ಭಾರು ನಾನು ಯಾವ subject ತೆಗೆದುಕೊಳ್ಳಲಿ, ಯಾವುದರಲ್ಲಿ specialization ಮಾಡಲಿ ಎಂದು ನಿಮಿಷಕ್ಕೆ 10 ಪ್ರಶ್ನೆಗಳನ್ನು ಕೇಳುತ್ತಿದ್ದವಳಿಗೆ ಜೀವನವೆಂಬ exam ಅಲ್ಲಿ ಯಾವ ವಿಷಯಕ್ಕೆ ಮಹತ್ವ ಕೊಡಲಿ, ಯಾವುದನ್ನು ಹೇಗೆ ನಿಭಾಯಿಸಲಿ ಎಂದು ಕೇಳುವಲ್ಲಿ ಈ ನಿನ್ನ ಗೆಳತಿ ನೆನಪಾಗದೇ ಉಳಿದಿದ್ದರೂ ಏಕೆ!?

ಅಣ್ಣನ ಬಗ್ಗೆ ನಿನಗಿದ್ದ ಅಪಾರ ಪ್ರೀತಿಗೊ, ಒಲವಿಗೊ ಅವನು ಸತ್ತ ನಂತರವು ಅವನದೇ ಕೋಣೆಯಲ್ಲಿ ಉಳಿದೆ. ಅವನೇ ನನ್ನೊಡನೆ ಇದ್ದಂತೆ ಎನಿಸುತ್ತದೆ ಎಂದು ಭಾವನೆಗಳ ಮೂಟೆಯನ್ನೆ ಹೊತ್ತು ನಿಂತೆ. ಈ ದಾರಿಯಲ್ಲಿ ನೀನು ನಿನ್ನಣ್ಣನ ಕೋಣೆಯಲ್ಲೆ ಉಳಿದಿದ್ದು ಅವನ ನೆನಪು ಮಾಸದಿರಲಿ ಎಂದೋ ಅಥವಾ ಅವನಂತೆ ನೀನು ಆತ್ಮಹತ್ಯೆಯ ದಾರಿ ಹಿಡಿಯುವ ಸಲುವಾಗಿನಾ?!

ಬದುಕಿನ ಬಗ್ಗೆ ಸಾವಿರ ಕನಸ್ಸನ್ನ ಹೊತ್ತವಳಿಗೆ ಬದುಕೇ ಬೇಡ ಅನಿಸುವಂತದ್ದು ಆಗಿದ್ದದರೂ ಏನು ನಿನ್ನ ಜೀವನದಲ್ಲಿ..... ಕೆಲವರೆನ್ನುತ್ತಾರೆ ನಿನ್ನ. ಅಣ್ಣ ನೇ ನಿನ್ನನ್ನ ತನ್ನ ಬಳಿ ಕರೆಸಿಕೊಂಡ ಅಂತ ಅದನ್ನ ನಾನು ನಂಬಲಾರೆ ಆಗೆನಾದರೂ ಆಗಿದ್ದರೆ ನಿನ್ನಣ್ಣ ಸತ್ತು 6 ತಿಂಗಳು ಯಾಕೆ ಕಾಯುತ್ತಿದ್ದ.....ಮತ್ತೆ ಯಾವುದೋ ವಿಚಾರ ನಿನ್ನನ್ನು ಕುಗ್ಗಿಸಿತ್ತು ಅನ್ನುವುದೇ ಆದರೆ ನಮ್ಮ ಬಳಿ ಹೇಳಿಕೊಳ್ಳಲಾಗದಂತದ್ದು ನಡೆದಿದ್ದದರೂ ಏನು!?

ಕಾರಣ ಏನೇ ಇರಲಿ ನಿನ್ನ ನಿರ್ಧಾರಕ್ಕೆ ನನ್ನ ಧಿಕ್ಕಾರವಿದೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಇದು ನಿನ್ನದೇ ಮಾತು .ಈಗ ನೀನೆ ಆ ದಾರಿ ಆರಿಸಿಕೊಂಡು ನಮ್ಮನೆಲ್ಲಾ ನೋವಿಗೆ ದೂಡಿ ಹೊಗಿದ್ದಿಯಲ್ಲ ನಿನ್ನನ್ನು ನಾನು ರಣಹೇಡಿ ಎಂದು ಕರೆಯಬಹುದಾ?!

25 ವರ್ಷದ ವಯಸ್ಸಿಗೆ ಬಂದ ಮಗಳ ಬಗ್ಗೆ ನೊರಾರು ಕನಸ್ಸು ಹೊತ್ತಿ, ಇರುವಳೊಬ್ಬಳು ಮಗಳು ಎಂದು ಸಾವಿರ ಆಸೆಗಳನ್ನ ಇಟ್ಟುಕೊಂಡ ನಿಮ್ಮ ಅಪ್ಪ ಅಮ್ಮನಾ ಆಸೆಗೆ ತಣ್ಣಿರು ಎರೆಚಿ ನಿನ್ನ ನೋವಿಂದ ನೀನು ಪಾರಗಲು ನಿನ್ನ ಹೆತ್ತವರಿಗೆ ಈ ಇಳಿ ವಯಸ್ಸಿನಲ್ಲಿ ಎಂದಿಗೂ ಮರೆಯಲಾಗದ ನೋವು ಕೊಟ್ಟು ಹೋದೆಯಲ್ಲ ಸಹಿಸುವುದಾದರೂ ಹೇಗೆ ಆ ಹಿರಿಜೀವಗಳು ......

ಸಾಯುವಲ್ಲಿ ತೋರಿದ ನಿನ್ನ ದೈರ್ಯದ 25% ಬದುಕುವಲ್ಲಿ ತೊರಿದ್ದರೂ ಇಂದು ನೀನು ಕೇವಲ ನೆನಪಾಗಿ ಉಳಿಯುತಿರಲಿಲ್ಲ ನಿನ್ನಂತೆ ಕಷ್ಟದಲ್ಲೂ ಹೆದರದೇ ಮುನ್ನಡೆಯಬೇಕು ಎನ್ನುವವರಿಗೆ ದಾರಿ ದೀಪವಾಗುತ್ತಿದೆ

ಸತ್ತು ನೀ ಸಾಧಿಸಿದ್ದರೂ ಏನು! ಸಮಸ್ಯೆ ಉಂಟುಮಾಡುವುದು ಮನುಷ್ಯನೆ ಆಗಲಿ ಸಂದರ್ಭಗಳೇ ಆಗಲಿ ನಾವು ಅವುಗಳಿಗೆ ಎಷ್ಟು ಪ್ರಮುಖ್ಯತೆ ಕೊಡುತ್ತಿವೊ ಅದರ ಪರಿಣಾಮವು ನಿರ್ಧಾರಿತ ವಾಗುತ್ತದೆ. ನಾವು ಎಲ್ಲವನ್ನು ಎದುರಿಸುವ ಛಲದಿಂದ ಮುಂದುವರೆದರೆ ಯಾವ ಸಮಸ್ಯೆಯು ಶಾಶ್ವಾತವಲ್ಲ ಎಂಬುದು ನಿನಗೆ ಯಾಕೆ ಅರ್ಥ ಆಗಲಿಲ್ಲ. ನಿನ್ನ ಅಯಸ್ಸೆಂಬ ಅಂತಸ್ತು ಕರಗುವ ಮೊದಲೇ ಅದನ್ನ ನೀನೆ ಆ ದೇವರಿಗೆ ಮಾರಿಕೊಳ್ಳುವ ಆತುರ ಏನಿತ್ತು!

ನಿನ್ನನ್ನು ತನ್ನ ಬಳಿ ಕರೆಸಿಕೊಂಡ ಆ ದೇವರಿಗೂ ನನ್ನದೊಂದು ಮಾತು " ಏ ಪಾಪಿ ದೇವರೆ ನನ್ನ ಗೆಳತಿಯನ್ನು ಪುನಃ ನಮ್ಮ ಬಳಿ ಕಳುಹಿಸಿಕೊಡು ಅವಳ ಬಳಿ ಕೇಳಿ ಉತ್ತರ ಪಡೆಯುದಕ್ಕೆ ನನ್ನ ಬಳಿ ಸಾವಿರ ಪ್ರಶ್ನೆಗಳಿದೆ. ಅವಳ ಮಾರುದ್ದ ಜಡೆಯನ್ನು ಹಿಡಿದೆಳೆದು ಮಗುವಿನಂತಹ ಕೆನ್ನೆಯ ಮೇಲೆ ಎರಡೆಟು ಬಾರಿಸಿ ಯಾಕೆ ಹೀಗೆ ಮಾಡಿದಳು ಎಂದು ಕೇಳಲೇ ಬೇಕಿದೆ ನಾನು, ಸಾವಿರ ಕನಸು ಕಟ್ಟಿದ್ದ ಆ ಮುಗ್ಧ ಮನಸ್ಸಿನ ನೋವನ್ನ ಆಲಿಸಲು ಮನ ಮಿಡಿಯುತಿದೆ ........

ಕಾಯುತಿರುವೇ ನಿನ್ನ ಮರಳಿ ಬರುವಿಕೆಗಾಗಿ.....

ನಿನ್ನ ಪ್ರೀತಿಯ ಭಾರು(ಭಾರತಿ)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.