17 ಯಾರ ಒಲವು ಯಾರ ಕಡೆಗೋ

ಪ್ರಭಾಕರ್ ಎಷ್ಟೇ ಪೋಲೀಸರ ಸಹಾಯ ಪಡೆದರು, ರಾಹುಲ್ನನ್ನು ಹುಡುಕಿಕೊಂಡು ಹೋದ ರೌಡಿಗಳು, ಚಿಕ್ಕ ಡಾಭದಂತ ಕ್ಯಾಂಟೀನ್ ಮುಂದೆ ಕಾಫಿ ಕುಡಿಯುತಿದ್ದ ರಾಹುಲ್ ಗಂಗ ಅವರ ಜತೆ ಚಿಕ್ಕ ವಿಷ್ಯಕ್ಕೆ ಜಗಳ ತೆಗೆದು ಹೊಡೆದಾಟ ಮಾಡಿ, ಕೊನೆಯದಾಗಿ ಸ್ಟೂಡೆಂಟ್ಸ್ ಎಲ್ಲ ಬರುವಷ್ಟರಲ್ಲಿ ಓಡಿಹೋಗುತ್ತಿದ್ದವರಲ್ಲಿ ಒಬ್ಬ ರಾಹುಲ್ ಮೇಲೆ ಚಾಕು ಎಸೇದು ಓಡಿಹೋದ, ಆದರೆ ಲೇಟಾಗಿ ಬಂದ ಪೋಲಿಸರು ಓಡಿಹೋಗುವವರನ್ನು ಹಿಡಿದು ಬಂಧಿಸಿದ್ದರು,

ಪೋಲಿಸರು ಪ್ರಭಾಕರಿಗೆ ವಿಷ್ಯ ತಿಳಿಸಿ ಚಾಕು ಬಿದ್ದ ಹುಡುಗನನ್ನು ಇಲ್ಲಿ ಫೆಸಿಲಿಟಿ ಸರಿ ಇಲ್ಲದ ಕಾರಣ ಅಲ್ಲಿನ ಹಾಸ್ಪಿಟಲ್ಗೆ ಶಿಫ್ಟ್ ಮಾಡಿದ್ದಾರೆ ಎಂದು ಹೇಳಿದರು,

ವಿಷ್ಯಾ ತಿಳಿದ ಗೌತಮ್ ಹಾಸ್ಪಿಟಲ್ಗೆ ಓಡಿದ,

ಗೌತಮ್ ಹಾಸ್ಪಿಟಲ್ ರೂಂ ಬಾಗಿಲ ಬಳಿ ಬಂದ, ಒಳಗಡೆ ಗಂಗ ಪೇಪರ್ನಲ್ಲಿ ಮುಖ ಉದುಗಿಸಿದ್ದ, ಇಕ್ಬಾಲ್ ಮೋಸಂಬಿ ಜೂಸ್ ತೆಗೆಯುತಿದ್ದ, ಬೆಡ್ ಮೇಲೆ ಬೋರಲಾಗಿ ಮಲಗಿಸಿದ್ದ ರಾಹುಲ್ನನ್ನು ನೋಡಿ ಗೌತಮ್ಗೆ ಷಾಕ್ ಆಯಿತು, ರಾಹುಲ್ ಇಷ್ಟು ಇಳಿದು ಹೋಗಿದ್ದಾನ ಎಂದು ‌ಸಂಕಟವಾಗಿ ಹತ್ತಿರ ಬಂದ, ಅಷ್ಟರಲ್ಲಿ ಭುಜದ ಮೇಲೆ ಕೈ ಬಿತ್ತು ಯಾರು ಎಂದು ಹಿಂದೆ ತಿರುಗಿದ ಗೌತಮ್ಗೆ ಷಾಕ್ ಆಯಿತು ಎದುರಿಗೆ ರಾಹುಲ್, ಹಾಗಾದ್ರೆ ಬೆಡ್ ಮೇಲೆ ಯಾರು ಎಂದು ನೋಡಿದ ಶಾಸ್ತ್ರೀ ಮಲಗಿದ್ದ,

ಗೌತಮ್ಗೆ ಕನ್ಫ್ಯೂಸ್ ಆಗಿ ಏನೋ ಇದೆಲ್ಲಾ ಎಂದಾಗ,

ಮಲಗಿದ್ದ ಶಾಸ್ತ್ರೀ ಮುಖ ತಿರುಗಿಸಿ ಗೌತಮ್ನನ್ನು ನೋಡಿದ, ಅವನು ನೋಡಿದ ತಕ್ಷಣ ರಾಹುಲ್ ಗೌತಮ್ಗೆ ನೀನು ಮಾತಾಡು ನಾನ್ ಸ್ವಲ್ಪ ಹೊರಗಡೆ ಹೋಗಿ ಬರ್ತೀನಿ ಎಂದು ಹೊರಗೆ ಹೋದ

ಜ್ಯೂಸ್ ಮಾಡುತಿದ್ದ ಇಕ್ಬಾಲ್ ಬಂದು ಆಪ್ತಮಿತ್ರ ಅನ್ನೋದಕ್ಕೆ ನಿದರ್ಶನ ಕಣೋ ನಮ್ ಶಾಸ್ತ್ರಿ ಗೌತಮ್, ಶಾಸ್ತ್ರೀ ರೂಂಮಲ್ಲೇ ರಾಹುಲ್ಗೆ ಹೇಳಿದ್ದ ನಮ್ಮನ್ ದಾಟಿಕೊಂಡು ನಿನ್ ಮೇಲೆ ಅದು ಯಾವನ್ ಕೈ ಮಾಡ್ತಾನೋ ನೋಡೆ ಬಿಡೋಣ ಅಂತ, ಅದರ ಪ್ರಕಾರ ಅವನ ಪ್ರಾಣ ಒತ್ತೆ ಇಟ್ಟು ರಾಹುಲ್ ಪ್ರಾಣ ಕಾಪಾಡ್ದ ಕಣೋ, ನಮ್ ಶಾಸ್ತ್ರೀ ನಿಜವಾಗ್ಲೂ ಗ್ರೇಟ್ ಕಣೋ ಗ್ರೇಟ್ ಎಂದು ಶಾಸ್ತ್ರೀ ಕಡೆ ನೋಡಿದ,

ಶಾಸ್ತ್ರೀ ಅವನನ್ನು ಉರಿಗಣ್ಣಿಂದ ನೋಡುತ್ತಾ ಲೋ ಬಿರಿಯಾನಿ ನನ್ ಮಗನೆ ನನ್ ಪ್ರಾಣ ಒತ್ತೆ ಇಡಕ್ಕೆ ನನ್ನ ಪ್ರಾಣ ಏನ್ ನಿಮ್ ಅಪ್ಪನ್ ಮನೆ ಆಸ್ತಿ ಅನ್ಕೊಂಡ್ಯೇನೋ, ನಿನ್ ಪಿಂಡ ಕಾಗೆ ಹೊತ್ಕೊಂಡ್ ಹೋಗ ಎಂದ,

ಇಕ್ಬಾಲ್ ಅಲ್ಲಿಂದ ಜಾರಿಕೊಂಡು ಜೂಸ್ ಮಾಡಲು ಟೇಬಲ್ ಹತ್ತಿರ ಹೋಗಿ ಬೆನ್ನು ಮಾಡಿ ನಿಂತ, ಗಂಗ ಮಾತ್ರ ಮುಖಕ್ಕೆ ಪೇಪರ್ ಅಡ್ಡ ಇಟ್ಟು ತುಂಬ ಸೀರಿಯಸ್ ಆಗಿ ಓದ್ತಾ ಇದ್ದ,

ಗೌತಮ್ಗೆ ವಿಚಿತ್ರವೆನಿಸಿ ಏನಾಯ್ತೊ ಶಾಸ್ತ್ರಿ ಎಂದಾಗ,

ಶಾಸ್ತ್ರಿಗೆ ಅಳು ಬರುವಂತಾಯಿತು, ಲೋ ಗೌಮಿ ನಾನು ಹೇಳ್ದಂಗೆ ಅದು ಯಾವನ್ ನನ್ ದಾಟಿಕೊಂಡು ಹೋಗಿ ರಾಹುಲ್ ಮೇಲೆ ಕೈ ಮಾಡ್ತಾನೆ ಅಂತ ಒಂದು ಸೈಡಲ್ಲಿ ನಿಂತು ಬೋಂಡ ತಿನ್ತಾ ಸುಮ್ನೆ ನೋಡ್ತಾ ಇದ್ದೆ, ಆದರೆ ಯಾರು ನನ್ನ ದಾಟಿಕೊಂಡು ಹೋಗ್ಲಿಲ್ಲಾ, ಅಷ್ಟರಲ್ಲಿ ಈ ತುರ್ಕಾ ಬರ್ಕಾ ಟೋಳ್ ನನ್ ಮಗ ಯಾರತ್ರಾನೋ ಹೊಡಸ್ಕೊಂಡ್ ಬಂದು ನನ್ ಮೇಲೆ ಬಿದ್ದ ನಾನೋಗಿ ರಾಹುಲ್ ಮೇಲೆ ಬಿದ್ದೆ, ಅಷ್ಟರಲ್ಲಿ ಗುರಿ ಗೊತ್ತಿಲ್ಲದೆ ಇರೋ ಆ ರೌಡಿ ಲೋಫರ್ ಬಡ್ಡಿ ಮಗ ಚಾಕು ಎಸೆದ. ಅದು ಬಂದು ನನ್ಗೆ ಎಲ್ಲಿ ಚುಚ್ಚಿದೆ ನೋಡೋ, ಈಗ ನನ್ನಿಂದ ಕೂರಕ್ಕು ಆಗಲ್ಲ, ಎಂದ ತನ್ನ ಅಳುವನ್ನು ತೋಡಿಕೊಳ್ಳುತ್ತ, ನಾನು ಬರಲ್ಲ ಬರಲ್ಲ ಅಂದ್ರು ಲಾಸ್ಟ್ ಇಯರ್ ಸ್ವೀಟ್ ಮೆಮೊರಿ ಅಂತ ನನ್ ಕರ್ಕೊಂಡು ಹೋಗಿ ಈ ನನ್ ಮಕ್ಕಳು ಎಂಥ ಮೆಮೊರಿ ಕೊಟ್ರು ನೋಡೋ ನನ್ಗೆ ಎಂದು ಗೊಳಾಡುತ್ತಾ ಎಲ್ಲಾರಿಗೂ ಶಾಪ ಹಾಕುತಿದ್ದ,

ಗೌತಮ್ ಕೈಯಲ್ಲಿ ಮುಖ ಒರೆಸಿಕೊಂಡು ಇಲ್ಲಿ ವಾಷ್ರೂಂ ಎಲ್ಲೋ ಎಂದು ಅತ್ತ ದೌಡಯಿಸಿ, ಬಾಗಿಲು ಹಾಕಿಕೊಂಡವನು ಬಾಯಿಗೆ ಕೈ ಅಡ್ಡ ಇಟ್ಟು ಸೌಂಡ್ ಬರದ ಹಾಗೆ ನಗಾಡಿದ, ಅವನಿಗೆ ಈಗ ಅರ್ಥ ಆಗಿದ್ದು ರಾಹುಲ್ ಯಾಕೆ ಹೊರಗೆಹೋಗಿದ್ದು, ಗಂಗ ಯಾಕ್ ಪೇಪರಿನಲ್ಲಿ ಮುಖ ಹುದುಗಿಸಿರೋದು, ಇಕ್ಬಾಲ್ ಯಾಕ್ ಬೆನ್ನು ಮಾಡಿದ್ದು ಎಂದು,

ಅಷ್ಟರಲ್ಲಿ ಶಾಸ್ತ್ರೀಯವರ ಅಪ್ಪಅಮ್ಮ ಫ್ಯಾಮಿಲಿ ಬಂದದ್ದರಿಂದ ಫ್ರೆಂಡ್ಸ್ ಎಲ್ಲಾ ಜಾಗ ಖಾಲಿ ಮಾಡಿದ್ರು,

ಪ್ರಭಾಕರ್ ಸಂಜೀವನಿಗೆ ಈ ವಿಷ್ಯ ಮನೆಯಲ್ಲಿ ತಿಳಿಸಬೇಡ ಈ ವಿಷ್ಯ ತಣ್ಣಗಾಗುವವರೆಗು ಯಾವುದಾದರೂ ಊರಿಗೆ ಹೋಗು ಅಂತ ಸಲಹೆ ನೀಡಿದ್ದರು, ಗೌತಮ್ ಗಂಗ ಎಲ್ಲಾರಿಗೂ ಸಂಜೀವನ ವಿಷಯಕ್ಕೆ ಯಾರು ತಲೆ ಹಾಕಬಾರದು ಎಂದು ವಾರ್ನ್ ಮಾಡಿದ್ದರು, ಇದರಲ್ಲಿ ರಾಹುಲ್ನ ತಪ್ಪು ಸಹ ಇದ್ದರಿಂದ ಶಾಸ್ತ್ರಿಗೆ ಅಂತ ದೊಡ್ಡ ಏಟೇನು ಆಗಿಲ್ಲದರಿಂದ ಗೌತಮ್ ಮತ್ತು ಅವನ ಫ್ರೆಂಡ್ಸ್ ಸಂಜೀವನನ್ನು ಕ್ಷಮಿಸಿದ್ದರು,

ಆದರೆ ಗಂಗ ಮಾತ್ರ ರಾಹುಲ್ಗೆ ಈ ವಿಷ್ಯದಿಂದ futureನಲ್ಲೂ ಯಾರಿಗೂ ಸಹ ಪ್ರಾಬ್ಲಂ ಆಗ್ಬಾರದು ಹೋಗಿ ಶಿಲ್ಪಗೆ ಸ್ವಾರಿ ಕೇಳು ಎಂದು ಒತ್ತಾಯ ಮಾಡುತಿದ್ದ,

ರಾಹುಲ್ಗೆ ಇಷ್ಟಾದ ಮೇಲೆ ಏಕೋ ತನ್ನ ಅಹಂ ಬಿಟ್ಟು ಅವಳಲ್ಲಿ ಸ್ವಾರಿ ಕೇಳಲು ಮನಸ್ಸು ಬರುತಿರಲಿಲ್ಲ, ಅವಳು ಅಷ್ಟು ಅವಮಾನ ಆಗೋ ತರ ಮಾತಾಡಿದ್ದು ಅವಳ್ದೆ ತಪ್ಪು ಎಂದು ಮನಸ್ಸಿನ ಮೂಲೆಯಲ್ಲಿ ಕುಟುಕುತಿತ್ತು, ಆದರೂ ಗಂಗನಿಗಾಗಿ ಒಪ್ಪಿಕೊಂಡು ಮನೆಗೆ ಬಂದವನು, ಮನೆಯಲ್ಲಿ ತನ ಅಕ್ಕ ಬಾವನ ನೋಡಿ ಆ ವಿಷ್ಯ ಮರೆತುಹೋದ

ಮಾರನೆಯ ದಿನ ವಿಷ್ಯ ತಿಳಿದು ಶಾ‌ಸ್ತ್ರೀಯನ್ನು ನೋಡಲು ಶೃಂಗ, ಶಿವಾನಿ ಬಂದಿದ್ದರು, ಶೃಂಗಗೆ ಅವನ ಪರಿಸ್ಥಿತಿ ನೋಡಿ ನಿಜವಾಗಲೂ ಸಂಕಟವಾಯಿತು, ಆದರೆ ಶಿವಾನಿಗೆ ಶಾಸ್ತ್ರೀಯ ಗೊಣಗಾಟಕ್ಕೆ ಸ್ವಲ್ಪ ನಗು ಬಂತು,

ಅದರಲ್ಲೂ ಶಾಸ್ತ್ರಿ ಶೃಂಗನ ಬಳಿ ಇದಕ್ಕೆಲ್ಲಾ ಕಾರಣವಾದ ಆ ಮಹಾತಾಯಿ ಎಲ್ಲಾಮ್ಮ ಅವರಿಗೆ ಸ್ವಲ್ಪ ಕೈ ಎತ್ತಿ ಮುಗಿತಿನಿ ಎಂದು ಶಿಲ್ಪಳ ಬಗ್ಗೆ ವಿಚಾರಿಸಿದಾಗಂತು, ಶಿವಾನಿಗೆ ನಗು ತಡೆಯಲಾಗಲಿಲ್ಲ ಶಾಸ್ತ್ರಿ ಮುಂದೆ ನಕ್ಕರೆ ಸರಿ ಅಲ್ಲ ಎಂದು ಎದ್ದು ಹೊರಗೆ ಬಂದಳು,

ಅಷ್ಟರಲ್ಲಿ ಗಂಗ ಬರುತಿದ್ದವನು ಶಿವಾನಿಯನ್ನು ನೋಡಿ ಶಿವ ನಿನ್ ಹತ್ರ ಸ್ವಲ್ಪ ಮಾತಾಡಬೇಕು ಎಂದ, ಶಿವಾನಿಗೆ ಗಂಗನ ಗಂಭೀರ ಮುಖ ನೋಡಿ ನಗು ನಿಂತು ಹೋಯಿತು, ಸರಿ ನಡಿ ಎಂದು ಅವನೊಂದಿಗೆ ಹೆಜ್ಜೆ ಹಾಕುತ ಬಂದು ಹಾಸ್ಪಿಟಲ್ನ ಹೊರಗೆ ಮರದಡಿ ನಿಂತರು,

ಗಂಗ ಶಿವಾನಿ ಕಡೆ ಗಂಭೀರವಾಗಿ ನೋಡುತ್ತಾ ಶಿಲ್ಪ ರಾಹುಲ್ ವಿಷ್ಯಾ ಸಂಜೀವನಿಗೆ ಹೇಳಿ ಇಷ್ಟು ರಂಪಾ ಆಗೋಕೆ ಕಾರಣ ನೀನೇ ಅಲ್ವಾ ಶಿವ ಎಂದಾಗ,

ಶಿವ ಕಣ್ಣು ಕಿರಿದು ಮಾಡಿ ಓ ಅಂದ್ರೆ ನೀನ್ ಸಹ ಈಗ ರಾಹುಲ್ ಮಾಡಿದ್ರಲ್ಲಿ ತಪ್ಪೆ ಇಲ್ಲಾ, ನಾನೇ ಸಂಜೀವನಿಗೆ ಹೇಳಿ ದೊಡ್ಡ ತಪ್ ಮಾಡ್ದೆ ಅಂತ ಹೇಳ್ತಾ ಇದ್ದೀಯಾ ಎಂದು ಕೇಳಿದಳು

ಈ ಸಮಸ್ಯೆ ನಿಧಾನವಾಗಿ ಕೂತು ಮಾತಾಡಿ ‌ಸಂಜೀವನಿಗೆ ಸಮಾಧಾನ ಮಾಡ್ಬಹುದಿತ್ತು, ಅಂಥ ಟೈಮಲ್ಲಿ ತನ್ನ ತಂಗಿನ ಆ ರೀತಿ ನೋಡಿದ್ದ ಅಣ್ಣ ಯಾವನಾದರೂ ಸಂಜೀವನ ತರನೆ ರಿಯಾಕ್ಟ್ ಆಗ್ತಾ ಇದ್ದ, ನೀನು ದುಡುಕಿ ಆ ಟೈಮಲ್ಲಿ ಸಂಜೀವನಿಗೆ ಹೇಳ್ಬಾರ್ದಿತ್ತು, ಎಂದ ಗಂಗ

ಹೌದು ಈಗ ಎಲ್ಲಾರಿಗು ನನ್ದೆ ತಪ್ಪು ಕಾಣಿಸ್ತಿದೆ ಒರತು ಆ ಟೈಮಲ್ಲಿ ಶಿಲ್ಪನ ಪರಿಸ್ಥಿತಿ ಯಾವ ಮಟ್ಟಕ್ಕೆ ಹದಗೆಟ್ಟಿತ್ತು ಅಂತ ಯಾರಿಗು ಅನಿಸ್ತಾ ಇಲ್ಲ, ಎಲ್ಲಾರು ರಾಹುಲ್ ಮಾಡಿದ್ದು ತಪ್ಪುಕವರ್ ಮಾಡಿ ಅವನ್ನ ಸೇವ್ ಮಾಡಕ್ಕೆ ನೋಡಿದ್ರಿ ಒರೆತು ಅವನ್ ಮಾಡಿದ್ದು ತಪ್ಪಿಗೆ ಶಿಕ್ಷೆ ಏನಾಗ್ಲಿಲ್ಲ, ಆದ್ರೆ ಶಿಲ್ಪ ಮಾತ್ರ ಈಗ್ಲೂ ನೋವು ಅನುಭವಿಸ್ತಾ ಇದ್ದಾಳೆ, ಎಷ್ಟಾದ್ರು ಹುಡುಗರು ಎಲ್ಲಾ ಒಂದೇ ಅಲ್ವಾ ತಪ್ಪಿದ್ರು ಸರಿ ಅಂತ ಸಾಧಿಸ್ತೀರಾ ಎಂದಳು ದುಮುಗಡುತ್ತಾ ಶಿವ

ಗಂಗನಿಗೆ ಅವಳ ವಾದ ಕೇಳಿ ಸ್ವಲ್ಪ ಕೋಪ ಬಂತು ನಾನು ರಾಹುಲ್ ಮಾಡಿದ್ದು ಸರಿ ಅಂಥ ಹೇಳ್ತಾ ಇಲ್ಲ, ಆದ್ರೆ ಆ ಟೈಮಲ್ಲಿ ನೀನ್ ದುಡುಕಿ ಸಂಜೀವನಿಗೆ ಹೇಳಿದ್ದು ತಪ್ಪು ಅನ್ತಾ ಇದ್ದೀನಿ, ಸ್ವಲ್ಪ ಯೋಚನೆ ಮಾಡು ಆ ರೌಡಿಗಳು ರಾಹುಲ್ನ ಏನಾದ್ರು ಮಾಡಿದ್ರೆ, ಹೋಗ್ಲಿ ಅಷ್ಟು ಏಕೆ ಆ ಚಾಕು ಏನಾದ್ರು ಶಾಸ್ತ್ರೀ ಪ್ರಾಣ ತೆಗೆದಿದ್ರೆ, ಏನ್ ಮಾಡ್ತ ಇದ್ದೆ ರಾಹುಲ್ಗೆ ಶಿಕ್ಷೆ ಆಯ್ತು ಅಂತ ಸಂತೋಷನ ಪಡ್ತಾ ಇದ್ದೆ, ಸ್ವಲ್ಪ ಆದ್ರು ಕಾಮನ್ ಸೆನ್ಸ್ ಇರಲಿಲ್ವ ನಿನ್ಗೆ, ಅಲ್ಲಿ ಯಾರಿಗೆ ಹೆಚ್ಚು ಕಮ್ಮಿ ಆಗಿದ್ರು ಅದ್ರ ಎಫೆಕ್ಟ್ ಶಿಲ್ಪನ ಲೈಫ್ ಮೇಲೆ ಬಿಳ್ತಿತ್ತು, ಅವಳ ಬಗ್ಗೆ ಜನ ಏನು ಇಲ್ದೆ ಇದ್ರು, ಏನೋ ಆಗಿದೆ ಅಂತ ಇಲ್ಲದ ಕಥೆ ಕಟ್ಟಿ ಮಾತಡ್ತಾ ಇರೋವರು, ಆಗ ಅವಳ ಪರಿಸ್ಥಿತಿ ಹೇಗಿರುತ್ತೆ ಅಂಥ ಹುಡುಗಿಯಾಗಿ ಸ್ವಲ್ಪನು ಯೋಚನೆ ಬರಲಿಲ್ವ ನಿನ್ಗೆ ಎಂದ ಗಂಗ

ಹುಡುಗಿ ಆದ್ರೆ ಹುಡುಗರು ಏನ್ ಮಾಡಿದ್ರು ಜನಕ್ಕೆ ಹೆದರಿ ಯಾರಿಗೂ ಹೇಳ್ದೆ ಬಾಯಿಮುಚ್ಚಿಕೊಂಡು ಇರ್ಬೇಕು ಅಲ್ವಾ, ನಾನು ಹುಡುಗಿ ಆಗಿರೋದಕ್ಕೆ ಶಿಲ್ಪಗೆ ನ್ಯಾಯ ಸಿಗ್ಬೇಕು ಅಂಥ ಹೇಳಿದ್ದು, ನಿನ್ ಥರ ತಪ್ಪು ಮಾಡಿರೋನು ಹುಡಗ ಅಂಥ ಅದನ್ನ ಸಮರ್ಥಿಸ್ಕೋಳ್ತಾ ಇರಲಿಲ್ಲ ಎಂದಳು,

ಅವಳ ವಿತಂಡ ವಾದನ್ನಕ್ಕೆ ಗಂಗನಿಗೆ ಕೋಪ ನೆತ್ತಿಗೇರಿತು, ಛೇ ಗೊತ್ತಿದ್ದು ಗೊತ್ತಿದ್ದು ನಿನ್ನಂಥ ಪ್ರತಿಯೊಂದಕ್ಕು ದುಡುಕಿ ವಾದ ಮಾಡೊವಳಿಗೆ ಬುದ್ಧಿ ಹೇಳಕ್ಕೆ ಬಂದ್ನಲ ನನ್ದೆ ತಪ್ಪು, ಹೆಣ್ಣು ಹುಡುಗಿರ ಮನಸ್ ತತ್ವ ಆಗಿದ್ರೆ ನಾನೇನ್ ಹೇಳ್ದೆ ಅಂತ ನಿನ್ಗೆ ಅರ್ಥ ಆಗೋದು , ಏನ್ ಮಾಡ್ತೀಯಾ ತಪ್ಪು ನಿನ್ದಲ್ಲ ನಿನ್ನ ಈ ರೀತಿ ಬೆಳಿಸಿರೋ ನಿಮ್ಮಪ್ಪನ್ದು ಎಂದ

ಗಂಗ ತನ್ನದು ಹುಡುಗಿಯರ ಮನಸ್ ತತ್ವ ಅಲ್ಲ ಅಂದದ್ದು, ಮದ್ಯದಲ್ಲಿ ತನ್ನ ತಂದೆಯ ಬಗ್ಗೆ ಮಾತಾಡಿದ್ದು ಶಿವಾನಿಗೆ ನೋವಾಯಿತು ಕೋಪದ ಭರದಲ್ಲಿ, ಹೌದು ಹೌದು ನನ್ನದು ಹುಡುಗಿರ ಮನಸ್ ತತ್ವ ಅಲ್ಲ ,ನಿನ್ದು ಹುಡುಗಿರ ಬಗ್ಗೆ ನೀತಿ ನಿಜಾಯಿತಿ ಇಲ್ದೆ ಕಟ್ಕನ ತರ ಯೋಚನೆ ಮಾಡೋ
ಮನಸ್ ತತ್ವ, ಅದಕ್ಕೆ ಈಗ ನಿನ್ಗೆ ನಾನ್ ಹೇಳ್ತ ಇರೋದು ಅರ್ಥ ಆಗ್ತೀಲ್ಲ, ಏನ್ ಮಾಡ್ತೀಯ ತಪ್ಪು ಸಹ ನಿನ್ದಲ್ಲ ನಿನ್ನ ಈ ರೀತಿ ಬೆಳಿಸಿರೋ ಆ ಹಳ್ಳಿಯಲ್ಲಿ ಸಗಣಿ ಎತ್ತೊ ನಿಮ್ಮಪ್ಪನ್ದು ಎಂದಳು

ಗಂಗನಿಗೆ ಶಿವಾನಿ ತನ್ನ ತಂದೆಯನ್ನು ಕೇವಲವಾಗಿ ಮಾತಾಡಿದ ಮಾತಿಗೆ ಕೋಪ ಹೆಚ್ಚಾಗಿ ಶಿವ ಎಂದು ಜೋರಾಗಿ ಅರುಚಿ ಹೊಡೆಯಲು ಕೈ ಮೇಲೆ ಎತ್ತಿದ ಆದರೆ ಹೊಡೆಯಲಿಲ್ಲ, ತನ್ನ ಕೋಪವನ್ನು ನಿಯಂತ್ರಿಸಿಕೊಂಡು ಕೈ ಮಡಚಿಕೊಂಡ,

ಶಿವ ಹೆದರಲಿಲ್ಲ ಅವನನ್ನು ಉರಿಗಣ್ಣಿಂದ ನೋಡುತ್ತಾ, ನೀನ್ ನಮ್ಮಪ್ಪನ ಬಗ್ಗೆ ಮಾತಾಡ್ದಾಗ ನನ್ಗೂ ಇಷ್ಟೇ ಕೋಪ ಬಂತು, ನೀನು ಎಲ್ಲ ಹುಡುಗರ್ ಥರ ಅಲ್ಲ ಅನ್ಕೊಂಡಿದ್ದೆ, ಈಗ ಗೊತ್ತಾಯಿತು ನೀನು ಸಹ ಎಲ್ಲರ ಥರನೆ, ಹುಡುಗಿರು ಅಂದರೆ ನಾವು ಏನ್ ಮಾಡಿದ್ರು ಸಹಿಸಿಕೊಂಡು ಬಿದ್ದಿರ್ತಾರೆ ಅನ್ಕೊಂಡಿದ್ಯಾ ಗಂಗ, ಆದರೆ ನನ್ನ ಬಗ್ಗೆ ಚೆನ್ನಾಗಿ ತಿಳ್ಕೋ ಗಂಗ, ನೀನು ನನ್ನ ಹೊಡೆದಿದ್ದು ನೆಕ್ಸ್ಟ್ ನಾನ್ ನಿನಗೆ ಹೊಡಿತಿದ್ದೆ ಏಕೆಂದರೆ ಹೊಡಸ್ಕೊಂಡ್ ಸುಮ್ನೆ ಇರೋಕೆ ನಾನ್ ಶೃಂಗ ಅಲ್ಲ ಶಿವಾನಿ ಎಂದು ಹೇಳಿ ಹಿಂದೆ ತಿರುಗಿ ನೋಡದೆ ಹೊರಟು ಹೋದಳು,

ಗಂಗ ಸಹ ಕೋಪದಿಂದ ಅಲ್ಲಿಂದ ಹೊರಟುಹೋದ,

ರಾಹುಲ್ ತನ ಅಕ್ಕನ ಪುಟ್ಟ ಮಗಳ ಜತೆ ಆಡುವಾಗ ಅದಕ್ಕೆ ಮುತ್ತು ಕೊಡುತಿದ್ದ, ಆಗ ತಕ್ಷಣ ಅವನಿಗೆ ಶಿಲ್ಪಳ ನೆನಪಾಯಿತು, ಆಗ ರಾಹುಲ್ಗೆ ಅನಿಸಿತು ತಾನು ಮಗುಗೆ ಕೊಟ್ಟ ಮುತ್ತಿನಲ್ಲಿ ಮಮತೆ ಆತ್ಮೀಯ ಅನುಬಂಧ ಇದೆ, ಅದೆ ನಾನು ಶಿಲ್ಪನಿಗೆ ಕೊಟ್ಟ ಮುತ್ತು ಎಂದು ಕಣ್ಣು ಮುಚ್ಚಿ ನೆನಪಿಸಿಕೊಂಡವನಿಗೆ ಏನೋ ಒಂಥರ ಮತ್ತಿನಂಥ ಸೆಳೆತ ಆಕರ್ಷಣೆ ಇದೆ ಎನಿ‌ಸಿತು, ಮೈಯೆಲ್ಲಾ ರೋಮಾಂಚನಗೊಂಡ ಅನುಭವವಾಯಿತು, ಸರಿ ಅವಳಿಗೊಂದು ಸ್ವಾರಿ ಬಿಸಾಕಿ ಬರೋಣ ಎಂದು, ರಾಹುಲ್ ಕಾಲೇಜಿನಲ್ಲಿ ಶೃಂಗನ ಬಳಿ ಶಿಲ್ಪನ ಹತ್ರ ಒಂದು ಸ್ವಾರಿ ಕೇಳಿ ಈ ವಿಷ್ಯಕ್ಕೆ ಒಂದು ಪುಲ್ಸ್ ಸ್ಟಾಪ್ ಇಟ್ಟ್ಬಿಡೋನ ಶೃಂಗ, ಇಲ್ಲಾಂದ್ರೆ ಈ ವಿಷ್ಯಾ ಯಾವತಿದ್ರು ತಲೆನೋವೆ, ಪ್ಲೀಸ್ ಹೆಲ್ಪ್ ಮಾಡು ಎಂದ,

ಅವನಿಗೆ ತನ್ನ ತಪ್ಪಿನ ಬಗ್ಗೆ ಪಶ್ಚತಾಪ ಇತ್ತು, ಆದ್ರೆ ಅದು ಬೇರೆ ರೀತಿ ಇತ್ತು, ಶಿಲ್ಪನಿಗೆ ಸ್ವಾರಿ ಕೇಳುವುದು ಮಾತ್ರ ಗಂಗನ ಬಲವಂತಕಾಗಿ ಆಗಿತ್ತು, ಅದು ಶೃಂಗನಿಗೆ ಅರ್ಥವಾಗಿ ಬೇಜಾರಾಯಿತು,

ಶೃಂಗ, ಶಿಲ್ಪ ರಾಹುಲ್ನನ್ನು ನೋಡಿದ್ರೆ ಅವಳ ಆರೋಗ್ಯ ಸುಧಾರಿಸ್ಬಹುದು, ರಾಹುಲ್ಗು ಸಹ ಅವಳ ಪರಿಸ್ಥಿತಿ ಏನು ಅಂತ ಅರ್ಥ ಆಗಿ ಮನಸ್ಪೂರ್ತಿಯಾಗಿ ಸಾರಿ ಕೇಳಲಿ ಎಂದು, ಸರಿ ನಾಳೆ ನಾನು ಕಾಲೇಜು ಗೇಟ್ ಹತ್ರ ಇರ್ತೀನಿ ನೀವು ಬನ್ನಿ, ನನ್ನ ಜತೆ ಹಾಸ್ಟೆಲ್ಗೆ ಕರ್ಕೊಂಡು ಹೋಗ್ತೀನಿ ಎಂದಳು,

ಅದರಂತೆ ಮಾರನೆ ದಿನ ಶೃಂಗ ಶಿವಾನಿಗೆ ನನಗೆ ಸ್ವಲ್ಪ ತಲೆನೋವು ನಾನ್ ಹಾಸ್ಟೆಲ್ಗೆ ಹೋಗ್ತೀನಿ, ನೀನು ಕ್ಲಾಸ್ ಮುಗಿಸಿಕೊಂಡು ಬಾ ಎಂದು ಹೇಳಿ ಗೇಟ್ ಹತ್ರ ಹೋದಾಗ ರಾಹುಲ್ ಹೇಳಿದ ಟೈಮ್ಗೆ ಬಂದಿದ್ದ ಸ್ವಲ್ಪ ಮಳೆ ಬರುವ ಲಕ್ಷಣಗಳಿದ್ದವು,

ಇಬ್ಬರು ಹಾಸ್ಟೆಲ್ಗೆ ಬಂದು ಶೃಂಗ ರಾಹುಲ್ನನ್ನು ತನ ಅಣ್ಣ, ಶಿಲ್ಪನಿಗೆ ಉಷಾರಿಲ್ಲ ಅಂತ ನೋಡಕ್ಕೆ ಬಂದಿದ್ದಾರೆ ಎಂದಾಗ ವಾರ್ಡನ್ ಪರ್ಮಿಶನ್ ಕೊಟ್ಟರು,

ರೂಂಮಿಗೆ ಬಂದಾಗ ಶಿಲ್ಪ ಮಾಮೂಲಿಯಂತೆ ಕಿಟಕಿಯಿಂದ ಆಚೆ ನೋಡುತ್ತಾ ನಿಂತಿದ್ದಳು, ರಾಹುಲ್ಗೆ ಅವಳನ್ನು ನೋಡಿದ್ದೆ ಏನೋ ಒಂಥರ ಅನಿಸಿ ಬಾಗಿಲಲ್ಲೇ ಕೈಕಟ್ಟಿ ನಿಂತ, ಶೃಂಗ ಹೋಗಿ ಅವಳ ಭುಜದ ಮೇಲೆ ಕೈ ಇಟ್ಟು ಊಟ ಮಾಡಿದ್ಯ ಶಿಲ್ಪ ಎಂದಾಗ,

ಶಿಲ್ಪ ಅವಳ ಕಡೆ ತಿರುಗದೆ ಕಿಟಕಿಯಿಂದ ಆಚೆ ನೋಡುತ್ತಾ ಅನ್ಯಮನಸ್ಕಳಂತೆ ಇಶಾ ಇಕ್ಬಾಲ್ ಬಂದು ಬೇಡ ಅಂದ್ರು ಬ್ರೆಡ್ ಹಾಲು ಕುಡಿಸಿ ಹೋದ್ರು, ಶೃಂಗ ಇಶಾ ಹೇಳಿದ್ಲು ಶಾಸ್ತ್ರೀಯವರನ್ನ ಡಿಸ್ಚಾರ್ಜ್ ಮಾಡಿದರಂತೆ, ಶಾಸ್ತ್ರೀಗೆ ಏಟಾ ಆಗಿದ್ದ ವಿಷ್ಯ ನೀನು ನನಗೆ ಯಾಕೆ ಹೇಳಲಿಲ್ಲ ಶೃಂಗ ಎಂದು ಕೇಳಿದಳು,

ಶೃಂಗ ಬೇಕೆಂದೆ ಓ ಇಶಾ ನಿನ್ಗೆ ಎಲ್ಲ ಹೇಳಿದ್ಲ, ನೀನೇ ಅಲ್ವಾ ‌ಹೇಳಿದ್ದು ರಾಹುಲ್ಗೆ ಏನಾದ್ರು ಆದ್ರೆ ವಿಷ್ಯ ನನ್ಗೆ ಹೇಳ್ಬೇಡಿ ಅಂಥ, ಅದಕ್ಕೆ ಹೇಳ್ಲಿಲ್ಲ ಎಂದಾಗ

ರಾಹುಲ್ ವಿಷ್ಯಾ ಹೇಳ್ಬೇಡಿ ಅಂತ ಹೇಳಿದ್ದು ಶಾಸ್ತ್ರಿ ವಿಷ್ಯ ಅಲ್ವಲ್ಲ ಎಂದಳು ಶಿಲ್ಪ

ಯಾಕೆ ರಾಹುಲ್ ಅಣ್ಣನಿಗೆ ಏಟಾ ಬಿದ್ರೆ ಮಾತ್ರನ ನಿನ್ಗೆ ನೋವಾಗದು ಪಾಪ ಶಾಸ್ತ್ರೀಗೆ ಏಟ ಆಗಿದೆ ಅಂದರೆ ನಿನ್ಗೆ ಏನು ಅನ್ಸಲ್ವ ಎಂದು ಶೃಂಗ ಕೇಳಿದಳು,

ನನ್ಗೆ ಏನ್ ಅನಿಸುತೊ ಏನ್ ಅನ್ಸಲ್ವೋ ಗೊತ್ತಾಗ್ತಿಲ್ಲ ಶೃಂಗ ಎಂದಳು ಶಿಲ್ಪ ಮೆತ್ತಗೆ

ಶೃಂಗ ಆ ಮಾತಿಗೆ ಈಗ ಗೊತ್ತಾಗುತ್ತೆ ನಿನ್ಗೆ ಏನ್ ಅನಿಸುತ್ತೆ ಅಂತ ಎಂದುಕೊಂಡು, ಶಿಲ್ಪ ಇಶಾ ನಿನ್ಗೆ ಒಂದು ವಿಷ್ಯ ಹೇಳಿಲ್ಲ ಅನ್ನಿಸುತ್ತೆ, ರಾಹುಲಣ್ಣನಿಗೂ ಸಹ ಪಾಪ ಕೈ ಮುರಿದಿದೆ ಗೊತ್ತಾ, ಎಂದಿದ್ದ ತಕ್ಷಣ ಶಿಲ್ಪ ಅವಳೆಡೆಗೆ ತಿರುಗಿ ಅವಳ ಭುಜವಿಡಿದು ಏನು ರಾಹುಲ್ ಕೈ ಮುರಿದಿದ್ಯಾ, ಈಗ ಹೇಗಿದ್ದಾರೆ, ಜಾಸ್ತಿ ಏನು ಏಟ ಆಗಿಲ್ವಲ್ಲ, ಹಾಸ್ಪಿಟಲ್ನಲ್ಲಿ ಅಡ್ಮಿಟ್ ಮಾಡಿದ್ದಾರ ಎಂದು ಒಂದೇ ಸಮನೆ ಕೇಳಿದಳು,

ಶೃಂಗ ಹೇಗಿದ್ದಾರೆ ಅಂಥ ನೀನೆ ನೋಡು ಎಂದು ಬಾಗಿಲ ಕಡೆ ತೋರಿಸಿ ತಾನು ಹೊರ ನಡೆದಳು,

ಅವಳ ಪರಿಸ್ಥಿತಿ, ತನ್ನ ಬಗ್ಗೆ ಅವಳಿಗಿರುವ ಕಾಳಜಿ ನೋಡಿ ರಾಹುಲ್ ಕಣ್ಣು ತೇವವಾಯಿತು, ಈಗ ಅವನಿಗೆ ನಿಜವಾದ ಪಶ್ಚಾತ್ತಾಪವಾಯಿತು, ಶಿಲ್ಪಳ ಕಣ್ಣಲ್ಲಿ ನೀರು ಬರುತಿತ್ತು, ರಾಹುಲ್ ಅವಳೆಡೆಗೆ ಬಂದವನೆ ಅವಳನ್ನು ಎಳೆದು ಗಟ್ಟಿಯಾಗಿ ತಬ್ಬಿಕೊಂಡ, ಶಿಲ್ಪ ಅವನ ಎದೆಯಲ್ಲಿ ಮುಖವಿಟ್ಟು ಬಿಕ್ಕುತ್ತ ತನ್ನ ನೋವೆಲ್ಲಾ ಮರೆತಳು, ಈಗ ಇಬ್ಬರಿಗು ಒಬ್ಬರ ಬಗ್ಗೆ ಒಬ್ಬರಿಗಿದ್ದ ಭಾವನೆಗಳು ಏನೆಂದು ಸ್ಪಷ್ಟವಾಗಿತ್ತು, ಮನಸ್ಸುಗಳೆ ಮಾತನಾಡಿಕೊಂಡವು, ರಾಹುಲ್ ಅವಳ ಹಣೆಯನ್ನು ಚುಂಬಿಸಿ ಸ್ವಾರಿ ಕಣೆ ನನ್ನಿಂದ ನಿನ್ಗೆ ತುಂಬಾ ನೋವಾಯಿತು ಎಂದ,

ಇಲ್ಲ ರಾಹುಲ್ ನನ್ದೆ ತಪ್ಪು ನಾನೆ ನಿಮಗೆ ತುಂಬ ಹರ್ಟ್ ಆಗೋ ಥರ ಮಾತಾಡ್ದೆ ಎಂದು ಶಿಲ್ಪ ಹೇಳುವಾಗ,

ಹೊರಗೆ ನಿಂತಿದ್ದ ಶೃಂಗಗೆ ಇಷ್ಟು ದಿನ ಇದ್ದ ಟೆನ್ಷನ್ ಎಲ್ಲ ಹಾರಿ ಹೋಗಿ ಮನಸ್ಸು ರಿಲೀಫ್ ಆದ ಅನುಭವ,

ಮೆಟ್ಟಿಲು ಇಳಿದು ಹೊರಗೆ ಬಂದಳು, ತಾನು ಮಾಡಿದ ಕೆಲಸ ಸಾರ್ಥಕವಾಯಿತು ಎಂದು ಆವಳಿಗಾದ ಸಂತೋಷ ಅಷ್ಟಿಷ್ಟಲ್ಲ, ತುಂಬಾ ತುಂಬಾ ಥ್ಯಾಂಕ್ಸ್ ದೇವರೆ ಇವರಿಬ್ಬರನ್ನ ಒಂದು ಮಾಡಿದಕ್ಕೆ ಎಂದು ಅದೇ ಖುಷಿಯಲ್ಲಿ ತುಂತುರು ಮಳೆಗೆ ಮುಖವೊಡ್ಡಿ ಕೈ ಅಗಲವಾಗಿ ಚಾಚಿ ಮೈಮರೆತಳು

ಗಂಗ ಗೌತಮ್ನನ್ನು ಶಿಲ್ಪಳನ್ನು ನೋಡಿಕೊಂಡು ಬರೋಣ ಎಂದು ಬಲವಂತವಾಗಿ ಹೊರಡಿಸಿದ್ದ, ಇಬ್ಬರು ಹಾಸ್ಟೆಲ್ ಬಳಿ ಬಂದಾಗ ಗಂಗ ನಾನು ಬೈಕ್ ಪಾರ್ಕ್ ಮಾಡಿ ಬರ್ತೀನಿ ನೀನು ಹೋಗು ಎಂದ,

ಗೌತಮ್ ಗೇಟ್ ದಾಟಿ ಒಳಗೆ ಬಂದಾಗ, ಶೃಂಗ ಎದುರು ನಿಂತಿರುವುದು ನೋಡಿ, ಥಥ್ ಈ ಹಾಳದವಳು ಈ ಟೈಮಲ್ಲಿ ಕಾಲೇಜಿನಲ್ಲಿ ಇರ್ತಾಳೆ ಅಂತ ಅನ್ಕೊಂಡ್ ಬಂದ್ರೆ ಈಗ್ಲೂ ಎದುರಾಗಬೇಕ ಎಂದು ಹಿಂದೆ ತಿರುಗಿದವನು ಮತ್ತೆ ಏನೋ ಅನಿಸಿ ಶೃಂಗಳಾ ಮುಖ ನೋಡಿದ, ಕಣ್ಣು ಮುಚ್ಚಿ ಮೈ ಮರೆತಿದ್ದ ಅವಳ ಮುಖದ ಮೇಲೆ ಮಳೆ ಹನಿಗಳು ಜಾರುತಿದ್ದವು, ನಿಧಾನವಾಗಿ ಅವನ ಕಣ್ಣುಗಳು ಅವಳ ತುಟಿಗಳತ್ತ ಹರಿದವು. ಅಲ್ಲಿ ಮಂದಹಾಸ ಇತ್ತು, ಎಲ್ಲೋ ನೋಡಿದ್ದೀನಿ ಎಂದು ತಾನು ಮೈ ಮರೆತು ಅವಳನ್ನು ನೋಡುತ್ತಾ ಹಾಗೆ ನಿಂತವನ ಮನಸ್ಸು ಚೀರುತಿತ್ತು. ಶೃಂಗ ನಿನ್ನವಳು ಹೋಗೊ ಹತ್ತಿರ ಎಂದು,

ಅಷ್ಟರಲ್ಲಿ ಗಂಗ ಬಂದು ಅವನನ್ನು ಎಚ್ಚರಿಸಿ ಹೋಗಣ ಎಂದು ಮುಂದೆ ನೋಡಿದಾಗ ಶೃಂಗ ಮೈ ಮರೆತು ನಿಂತಿರುವುದು ನೋಡಿ ಆಶ್ಚರ್ಯವಾಯಿತು, ಮುಂದೆ ಬಂದು ಅವಳ ಎದುರು ನಿಂತು ಶೃಂಗ ಎಂದು ಕರೆದ, ಶೃಂಗ ನಿಧಾನವಾಗಿ ಕಣ್ಣು ಬಿಟ್ಟಾಗ ಎದುರಿಗೆ ಗಂಗನನ್ನು ನೋಡಿ ಸಂತೋಷದಿಂದ ನೀವ್ಯಾವಗ ಬಂದ್ರಿ ಗಂಗಣ್ಣ ಎಂದು ಕೇಳಿದಳು,

ಜಸ್ಟ್ ಈವಾಗ ಏನ್ ತುಂಬ ಖುಷಿಯಲ್ಲಿ ಇದ್ದೀಯಾ ಎಂದು ಕೇಳಿದ

ಏನಿಲ್ಲ ಗಂಗಣ್ಣ ಹೀಗೆ ಮಳೆ ಹನಿ ನೋಡಿ ಖುಷಿಯಾಯ್ತು ಎನ್ನುತ್ತಾ ಶೃಂಗ ಗಂಗನ ‌ಹಿಂದೆ ಇದ್ದ ಗೌತಮ್ನನ್ನು ನೋಡಿದಳು, ನೋಡಿದವಳಿಗೆ ತನ್ನ ಸಂತೋಷಕ್ಕೆ ಯಾರೋ ಬೆಂಕಿ ಇಟ್ಟ ಅನುಭವವಾಯಿತು, ಛಿ ಇವನ್ಯಾಕ್ ಬಂದ ಎಂದು ಮುಖ ಸಿಂಡರಿಸಿದಳು, ಗೌತಮ್ಗೆ ಅವಳು ಮುಖ ಸಿಂಡರಿಸಿದ್ದು ನೋಡಿ ಮೈ ಎಲ್ಲ ಉರಿದುಹೋಯಿತು, ಹೊರಟು ಹೋಗಬೇಕೆಂದುಕೊಂಡ ಆದರೆ ಗಂಗನ ಮುಖ ನೋಡಿ ಸುಮ್ಮನಾದ,

ಶಿಲ್ಪಗೆ ಈಗ ಹೇಗಿದೆ ಶೃಂಗ, ನಾವು ಅವಳನ್ನ ನೋಡಕ್ಕೆ ಅಂತ ಬಂದಿದ್ದು ಎಂದು ಗಂಗ ಹೇಳುವಾಗಲೇ, ಶೃಂಗಗೆ ನೆನಪಾಗಿದ್ದು ಒಳಗೆ ರಾಹುಲ್ ಇದ್ದಾನೆ ಎಂದು, ತಕ್ಷಣ ಶಿಲ್ಪನ ಹತ್ರ ಸ್ವಾರಿ ಕೇಳಕ್ಕೆ ರಾಹುಲ್ ಅಣ್ಣ ಬಂದಿದ್ರು ನೀವು ಬರ್ತಾ ಇರಿ ಗಂಗಣ್ಣ ನಾನು ಹೋಗಿ ಅವರಿಗೆ ಹೇಳ್ತೀನಿ ಎಂದು ಓಡುವ ನಡಿಗೆಯಲ್ಲಿ ಓಡಿದಳು,ಗಂಗ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದ, ಆದರೆ ಗೌತಮ್ಗೆ ಮಾತ್ರ ಅಲ್ಲಿಂದ ಬೇಗ ಹೊರಟು ಹೋದರೆ ಸಾಕು ಎನಿಸುತಿತ್ತು,

ಶೃಂಗ ರೂಂಗೆ ಬಂದವಳೆ ಶಿಲ್ಪನ ನೋಡಕ್ಕೆ ಗಂಗಣ್ಣನವರು ಬಂದಿದ್ದಾರೆ ಎಂದಾಗ, ರಾಹುಲ್ ಅವಳ ಪಕ್ಕ ಕೂತಿದ್ದವನು ಅವಳ ಕೈ ಬಿಟ್ಟು ಎದ್ದು ಚೇರಲ್ಲಿ ಕೂತ,

ಗಂಗ ಗೌತಮ್ ರೂಂಮಿಗೆ ಬಂದಾಗ ಶೃಂಗ ಹೊರಗೆ ಹೋದಳು, ಗಂಗ ರಾಹುಲ್ ಪಕ್ಕ ಕೂತು, ಅಂತು ನನ್ನ ಮಾತಿಗೆ ಬೆಲೆ ಕೊಟ್ಟು ಬಂದು ಸ್ವಾರಿ ಕೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್ ಕಣಪ್ಪ ಎಂದ, ರಾಹುಲ್ ಸ್ವಲ್ಪ ಗಾಭರಿಯಲ್ಲಿ ಇದ್ದುದರಿಂದ ಏನು ಮಾತಾಡದೆ ಕಿರುನಗೆ ಚೆಲ್ಲಿ ಸುಮ್ಮನಾದ,

ಗೌತಮ್ ಶಿಲ್ಪಗೆ ತಂದಿದ್ದ ಫ್ರೂಟ್ಸ್ ಕೊಟ್ಟು ಆರೋಗ್ಯ ಹೇಗಿದೆ ಶಿಲ್ಪ ಎಂದು ವಿಚಾರಿಸಿದ, ಗಂಗ ಅವಳಿಗೆ ಎಲ್ಲಾ ಕೆಟ್ಟ್ ಕನಸು ಅಂತ ಮರೆತು ರಾಹುಲ್ನ ಕ್ಷಮಿಸ್ಬಿಡು ಶಿಲ್ಪ ಎಂದು ಸ್ವಲ್ಪ ಹೊತ್ತು ಕೂತು ಮಾತನಾಡಿದರು, ಶಿಲ್ಪ ಎಲ್ಲದಕ್ಕು ಮೌನವಾಗಿ ಹೂಂಗುಡುತ್ತ ಆಗಾಗ ರಾಹುಲ್ ಕಡೆ ನೋಡಿ ತಲೆ ತಗ್ಗಿಸುತಿದ್ದಳು, ರಾಹುಲ್ ಸಹ ಏನು ಮಾತಾಡದೆ ಮೌನವಾಗಿದ್ದು ನಾನಿನ್ನು ಬರ್ತೀನಿ ಅಂತ ಹೇಳಿ ಶಿಲ್ಪಳಿಗೆ ಕಣ್ಣಲ್ಲೆ ಹೇಳಿ ಹೊರಟಾಗ ಗಂಗನಿಗೆ ಅನುಮಾನ ಬಂತು,

ಗಂಗ ಗೌತಮ್ ಸಹ ಶಿಲ್ಪಳಿಗೆ ಹೇಳಿ ಹೊರಗೆ ಬಂದಾಗ, ಗಂಗ ತನ್ನ ಅನುಮಾನವನ್ನು ಗೌತಮ್ ಬಳಿ ಹೇಳಿದ, ಗೌತಮ್ ನಕ್ಕು ಇನ್ನೇನೋ ಮತ್ತೆ ಒಂದು ಗಂಡು ಹೆಣ್ಣು ಇಷ್ಟು ನಡೆದ ಮೇಲೆ ಫ್ರೆಂಡ್ಸ್ ಆಗಿ ಇರಕ್ಕೆ ಇಷ್ಟ ಪಡ್ತಾರೇನೋ, ನನ್ಗೆ ಮೊದ್ಲೆ ಅನುಮಾನ ಬಂತು ಅವನ್ನ ಸ್ವಾರಿ ಕೇಳಕ್ಕೆ ಪ್ರೆಷರ್ ಹಾಕ್ಬೇಡ ಅಂಥ ನಿನ್ಗೆ ಹೇಳೋಣ ಅಂಥ ಇದ್ದೆ ಆದ್ರೆ ನಿನ್ ಹುಚ್ಚು ನಿನಗೆ ಅಂಥ ಸುಮ್ನೆ ಇದ್ದೆ ಎಂದ,

ಗಂಗನಿಗೆ ತಲೆ ಬಿಸಿಯಾಗಿ ಹಣೆ ಉಜ್ಜಿಕೊಂಡ, ಏನೋ ಇದು ಗೌಮಿ ಈಗ್ಲೆ ಇವನ ವಿಷ್ಯ ಇನ್ನು ತಣ್ಣಗಾಗಿಲ್ಲ ಅಷ್ಟರಲ್ಲಿ ಈ ಬೇಕುಪ ಇನ್ನೊಂದಕ್ಕೆ ಕೈ ಹಾಕಿದನಲ್ವೋ ಎಂದ ಆತಂಕದಿಂದ

ಗೌತಮ್ ಗಂಗನ ಭುಜ ತಟ್ಟಿ ಸುಮ್ನೆ ಟೆನ್ಷನ್ ಮಾಡ್ಕೋಬೇಡ ನಾಳೆ ಅವನಿಗೆ ಇದರಲ್ಲಿ ಇರೋ ಪ್ರಾಬ್ಲಂಸ್ ಬಗ್ಗೆ ಎಕ್ಸಪ್ಲೇನ್ ಮಾಡೋಣ ಆಗ ಅವನಾಗೆ ಎಲ್ಲ ಮೆನ್ಟೆನ್ ಮಾಡ್ಕೊಳ್ತಾನೆ ನಡಿ ಎಂದ,

ಗಂಗ ಗೌತಮ್ ಕೆಳಗೆ ಬಂದಾಗ ಶೃಂಗ ಅಲ್ಲೆ ಇದ್ದದ್ದು ನೋಡಿ ಗಂಗ ಅವಳ ಹತ್ತಿರ ಹೋದ ಗೌತಮ್ ಮಾತ್ರ ಅವರಿಗೆ ಬೆನ್ನು ಮಾಡಿ ಬೇರೆಡೆಗೆ ನೋಡುತ್ತಾ ನಿಂತ

ಗಂಗ ಶೃಂಗಗೆ ನೇರವಾಗೆ ಕೇಳಿದ ಶೃಂಗ, ರಾಹುಲ್ ಶಿಲ್ಪ ಒಬ್ಬರಿಗೊಬ್ಬರು ಪ್ರೀತ್ಸಾ ಇದ್ದಾರ ಎಂದು,

ಶೃಂಗ ಹೇಳಲು ಸ್ವಲ್ಪ ತಡವರಿಸಿದರು ಮತ್ತೆ ಧೈರ್ಯವಾಗಿ ಪ್ರೀತಿಸಿದ್ರೆ ತಪ್ಪೇನು ಗಂಗಣ್ಣ ಎಂದು ಕೇಳಿದಳು,

ತಲೆಗಿಲೆ ಕೆಟ್ಟಿದ್ಯಾ ಶೃಂಗ ಇಷ್ಟೆಲ್ಲಾ ರದಾಂತ ಆಗಿರೋದು ನೋಡಿ ಸಹ ಪ್ರೀತಿಸಿದ್ರೆ ತಪ್ಪೇನು ಅಂಥ ಕೇಳ್ತೀಯಾ, ಹೋಗಿ ಶಿಲ್ಪನಿಗೆ ಬುದ್ದಿ ಹೇಳು, ನಾಳೆ ಜಾತಿ ಗೀತಿ ಅಂಥ ಅವರ ಮನೆಯವರಿಗೆಲ್ಲಾ ಗೊತ್ತಾಗಿ ಇನ್ನು ದೊಡ್ ರದಾಂತ ಆಗುತ್ತೆ ಅಂತ, ಶಿಲ್ಪನಿಗೆ ಫಸ್ಟ್ ಅವನ ಜಾತಿ ಯಾವುದು ಅಂಥ ತಿಳ್ಕೋಳಕ್ಕೆ ಹೇಳು ಆಮೇಲೆ ಗೊತ್ತಾಗುತ್ತೆ ಪ್ರೀತಿಸಿದ್ರೆ ಅವನಿಗೆ ಏನ್ ಪ್ರಾಬ್ಲಂ ಆಗುತ್ತೆ ಅಂತ ಎಂದು ರೇಗಿದ ಗಂಗ

ತಕ್ಷಣ ಶೃಂಗ ಜಾತಿ ನೋಡಿ ಪ್ರೀತಿ ಹುಟ್ಟುತ ಗಂಗಣ್ಣ, ಏಕೆ ಬೇರೆ ಜಾತಿಯವರು ಒಬ್ಬರನ್ನೊಬ್ಬರು ಪ್ರೀತಿಸ್ಬಾರದ, ಇದುವರೆಗೂ ಯಾರು ಆ ರೀತಿ ಪ್ರೀತಿಸಿಲ್ವ ಒಂದಾಗಿಲ್ವ ಎನ್ನುತಿದ್ದಳು,

ಅಷ್ಟರಲ್ಲಿ ಅವಳ ಮಾತು ಕೇಳುತಿದ್ದ ಗೌತಮ್ಗೆ ಸಿಟ್ಟು ನೆತ್ತಿಗೇರಿತು ಹಿಂದೆ ತಿರುಗಿ ಬಂದವನೆ, ಎಷ್ಟು ಜನ ಪ್ರೀತಿಸ್ದವರು ಒಂದಾಗಿದರೆ ಅಂಥ ನೀನೋಗಿ ನೋಡಿದ್ಯಾ, ಜಾತಿ ವಿಷ್ಯ ಹೇಳಿ ದೂರ ಆಗಿರೋವರೆ ಹೆಚ್ಚು, ಅದಕ್ಕೆ ಮುಚ್ಕೊಂಡು ಅವರವರ ಜಾತಿಯವರನ್ನ ಪ್ರೀತಿಸಿ ಮದುವೆ ಮಾಡ್ಕೊಂಡು ಹೋದ್ರೆ, ಇನ್ನೊಬ್ಬರಿಗೆ ಮೋಸ ಆಗೋದು ತಪ್ಪುತ್ತೆ ಎಂದ,

ಶೃಂಗನು ಸಹ ಅಷ್ಟೇ ಕೋಪದಲ್ಲಿ, ಹಾಗದ್ರೆ ತಮ್ ಜಾತಿಯವರನೆ ಪ್ರೀತಿಸ್ಬೇಕು ಅಂಥ ರೂಲ್ಸ್ ಇಟ್ಟುಕೊಂಡಿರೋ ನಿಮ್ಮಂಥವರೆಲ್ಲಾ ಜಾತಿಗೆ ಹುಟ್ಟಿದವರೆ ಹೊರತು ತಂದೆ ತಾಯಿ ಪ್ರೀತಿಗಲ್ಲಾ ಎಂದುಹೇಳಿ ಹೊರಟುಹೋದಳು,

ಗೌತಮ್ಗೆ ಅವಳ ಮಾತು ಕಪಾಳಕ್ಕೆ ಬಾರಿಸಿದಂಗಿತ್ತು, ಎಷ್ಟೋಂದು ಕೊಬ್ಬು ಇವಳಿಗೆ, ಇವಳನ್ನ ನಾನು ಜಾತಿ ವಿಷ್ಯದಲ್ಲಿ ದೂರ ಇಟ್ಟಿದ್ರು, ಶೃತಿನ ಜಾತಿ ನೋಡ್ದೆ ಪ್ರೀತಿಸಿರಲಿಲ್ವ ನಾನು, ಒಬ್ಬಳೇ ಸಿಕ್ಕೆ ಆಗ ತೋರಿಸ್ತೀನಿ ನಿನ್ಗೆ ನಾನು ಜಾತಿಗೆ ಹುಟ್ಟುದವನ ಇಲ್ಲ ಪ್ರೀತಿಗೆ ಹುಟ್ಟುದವನ ಎಂದು ಮನಸ್ಸಲ್ಲೆ ಹಲ್ಲು ಕಡೆದ

ಗಂಗ ನಡಿ ಗೌಮಿ ಹೊಗೋಣ ನಾಳೆ ರಾಹುಲ್ ಹತ್ತಿರ ಮಾತಡೋಣ ಎಂದು ಅವನನ್ನು ಹೊರಡಿಸಿದ

ರಾಹುಲ್ ಗಂಗನಿಗೆ ಖಡಾಖಂಡಿತವಾಗಿ ಹೇಳಿದ್ದ ಶಿಲ್ಪನ ಜಾತಿ ಸ್ಟೇಟಸ್ ಅಂಥ ಬಿಟ್ಕೊಡೊ ಪ್ರಸಕ್ತಿ ಇಲ್ಲ ಗಂಗ, ಹಾಗಂಥ ನಾವು ಹದ್ದು ಮೀರಿ ಪ್ರವರ್ತಿಸಲ್ಲ ನಮ್ ಭವಿಷ್ಯ ರೂಪಿಸ್ಕೊಂಡು ಮೇಲೆನೆ ನಾವು ಮದುವೆಯಾಗೋದು ಎಂದ,

ಆಗ ತಾನೇ ಡಿಸ್ಚಾರ್ಜ್ ಆಗಿ ಮೊದಲ ಕ್ಲಾಸ್ ಅಟೆಂಡ್ ಮಾಡಿದ್ದ ಶಾಸ್ತ್ರೀ ಅವನ ಮಾತು ಕೇಳಿ ಹೌಹಾರಿದ ಲೋ ಈ ನನ್ನ ಮಗ ಏನು ಇಲ್ದಲೇನೆ ನನ್ನ ಕೂರಕ್ಕು ಆಗ್ದಂಗೆ ಹಾಸ್ಪಿಟಲ್ ಬೆಡ್ ಮೇಲೆ ಮಲಗಿಸಿದ್ದ, ಈ ಸಾರಿ ಯಾರನ್ನ ಚಟ್ಟದ್ ಮೇಲೆ ಮಲ್ಗಸ್ತಾನೋ ಏನೋ, ಡಿಗ್ರಿ ಮುಗಿದಿದ್ ತಕ್ಷಣ ಎಲ್ಲರೂ ಇವನಿಂದ ಸ್ವಲ್ಪ ಡಿಸ್ಟೆನ್ಸ್ ಮೆನ್ಟೆನ್ ಮಾಡ್ರಪ್ಪ, ಇಲ್ಲಾಂದ್ರೆ ಎಲ್ಲಾರು ಶಿವನ್ ಪಾದ ಸೇರೋದು ಗ್ಯಾರಂಟಿ ಎಂದು ಗೊಣಗಲು ಶುರುಮಾಡಿದ,

ಶಿಲ್ಪಳ ಲವಲವಿಕೆ ಮತ್ತೆ ಮರಳಿ ಬಂತು ಕಾಲೇಜಿಗೆ ಹೋಗುತಿದ್ದಳು, ಆದರೆ ಕಾಲೇಜಿನಲ್ಲಿ ರಾಹುಲ್ನನ್ನು ನೋಡಿ ನಕ್ಕರು ಅಪ್ಪಿತಪ್ಪಿಯೂ ಮಾತನಾಡಿಸುತಿರಲಿಲ್ಲ, ಕಾರಣ ಪಕ್ಕದಲ್ಲಿದ್ದ ಶಿವಾನಿ, ಅವರ ಸಂಭಾಷಣೆ ಎಲ್ಲಾ ಮೆಸೇಜ್ ವಾಟ್ಸಾಪ್ ಫೇಸ್ಬುಕ್ನಲ್ಲೆ ನಡೆಯುತಿತ್ತು, ಇದೊಂದು ವಿಷಯ ಫ್ರೆಂಡ್ಸೆಲಾ ಸಮಾಧಾನದಿಂದ ಇರಲು ಕಾರಣವಾಯಿತು, ಎಲ್ಲರೂ ಎಕ್ಸಮ್ಗೆ ಪ್ರಿಪೇರ್ ಆಗುತಿದ್ದರು,

ದ್ವಿತೀಯ ಪಿಯುಸಿ ಯವರಿಗೆ ಫೈನಲ್ ಎಕ್ಸಾಮ್ ನಡೆಯುತಿದ್ದವು,

ಶಿವಾನಿ ಮೇಲೆ ಗಂಗನ ಕೋಪ ಕಮ್ಮಿ ಆಗಿತ್ತು, ಅವಳ ಮೇಲಿನ ಪ್ರೀತಿ ಕಮ್ಮಿ ಆಗಿರಲಿಲ್ಲ, ಅವಳ ಬಗ್ಗೆ ಗೊತಿದ್ದು ತಾನು ಮೊದಲಿಗೆ ಅವಳ ತಂದೆ ಬಗ್ಗೆ ಮಾತಾಡಿದ್ದು ತನದೆ ತಪ್ಪು ಎಂದು, ಅವಳ ಕೊನೆಯ ಎಕ್ಸಮ್ ದಿನ ಅವಳಿಗೆ ಪ್ರಪೋಸ್ ಮಾಡೋಣ ಎಂದಿದ್ದ,

ಆದರೆ ಕೊನೆ ಎಕ್ಸಾಮ್ ಮುಗಿಸಿ ಶೃಂಗ ಶಿಲ್ಪ ಶಿವಾನಿ ಸಂತೋಷದಿಂದ ಹೊರಗೆ ಬಂದು ಇವತ್ತಿಗೆ ಎಲ್ಲಾ ಟೆನ್ಷನ್ ರಿಲೀಫ್ ಎಂದುಕೊಳ್ಳುವಾಗ, ಇಶಾ ಬಂದು ಶಿಲ್ಪ ಎಕ್ಸಾಮ್ ಹೇಗೆ ಬರ್ದೆ ಎಂದು ವಿಚಾರಿಸಿದಳು,

ಪಕ್ಕದಲ್ಲಿದ್ದ ಶಿವಾನಿ ನಿನ್ ದರಿದ್ರ ಸಹವಾಸ ಇರಲಿಲ್ವಲ್ಲ ಅದಕ್ಕೆ ಚೆನ್ನಾಗೆ ಬರ್ದೆ ಇದ್ದಾಳೆ ಎಂದಳು, ಇಶಾಗೆ ಅವಮಾನದಂತಾಗಿ ಸಿಟ್ಟು ಬಂತು,

ಶಿಲ್ಪ ಶಿವಾನಿಗೆ ಸುಮ್ಮನಿರು ಎಂದಳು

ಅಷ್ಟರಲ್ಲಿ ಇಶಾ ಹೌದು ನಮ್ದೆಲ್ಲಾ ದರಿದ್ರ ಸಹವಾಸ ಆದ್ರೆ ನಿನ್ದು ಮಾತ್ರ ಒಳ್ಳೆ ಸಹವಾಸನ, ನಿನ್ ಯೋಗ್ಯತೆ ಇಲ್ಲಿ ಯಾರಿಗೆ ಗೊತ್ತಿಲ್ಲ ಅನ್ಕೊಬೇಡ, ಗೌತಮ್ಗೊಸ್ಕರ ಗಂಗನ ಜೊತೆ ಪ್ರೀತಿ ಹೆಸರಲ್ಲಿ ಊರಲ್ಲೆ ಸುತ್ತಿ ಈಗ ಗೌತಮ್ ಸಿಕ್ದ ಅಂತ
ಗಂಗನಿಗೆ ಕೈ ಕೊಟ್ಟವಳು ಅಲ್ವಾ ನೀನು ಎಂದಾಗ

ಶೃಂಗ ಶಿವಾನಿನ ಮುಂದೆ ಹೋಗದಂತೆ ಅವಳ ರೆಟ್ಟೆ ಗಟ್ಟಿಯಾಗಿ ಹಿಡಿದಿದ್ದಳು

ಶಿಲ್ಪ ಇಶಾನ ಸ್ವಲ್ಪ ಮುಂದೆ ಎಳೆದು ತಂದು ಹಿಂದು ಮುಂದು ಗೊತ್ತಿಲ್ದೆ ಏನೇನೋ ಮಾತಡ್ಬೇಡ ಬಾಯ್ಮಿಂಚುಕೊಂಡು ಹೋಗೆ ಇಲ್ಲಿಂದ ಎಂದು ಗದರಿದಳು,

ನಿನ್ಗೆ ಇವಳ ಬಗ್ಗೆ ಸರಿಯಾಗಿ ಗೊತ್ತಿಲ್ಲ ಶಿಲ್ಪ ಗಂಗನ ಬುಟ್ಟಿಗೆ ಹಾಕ್ಕೋಳ್ಳಕ್ಕೆ ಇವಳು ಕ್ಯಾಂಟೀನ್ನಲ್ಲಿ ಇವಳಾಗೆ ಹೋಗಿ ಎಲ್ಲೆಲ್ಲಿ ಮುಟ್ಟಿಸ್ಕೊಂಡ್ಳು ಅಂಥ ಗೊತ್ತಾ ನಿನ್ಗೆ ಎಂದಾಗ,

ಕೋಪದಲ್ಲಿದ್ದ ಶಿವಾನಿಗೆ ಆಶ್ಚರ್ಯವಾಯಿತು ಅದು ಗಂಗನಿಗು ತನಗೂ ಮಾತ್ರ ತಿಳಿದ ವಿಷ್ಯ ಇವಳಿಗೆ ಯಾರು ಹೇಳಿದ್ರು ಎಂದು

ಕ್ಯಾಂಟೀನ್ನಲ್ಲಿ ನಡೆದ ವಿಷ್ಯ ಮೋನಿಕ ಗಂಗನನ್ನು ತಮಾಷೆ ಮಾಡುತ್ತ ಫ್ರೆಂಡ್ಸ್ ಮುಂದೆ ಹೇಳಿದ್ದಳು,ಇಕ್ಬಾಲ್ ಸಹ ತಮಾಷೆಯಾಗೆ ಇಶಾನ ಬಳಿ ಹೇಳಿದ್ದನು, ಆದರೆ ಇಶಾ ಶಿವಾನಿ ಮೇಲೆ ಕೋಪಕ್ಕೆ ಆ ವಿಷ್ಯಕ್ಕೆ ಬಣ್ಣ ಹಚ್ಚಿ ಹೇಳಿದ್ದಳು

ಶಿವಾನಿ ಕೋಪದಲ್ಲಿ ಮುಂದೆ ಬಂದು ನಿನಗೆ ಯಾರೆ ಈ ವಿಷ್ಯ ಹೇಳಿದ್ದು ಎಂದು ಕೇಳಿದಾಗ,

ಇಶಾ ಇಕ್ಬಾಲ್ ಹೆಸರು ಬರಬಾರದೆಂದು, ಇಂಥ ವಿಷ್ಯಾ ಯಾರೋ ಏಕೆ ಹೇಳ್ತಾರೆ ಗಂಗನೆ ನೀನು ಅವನ್ನ ಯಾವ ರೀತಿ ಮೋಸ ಮಾಡ್ದೆ ಅಂಥ ಹೇಳ್ದ ಎಂದಾಗ ಶೃಂಗ ಶಿಲ್ಪ ಸುಳ್ಳು ಶಿವ ಗಂಗಣ್ಣ ಆ ರೀತಿ ಹೇಳೋದೆ ಇಲ್ಲ ನಂಬಬೇಡ ಎಂದರು,

ಆದರೆ ಇಶಾ ಈ ವಿಷ್ಯಾ ನಿನ್ಗೂ ಗಂಗನಿಗೆ ಮಾತ್ರ ಗೊತ್ತು ಅಲ್ವ, ನೀನು ಯಾರಿಗೆ ಹೇಳ್ದೆ ಇದ್ರೆ ಇನ್ನು ಹೇಳ್ದವರು ಯಾರು ಅಂತ ನೀನೆ ಯೋಚನೆ ಮಾಡು ಎಂದು ಹೇಳಿ ಅಲ್ಲಿಂದ ‌ಹೋಗಬೇಕು ಎಂದುಕೊಂಡಳು, ದುಡುಕು ಸ್ವಭಾವದ ಶಿವಾನಿಗೆ ಮೊದಲೆ ಗಂಗನ ಮೇಲೆ ಇದ್ದ ಕೋಪಕ್ಕೆ ಅದೆ ನಿಜ ಎಂದುಕೊಂಡಳು ಆ ಟೈಮಲ್ಲಿ ಅವಳಿಗೆ ಮೋನಿಕನ ನೆನಪು ಬರಲಿಲ್ಲ,

ಕೋಪದಲ್ಲಿ ಕುದಿಯುತಿದ್ದ ಶಿವಾನಿ ಇಶಾಳ ಕೈ ಹಿಡಿದು ಕೆಟ್ಟದಾಗಿ ಬೈಯ್ದು ಗೌತಮ್ಗೋಸ್ಕರ ಆ ಹಳ್ಳಿ ಗಮಾರ್ನ ಬುಟ್ಟಿಗೆ ಹಾಕ್ಕೊಂಡು ಪ್ರೀತಿಸೋಷ್ಟು ಕರ್ಮ ನನ್ಗೆ ಇನ್ನು ಬಂದಿಲ್ಲ, ಆ ಸಗಣಿ ಎತ್ತವನಿಗೆ ಹೋಗಿ ಹೇಳು, ನಾನು ಅವನನ್ನ ಪ್ರೀತಿಸದನೆ ನನ್ನ ಕ್ಯಾರೆಕ್ಟರ್ ಬಗ್ಗೆ ಕಾಲೇಜೆಲ್ಲಾ ಇಲ್ಲಸಲ್ಲದು ಎಲ್ಲಾ ಹೇಳ್ಕೊಂಡು ತಿರೋಗೊ ಅಂಥವನ ಪ್ರೀತಿ ನನ್ನ ಕಾಲಿನ ಧೂಳಿನ ಸಮಾನ, ನಾನು ಅವನ ಪ್ರೀತಿಸೋ ಚಾನ್ಸ್ ಇಲ್ಲ ಅಂಥ ಎಂದಾಗ ಇಶಾ ಶಿವಾನಿ ಹಿಂದೆ ನೋಡಿ ಓಡಿಹೋದಳು

ಶಿವಾನಿ ಹಿಂದೆ ಗಂಗ ನಿಂತಿದ್ದ ಶಿವಾನಿಗೆ ಪ್ರಪೋಸ್ ಮಾಡಬೇಕೆಂದು ಬಂದಿದ್ದ,

ಈಗ ಶಿವಾನಿಯ ಒಂದೊಂದು ಮಾತು ಅವನಿಗೆ ಶಿವಾನಿ ಬಗ್ಗೆ ಇದ್ದ ಸದಾಭಿಪ್ರಾಯ, ಪ್ರೀತೀ ಎಲ್ಲಾ ನುಚ್ಚುನೂರಾಗಿ ಹೋಯಿತು, ಅವನ ಕಣ್ಣು ತೇವವಾಯಿತು, ಮುಂದೆ ಬಂದು ಥ್ಯಾಂಕ್ಸ್ ಶಿವ ನನ್ನ ಪ್ರೀತಿನ ನಿನ್ ಕಾಲ್ ಧೂಳಿನ ಸಮಾನ ಅಂಥ ಹೇಳಿ ನನ್ ಕಣ್ಣು ತೆರಿಸಿದ್ದಕ್ಕೆ, ಆದ್ರೆ ಆ ಧೂಳು ನಿನ್ಗೆ ಮಾತ್ರ ಲೈಫಲ್ಲಿ ಯಾವತ್ತಿಗೂ ಸಿಗಲ್ಲ, ಏಕೆಂದರೆ ನೀನು ನನ್ನ ಪ್ರೀತಿಗೆ ಲಾಯಕ್ಕಿಲ್ಲಾ, ಲೈಫಲ್ಲಿ ನಾನು ಮಾಡಿದ್ದು ಮೊದಲ್ನೆ ತಪ್ಪು ಮತೆ ಕೊನೆ ತಪ್ಪು ಏನ್ ಗೊತ್ತಾ ನಿನಂಥ ಗಂಡುಬೀರಿನ ಪ್ರೀತಿಸಿದ್ದು ಎಂದು ಹಿಂದೆ ತಿರುಗಿ ನೋಡದೆ ಹೊರಟುಹೋದ,

ಶಿವಾನಿಗೆ ಅವನಂದ ಕೊನೆ ಮಾತಿಗೆ ನೋವಾಯಿತು ಛೀ ಇನ್ನು ಮೇಲೆ ಲೈಫಲ್ಲಿ ಇವನ ಮುಖ ನೋಡ್ಬಾರದು ಎಂದುಕೊಂಡಳು, ಇದಕ್ಕೆಲ್ಲಾ ಸಾಕ್ಷಿಯಾಗಿದ್ದ ಶೃಂಗ ಶಿಲ್ಪ ಬಾಯಿ ಇದ್ದು ಮೂಕರಂತಿದ್ದರು,

ಶೃಂಗ ಶಿವಾನಿಯನ್ನು ಮಾತನಾಡಿಸುವುದನ್ನೆ ಬಿಟ್ಟಿದ್ದಳು, ಎಕ್ಸಾಮ್ ಮುಗಿದಿದ್ದರಿಂದ ಎಲ್ಲರೂ ಅವರವರ ಮನೆಗೆ ಹೊರಟುಹೋದರು

ಫೈನಲ್ ಇಯರ್ ಎಕ್ಸಾಮ್ ಸಹ ಮುಗಿದವು ಗೌತಮ್ ಗಂಗನನ್ನು ಮುಂದಿನ ವಿದ್ಯಾಬ್ಯಾಸಕ್ಕಾಗಿ ಪ್ರಭಾಕರ್ ಫಾರಿನ್ ಕಳುಹಿಸಬೇಕೆಂದು ಕೊಂಡರು, ಆದರೆ ಗಂಗ ಒಪ್ಪಲಿಲ್ಲ ತಾನು ಇಲ್ಲೆ ಇದ್ದು ಎಂಕಾಂ ಮಾಡುವುದಾಗಿ ಹೇಳಿದ,

ಗೌತಮ್ನನ್ನು ಕಳುಹಿಸಿಕೊಡಲು ನಿಶ್ಚಯಿಸಿ, ಎಲ್ಲರೂ ಅವನನ್ನು ಬಿಳ್ಕೊಡಲು ಏರ್ಪೋರ್ಟ್ಗೆ ಬಂದಿದ್ದರು,

ರಾಹುಲ್, ಶಿಲ್ಪ, ಇಕ್ಬಾಲ್, ಶಾಸ್ತ್ರೀ ಬಂದಿದ್ದರು, ಶಿವಾನಿ ತನ್ನ ಫ್ಯಾಮಿಲಿ ಜತೆಗೆ ಬಂದಿದ್ದಳು,

ಸಂಗೀತ ಗೌತಮ್ಗೆ ಅಲ್ಲಿ ಹುಷಾರಾಗಿರು ಗೌಮಿ ಬೇರೆ ದೇಶ ಅದು ಅಲ್ಲಿ ಜನ ಹೇಗೋ ಏನೋ ಇಷ್ಟ ಆಗ್ದೆ ಇದ್ರೆ ವಾಪಸ್ ಬಂದ್ಬಿಡೋ ಎಂದರು ಕಣ್ಣೀರು ಒರೆಸಿಕೊಳ್ಳುತ್ತ,

ಗೌತಮ್ಗೆ ತನ ತಾಯಿ ಕಾಳಜಿ ನೋಡಿ ಕಣ್ಣು ತೇವವಾಯಿತು, ‌ಸರಿ ಮಮ್ಮಿ ಎಂದು ಎಲ್ಲಾರ ಕಡೆ ಒಮ್ಮೆ ನೋಡಿದವನ ಕಣ್ಣಿಗೆ ಶೃಂಗ ಕಾಣದಿದ್ದದ್ದು ಮನಸ್ಸಿಗೆ ಅಸಂತೃಪ್ತಿ ಎನಿ‌ಸಿತು, ಇನ್ನು ತನ್ನ ಮನಸಿನ ತಳಮಳ ತಡೆಯದಾದ,
ಗಂಗನಲ್ಲಿ ಮಾತನಾಡುತ್ತ ಸೈಡಿಗೆ ಕರೆದುಕೊಂಡು ಬಂದವನು, ಗಂಗ ನನ್ಗೆ ಮನಸ್ಸಿನಲ್ಲಿ ತುಂಬಾ ದಿನದಿಂದ ಕೊರಿತಿರೋ ವಿಷ್ಯ ಇದು ಹೋಗಕ್ಕೆ ಮುಂಚೆ ನನ್ಗೆ ನಿಜ ಹೇಳೋ ಶೃಂಗ ಯಾರು ಎಂದು ಕೇಳಿದ,

ಗಂಗ ತಡವರಿಸುತ್ತ ಏಕೊ ಇಂಥ ಪ್ರಶ್ನೆ ಕೇಳ್ತಾ ಇದ್ದೀಯಾ ನಿನ್ಗೆ ಶೃಂಗನ ವಿಷ್ಯ ಎಲ್ಲಾ ಗೊತ್ತಾಲ್ವ ಎಂದ

ಆದ್ರೂ ಇನ್ನು ಬೇರೆ ಏನೋ ಇದೆ ಅನ್ನಿಸುತೆ ಗಂಗ, ಅವಳ ಸ್ಮೈಲ್, ಡಿಂಪಲ್ ಮುಂಚೆ ಎಲ್ಲೋ ನೋಡಿದೀನಿ ಅನಿಸುತೆ ಅದು ಮನಸ್ಸಿಗೆ ಕುಟ್ಟುತಾನೆ ಇದೆ ಕಣೋ, ಎಲೋ ನೋಡಿದೀನಿ ಅಂತ ಎಷ್ಟು ಯೋಚನೆ ಮಾಡಿದ್ರು ನೆನಪಾಗ್ತ ಇಲ್ಲ ತಲೆ ಕೆಟ್ಟಂಗೆ ಆಗುತ್ತೆ ಕಣೋ ಪ್ಲೀಸ್ ಹೇಳೋ ಎಂದು ಗೌತಮ್ ಒತ್ತಾಯ ಮಾಡಿದಾಗ

ಗಂಗ ನಕ್ಕು ಛೆ ಅಸ್ಟೇನಾ, ಈಗೇನು ನಿನ್ಗೆ ಅವಳನ್ನ ಎಲ್ಲಿ ನೋಡಿದ್ಯಾ ಅಂತ ಗೊತ್ತಾಗ್ಬೇಕಲ್ವ ಎಂದು ಅವನ ಬೆನ್ನು ತಟ್ಟಿ, ನೀನು ಶೃತಿನ ಮೀಟ್ ಆಗೋಕೆ ಮುಂಚೆ, ನೀನು ಹ್ಯಾಪಿಯಾಗಿ ಕುಣಿದುಕುಪ್ಪಳಿಸುತಿದ್ದ ಹಿಂದಿನ ಲೈಫ್ ಒಂದು ಇತ್ತು, ಅದರಲ್ಲಿ ಹುಡುಕೊ ಶೃಂಗ ಕಾಣಿಸಬಹುದು, ಏಕೆಂದರೆ ಶೃತಿಗಿಂತ ಫಸ್ಟ್ ನಿನ್ ಲೈಫಲ್ಲಿ ಎಂಟ್ರಿ ಕೊಟ್ಟಿದ್ದು ಶೃಂಗ ಎಂದ,

ಗೌತಮ್ ಆಶ್ಚರ್ಯದಿಂದ ಏನ್ ಹೇಳ್ತಾ ಇದ್ದಿಯೋ ಸರಿಯಾಗಿ ಅರ್ಥ ಆಗೊ ಥರ ಹೇಳೋ ಎನ್ನುವಾಗ ಪ್ಲೈಟ್ ಅನೋನ್ಸ್ಮೇಂಟ್ ಶುರುವಾಯಿತು,

ಗೌತಮ್ ಗಾಭರಿಯಿಂದ ಬೇಗ ಹೇಳೋ ಗಂಗ ಎನ್ನುವಾಗ ,

ನೀನು ಎಸ್ಸೆಸ್ಸೆಲ್ಸಿ ಪಾಸದಾಗ ನಮ್ಮೂರ ಜಾತ್ರೆ , ಡಿಂಪಲ್ ಕ್ವೀನ್, ಹೊಳೆ ನೆನಪಿಸ್ಕೋ ನೆನಪಾಗ್ತಾಳೆ ಎಂದ

ಅಷ್ಟರಲ್ಲಿ ಪ್ರಭಾಕರ್ ಗೌತಮ್ ಬಾರೋ ಟೈಮ್ ಆಯಿತು ಎಂದಾಗ ಗೌತಮ್ ಎಲ್ಲಾರಿಗು ಬಾಯ್ ಹೇಳಿ ಹೊರಟುಹೋದ

ಪ್ರಭಾಕರ್ ಅನುಮಾನದಿಂದ ಗಂಗನನ್ನು ವಿಚಾರಿಸಿದರು ಗಂಗ ಗೌತಮ್ ನಿನ್ನ ಶೃಂಗನ ಬಗ್ಗೆ ವಿಚಾರಿಸಿದ್ನ ಎಂದು

ಗಂಗ ಹೌದು ಮಾವ ಆದರೆ ನೀವು ಹೆದರಬೇಡಿ ಎಲ್ಲಾ ವಿಷ್ಯ ಹೇಳಿಲ್ಲ ಎಂದ,

ಪ್ಲೈಟ್ ಹತ್ತಿದ ಗೌತಮ್ ಶೃಂಗಳನ್ನು ನೆನಪಿಸಿಕೊಳ್ಳುತ್ತ, ತನ್ನ ಗತ ಜೀವನದ ನೆನಪಿನಂಗಳಕ್ಕೆ ಜಾರಿದ

*************

(ಮುಂದುವರಿಯುವುದು......)

ಭಾಗ 1 ರಿಂದ 16 ರ ವರೆಗಿನ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.