ನನ್ನೊಲವಿಲ್ಲದೆ

ವಿದ್ಯಾರ್ಥಿ ಜೀವನದ ಅತಿ ಮುಖ್ಯ ಘಟ್ಟವೆಂದೇ ಪರಿಗಣಿಸಲ್ಪಡುವ ೧೦ನೇ ತರಗತಿಯ ಪರೀಕ್ಷೆಯಲ್ಲಿ ನಾ ನನ್ನವರ ಅಪೇಕ್ಷೆಗಳನ್ನು ಹುಸಿಗೊಳಿಸಿದ್ದೆ, ಅದರರ್ಥ ನಾ ಅನುತ್ತೀರ್ಣನಾಗಿದ್ದೆ ಎಂದೇನಲ್ಲ, ಆದರೆ ನಿರೀಕ್ಷಿತ ಅಂಕಗಳನ್ನು ಗಳಿಸುವಲ್ಲಿ ವಿಫಲನಾಗಿದ್ದೆ. ಆಗಿದ್ದಾಗ್ಯೂ ಗೊಂದಲಗಳ ನಡುವೆಯೇ ಆಕಾಶದಲ್ಲಿ ನಕ್ಷತ್ರಗಳಿರುವಂತೆ ನನ್ನೀ ಕಂಗಳಲ್ಲಿ ಅಗಣಿತ ಸಂಖ್ಯೆಯ ಕನಸುಗಳನ್ನು ಕಟ್ಟಿಕೊಂಡು ವಾಣಿಜ್ಯ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಕಾಲೇಜಿನ ಮೆಟ್ಟಿಲೇರಿದ್ದೆ. ನಾ ಹಿಂದೆ ಮಾಡಿದ್ದ ತಪ್ಪುಗಳನ್ನು ಪುನರಾವರ್ತಿಸದೆ ಕನಸುಗಳ ಬೆನ್ನಟ್ಟಿ ಹೊರಟಿದ್ದ ನನಗೆ ಆ ಬಾರಿ ಯುಶಸ್ಸು ಲಭಿಸಿತ್ತು. ಅಂದುಕೊಂಡಂತೆ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದೆ.

ಆ ಫಲಿತಾಂಶ ಬಂದ ದಿನವೇ ನನ್ನ ಬದುಕಿನ ದಿಕ್ಕೇ ಬದಲಾದದ್ದು, ಕಾರಣ ಫಲಿತಾಂಶ ಒಂದೇ ಅಲ್ಲ ನನ್ನವಳು. ಹ್ಹಾ ನನ್ನವಳು.

ನಾ ನನ್ನ ಸ್ನೇಹಿತರೊಡಗೂಡಿ ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿರಬಹುದಾದ ಫಲಿತಾಂಶದ ಪಟ್ಟಿಯಲ್ಲಿ ನನ್ನ ಹೆಸರನ್ನು ಹುಡುಕುವ ಕಾರ್ಯಕ್ಕೆ ಕಾರ್ಯಾಚರಣೆ ರೂಪಿಸಿ ಕಾಲೇಜಿನ ಕಡೆ ಮುಖ ಮಾಡಿದ್ದೆನಲ್ಲದೆ ಆ ಕಾರ್ಯದಲ್ಲಿ ಜಯಗಳಿಸಿದ್ದೆ.

ಈ ನಡುವೆ ಯಾಕೋ ಬಾಯಾರಿ ಅಲ್ಲೇ ಪಕ್ಕದ ಮೆಟ್ಟಿಲುಗಳ ಬಳಿ ಇರಿಸಿದ್ದ ವಾಟರ್ ಕೂಲರ್ ನಲ್ಲಿ ನೀರು ಕುಡಿಯಲು ಹೋದೆ. ಆ ಸಮಯದಲಲ್ಲಿ ಅಲ್ಲಿಯೇ ಗುಸುಗುಸು ಮಾತಾಡುತ್ತಾ ಹುಡುಗಿಯರಿಬ್ಬರು ನನ್ನ ಕಂಡು ದಿಗ್ಬ್ರಾಂತರಾಗಿ ಒಬ್ಬರನ್ನೊಬ್ಬರು ನೋಡುತ್ತಾ ಸುಮ್ಮನಾದರು.

ಅವರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ನಾನು ಹೋದ ಕೆಲಸವನ್ನು ಪೂರ್ಣಗೊಳಿಸಿಕೊಂಡು ಹಿಂದಿರುಗಬೇಕೆನ್ನುವಷ್ಟರಲ್ಲಿಯೇ ಇಬ್ಬರಲ್ಲೊಬ್ಬಳು "ಎಕ್ಸ್ ಕ್ಯೂಸ್ ಮಿ" ಎಂದಳು. ನಂತರ ಸ್ವಲ್ಪ ಯೋಚಿಸಿ "ಕಂಗ್ರಾಟ್ಸ್" ಎಂದಾಗ ಮತ್ತೊಬ್ಬಳು ಕೂಡ ಅದನ್ನೇ ಪುನರುಚ್ಚಯಿಸಿದಳು. ನನ್ನ ಅಭಿನಂದಿಸಿದ ಅವರಿಗೆ ಧನ್ಯವಾದಗಳನ್ನು ಹೇಳಲು ಅವಕಾಶ ನೀಡದೆ "ಇವಳು ತಮ್ಮ ಬಳಿ ತುಸು ಮಾತನಾಡಬೇಕೆಂದಿಹಳು" ಎಂದೇಳಿ ಕ್ಷಣಾರ್ಧದಲ್ಲೇ ಮರೆಯಾದಳು. ಮೆಲ್ಲನೆ ಸುತ್ತಾ ಗಮನಿಸಿ ಮಾತನಾಡಲಾರಂಭಿಸಿದ ಇವಳು ಇವಳ ಮತ್ತು ಮರೆಯಾದವಳ ಅನುಪಸ್ಥಿತಿಯಲ್ಲೀ ಅವಳನ್ನೂ ಸಹ ಪರಿಚಯಿಸಿದಳು.

ಅವರು ನನ್ನ ಜ್ಯುನಿಯರ್ಸ್ ಎಂದಷ್ಟೇ ತಿಳಿದಿದ್ದ ನನಗೆ ಅಂದೇ ತಿಳಿದದ್ದು ಎದುರಿಗಿದ್ದವಳು "ಪ್ರಣತಿ" ಮರೆಯಾದವಳು "ಪ್ರಾರ್ಥನಾ" ಎಂದು. ಇಷ್ಟಾದರೂ ನನ್ನ ಪರಿಚಯಿಸಿಕೊಳ್ಳುವ ಪರಿವೆ ಇಲ್ಲದೆ ಮೌನಿಯಾಗಿ ನಿಂತಿದ್ದ ನನ್ನನ್ನೇ ಕೆಲ ಕಾಲ ದಿಟ್ಟಿಸಿ ನೋಡಿತ್ತಾ " ನಾ ನಿಮ್ಮ ಪ್ರೀತಿಸುವೆ, ಐ ಲವ್ ಯೂ ಎಂದ, ಆ ಅನಿರೀಕ್ಷಿತ ಪದಗಳು ನನ್ನನ್ನು ಮೂಕನನ್ನಾಗಿಸಿದ್ದವು. ಕೆಲ ಕಾಲ ನಮ್ಮಿಬ್ಬರ ನಡುವೆ ಮೌನ ಅನಂತರದಲ್ಲಿ ಮೌನ ಮುರಿದ ನಾನೇ ಅವಳ ಪ್ರಸ್ತಾವನೆಯನ್ನು ಸುಲಭವಾಗಿ ತಳ್ಳಿಹಾಕಲಾರದೆ ಸಮಯಾವಕಾಶ ಕೇಳಿ ಕಾಲ್ಕಿಳಲೆತ್ನಿಸಿದಾಗ ಅಲ್ಲೇ ಗೋಡೆ ಮರೆಯಲ್ಲಿ ನಿಂತು ನಮ್ಮ ಸಂಭಾಷಣೆಯನ್ನಾಲಿಸುತ್ತಿದ್ದವಳು ದಿಡೀರ್ ಎದುರಾಗಿ "ತಮ್ಮ ಫೋನ್ ನಂಬರ್" ಎಂದಾಗ ಹಿಂದೂ-ಮುಂದೂ ಯೋಚಿಸದೆ ಕೊಟ್ಟಿಯೇ ಬಿಟ್ಟಿದೆ.

ಮನೆಗೆ ಹಿಂದಿರುಗಿ ನನಗೆ ನನ್ನ ಮುಂದಿನ ವಿದ್ಯಾಭ್ಯಾಸದ ಕುರಿತಂತೆ ಕಿಂಚಿತ್ತು ಯೋಚನೆ ಇರಲಿಲ್ಲ ಬದಲಾಗಿ ಇದ್ದದ್ದೆಲ್ಲಾ ಅನ್ನೋನ್ ನಂಬರ್ ಗಳಿಂದ ನನಗೆ ಬರರುತ್ತಿದ್ದ ಕರೆಗಳ ಹಾಗೂ ಸಂದೇಶಗಳ ಬಗೆಗೆನ ಕುತೂಹಲ. ಯಾವುದೇ ಅನ್ನೋನ್ ನಂಬರ್ ನನ್ನ ಮೊಬೈಲ್ ಪರದೆಯ ಮೇಲೆ ಮೂಡಿತೆಂದರೆ ಅವಳೆ ಇರಬೇಕೆನ್ನುವೆ ಆಶಯ. ಸುಳ್ಳಾಗಲಿಲ್ಲ ಅದು ಎರಡು ದಿನದ ಬಳಿಕ ಕರೆ ಮಾಡಿದ್ದ ಅವಳು ಬಹಳ ಪರಿಚಿತಳಂತೆ ನನ್ನ ಹಾಗೂ ನನ್ನವರ ಯೋಗ ಕ್ಷೇಮ ವಿಚಾರಿಸಿ ಪ್ರೀತಿಯ ಸೊಲ್ಲೆತ್ತದೆ ಫೋನಿಟ್ಟಿದ್ದಳು.

ನಂತರದ ದಿನಗಳಲ್ಲಿ ನಮ್ಮಿಬ್ಬರ ನಡುವೆ ಕೆಲ ದೂರವಾಣಿ ಸಂದೇಶಗಳಾರಿದಾಡಿ ಅನಿಸಿಕೆ ಅಭಿಪ್ರಾಯಗಳ ವಿನಿಮಯವಾಗಿತ್ತಾದರೂ ಅವ್ಯಾವು ಪ್ರೀತಿಯ ಕುರಿತಾದಂತಹವುಗಳಾಗಿರಲಿಲ್ಲ.

ಈ ಮಧ್ಯೆ ನನಗೇಕೋ ಅಪರಾಧಿ ಭಾವ ಕಾಡಲಾರಂಬಿಸಿ ಬೇಡದ ವಿಚಾರಗಳಿಗೆ ನಾ ಅನಗತ್ಯವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ತಲೆಕೆಡಿಸಿಕೊಳ್ಳುತ್ತಿರುವೆ ಎಂದನಿಸಿತು. ಭವಿಷ್ಯ, ಕಾರಣ ನಾ ಪ್ರೀತಿಯನ್ನು ವ್ಯಾಖಾನಿಸಿಕೊಂಡಿದ್ದ ಬಗೆ ಇರಬಹುದು. ಅಂದಿಗೆ ನನ್ನ ಪ್ರಕಾರ ಪ್ರೀತಿ ಎಂದರೆ ಕೇವಲ ಆಕರ್ಷಣೆ, ಬಾಲಿಷ ಮನಸ್ಸುಗಳ ನಡುವೆ ಉಂಟಾಗುವ ಅತಿರೇಕದ ಭಾವ, ಅಗತ್ಯ ಅನಿವಾರ್ಯಗಳ ಮುಖವಾಡವಾಗಿತ್ತು. ಇದ್ಕಕ್ಕೆ ಪುಷ್ಟಿ ನೀಡುವಂತಿದ್ದವು ನಾ ಕಂಡಿದ್ದ ಕೆಲ ಪ್ರೇಮ ಪ್ರಕರಣಗಳು ನನಗೆ ಆ ಪೂರ್ವದಲ್ಲಿ ಪ್ರಪೋಸ್ ಮಾಡಿದ್ದವರ ಹಾವ ಭಾವ ಮತ್ತವರ ಪ್ರೀತಿಯ ಬಗೆಗಿನ ಅನಿಸಿಕೆಗಳು.

ಅಷ್ಟರಲ್ಲಿಯೇ ನನಗೆ ಮತ್ತೊಮ್ಮೆ ಕರೆ ಮಾಡಿದ್ದ ಪ್ರಣತಿ ನನ್ನನ್ನು ನೇರವಾಗಿ ಭೇಟಿ ಮಾಡಬೇಕೆಂದು ಪ್ರಸ್ತಾಪಿಸಿದಾಗ, ನನಗೂ ನನ್ನ ಮನದ ಗೊಂದಲಗಳ ನಿವಾರಣೆಗೆ ಒದಗಿದ ಉತ್ತಮ ಅವಕಾಶವೆಂದೆನಿಸಿ ಒಪ್ಪಿಗೆ ಸೂಚಿಸಿ, ನಾ ಅವಳ ಭೇಟಿಯಾದಾಗ ಏನನ್ನೆಲ್ಲ ಕೇಳಬೇಕು ಏನನ್ನೆಲ್ಲಾ ಹೇಳಬೇಕು ಎಂಬುದರ ಕುರಿತು ಪೂರ್ವ ಸಿದ್ಧತೆ ನಡೆಸಿ ನೀಲಿ ನಕ್ಷೆಯೊಂದನ್ನು ತಯಾರಿಸಿ ಅವಳೇ ನಿಗದಿ ಪಡಿಸಿದ್ದ ಸ್ಥಳದಲ್ಲಿ ಅವಳ ಮತ್ತವಳ ಗೆಳತಿ ಪ್ರಾರ್ಥನಾಳ ಮುಂದೆ ನಿಂತಿದ್ದೆ.

ತಡ ಮಾಡದೆ ಮಾತಿಗಿಳಿದ ಪ್ರಾರ್ಥನಾ ಓದಿನ ಬಗ್ಗೆ ಕರಿಯರ್ ಬಗ್ಗೆ ಮಾತಿಗಿಳಿದಾಗ ಆ ವಿಚಾರಗಳ ಕುರಿತು ಮಾತನಾಡುವ ಮನಸ್ಸಿಲ್ಲದಿದ್ದರೂ ಸ್ವಲ್ಪ ಸಮಯ ಚರ್ಚಿಸಿ ವಿಷಯಾಂತರ ಮಾಡಿ ನಾನು "ಪ್ರಣತಿ ನಿನ್ನ ಬಳಿ ಖಾಸಗಿಯಾಗಿ ಮಾತನಾಡಬೇಕೆಂದೆ". ಅದ ಕೇಳಿದವಳು ನಮ್ಮಿಂದ ದೂರ ಸರಿಯಲು ಮುಂದಾದಾಗ ತಡೆದ ಪ್ರಣತಿ "ಇವಳಿದ್ದರೆ ನನಗೇನೂ ಸಂಕೋಚವಿಲ್ಲ ನಿಮಗೇನಾದರೂ??" ಎಂದಾಗ ಸರಿ ತೊಂದರೆ ಇಲ್ಲವೆಂದೇಳಿದ ನಾನು ನಾ ಮೊದಲೇ ತಯಾರಿಸಿಕೊಂಡಿದ್ದ ಪ್ರಶ್ನೆಗಳನ್ನು ಕೇಳಲಾರಂಭಿಸಿ "ಪ್ರೀತಿ ಎಂದರೇನು??" "ನನ್ನೇ ಏಕೆ ಪ್ರೀತಿಸುವೆ??" " ನಾನೇಕೆ ನಿನ್ನನ್ನ ಪ್ರೀತಿಸಬೇಕು??" ಎಂದಾಗ ಅವಳು ನೀಡಿದ ಉತ್ತರಗಳೊಮ್ಮೆ ಅಚ್ಚರಿ ಮೂಡಿಸಿದ್ದವು. ಕ್ಷಮಿಸಿ ನಾ ನಾವುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಏಕೆಂದರೆ ಅವು ನನ್ನವಳ ಕಾಫಿರೈಟೆಡ್ ವ್ಯಾಖ್ಯಾನಗಳು. ಅವಳ ಪರಿಪಕ್ವವಾದ ನಡವಳಿಕೆಗಳಿಗೆ, ಉತ್ತರಗಳಿಗೆ ನಾ ಸೋತ ಸೋಲು ಎರಡನೇಯದಾಗಿತ್ತು. ಹ್ಹಾ ಮೊದಲನೆಯದು ನಾ ಅವಳನ್ನು ಹತ್ತಿರದಿಂದ ಕಂಡ ನನ್ನ ಫಲಿತಾಂಶ ಹೊರಬಿದ್ದ ದಿನದ್ದು. ಅಂದೇ ನಾನವಳ ಕಣ್ಣ ನೋಟಕ್ಕೆ ನನಗೆ ತಿಳಿಯಾದ ಹಾಗೆ ಸೋತಿದ್ದೆನಾದರೂ ಅರಿವಾಗಲು ತಡವಾಗಿತ್ತು. ಸಣ್ಣ ಕಣ್ಣಂಚಲ್ಲೆ ಆಕೆ ಕದ್ದಿದ್ದ ನಾನ್ನಾ ಮನವ ನಾ ಹುಡುಕುತ್ತಿದ್ದೆ ನಾನಿಲ್ಲದ ನನ್ನೊಳಗೆ. ಆಗ ನನ್ನ ಸಹಾಯಕ್ಕೆ ಧಾವಿಸಿ ನನಗರಿವು ಮಾಡಿಕೊಟ್ಟವಳವಳೆ ನಾ ನನ್ನೊಳಗಿಲ್ಲ ಬದಲಾಗಿ ಅವಳೊಳಗಿರುವೆನೆಂದು. ನನ್ನುಡುಕಾಟದ ಪ್ರಯತ್ನದಲ್ಲಿ ನನ್ನೊಳಗೆ ಅವಳು ಸಿಕ್ಕಿದ್ದಳು. ನನಗೆ ತಿಳಿಯದ ಹಾಗೆ ನನ್ನೊಳಗಿಳಿದಿದ್ದಳು.

ಇಷ್ಟಾದರೂ ಅವಳ ಒಲುಮೆಯ ಕರೆಗೆ ಸಮ್ಮತಿಸದೆ ಪುನಃ ಕಾಲಾವಕಾಶ ಕೇಳಿ ವಾಪಸ್ಸಾಗಿದ್ದೆ.

ಎನ್ನ ಮನದೊಳಗೊಂದು ಪ್ರೀತಿ ಪಾಠಶಾಲೆಯ ಉದ್ಘಾಟಿಸುವುಡರೊಂದಿಗೆ ಅಲ್ಲಿಯ ಶಿಕ್ಷಕಿಯೂ ಆಗಿ ನೇಮಕವಾಗಿರುವಳೆಂದು ಅಲ್ಲಿ ನಾನಾವಳ ಅಸಹಾಯಕ ವಿದ್ಯಾರ್ಥಿಯಾಗಿರುವೆನೆಂದೆನಿಸಿ ನನ್ನೆದೆಯ ಒಳಗಿಳಿದ ತಣ್ಣನೆಯ ಭಾವವೊಂದು ಪಿಸುಗುಡಲು ಆರಂಭಿಸಿತ್ತು ನಾನವಳ ಪ್ರೀತಿಸುವೆನೆಂದು. ತದನಂತರದಲ್ಲೇ ನಾ ನನ್ನೊಲವ ಒಪ್ಪಿ ಅಪ್ಪಿ ಕೊಳ್ಳುವುದೇ ಲೇಸೆನಿಸಿ ನಾನೆ ಕರೆ ಮಾಡಿ ಈಗಾಗಲೇ ಭೇಟಿಯಾಗಿದ್ದ ಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದೆ. ಮಗದೊಮ್ಮೆ ನಾವಿಬ್ಬರು ಭೇಟಿಯಾಗಿದ್ದೆವು. ನಮ್ಮೀ ಭೇಟಿಗೂ ಸಾಕ್ಷಿಯಾಗಿದ್ದವಳು ಪ್ರಾರ್ಥನಾ. ಆ ಸಮಯಕ್ಕಾಗಲೇ ಅವರಿಬ್ಬರ ಆತ್ಮೀಯತೆ ಬಗ್ಗೆ ಅರಿವಿದ್ದ ನಾನು ಪ್ರಾರ್ಥನಾಳ ಮುಂದೆಯೇ ನನ್ನ ಪ್ರೀತಿಯ ವಿಷಯ ಅಂಚಿಕೊಂಡು ನನ್ನೆದೆಯ ಪ್ರಿತೀಯ ಬುಟ್ಟಿಯ ನನ್ನವಳೆದುರು ಬಿಚ್ಚಿಟ್ಟಿದ್ದೆ.

ಆ ನಂತರದಲ್ಲಿ ಶುರುವಾಗಿದ್ದು ನನ್ನ ಪ್ರೀತಿಯ ಯಾನ. ಅಲ್ಲವಳ ನಲ್ಮೆಯ ನಾಯಕ ನಾನಾಗಿದ್ದರೆ ನನ್ನೊಲುಮೆಯ ನಾಯಕಿ ಅವಳಾಗಿದ್ದಳು. ಆಗಲೇ ತಿಳಿದದ್ದು ಸಿಹಿ ಸತ್ಯ ಒಂದು ಅದೇ ನನ್ನ ಬಾಳಿನ ಭಾಗ್ಯದ ಬಾಗಿಲು ತೆರೆದವರು ನನ್ನ ಪ್ರಿತೀಯ ಕನ್ನಡ ಶಿಕ್ಷಕಿ ಭಾಗ್ಯರವರೆಂದು. ನನ್ನ ಬಗ್ಗೆ ಅವರಿಗಿದ್ದ ಕೆಲ ಅನಿಸಿಕೆ ಅಭಿಪ್ರಾಯಗಳನ್ನು ನನ್ನವಳ ತರಗತಿಯಲ್ಲೊಂಮ್ ಅಂಚಿಕೊಂಡಿದ್ದರಂತೆ, ಅವುಗಳೇ ನನ್ನೊಲವಿಗೆ ನನ್ನ ಬಗ್ಗೆ ಕುತೂಹಲ ಮೂಡಿಸಿ ನನ್ನ ಬಗೆಗಿನ ಸಂಶೋದನೆಗೆ ದಾರಿ ಮಾಡಿಕೊಟ್ಟದ್ದು. ಈ ದಾರಿಯಲ್ಲೇ ನನ್ನವಳು ಮೆಚ್ಚಿದ್ದು ನನ್ನ. ಕಡಿಮ್ ಕಾಲಾವಕಾಶದಲ್ಲೇ ದೊಡ್ಡ ಸಂಶೋದನೆಯೊಂದನ್ನು ನಡೆಸಿ ನನ್ನ ಬಗ್ಗೆ ಅಪರಿಮಿತ ಮಾಹಿತಿಯನ್ನು ಕ್ರೂಡೀಕರಿಸಿದ್ದಳು, ನನ್ನ ಬಗ್ಗೆ ನನಗೆ ಅರಿಯದ ಹಲವು ವಿಚಾರಗಳ ಬಗ್ಗೆ ಆಕೆಗರಿವಿತ್ತು.

ನಾ ಅಂದುಕೊಂಡಂತೆ ಆಕೆ ಇದ್ದಕ್ಕಿದ್ದಾಗೆ ಮೆಚ್ಚಿರಲಿಲ್ಲ ನನ್ನ, ಬದಲಾಗಿ ನನಗೆ ತಿಳಿಯದೆ ನನ್ನ ಬಗ್ಗೆ ಸಂಪೂರ್ಣವಾಗಿ ತಿಳಿದು ಮೆಚ್ಚಿದ್ದಳು. ನಮ್ಮಿಬ್ಬರ ನಡುವಿನ ಹಾವ ಭಾವಗಳಲ್ಲಿ ಅನೇಕ ಸಾಮ್ಯತೆಗಳಿದ್ದವು ಅದಕ್ಕೆ ಕಾರಣ ನಾವಿಬ್ಬರು ಜುಲೈ ತಿಂಗಳಲ್ಲಿ ಜನಿಸಿದ್ದೊ ಅಥವಾ ಮಂಡ್ಯ ಮಣ್ಣಲ್ಲಿ ಹುಟ್ಟಿದ್ದೋ ಇರಬೇಕೆನಿಸುತ್ತದೆ.

ನಾವಿಬ್ಬರೂ ಪ್ರೇಮಿಗಳಾಗಿದ್ದರು ನಮ್ಮಗಳ ನಡುವೆ ಇತರರಂತೆ ತಡರಾತ್ರಿಯವರೆವಿಗೂ ಸಂದೇಶಗಳಾರಿದಾಡಿರಲಿಲ್ಲ, ಗಂಟೆಗಟ್ಟಲೆ ಕರೆಗಳಲ್ಲಿ ಮುಳುಗಿರಲಿಲ್ಲ, ಹಾದಿ ಬೀದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡಿರಲಿಲ್ಲ, ಆಗಿದ್ದರೂ ಆಕೆ ನನ್ನನ್ನು ಅರ್ಥಮಾಡಿಕೊಂಡಿದ್ದ ಬಗೆ ಅಚ್ಚರಿ ಮೂಡಿಸುತ್ತಿತ್ತು. ಅವಳು ಬಹಳ ಪ್ರಬುದ್ಧೆಯಾಗಿದ್ದಳು, ದೂರ ದೃಷ್ಟಿ ಉಳ್ಳವಳಾಗಿದ್ದಳು, ನನ್ನ ಪ್ರತೀ ಕನಸುಗಳ ರೂವಾರಿಯೂ ಆಗಿದ್ದಳು, ನಾ ಅವಳೊಟ್ಟಿಗಿದ್ದ ಪ್ರತಿ ಕ್ಷಣಗಳು ಅಮರ. ತನ್ನ ಸಣ್ಣ ಕಣ್ಣಂಚಲ್ಲೆ ಬಹು ದೊಡ್ಡ ಪ್ರಿತಿಯ ಅಂಚಿದ್ದಳು, ನಮ್ಮ ನಮ್ಮವರ ಜೀವನಗಳ ಕುರಿತಂತೆ ಅದೆಷ್ಟೋ ಸುಂದರ ಕನಸುಗಳನ್ನು ಕಂಡಿದ್ದಳು, ಪ್ರತಿ ಕ್ಷಣವೂ ನನ್ನ ಗೆಲುವಿನ ಬಗ್ಗೆಯೇ ಯೋಚಿಸುತ್ತಿದ್ದಳು.

ಹೀಗೆ ಬಹು ಹರ್ಷದಿಂದ ಸಾಗುತ್ತಿದೆ ಈ ಯಾನ ಎನ್ನುವಾಗ ಮೂಡಿಬಂತೊಂದು ತಲ್ಲಣ ಅದುವೇ ಕಾರಣವಾಯ್ತು ಕಣ್ಣಂಚಲ್ಲೆ ಹುಟ್ಟಿದಾ ಪ್ರೀತಿಯೂ ಕಣ್ಣೆದುರಲ್ಲೆ ಮಣ್ಣಾಗಲು.

ಪ್ರಾರ್ಥನಾಳ ಮನೆಯಿಂದ ಅವಳದೇ ದ್ವಿ ಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುವಾಗ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಷಯ ಪ್ರಾರ್ಥನಾಳಿಂದಲೇ ಬರ ಸಿಡಿಲಂತೆ ತಡವಾಗಿ ಬಡಿದಿತ್ತು. ಆ ಹಿಂದಿನ ದಿನವಷ್ಟೇ ಕರೆ ಮಾಡಿದ್ದ ನನ್ನಾಕೆ " ಲೋ ರಾಜಕುಮಾರ ನಿನ್ನ ತುಂಬಾ ನೋಡ್ಬೇಕಂಸ್ತಿದೆ ಕಣೋ" ಎಂದಿದ್ದಳು. ಅದಕ್ಕ್ ಒಪ್ಪಿದ್ದ ನಾನೂ ನಮ್ಮ ಪ್ರೀತಿಯೂ ಹುಟ್ಟಿದ್ದ ಪವಿತ್ರ ಜಾಗವನ್ನೇ ಆಯ್ದುಕೊಂಡು ಮುಂಬರುವ ಭಾನುವಾರಕ್ಕೆ ಸಮಯ ನಿಗಧಿ ಪಡಿಸಿದ್ದೊ. ಆದರೇ ಕನಸಲ್ಲೂ ನಾ ಭಾವಿಸದ ಸ್ಥಿತಿಯಲ್ಲಿ ಸ್ಥಳದಲ್ಲಿ ಅವಳಿದ್ದಳು.

ಕೇವಲ ಫೋಟೋ ಮೂಲಕ ಪರಿಚಯವಿದ್ದ ನನ್ನ ಅತ್ತೆ- ಮಾವ, ಬಾಮೈದರವರನ್ನು ನಾ ಕಂಡದ್ದು ಆಸ್ಪತ್ರೆಯಲ್ಲಿ. ಅಷ್ಟರಲ್ಲಾಗಲೇ ವೈದ್ಯರು ಪರೀಕ್ಷಿಸಿ "ಪ್ರಣತಿ" ಯೂ ಆರಿ ಕತ್ತಲಾವರಿಸುವ ಛಾಯೆಯ ಬಗ್ಗೆ ಸೂಚಿಸಿದ್ದರಂತೆ ಆಗಾಗಿ ಅವರೆಲ್ಲರೂ ನನ್ನವಳ ನಾ ನೋಡಲು ಅವಕಾಶವಿತ್ತರು. ನೋಡಬಾರದ ಸ್ಥಿತಿಯಲ್ಲಿ ನೋಡುತ್ತಾ ನಾ ನಿಂತಿದ್ದಾಗ ನನ್ನ ಮುದ್ದು ಕಂಗಳ ಕಣ್ಣೊಡತಿಯ ಕಣ್ಣಲ್ಲಿ ನೀರರಿದಾಗ ಕಣ್ಣಂಚಲ್ಲೆ ಹುಟ್ಟಿದಾ ಪ್ರೀತಿಯೂ ಕಣ್ಣೆದುರಲ್ಲೇ ಮಣ್ಣಾಗುವ ಭೀತಿ ಎದುರಾಗಿತ್ತು. ಆ ವೇಳೆಯಲ್ಲಿ ಕಣ್ಣಲ್ಲೇ ಆಕೆ ನನ್ನಪ್ಪಿದ್ದನ್ನು ನೆನೆಯುವುದಿರಲಿ ಮರೆಯುವುದೇಗೆ??

ಯಾರ ಶಾಪವೋ ಏನೋ ಅದೇ ನಮ್ಮ ಕಡೆಯ ಭೇಟಿಯಾಯ್ತು!!

ನನ್ನ ಭಾವನೆಗಳ ಭಾವವಾಗಿದ್ದ, ಜೀವದ ಜೀವವಾಗಿದ್ದ ಆ ಜೀವವಿಲ್ಲದೇ ಜೀವಿಸುವುದಕ್ಕಿರಲೇ ಅವಳಿಲ್ಲದ ಬದುಕನ್ನು ನೆನೆಯಲು ಸಾಧ್ಯವಾಗುತ್ತಿಲ್ಲ. ಅವಳೊಡನೆ ನಾನಿಟ್ಟ ಹೆಜ್ಜೆಗಳ ಹಿಂದಿರುಗಿ ನೋಡಿದಾಗ ಕಣ್ಣೀರು ಉಮ್ಮಳಿಸಿ ಬರುತ್ತಿದೆ. ಅವಳು ಬರೆದ ಸೊಗಸಾದ ಬಾಳ ಗೀತೆಯನ್ನು ಅಳಿಸಲಾಗದೆ ಅಳುತ್ತಾ, ನಾ ಕಂಡ ಕನಸುಗಳ ನೆರವೇರಿಕೆಯ ಕನವರಿಕೆಯಲ್ಲಿ ನಾನರಸುತ್ತಿರುವೆ ನನ್ನೊಲುಮೆಯ ನಾಯಕಿಯ ಇಂದಲ್ಲಾ ನಾಳೆ ಬಂದೆ ಬರುವಳೆಂದು ಬಂದೆನ್ನ ಸೇರುವಳೆಂದು ಬಯಸಿ ಕುಳಿತಿರುವೆ. ಬರಲೊಲ್ಲಲವಳೆಂದು, ಬಾರದ ಲೋಕಕ್ಕೆ ತೆರಳಿರುವಳವಳೆಂದುತಿಳಿದಿದ್ದು ಸಹ.

ಇವೆಲ್ಲಾದರುಗಳ ನಡುವೆಯೇ ಅವಳೊಟ್ಟಿಗಿದ್ದ ನೆನ್ನೆ ಮೊನ್ನೆಗಳನ್ನೆಲ್ಲಾ ಮೂಟೆ ಕಟ್ಟಿಟ್ಟಿ ಬದುಕಲೆತ್ನಿಸಿದೆನು ವಿಫಲನಾಗುವುದಿಲ್ಲ ಎಂದು ಭಾವಿಸಿ ಆದ್ರೆ ನನ್ನೆದೆಯ ಬಡಿತವೇ ಅವಳಾಗಿರುವಾಗ ಬದುಕಬಹುದೇ ನಾನವಳ ಮರೆತು? ಸಾಧ್ಯವಾಗಲಿಲ್ಲ . ಅದಕೆ ಇರಬೇಕು ಜೀವವಿಚ್ಚಿಸಿದ್ದು ದೂರವಿರಲು ಈ ದೇಹದಿಂದ ಅಂದೆ, ನ ಯತ್ನಿಸಿದ್ದು ಆತ್ಮಹತ್ಯೆಗೆ!!

ಮುದ್ದು ಮದರಾಸಿಗೆ ಬೇಡವಾದೀ ಜೀವ ಕಲ್ಲು ದೇವನಿಗೆ ಬೇಕಾಗುವೆನೆಂದೆನಿಸಿ... ದೇವನಿಗೂ ಬೇಡವಾಯ್ತೀ ಜೀವ. ಆಗಾಗಿ ಇನ್ನೂ ಬದುಕಿದ್ದೇನೆ ಸಾವ ಬಯಸುತ್ತಾ ಇದನ್ನೆಲ್ಲಾ ಟೈಪಿಸುತ್ತಾ...

ಜೀವದ ಜೀವವಿದ್ದಾಗ ಹಗುರವಾಗಿದ್ದೀ ಜೀವ ಇಂದೇಕೋ ಹೊರಲಾರದಷ್ಟು ಭಾರವಾಗಿ, ಬೆನ್ನೆಲುಬೇ ಮುರಿದಂತಾಗಿ, ಕಂಡೆಲ್ಲಾ ಕನಸುಗಳು ಕಂಬನಿಯಲ್ಲೆ ಕರಗಿ, ಸಾಧನೆ ಸೋಲಾಗಿ, ಜೀವನ ಸಾಕಾಗಿ, ಜೀವ ಬೆಂಡಾಗಿ, ಸಾವು ಬೇಕಾಗಿ, ಶಬರಿ ರಾಮನಿಗಾಗಿ ಕಾಯ್ದಂತೆ ನಿನಗಾಗಿ ಕಾಯ್ದು ಕುಳಿತಿರುವ ನನ್ನಾವರಿಸು ಬಾ ಬೇಗ, ಓ ನನ್ನ ಪ್ರಿಯ ಸಾವೆ ಕೊಂಡೊಯ್ಯೆನ್ನನ್ನು ನಿನ್ನಾಸ್ಥಾನಕ್ಕೆ.....

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.