ಗೆಲ್ಲುತೇನೆ

ಅಬ್ಬಾ ಎಷ್ಟು ನೋವು, ಒತ್ತರಿಸಿಕೊಂಡು ಬರ್ತಾ ಇದೆ .ನನ್ನ ಕೈಯಲ್ಲಿ ಇನ್ನು ತಡೆಯೋಕೇ ಆಗೋದಿಲ್ಲ ಅಮ್ಮ...
ಅಮ್ಮ ಎಷ್ಟು ಹೊತ್ತಿಗೆ ಬರತ್ತಾಳೆ ಅಸಲು ಬರುತ್ತಾಳಾ? ನಾನು ಮಾಡಿರುವ ಕೆಲಸಕ್ಕೆ, ಅಮ್ಮ ಎಲ್ಲ ಮರೆತು ಬರ್ತಾಳಾ? ಎಷ್ಟು ಅವಮಾನ ಮಾಡಿದೀನಿ, ಎಷ್ಟು ಅವಹೇಳನ ಮಾಡಿದೀನಿ, ಎಲ್ಲ ಮರೆತು ಬರ್ತಾಳಾ? ಅಬ್ಬಾ ನೋವು ಒತ್ತರಿಸಿ ಬರ್ತಾ ಇದೆ, ಸಿಸ್ಟೆರ್ ಸಿಸ್ಟೆರ್ ಅಂತ ಕೂಗಿಕೊಂಡ ಮೇಲೆ ನಿದಾನವಾಗಿ ಬಂದ್ಲು! 'ತುಂಬ ನೋವು ತಡಿಯೋಕೆ ಆಗ್ತಾ ಇಲ್ಲ, ಏನಾದರು ಮಾಡಿ.' ಸ್ವಲ್ಪ ತಡ್ಕೊಬೇಕು ಎಲ್ಲರು ಅನುಭವಿಸಲೇಬೇಕು, ತಾಯಿ ಆಗೋದು ಅಷ್ಟ್ಟುಸುಲಬನಾ? ಅಂತ ನನ್ನೇ ಪ್ರಶ್ನೆ ಮಾಡಿದಾಗ ನಾನು ಏನು ಹೇಳಬೇಕೋ ಗೊತ್ತಾಗಲಿಲ್ಲ. ಅಸಲು ನನಗೆ ಮಗು ಬೇಕಿತ್ತಾ? ಮಗುನ ಸಾಕೋ ಯೋಗ್ಯತೆ ಇದೆಯಾ ನನಗೆ? ಸಿಸ್ಟೆರ್ ಏನೋ ಗೊಣಗುತ್ತ ಇದಾಳೆ! ಏನೊಂದು ಕಿವಿಗೆ ಬಿಳ್ತಾಯಿಲ್ಲ. ಮನಸು ಎಲ್ಲೋ ಗತಕಾಲಕ್ಕೆ ಸಂಚರಿಸ್ತಾ ಹಾಗೆ ನಿದ್ರಾ ಲೋಕಕ್ಕೆ ಜಾರಿದೆ.

ನನ್ನ ಬಗ್ಗೆ ನಾನು ಹೇಳುಕೊತೀನೀ ನಿಮ್ಮ ಮುಂದೆ, ನಾನು ಮಾಡಿದ ತಪ್ಪು ನೀವು ಮಾಡಬೇಡಿ, ನನ್ನ ಕಥೆ ನಿಮೆಲ್ಲರಿಗೂ ಒಂದು ಎಚ್ಚರಿಕೆ ಆದರೆ ಅಷ್ಟೇ ಸಾಕು.

ನಾನು ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದು. ಅಪ್ಪ ನಾನು ಹುಟ್ಟಿದ ಎರಡು ತಿಂಗಳಿಗೆಲ್ಲ ಆಕ್ಸಿಡೆಂಟ್'ನಲ್ಲಿ ತೀರಿಕೊಂಡ್ರು. ಅಮ್ಮನೇ ನನ್ನ ಸಾಕಿದ್ದು. ನನ್ನ ಅಮ್ಮ. ನನ್ನ ಅಮ್ಮ ತುಂಬ ಚೆಲುವೆ, ಚಿಕ್ಕ ವಯಸ್ಸು , ಆದರೂ ಹೆದರದೆ ನನ್ನ ಸಾಕೋದರಲ್ಲಿ ತನ್ನ ದುಃಖ್ಖ ಮರೆತು , ನಾನೆ ಅವಳ ಪ್ರಪಂಚ ಅನ್ನೋಹಾಗೆ ಬದಕಿದಳು. ಸ್ವಂತ ಅಂತ ಹೇಳಿಕೊಳೋದಕ್ಕೆ ಯಾರು ಇರಲಿಲ್ಲ. ಅಮ್ಮನೇ ದುಡಿಬೇಕಿತ್ತು. ಅಂತ ದೊಡ್ಡ ಓದೇನು ಅಮ್ಮ ಓದಿರಲಿಲ್ಲ. ಯಾರೋ ಪರಿಚಯದವರ ಮುಖಂತರ ಒಂದು ಶಾಲೆಯಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರ್ಕೊಂಡು, ನನ್ನ ಸಾಕೋದಕ್ಕೆ ತುಂಬ ಕಷ್ಟ ಪಡ್ತಾಇದ್ದಳು. ಎಷ್ಟು ಕಷ್ಟ ಆದರು ಯಾವಾಗಲು ನಗು ನಗುತ ಕೆಲಸ ಮಾಡ್ತಾಇದ್ದಳು. ಶಾಲೆಯಲ್ಲಿ ಅಚ್ಚು ಮೆಚ್ಚಿನ ಟೀಚರ್ ಆದಳು. ತನ್ನ ಮಟ್ಟಿಗೆ ಎಲ್ಲರಿಗೂ ಸಹಾಯ ಮಾಡ್ತಾ ನನ್ನ ತಕ್ಕಮಟ್ಟಿಗೆ ನನ್ನ ಚೆನ್ನಾಗಿ ಸಾಕಿದಳು.

ನಾನು ಬೆಳಿತಾ ಬೆಳಿತಾ ನನಗೆ ಅಮ್ಮನ ಮೇಲೆ ಒಂದು ರೀತಿ ಹೊಟ್ಟೆಕಿಚ್ಚು ಶುರು ಆಯಿತು, ನಾನು ಅಮ್ಮನಷ್ಟು ಚೆನ್ನಾಗಿಲ್ಲ, ಅಮ್ಮನಷ್ಟು ಮೃದು ಮನಸ್ಸಲ್ಲ ನಂದು, ಎಲ್ಲರು ನಿನ್ನಷ್ಟು ನಿನ್ನ ಮಗಳು ಚೆಂದ ಇಲ್ಲ ಅಂತ ಅಂದಾಗ ಇನ್ನಷ್ಟು ಅಮ್ಮನ ಮೇಲೆ ಹೊಟ್ಟೆ ಹುರಿತ ಇತ್ತು. ನನಗೆ ಗೊತ್ತಿಲ್ಲದೇ ಅವಳ ಮೇಲೆ ದ್ವೇಷ ಬೆಳಿಸಿಕೋತಾ ಹೋದೆ, ಮಾತು ಮಾತಿಗೂ ಹಠ... ಅಬ್ಬಾ! ಮತ್ತೆ ನೋವು ಶುರು ಆಗ್ತಾ ಇದೆ, ಅಮ್ಮ ಅಮ್ಮ... ಇನ್ನು ಬಂದಿಲ್ಲ, ಯಾಕೆ ಬರ್ತಳೆ ನಾನು ಕಡಿಮೆ ಅವಮಾನ ಮಾಡೀದಿನ? ಒಂದು ಮಾತಾದರು ಕೇಳಿದಿನ? ಇಲ್ಲ, ಅವಳೇನೇಳಿದರು ಅದಕ್ಕೆ ವ್ಯತಿರಿಕ್ತವಾಗೇ ನಡ್ಕೊಳ್ಳುತಾ ಇದ್ದೆ. ಅದಕ್ಕೆ ಈಗ ನಾನು ಈ ಸ್ಥಿತಿಯಲ್ಲಿರೋದು, ನನ್ನ ದುರಾಹಂಕಾರಕ್ಕೆ ಸರಿಯಾಗಿ ಬುದ್ದಿ ಕಲಿಸ್ತಾ ಇದ್ದಾನೆ ದೇವರು.

ಅಮ್ಮನ ಗೋಳಾಡಿಸ್ತಾ ನಾನು ಇಂಜಿನಿಯರಿಂಗ್ ಮುಗಿಸಿದೆ. ಅಬ್ಬಾ ನನ್ನ ಅಹಂಕಾರ ಮುಗಿಲು ಮುಟ್ಟಿತು. ಇನ್ನಷ್ಟು ಮತ್ತಷ್ಟು ಜಾಸ್ತಿ ಆಯಿತು ನನಗೆ ನಗರದಲ್ಲಿ ಕೆಲಸ ಸಿಕ್ಕಿದಾಗ. ಅಮ್ಮನ ನೆರಳಿನಿಂದ ಹೊರ ಬರೋದಕ್ಕೆ ತುದಿ ಕಾಲಲ್ಲಿ ನಿಂತಿದ್ದೆ. ಅಮ್ಮನಿಗೆ ಸ್ವಲ್ಪನು ಇಷ್ಟ ಇರಲಿಲ್ಲ ನಾನು ಒಂಟಿಯಾಗಿ ದೂರ ಹೋಗೋದು. ಮದುವೇ ಮಾಡೋ ಯೋಚನೆ ಇತ್ತು ಪಾಪ ಆದರೆ ನಾನು ಕೇಳಬೇಕಲ್ಲ, ಬಂದುಬಿಟ್ಟೆ ಅಮ್ಮನಿಂದ ದೂರ ಆಗ ನನಗೆ ಗೊತಿರಲಿಲ್ಲ ನಾನು ಪಾತಾಳಕ್ಕೆ ಇಳಿತ ಇದೀನಿ ಅಂತ. ನಗರ ಜೀವನದ ಸ್ವಚಂದ ಬದುಕು ಇಷ್ಟ ಆಯಿತು. ಕೈತುಂಬ ಸಂಬಳ, ಹೇಳೋರಿಲ್ಲ ಕೇಳೋರಿಲ್ಲ, ನನ್ನದೇ ಪ್ರಪಂಚದಲ್ಲಿ ಮೆರಿತಾ ಇದ್ದೆ. ಅಮ್ಮನ ನೆನಪೇ ಆಗ್ತಾ ಇರಲಿಲ್ಲ. ಅವಳ ಕಾಗದ ಬರೋವರೆಗೂ! ಈಗಲೂ ಅಮ್ಮ ಬರಿಯೋದು ಪತ್ರ , ಯಾಕಂದರೆ ಅವಳಿಗೆ ಕಂಪ್ಯೂಟರ್ ಗೊತ್ತಿಲ್ಲ , ಕಲಿಯೋ ಪ್ರಯತ್ನಪಟ್ಟಳು ಆದರೆ ನಾನೆ ಬಿಡಲಿಲ್ಲ ಕಲಿಯೋದಕ್ಕೆ . ನನಗೆ ಬೇಡವಾಗಿತ್ತು ಅವಳು ಕಲಿಯೋದು . ಓದಿನಲ್ಲಾದರೂ ನಾನು ಅವಳ್ಳನ್ನು ಮೀರಿಸಬೇಕಿತ್ತು ಅದಕ್ಕೆ ಅವಳನ್ನು ಕಲಿಗೊಡಲಿಲ್ಲ . ಎಷ್ಟ್ಟು ಕೆಟ್ಟ ಮಗಳು ನಾನು , ನನ್ನ ಬಗ್ಗೆ ನನಗೆ ಅಸಹ್ಯ ಆಗುತ್ತೆ . ಅದಕ್ಕೆ ದೇವರು ಈ ರೀತಿ ಶಿಕ್ಷಿಸ್ತಿರೋದು .


ಅಮ್ಮನ ಕಾಗದಕ್ಕೆ ಬೇಕಾಬಿಟ್ಟಿ ಉತ್ತರ ಬರೀತಾ ಇದ್ದೆ . ಅಮ್ಮ ಬುದ್ದಿವಂತಳ್ಳು ಅರ್ಥ ಮಾಡಿಕೊಂಡು ಸುಮ್ನಾಗುತ ಇದ್ದಳು

ಆದರು ಬುದ್ದಿ ಮಾತು ಹೇಳುತಾನೆ ಇರ್ತಿದ್ಳು . ಆದರೆ ನಾನುಕೇಳಬೇಕಲ್ಲ ಪ್ರೀತಿ ಪ್ರೇಮ ಅಂತ ಯವನ್ನೋ ನಂಭಿ ನನ್ನ ಸರ್ವಸ್ವ ಕಳ್ಕೊಂಡೆ .ಅವನು ಕೈಕೊಟ್ಟು ಓಡಿಹೋದ . ಆದರು ನಾನೇನು ಭಯ ಪಡಲಿಲ್ಲ .ಓದು ಇದೆ ,ಕೆಲಸ ಇದೆ ,ಕೈತುಂಬ ಸಂಬಳ. ಸ್ವಲ್ಪ ನೋವಾದರೂ ದೈರ್ಯದಿಂದ ಪರಿಸ್ಥಿತಿ ಎದುರಿಸಿ ಅಮ್ಮನಿಂದ ಎಲ್ಲ ಮುಚ್ಚಿಟ್ಟು ಬದುಕುತ್ತಾ ಇದ್ದೆ . ಆಗಲೇ ಎದುರಾಯಿತು ಮತ್ತೊಂದು ಶಾಕ್ , ನಾನು ತಾಯಿ ಆಗ್ತಾ ಇದ್ದೆ . ವಿಷ್ಯ ತಿಳಿತಾ ಇದಂತೆ ಗರಬಡಿದಂತೆ ಕುಳಿತುಬಿಟ್ಟೆ . ಇದು ನಾನು ಊಹಿಸಿರಲಿಲ್ಲ . ಆಗ ಶುರು ಆಯಿತು ನನ್ನ ಕಷ್ಟ್ಟ , ಕೆಲಸ ಮಾಡಿಕೋತ ಬಯಕೆ ಸಂಕಟದಿಂದ ಒದ್ದಾಡಿಹೋದೆ . ಅಮ್ಮನ ನೆನಪು ಕಾಡೋದಿಕ್ಕೆ ಶುರು ಆಯಿತು . ಅಮ್ಮನೊಡನೆ ಮಾತಾಡಿ ವರ್ಷಗಳೇ ಕಳೆದು ಹೋಗಿದೆ ಈಗ ಅವಳ ಸಹಾಯ ಕೇಳೋದಾದರೂ ಹೇಗೆ ? ಅಬ್ಬಾ ಎಷ್ಟ್ಟು ಕಷ್ಟ್ಟ ಜೀವನ ಸಾಕಪ್ಪ ಸಾಕು ಅನಿಸಿಬಿಟ್ಟಿದೆ .


ಒಂಬತ್ತು ತಿಂಗಳು ಕಳಿಯೋ ಅಷ್ಟ್ಟರಲ್ಲಿ ಸಾಕು ಸಾಕಾಯಿತು . ಬರುಬರುತ್ತಾ ಅಮ್ಮನ ನೆನಪು ಜಾಸ್ತಿ ಆಗಿ ಅಮ್ಮನಿಗೆ ಕಾಗದ ಬರೆದೆ ನನ್ನ ಪರಿಸ್ಥಿತಿಯ ಬಗ್ಗೆ . ಅವಳಿಂದ ಏನು ಉತ್ತರ ಬರ್ಲಿಲ್ಲ . ದಿನ ಕಾಯುತ್ತ ಇದೀನಿ ಬರಲೇಇಲ್ಲ ಉತ್ತರ .
ಕೆಲಸ ಸರಿಯಾಗಿ ಮಾಡೋದಕ್ಕೆ ಆಗುತ್ತ ಇಲ್ಲ , ಮನೆ ಆಫೀಸ್ ಎರಡು ಕಡೆ ದುಡಿತ ಸುಸ್ತಾಗುತ್ತಾ ಇದೆ .ಹೀಗೆ ಒದ್ದಾಡುತ್ತಾ ಇರಬೇಕಾದರೆ ನನಗೆ ನೋವು ಶುರು ಆಗಿ ಹಾಸ್ಪಿಟಲ್ನಲ್ಲಿ ಒಂಟ್ಟಿಯಾಗಿ ಹೆರಿಗೆ ನೋವು ಅನುಭವಿಸುತ್ತ ಇದೀನಿ .
ಇದು ನನ್ನ ತಪ್ಪು ಅಲ್ವಾ , ನಾನು ಮಾಡಿಕೊಂಡಿರೋ ತಪ್ಪು , ನನ್ನ ಅಹಂಕಾರಕ್ಕೆ ದೇವರು ಸರಿಯಾದ ಶಿಕ್ಷೆ ಕೊಟ್ಟ .ಈಗ ನಾನು ಏನು ಮಾಡಲಿ ಅಮ್ಮ ಬರಲಿಲ್ಲ , ನಾನು ಹೇಗೆ ಮಗುನ ಸಾಕಲಿ , ಅಮ್ಮ ಅಮ್ಮ ನೋವು ಅಮ್ಮ....


ಎಲ್ಲೋ ಆಕಾಶದಲ್ಲಿ ತೇಲ್ತಾ ಇರೋ ಅನುಭವ ನನ್ನ ಹಣೆಮೇಲೆ ತಂಪಗಿನ ಸ್ಪರ್ಶ, ಸ್ವರ್ಗದಲ್ಲಿ ತೇಲಾಡ್ತಿರೋ ಅನುಭವ .ನಿದಾನವಾಗಿ ಕಣ್ಣು ತೆಗೆದರೆ ಎದುರಿಗೆ ಅಮ್ಮ ನಸುನಗುತ ಇರೋ ಅಮ್ಮ ಒಂದು ನಿಮಿಷ ನಂಬೋದಕ್ಕೆ ಆಗಲಿಲ್ಲ . ಅಮ್ಮ ನನ್ನ ಅಮ್ಮ ಮತ್ತಷ್ಟು ಚೆಲುವಾಗಿ ಕಂಡಳು . ಸ್ವಲ್ಪ ತಡ್ಕೋ ಮಗಳೇ .ಮಗುವಿನ ಮುಖ ನೋಡಿದ ಕೂಡಲೇ ನಿನ್ನ ನೋವೆಲ್ಲಾ ಮರೆತು ಹೋಗುತ್ತೆ . ನಾನು ತುಂಬಾ ಪ್ರಯತ್ನ ಪಟ್ಟೇ ಬೇಗ ಬರೋದಿಕ್ಕೆ ಆಗಲಿಲ್ಲ ,ರಾಜೀನಾಮೆ ಸ್ವೀಕರಿಸಲಿಲ್ಲ ಶಾಲೆಲಿ ,ನಾನು ಪಟ್ಟು ಬಿಡದೆ ರಾಜೀನಾಮೆ ಕೊಟ್ಟೆ ಅದಕ್ಕೆ ಲೇಟಾಯಿತು . ಇನ್ನು ನಾನು ನಿನ್ನ ಜೊತೇನೆ ಇರ್ತಿನಿ . ನೀನು ಕೆಲಸಕ್ಕೆ ಹೋದರೆ ಪಾಪುನ ನೋಡ್ಕೊಬೇಕಲ್ಲ . ನೀನೇನು ಯೋಚಿಸಬೇಡ ನಾನಿದೀನಿ .
ನನ್ನ ಕಣ್ಣಿಂದ ಒಂದೇ ಸಮ ನೀರು ಬರ್ತಾ ಇತ್ತು ನಾಚಿಕೆ ಇಂದ ಸತ್ತುಹೋಗಬೇಕೆನಿಸಿತು .ನಾನು ಎಷ್ಟ್ಟು ಅವಮಾನ ಮಾಡಿದರು ನನ್ನ ಹಾಗು ನನ್ನ ಮಗುವಿಗೋಸ್ಕರ ತನ್ನ ಕೆಲಸ ರಾಜೀನಾಮೆ ಕೊಟ್ಟು ಬಂದ ನನ್ನ ಅಮ್ಮನಿಗೆ ನಾನು ಏನು ಕೊಟ್ಟು ಋಣ ತೀರಿಸಲಿ .
ಕಾಲು ಇಡ್ಕೊಂಡು ಕ್ಷಮೆ ಕೇಳೀತೀನಿ , ಅವಳ ಮನಸ್ಸನ್ನು ಗೆಲ್ಲುತಿನಿ
ಅವಳಿಗೆ ಹೇಗೆ ಬೇಕೋ ಆಗೇ ಬತುಕುತೀನಿ
ನನ್ನ ಮಗುನ ಅವಳಿಗೆ ಒಪ್ಪಿಸಿ ನಾನು ಅವ್ಳಿಗೆ ಮತೊಮ್ಮೆ ಮಗುವಾಗಿ ಬತುಕುತೀನಿ ಬತುಕಿ ಗೆಲ್ಲುತಿನಿkannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.