ನನ್ನವಳು

ಹೀಗೆ ಓಮ್ಮೆ ದೂರ ಪ್ರಯಾಣ ಬಸ್ಸಿನಲ್ಲಿ ಹೊರಟಿದ್ದೆ ನಾನು ಶಿವಮೊಗ್ಗದಿಂದ ತುಮಕೂರಿನ ಕಡೆಗೆ,ಈ ಪ್ರಯಾಣದಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಸ್ವಲ್ಪ ಹೆಚ್ಚೆ ಎನ್ನುವಂತಾ ಸುಂದರಿ.ನನ್ನ ಕಂಗಳಂತು ನಿಮಿಷಗಳಲ್ಲೇ ಅವಳೆಡೆಗೆ ಆಕರ್ಷಿತವಾದವು, ಅವಳು ನನಗಾಗಿಯೇ ಭುವಿಗೆ ಬಂದವಳು ಎಂಬುವಷ್ಟು ಅವಳೆಡೆಗೆ ದೃಷ್ಟಿಯ ಹರಿಸಿ ಯಾವ ಊರಿನ ರಾಜಕುಮಾರಿಯೇ ನೀನು ಎಂದು ಕೇಳಲೆಂದು ಅವಳೆಡೆಗೆ ನೋಡುವಷ್ಟರಲ್ಲಿ ಅವಳ ಕಂಗಳು ನನ್ನ ಕಂಗಳ ದಿಟ್ಟಿಸಿ ನೋಡುತ್ತಾ ಯಾವ ಊರಿನ ರಾಜಕುಮಾರನೋ ನೀನು ಎಂದು ಕೇಳುತ್ತಿದ್ದವು,ಗಂಡು ಮನಸಲೂ ನಾಚಿಕೆಯ ಪರಿವೆಯಾಗಿತ್ತು ಮನಸಲಿ ಭಯವೂ ಮೂಡಿತ್ತು.ಭಯವಿದ್ದರೂ ಕೂಡ ನನ್ನ ಕಂಗಳು ಅವಳ ಮೇಲಿಂದ ದೃಷ್ಟಿಯ ತೆಗೆಯದೇ ಹಠಕಟ್ಟಿ ಅವಳನ್ನೇ ನೋಡುತ್ತಿತ್ತು.ಅವಳ ಕಂಗಳೂ ಅತ್ತ ಇತ್ತ ತಿರುಗದೇ ನನ್ನೆಡೆಗೇ ದೃಷ್ಟಿಯ ಬೀರಿತ್ತು.ಇಬ್ಬರ ಕಂಗಳೂ ಲೋಕದ ಪರಿವೆಯೇ ಇಲ್ಲದ ಯಾವುದೇ ಭಯವಿಲ್ಲದೇ ಮಾತಾಡತೊಡಗಿದವೂ.ಇಬ್ಬರ ವಿಷಯಗಳನ್ನು ಹಂಚಿಕೊಳ್ಳತೊಡಗಿದವೂ,ನಾವಿಬ್ಬರು ಎಷ್ಟು ಹತ್ತಿರವಾಗಿಬಿಟ್ಟೆವೆಂದರೆ ಕಂಗಳಲ್ಲೇ ಇಬ್ಬರು ಅಪ್ಪಿಕೊಂಡು ಮುದ್ದಾಡದೆವು,ಪ್ರೀತಿಯೆಂಬ ಆಗಸದಲ್ಲಿ ಗರಿಬಿಚ್ಚಿದ ಹಕ್ಕಿಗಳಂತೆ ಹಾರಾಡಿದೆವು,ಅಷ್ಟರಲ್ಲಿ ಅವಳು "ಏ ಹುಡುಗ ಇನೂಮ್ಮೆ ಎದುರು ಬಂದು ನನ್ನ ಕಾಡಬೇಡ"ಎಂದು ಹೇಳುತ್ತ ಪ್ರೀತಿಯ ಕನಸಿನಂದ ಜಾರಿಹೋಗಿಬಿಟ್ಟಳು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.