ನನ್ನದೂ ಒಂದು ಪ್ರೇಮ ಕಥೆ..!!!
ಅವತ್ತು ಬಂದಿದ್ದು ಮಳೆನೋ ಇಬ್ಬನಿನೋ ಇವತ್ತಿಗೂ Confusion ಇದೆ.

ಚುಕ್ಕಿ ತಾರೆಗಳನ್ನು ಲೆಕ್ಕ ಹಾಕುತ್ತಾ ಮಲಗಿದ್ದು, ಬೆಳಗ್ಗೆ 5ಕ್ಕೆ ಅಲರಾಮ್ ಹೊಡೆದಾಗಲೆ ಎಚ್ಚರವಾಗಿತ್ತು.

ಇನ್ನೇನು ಟ್ರಾಕ್ ಸೂಟ್ ಹಾಕ್ಬೇಕು ಎನ್ನುವಷ್ಟರಲ್ಲಿ ನೆನಪಾಗಿತ್ತು.. ಅವಳ Birth Day ಇವತ್ತು..

Uff.‌. ರಾತ್ರಿ ಎಲ್ಲಾ ಚುಕ್ಕಿ ತಾರೆಯ ಕಣ್ಣಾಮುಚ್ಚಾಲೆ ಆಟ ನೋಡುತ್ತಾ ಯೋಚಿಸಿದ್ದು ಇದೇ ತಾನೆ..?

ಅರ್ಧ ಗಂಟೆಲಿ ಕೈಯ್ಯಲ್ಲಿ ಒಂದು ಗುಲಾಬಿ ಬೊಕ್ಕೆ ಹಿಡಿದು ರೆಡಿ ಆಗಿದ್ದೆ..

Yes.. ಅದೇ Shirt ತಿಳಿ ನೀಲಿ ಬಣ್ಣದ ರೇಮಾಂಡ್ ಬ್ರಾಂಡ್. ಫಸ್ಟ್ ಟೈಮ್ ಅವಳನ್ನು ಮೀಟ್ ಮಾಡಿದ್ದಾಗ ಹಾಕಿದ್ದು.. Costly Shirt ಅಲ್ವಾ ಚೆನ್ನಾಗೆ ಕಾಣಿಸ್ತಿದ್ದೆ!

ಕೈಯ್ಯಲ್ಲಿ ಬೊಕ್ಕೆ ಹಿಡಿದು, ಕೋರಮಂಗಲದ ಡೈರಿ ಸರ್ಕಲ್'ಲಿ BMTC ಬಸ್ ಹತ್ತಿ, ಹಿಂದಿನ Seatನಲ್ಲಿ ತಲೆ ವಾಲಿಸಿದಾಗ ಸಮಯ 6:15. ತಲೆಯಲ್ಲಿ ಜಾರುತ್ತಿದ್ದ ಎರಡು ಬೆವರ ಹನಿಯನ್ನು ಒರೆಸುತ್ತಾ Majestic ಅಂದೆ, conductorಗೆ.

ಜಾಸ್ತಿ ಜನ ಏನು ಇರ್ಲಿಲ್ಲ ಅವತ್ತಿನಂತೆ, But ಅವತ್ತು ಜೊತೆ ಅವಳಿದ್ಲು..

"ಒಂದು ವೇಳೆ ನಾನು ಸತ್ತೋದ್ರೆ ಏನ್ ಮಾಡ್ತೀಯಾ?"

"ಅಯ್ಯೋ ಹುಚ್ಚಿ, ನೂರು ವರ್ಷ ನಾನು ನೀನು ಜೊತೇಲೆ ಇರ್ತೀವಿ" ಅವಳನ್ನು ಬರಸೆಳೆದು ತಿಳಿ ಕೆಂಪಗಿನ ತುಟಿಗೆ ಮುತ್ತಿಟ್ಟಿದ್ದೆ.

"Oh God, ಇನ್ನೂ ನೂರು ವರ್ಷ ನಿನ್ ಜೊತೇನೇ ಇರ್ಬೇಕಾ..ದೇವ್ರೇ ಎಂಥಾ ಘೋರ ಶಿಕ್ಷೆ ಕೊಟ್ಟಿದೀಯಪ್ಪಾ ನೀನು ನಂಗೆ.."

ಬಲ ಭುಜದ ಮೇಲೆ ಒರಗಿ ಮೆಲ್ಲನೆ ನನಗೆ ಕೇಳಿಸುವಂತೆಯೇ ಅಂದಳು ಅವಳು...!!

ಕೆಲ ಕ್ಷಣ ಮೌನದ ನಂತರ ಇಬ್ಬರ ಮುಖದಲ್ಲೂ ನಗು ಮನೆಮಾಡಿತ್ತು..

ಶಾಂತಿನಗರದ ಬಸ್ ಸ್ಟಾಂಡ್ ಲಿ ಬಸ್ ನಿಲ್ಲಿಸಿದ್ದಾಗಲೆ ಎಚ್ಚರವಾದದ್ದು.

ಪ್ರತೀ ರಾತ್ರಿನ ಆ ಸೂರ್ಯ ಹೇಗೆ ಮಿಸ್ ಮಾಡ್ಕೊಳ್ತಾನೋ, ಹಳದಿ ಎಲೆಗಳನ್ನ ಆ ಮರ ಹೇಗೆ ಮಿಸ್ ಮಾಡ್ಕೊಳುತ್ತೋ, ಅದ್ರುಕ್ಕಿಂತ ಜಾಸ್ತೀನೆ ನಿನ್ನ ಮಿಸ್ ಮಾಡ್ಕೊಳ್ತಾ ಇದೀನಿ ನಾನು..

ನಿನ್ನ ಜೊತೆ ಕಳೆದ ಒಂದೊಂದು ಕ್ಷಣವ ತಿಳಿ ನೀರಿನ ಬುಗ್ಗೆಯಲಿ ಮುಳುಗೆದ್ದಂತೆ.

ಬಸ್ Majestic ಕಡೆ ಕದಲತೊಡಗಿತು..ಕಿಟಕಿ ಸೋಕಿ ಬರುವ ಮುಂಜಾನೆ ಗಾಳಿಗೆ ಮುಖಮಾಡಿ ಹೊರಗಿನ ಮಂಜನ್ನು ನೋಡತೊಡಗಿದೆ.. ಬಸ್'ನ ಜೊತೆ ಸಮಯವೂ ಚಲಿಸತೊಡಗಿತ್ತು.


"ಓದಿರೋದು Corporation School, ಬೆಳೆದಿದ್ದು Slum, ಬೆಳಗ್ಗೆ Paper ಹಾಲು ಹಾಕಿ ದುಡ್ಡು ಮಾಡ್ಕೋತೀಯಾ. ಅದೆ ದುಡ್ಡಲ್ಲಿ Collegeಗೆ ಬರ್ತೀಯಾ, Very Good. ಕಷ್ಟ ಪಟ್ಟು ದುಡಿತೀಯಾ..

Well ನಿನ್ ಜೊತೆ ಬರ್ತೀನಿ ನಾನು, ಎಷ್ಟು ಚೆನ್ನಾಗಿ ನೋಡ್ಕೋತೀಯಾ ನನ್ನ??. ಅಬ್ಬಬ್ಬಾ ಅಂದ್ರೆ, Daily ನೀನು Smoke ಮಾಡೋದು ಬಿಟ್ರೆ ನಾನು Lipstick ತಗಬಹುದಪ್ಪಾ, ಅಷ್ಟೆ"

"ಅಬ್ಬಾ.. ನನ್ ಬಗ್ಗೆ PhD ನೇ ಮಾಡಿದಾಳೆ ಅವಳು.."

ಏನ್ ಅಂತ ಹೇಳ್ಳಿ.. ನಮ್ ಮದ್ವೆ ಆಗೋದ್ರಿಂದ ಹಿಡಿದು ಮೊಮ್ಮಕ್ಕಳ ಮದ್ವೆ ಆಗೋವರ್ಗು ಕಂಡಿರೊ ಕನಸೆಲ್ಲಾ ಹೇಳಿದೆ

"ಎಷ್ಟೊಂದು ಕನಸುಗಳು ಮಾರಾಯ. ಒಂದೆರಡು KG ನಂಗು ಕೊಡೊ ಅಂದಿದ್ದಳು"

ಅಂತೂ Interview ಮುಗಿದಿತ್ತು. ಫೇಲ್ ಅನ್ನೋದು ನಮ್ಮ Dictionaryಲೇ ಇರ್ಲಿಲ್ಲ ಬಿಡಿ..

ಕೈಯ್ಯಲ್ಲಿರುವ ಗುಲಾಬಿ ನೆಲ ನೋಡುವ ಮುನ್ನ ನಾ ನವರಂಗ್'ಗೆ ಹೋಗ್ಬೇಕು..

96G bus ಹತ್ತಿ ನವರಂಗ್ ಅಂದೆ..

"ಮಾತ್ ಆಡಿದ್ರೆ ಅಷ್ಟುದ್ದಾ Dialogue ಹೊಡಿತೀಯಾ, ನನ್ Birth dayಗೆ ಏನ್ Gift ತಂದಿದೀಯಾ??"


ಕಳೆದ ವರ್ಷ ಅವಳ birthdayಯಂದು, ಹರಿಶ್ಚಂದ್ರಘಾಟ್'ನಲಿ, ಅವರ ಅಮ್ಮನ ಘೊರಿಯ ಮೇಲೆ ಎರಡು ಬೊಕ್ಕೆ ಗುಲಾಬಿ ಇಟ್ಟು, ನಾಲ್ಕು ಹನಿ ಕಣ್ಣೀರು ಸುರಿಸಿ ಕೇಳಿದ Next question ಅದು..

ಹಂಗೋ ಹಿಂಗೋ Cigarette ಬಿಟ್ಟಿದ್ನಲಾ.. ಸ್ವಲ್ಪ ಕಾಸು ಉಳಿದಿತ್ತು.. ಒಂದು Ring ತಗೊಂಡಿದ್ದೆ ಅವಳಿಗೆ ಅಂತ.. ಅವಳೆದುರು ಮಂಡಿ ಊರಿ ಕುಳಿತು

"Its a Beautiful Day, We're Looking For Something Dump To Do.

Hey Baby,, I Think I Wanna Marry You..

Is It The Look In Your Eyes? Or Is It This Dancing Juice?

Who Cares Baby "I think I wanna Marry You" ಅಂದಿದ್ದೆ..

ಸುಮ್ಮನೆ ಮುಗುಳ್ನಕ್ಕಿದ್ದಳು ಅಷ್ಟೇ...


ನವರಂಗ ಲಿ ಇಳಿದು ಟೈಮ್ ನೋಡಿದೆ. 8:00 AM. ಆಗಷ್ಟೇ 6:15 ಇತ್ತು ಅವಳ ನೆನಪಲ್ಲಿ ಎರಡು ಗಂಟೆ ಹೋಗಿದ್ದೆ ಗೊತ್ತಿಲ್ಲ..

ನವರಂಗ್ ಇಂದ ಹರಿಚ್ಚಂದ್ರ ಘಾಟ್'ಗೆ ವಾಕ್. ಅಂತ ಸ್ಪೆಶಲ್ ಏನಿಲ್ಲ ಹಿಂದಿನ ಬಾರೀನೂ ಹಿಂಗೇ ವಾಕ್ ಹೋಗಿದ್ವಿ ಅವಳೂ ಜೊತೇಲಿದ್ಲು..ಬಿಳೀ ಚೂಡಿದಾರ್. ಆದರೆ, ಇವತ್ತು ಒಬ್ಬನೇ ಹೋಗ್ತಾ ಇದೀನಿ. ನನಗಿಂತ ಮುಂಚೇನೆ ಅವಳಿದಾಳೆ ಅಲ್ಲಿ. ಕಳ್ಳಿ..!!

ಹಂಗೂ ಹಿಂಗೂ ಘಾಟ್'ಗೆ ಎಂಟರ್ ಆದೆ.. ಮೂಲೆ ಘೋರಿಯ ಮೇಲೆ ಮಲಗಿದ ಅವಳು ನನ್ನ ಕಾಯುತ್ತಿದ್ದಳೋ ಏನೊ..

ಯಾಕ್ ಇಷ್ಟು ಲೇಟು?? ಎಂಬಂತಿತ್ತು Weather

ಸೈಲೆಂಟ್ ಆಗಿ ಮಲಗಿದ್ದವಳ ಮೇಲೆ ಬೊಕ್ಕೆ ಇಟ್ಟು ಒಂದು ಕ್ಷಣ ಕಣ್ ಮುಚ್ಚಿ ಕೂತೆ.

"ಅಕ್ಷು, ಮುಂದೆ ನಾನು ಬೇಗ ಸತ್ರೆ ಇಲ್ಲೆ ನನ್ ಅಮ್ಮನ ಪಕ್ಕಾನೆ ಮಣ್ಣು ಮಾಡ್ಸೋ Plzooo"

ಕೊನೆಯ Birth day ದಿನ ಅವಳು ಹೇಳಿದ್ದು ಯಾಕೋ ಪ್ರತಿಧ್ವನಿಸಿದಂತಿತ್ತು

ಅವಳ ಕಣ್ಣೋಟ ಕಳೆಯದೇ ಕಣ್ಣಲ್ಲೇ ಉಳಿದಿದೆ

ಕಳೆದಿದ್ದೆಲ್ಲ ಅವಳ ನಿರೀಕ್ಷೆಯ ಕ್ಷಣಗಳು ಮಾತ್ರ...!!


ದೇವನೊಬ್ಬ ನಾಮ ಹಲವು..

ಆದ್ರೆ ದೇವತೆಗಳು ಕೆಲವೇ ಕೆಲವು..

ಆ ದೇವತೆಗಳಲ್ಲಿ ಒಬ್ಳಾಗಿದ್ಲು ನನ್ನವಳು..

ಅದೇಕೊ ಕಾಣೆ, ಕೂತು ಉಂಡರೂ ಕರಗದಷ್ಟು ಆಸ್ತಿ ನಾನೇನ್ ಮಾಡಿರ್ಲಿಲ್ಲ. ಆ ಚಂದ್ರನ ತಂದು ಅವಳ ಬೆಡ್ ಲ್ಯಾಂಪ್ ಮಾಡ್ಲಿಲ್ಲ. ದಿನಾ ಸಂಜೆ ಹೊರಗೆ ಕರೆದುಕೊಂಡು ಹೋಗಿ ಪಾನಿ ಪೂರಿ ಕೊಡ್ಸ್ಲಿಲ್ಲ. ಕೈ ಕೈ ಹಿಡ್ಕೊಂಡು ಇಳಿ ಸಂಜೆಲಿ ಯಾವುದೇ ಪಾರ್ಕ್ ಸುತ್ತ್ಲಿಲ್ಲ, ಅಲ್ಲಿರುವ ಬೆಂಚನ್ನು ಸವೆಸಿಲ್ಲ. ಖಾಲಿ ಪುಸ್ತಕದ ಒಂದು ಮೂಲೇಲಿ ಅವಳ ಹೆಸರಂತು ಬರ್ದೆ ಇಲ್ಲ. ಬೊಗಸೇಲೆ ಅವಳ ಮುಖ ಹಿಡಿದು "ನೀನಂದ್ರೆ ಇಷ್ಟ ಕಣೇ, ನಿನ್ ಬಿಟ್ಟು ಇರೊ ಶಕ್ತಿ ನನ್ನಲ್ಲಿ ಇಲ್ಲ" ಅಂತ ಒಂದೇ ಒಂದು TIMEಉ ಹೇಳಿಲ್ಲ.

ನಂಗೆ ಗೊತ್ತಿರೋದು ಇಷ್ಟೆ... 'ನಾನು ಮಗುವಾಗಿದ್ದೆ, ಅವಳು ತಾಯಿ. ಅಗಾಧವಾದ ಪ್ರೇಮ, ಕರುಣೆ ವಾತ್ಸಲ್ಯ ಅವಳದು'.

ಬದುಕಲು ಕಲಿಸಿದ ಗುರು ಅವಳು.. ಹಾಡು ನಾನಾಗಿದ್ದರೆ ಸ್ವರ ಅವಳಾಗಿದ್ದಳು. ಗಿಡ ನಾನಾಗಿದ್ದರೆ ಹಸಿರು ಉಸಿರು ಅವಳಾಗಿದ್ದಳು.


ಬದುಕಿನ ಪ್ರಶ್ನೆ ಪತ್ರಿಕೆ ಕೈಯ್ಯಲ್ಲಿ ಇಟ್ಟು ಉತ್ತರಕ್ಕೆ ಕಾಯದೆ, ನೆಮ್ಮದಿಯಾಗಿ ಮಲಗಿರುವ ಅವಳ ಗೋರಿಯನ್ನು ಮೇಲೆ ಹಣತೆ ಇಟ್ಟು ಬೆಳಕು ಮೂಡಿಸಿದಾಗ, ನನಗರಿವಿಲ್ಲದಂತೆ ಕಣ್ಣಂಚಲ್ಲಿ ಇಣುಕಿತ್ತು ಎರಡು ಹನಿ ಕಣ್ಣೀರು..

ಅಂದೂ ದೀಪಾವಳಿ, ಇಂದೂ ಸಹ..

ಒಟ್ಟಿಗೆ ಹಚ್ಚಿದ ಹಣತೆ ಇದ್ದ ಹಾಗೆ ಇದೆ, ಅದೇ ಬೆಳಕು ಮಿಸ್ ಆಗಿದ್ದು ಅವಳ ನಗು.

ತನ್ನ ಜೀವ ನಶಿಸುತ್ತಿದ್ದರು, ನನ್ನನ್ನು ಬೆಳಕಿನೆಡೆಗೆ ನೆಡೆಸಿದ ಅವಳು ಸಹ ದೀಪದಂತೆಯೇ..


ಎಂದಿನಂತೆ ಇಂದೂ ಸಹ, ನಿಮ್ಮವ..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.