ಅಪರಿಚಿತಳು

ಕಗ್ಗತ್ತಲಲ್ಲಿ ಆಗಸವನ್ನು ನೋಡುವುದೇ ಬಲು ಚೆಂದ. ಇನ್ನು ಮಿನುಗುವ ನಕ್ಷತ್ರಗಳ ಎಣಿಸುವುದು ಮನಸ್ಸಿಗೆ ಆನಂದ. ನಾನು ಕೂಡ ದಿನಾಲು ನಕ್ಷತ್ರಗಳನ್ನು ಏಣಿಸುತ್ತಾ ಮನದ ತಾಪವನ್ನು ದಿನೇ ದಿನೇ ಕಡಿಮೆ ಮಾಡುತ್ತ ಹೋಗುತ್ತಿರುವೆ. ಅದು ಇರಲಿ, ನಾನು ಇವಾಗ ಹೇಳಲು ಹೊರಟಿರುವ ವಿಷಯವೇ ಬೇರೆಯದು! ಅದೇ ನನ್ನ ಕತೆಯ ನಾಯಕಿಯ ಬಗೆಗೆ!!ಎಲ್ಲರಂತೆ ಅಲ್ಲಾ ಅವಳು. ಗುಣಗಾನದಲ್ಲಿಯೇ ಹಲವಾರು ರೀತಿಯ ನೋಟಗಳ ಹೊತ್ತವಳು, ನೋಡುಗರ ಕಣ್ಣುಗಳ ಟೀಕೆಯಾದರು ಎಲ್ಲರ ಮನದಲ್ಲಿ ಮಗುವಿನಂತೆ ಇರುವಳು, ನೇರ ನುಡಿ ದಿಟ್ಟ ಉತ್ತರ ಪ್ರಶ್ನೆಗಳ ಸುಳಿಯಲ್ಲಿ ಸಿಲುಕದೆ ಎಲ್ಲಾದ್ದಕ್ಕು ಅವಳೇ ಉತ್ತರ. ಕತ್ತಲೆ ಜಗತ್ತಿಗೆ ಹಣತೆಯ ಹಚ್ಚಿ, ಬೆಳಕು ಚೆಲ್ಲಿದ ಸುಂದರಿಯು ಬಾನಂಗಳದ ರವಿಗೂ ಇರುಳಿನ ಚಂದಿರನಿಗೂ ಬಲು ಪ್ರಿಯಳು! ಮುಗ್ಧ ತಾರೆಯಂತೆ ಕಂಗೋಳಿಸುತ್ತ, ನೊಂದು ಬೆಂದವರ ಪಾಲಿಗೆ ಇವಳೇ ಬೆಳದಿಂಗಳ ಚಂದಿರಳು. ಹಸುರೇ ಇವಳ ಸ್ನೇಹ-ಸಂಪತ್ತು. ಕಾಡೆಲ್ಲ ಸುತ್ತಿ ಗಿಡಮರಗಳ ಜೊತೆಗೂಡಿ ಉಪಚರಿಸುವಳು. ಅದೊಂದು ದಿನ ಜೋರಾಗಿ ಮಳೆಯಾಗಿದ್ದರಿಂದ ಸಿಡಿಲಿನ ಬಡಿತಕ್ಕೆ ಅವಳ ಮನೆಯೆದುರಿನ ಮರವೊಂದು ಧರೆಗೆ ಉರಳಿತ್ತು. ಅದನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಾ, ಒಡಹುಟ್ಟಿದವರನ್ನೇ ಕಳೆದುಕೊಂಡಂತೆ ಆ ಸಿಡಿಲಿಗೆ ಶಪಿಸುತ್ತಾ, ಅಂದು ನೀರು ಊಟ ಬಿಟ್ಟಿದ್ದು ಇವಳೇ. ಆದರೆ ಅಷ್ಟಕ್ಕೆ ಸುಮ್ಮನಾಗಲಿಲ್ಲ! ಮನೆಯಂಗಳದಲ್ಲಿಯೆ ಒಂದಕ್ಕೆ ಎಂಬಂತೆ ನಾಲ್ಕು ಸಸಿಗಳನ್ನು ನೆಟ್ಟು, ಮಣ್ಣು ನೀರು ಹೋಯ್ದೆ ಅಂದಿನ ಉಪವಾಸವನ್ನು ಕೈಬಿಟ್ಟಿದ್ದು. ಮನುಷ್ಯ ಮನುಷ್ಯರನ್ನೆ ಪ್ರೀತಿ ವಿಶ್ವಾಸದಿಂದ ಕಾಣದ ಈ ಕಾಲದಲ್ಲಿ ಅಂದು ಮಾನವೀಯತೆಯ ಪಾಠ ಕಲಿತಿದ್ದು ಇವಳಿಂದಲೆ. ಬಣ್ಣದ ಲೋಕದಲ್ಲಿ ಇದ್ದರೂ ಬಣ್ಣದ ಮಾತುಗಳಿಗೆ ಮರುಳಾಗದೆ ಎಲ್ಲವನ್ನೂ ನಿರಂಕುಶವಾಗಿ ಸ್ವೀಕರಿಸುವಳು. ಯಾರ ಹಂಗು ಇಲ್ಲದೆ ಮನಸ್ಸಿಗೆ ಅನಿಸಿದಂತೆ ಮಾಡುವ ಛಲವಾದಿ. ಪರರ ಒಳಿತಿಗಾಗಿ ಸದಾ ಮಿಡಿಯುವ ಹೃದಯ. ಮುನ್ನೆಚ್ಚರಿಕೆಯಿಂದ ಮುನ್ನಡೆಯುವಳು. ಹೆಜ್ಜೆ ಹೆಜ್ಜೆಗೂ ಮುಳ್ಳಿನ ಬೇಲಿಗಳು, ವಿಷವನ್ನು ಉಗುಳುವ ವಿಷಕಾರಿ ಸರ್ಪಗಳು, ಕ್ಷಣ ಹೊತ್ತು ಮೈಮರೆತರೆ ಸಾಕು ಮುಳ್ಳುಗಳು ಚುಚ್ಚಿ ಮೈಯಲ್ಲ ಪರಚಿ ಸರ್ಪಗಳು ಹೌಹಾರುವವು. ಯಾವುದಕ್ಕೂ ಎದೆಗುಂದದೆ ಸ್ನೇಹಕ್ಕೆ ಮನವೊಡ್ಡಿ ಹೊಸ ಲೋಕವೇ ಸೃಷ್ಟಿಸುವ ಧೀರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾನತೆಯ ಆಶಯ ಹೊತ್ತಿ ಜನಮನರ ಗಮನಸೆಳೆದು ಬಂಧನದ ಸಂಕೋಲೆಗಳನ್ನು ಮೀರಿದವಳು. ಇವಳೇ ನನ್ನ ಕಥಾ ನಾಯಕಿ ಮೈಮನವನ್ನು ಸೆಳೆದು ಬರವಣಿಗೆಯಲ್ಲೆ ರೂಪುಗೊಂಡು, ಎಷ್ಟು ಹಾಳೆ ತಿರುಚಿ ಬರೆದರು ಸಾಲದು ಅವಳ ಗುಣಗಾನ. ಹಾಳೆಗಳೆ ಮುಗಿದರು ಲೇಖನಿಯು ಕುಗ್ಗದೆ ಬರೆಯಲು ಹಾತೊರೆದಿದೆ. ಅದಕ್ಕು ಅರಿವಿಲ್ಲ ಉಟ್ಟ ಶಾಹಿ ಹಾಳೆಗೆ ಮೆತ್ತಿ ಖಾಲಿಯಾಗಿದೆ ಎಂದು! ನನಗಂತೂ ಸಾಕಾಗಿ ಹೋಯಿತು ಅವಳ ನೆನಪಿನ ಅಲೆಯಲ್ಲಿ ನಾ ಮಿಂದು ಎದ್ದರು ಬಿಡದೆ ಕಾಡಿದ ಆ ಘಳಿಗೆಯ ನೆನೆಯುವ ಪರಿ. ಸ್ವತಃ ನಾನೆ ಸೋಲನ್ನು ಒಪ್ಪಿಕೊಂಡು ಹೇಳ ಬಯಸುವೆನು ಕಣ್ಣಲ್ಲಿ ಕಂಡಿದ್ದು, ಮನಸಿಗೆ ತಿಳಿದಿದ್ದು, ನಾ ಹೇಳಿದ್ದು ತೃಪ್ತಿಯಾಗಲಿಲ್ಲ ಎಂದು. ಬಯಸದೆ ಬಂದಂತಹ ಆಲೋಚನೆಗಳು ಮನದಲ್ಲಿಯೆ ಬತ್ತಿ ಹೋಗಿ ಕಣ್ಣಂಚಿನ ಕಣ್ಣೀರ ಹನಿ ಮುಖ ಸವರಿ ಹೇಳಿತು ಮಾಸಿದ ಮೊಗಕ್ಕೆ ಕಳೆಯನ್ನು ನೀಡಿದ ಅಪ್ಸರೆಯಿವಳೆಂದು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.