ಸಿಂಪಲ್ಲಾಗ್ ಒಂದ್ ಫ್ರೆಂಡ್ಸ್ ಸ್ಟೋರಿಹುಡುಗ: ನಮಸ್ತೆ

ಹುಡುಗಿ: ಹಾಯ್ ನಾನ್ ಗೊತ್ತಾ.!?

ಹುಡುಗ: ಇಲ್ಲಾ..ಆದರೆ ನಾವಿನ್ನು ಉತ್ತಮ ಗೆಳೆಯರಾಗುವ...

ಹುಡುಗಿ: ಹ್ಮ್...ಆದರೆ ನನಗೆ ನಿನ್ನ ಬಗ್ಗೆ ಗೊತ್ತಿಲ್ಲಾ ...

ಹುಡುಗ: ಹಾಗಾದರೆ ಗೆಳೆಯರಾಗುವುದು ಬೇಡವಾ

ಹುಡುಗಿ: ಹ್ಮ್...ನೋ ಪ್ರಾಬ್ಲಂ...

ಹುಡುಗ: ತ್ಯಾಂಕ್ಸ್...

ಹುಡುಗಿ: ಹ್ಮ್....

ಹುಡುಗ: ನಿನ್ನ ಮನೆ ಎಲ್ಲಿ??

ಹುಡುಗಿ: ಅದೆಲ್ಲಾ ಯಾಕೆ ಬೇಕು?

ಹುಡುಗ: ಸುಮ್ನೆ..ಕೇಳಿದ್ದು

ಹುಡುಗಿ: ನಂದು @@@..ನಿಂದೆಲ್ಲಿ ಮನೆ

ಹುಡುಗ: @@@@

ಹುಡುಗಿ: ಹ್ಮ್...ಸರಿ ಬಾಯ್.. ನಾನು ಹೋಗ್ತೇನೆ

ಹುಡುಗ: ಅಯ್ಯೋ ಹೋಗುವುದಾ

ಹುಡುಗಿ: ನಂಗೆ ಎಕ್ಸಾಂ.... ಓದ್ಬೇಕು.. ಬಾಯ್..

ಹುಡುಗ: ನಿನ್ನ ನಂಬರ್ ಕೊಡು

ಹುಡುಗಿ: ಯಾಕೆ

ಹುಡುಗ: ಸುಮ್ನೆ... ಪ್ರೆಂಡ್ಸ್ ಅಲ್ವಾ ನಾವು

ಹುಡುಗಿ: ಸರಿ, 9876543210

ಹುಡುಗ: k bye.... take care..

ಹುಡುಗಿ: ಹ್ಮ್....

(ಅದೇ ರಾತ್ರಿ 11:00ಗಂಟೆಗೆ ಹುಡುಗ, ಹುಡುಗಿಗೆ ಸಂದೇಶವೊಂದು ರವಾನಿಸುತ್ತಾನೆ)

ಹುಡುಗ: ಮಲಗಿದ್ದೀಯಾ?

ಹುಡುಗಿ: ಇಲ್ಲಾ....

ಹುಡುಗ: ಊಟ ಆಯ್ತಾ??

ಹುಡುಗಿ: ಆಯ್ತು...

ಹುಡುಗ: ನಿಮ್ಮ ಮನೆಯಲ್ಲ ಯಾರೆಲ್ಲಾ ಇದ್ದಾರೆ??

ಹುಡುಗಿ: ಅಮ್ಮಾ, ಅಪ್ಪಾ, ಮತ್ತು ನನ್ನ ಪ್ರೀತಿಯ.... ಅಣ್ಣಾ.

ಹುಡುಗ: ಹ್ಮ್... ನನಗೆ ತಂಗಿ ಇಲ್ಲಾ. ತಮ್ಮ ಇಲ್ಲಾ ನಾನೊಬ್ಬನೆ... ನಾನು ಮಗುವಿರುವಾಗಲೇ ತಂದೆ ತೀರ್ಕೊಂಡ್ರು..

ತಾಯಿ ಕಷ್ಟ ಪಟ್ಟು ನನ್ನ ಸಾಕಿದ್ರು.. ಈಗ ನಾನೊಬ್ಬನೆ ತಾಯಿ ಜೊತೆ ವಾಸವಾಗಿದ್ದೇನೆ ... ತಾಯಿ ... ಅನಾರೋಗ್ಯದಿಂದ ಬಳಲುತ್ತಿದ್ದಾರೆ..

ಹುಡುಗಿ: oh I m sorry... take care of her...

ಹುಡುಗ: yes... I will..

ಹುಡುಗಿ: good. ಸರಿ ನಂಗೆ ನಿದ್ದೆ ಬರ್ತಿದೆ...

ಹುಡುಗ: ok, bye.... good night... tke care... Sweet dreams

ಹುಡುಗಿ: you too take care... bye✋🏻

(ಇದೇ ತರಹ ದಿನಗಳು ಉರುಳಿದವು...

ಕೆಲವು ದಿನಗಳ ನಂತರ ಹುಡುಗಿ ಮೆಸೇಜು ಮಾಡಲು ನಿರುತ್ಸಾಹಿಯಾದಳು....

ಹುಡುಗನ ಮೆಸೇಜುಗಳಿಗೆ ರೀಪ್ಲೆ ಮಾಡದೆ ಇರುತ್ತಿದ್ದಳು)

ಹುಡುಗ: hai...

ಹುಡುಗ: u there???

ಹುಡುಗ: please reply...

ಹುಡುಗ: ಊಟ ಮಾಡಿದ್ಯಾ...

ಹುಡುಗ: good nyt... take care...

(ಇದೇ ರೀತಿ ಹುಡುಗ ಮೆಸೇಜ್ ಮಾಡಿದಾಗ ಹುಡುಗಿ ರೀಪ್ಲೆ ಮಾಡಲೇ ಇಲ್ಲಾ...

ಕೆಲವು ದಿನಗಳ ನಂತರ...

ಹುಡುಗನ ಮೆಸೆಜ್ ಬರಲೇ ಇಲ್ಲಾ..

ಹುಡುಗಿ ಸಂದೇಹ ಪಟ್ಟಲು ....

ಹುಡುಗಿಗೆ ಕಾಲ ಕ್ರಮೇಣ ಬೋರ್ ಹೊಡೆಯಿತು....

ಹುಡುಗನ ಮೆಸೆಜ್'ಗಾಗಿ ಕಾದು ಕೂತಳು..

ದಿನಾಲು ಮೆಸೆಜ್ ಮಾಡುತ್ತಿದ್ದ ಈಗ ಎಲ್ಲಿ ಹೋದ...

ಆಕೆ ವಿಸ್ಮಯಗೊಂಡಳು...

ಅದೇ ರೀತಿ 5ದಿನ ಕಳೆಯಿತು ಹುಡುಗನ ಒಂದೇ ಒಂದು ಮೆಸೆಜ್ ಬರಲೇ ಇಲ್ಲಾ...

ಹುಡುಗಿಯೇ ಹುಡುಗನಿಗೆ ಮೆಸೆಜ್ ಮಾಡಲು ತೀರ್ಮಾನಿಸಿದಳು....

(ಅದೇ ರೀತಿ. )

ಹುಡುಗಿ: hello

ಹುಡುಗಿ: ಎಲ್ಲಿದ್ದಿ?? ಯಾಕೆ ಸುದ್ದಿ ಇಲ್ಲಾ..

ಹುಡುಗಿ: ರೀಪ್ಲೆ ಇಲ್ಲಾ

ಹುಡುಗಿ: ಓ.. ರೀಪ್ಲೆ ಮಾಡಲಿಲ್ಲಾ ಅಂತ ಸಿಟ್ಟಾ..

ಹುಡುಗಿ: sorry...

ಹುಡುಗಿ: pls reply ಮಾಡು..

ಹುಡುಗಿ: k, fyn ನಾನು ಹೋಗ್ತೇನೆ... ಇನ್ನು ಒಮ್ಮೆಯು ರೀಪ್ಲೆ ಮಾಡುದಿಲ್ಲಾ...

((ಮರುದಿನ))

ಹುಡುಗಿ: good morning

ಹುಡುಗಿ: cfee ಆಯ್ತಾ..

ಹುಡುಗಿ: ಪ್ಲೀಸ್ ನನಗೆ ರೀಪ್ಲೆ ಮಾಡು..

.

.

(((10 ನಿಮಿಷದ ನಂತರ)))

.

ಹುಡುಗಿ: hello...

ಹುಡುಗ: ಮೆಸೆಜ್ ಮಾಡಬೇಡ.. ಅವನು ಮೃತ ಪಟ್ಟ..

ಹುಡುಗಿ: oh god no..

ಹುಡುಗ: ಅವನು ಸತ್ತು ಹತ್ತು ದಿನ ಕಳೆಯಿತು

ಹುಡುಗಿ: ಇಲ್ಲಾ...ನಾನು ನಂಬುದಿಲ್ಲಾ..ಸುಳ್ಳು ಹೇಳಬೇಡ..

ಹುಡುಗ: ತಾಯಿಗೆ ಮದ್ದು ತರುವ ಸಂದರ್ಭದಲ್ಲಿ ಆತ ಅಪಘಾತದಲ್ಲಿ ಮೃತನಾದ.. ಆತನ ಬೈಕ್'ಗೆ ಬಸ್ಸ್ ಡಿಕ್ಕಿ ಹೊಡೆಯಿತು.. ಆಸ್ಪತ್ರೆಗೆ ಕೊಂಡೋಗುವಾಗ ಆತನ ಪ್ರಾಣ ಪಕ್ಷಿ ಹಾರಿಹೋಯಿತು... ಪಾಪ.. ಅವನ ತಾಯಿ ಇನ್ನು ಒಂಟಿ ಜೀವನ ನಡೆಸಬೇಕಾದ ಪರಿಸ್ಥಿತಿ... ಇನ್ನು ಅವರನ್ನು ಯಾರು ಪಾಲನೆ ಮಾಡುವುದು.?.. ಪಾಪ..

ನಿಂಗೆ ಸಂತೋಷವಾಯಿತಾ??? ಇನ್ನು ಅವನ ಕಿರುಕುಳ ಇಲ್ಲವಲ್ಲಾ...

.

/(ಹುಡುಗಿಯ ಕಣ್ಣಲ್ಲಿ ಕಣ್ಣೀರ ನದಿಯೇ ಹರಿಯಿತು..

ಬಿಕ್ಕಿ ಬಿಕ್ಕಿ ಅತ್ತಳು...)/…

.

ಹುಡುಗ: ನಾನು ಅವನ ಬೆಸ್ಟ್ ಫ್ರೆಂಡ್..

... ಅವನ ಕೋಣೆಯ ಗೋಡೆಯಲ್ಲಿ ನಿನಗಾಗಿ ಬರೆದಿದಿರುವ ಸಾಲೊಂದು ಹೀಗಿದೆ...

['enJoY mY sillY friendship before I leave.... this world forever']

.

ಈ ಮಾತು ಕೇಳಿದ ಹುಡುಗಿ ಹೃದಯವೇ ಹರಿಯುವಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು...ಅವಳಿಗೆ ಆ ನೋವು ಸಹಿಸಲು ಕಷ್ಟವಾಯಿತು...

ಅವನು ಮೆಸೆಜ್ ಮಾಡುವಾಗ ನಾನೇಕೆ ರೀಪ್ಲೆ ಮಾಡ್ಲಿಲ್ಲಾ? ...... ತನ್ನಲ್ಲೆ ಕೊರಗಿ ಕೊಂಡಳು...

ಆದರೆ ನಾನಿನ್ನು ಅವನನ್ನು ಕಾಣಲು ಅಸಾದ್ಯ..

ಅವನಿನ್ನು ನನ್ನ ಮನಸಲ್ಲಿ ನೆನಪು ಮಾತ್ರ..

....ನನ್ನ ಮನಸಲ್ಲಿ ಮಿಂಚಾಗಿ ಬಂದವ ಮಳೆಯಾಗಿ ಹೋದ....

........

(watsapp copy)


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.