ವಿವಿಧ ಕಂಪನಿಗಳಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಮೀರಾಳನ್ನು ಅಕ್ಕಪಕ್ಕದ ಮನೆಯವರು," ಅಯ್ಯೊ ಪಾಪದ ಹುಡುಗಿ ಮನೆಯ ಜವಾಬ್ದಾರಿ ಹೊತ್ತಿಕಳ್ಳಬೇಕಾದ ಪರಿಸ್ಥಿತಿ ಇಷ್ಟು ಚಿಕ್ಕ ವಯಸ್ಸಿನಲ್ಲೇ ಬರಬಾರದಿತ್ತು" ಎಂದು ಅನುಕಂಪದ ಮಾತುಗಳನ್ನಾಡುತ್ತಿದ್ದರೆ ಮೀರಾಳಿಗೆ ತನ್ನ ಪರಿಸ್ಥಿತಿಯ ಬಗ್ಗೆ ಅರಿವಿದ್ದರಿಂದ ಸುಮ್ಮನೆ ಕುಳಿತು ಕಣ್ಣೀರು ಇಟ್ಟರೆ ತಮ್ಮ ತಂಗಿಯ ಭವಿಷ್ಯ ಹಾಳಗುವುದು ಎಂದು, ಮತ್ತೆ ಕೆಲಸ ಹುಡುಕಲು ಪ್ರಾರಂಬಿಸಿದಳು.

ಕಡೆಗೆ ಒಂದು ದಿನ ಪೇಪರ್ ಓದುವಾಗ ಒಂದು ಕಂಪನಿಯಲ್ಲಿ ಅಕೌಂಟೆಂಟ್ ಹುದ್ದೆಗೆ ಇಂಟರ್‌ವ್ಯೂಗೆ ಕರೆದಿರುವುದು ಕಾಣಿಸಿತು. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಆ ಕಂಪನಿಯ ಅಡ್ರೆಸ್ ಅನ್ನು ಬರೆದುಕೊಂಡು ಇಂಟರ್‌ವ್ಯೂ ಅಟೆಂಡ್ ಮಾಡಲು ಹೊರಟಳು.

ಮೊದಲೇ ಬಡಕುಟುಂಬದಲ್ಲಿ ಜನಿಸಿದ್ದ ಮೀರಾಳಿಗೆ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಕೆಟ್ಟಿದ್ದರಿಂದ ಎಲ್ಲಿಗಾದರೂ ಹೋಗಬೇಕಾಗಿ ಬಂದಾಗ ಮನೆಯಿಂದ 4 km ದೂರವಿರುವ ಬಸ್ ಸ್ಟಾಪ್ಗೆ ನಡೆದೆ ಹೋಗಬೇಕಿತ್ತು. ಆಟೊಗೆ ಕೊಡುವ ಹಣವನ್ನು ಉಳಿಸಿದರೆ ಅದೆ ಹಣ ಮಧ್ಯಾಹ್ನದ ಊಟಕ್ಕೆ ಆಗುತ್ತದೆ ಎಂಬುದು ಅವಳ ಯೋಚನೆ.

ಇಂಟರ್‌ವ್ಯೂ ಗೆ ಸಮಯ ಹತ್ತಿರವಾಗುತ್ತಿದ್ದರಿಂದ ಬೇಗ ಬೇಗನೇ ಹೆಜ್ಜೆ ಹಾಕುತ್ತಿದ್ದಳು.ಇದ್ದಕಿದ್ದಂತೆ ಹಿಂದಿನಿಂದ ಬಂದ ಕಾರೊಂದು ಅವಳಿಗೆ ತೀರ ಸಮೀಪದಲ್ಲೆ ಹಾದುಹೋಗಿದ್ದರಿಂದ, ಮೊದಲೇ ಅವಸರದಲ್ಲಿ ಇದ್ದವಳಿಗೆ ಕಾರು ತನ್ನನ್ನು ಗುದ್ದಿತ್ತೆನೊ ಎಂಬ ಭಯದಲ್ಲಿ ಮುಂದೆ ಬಿದ್ದಳು.

ಕಾರಿನಲ್ಲಿ ಇದ್ದ ವ್ಯಕ್ತಿಗೆ ಕಾರಿನ ಕನ್ನಡಿಯಿಂದ ಇವಳು ಬಿದ್ದಿದ್ದುದನ್ನು ಕಂಡಿದ್ದರಿಂದ ಕಾರನ್ನು ರಿವರ್ಸ್ ತೆಗೆದುಕೊಂಡು ಬಂದ. ಅವನ ಜೊತೆ ಇನ್ನೊಬ್ಬ ಹುಡುಗಿಯು ಇದ್ದಳು. ಅವನ ಹೆಸರು ಮಾಧವ ಜೊತೆಯಲ್ಲಿ ಇದ್ದವರು ಅವನ ತಂಗಿ ಸ್ಮಿತಾ. ಅವತ್ತು ಕಾರನ್ನು ತಾನೇ ಹೊಡಿಸುತ್ತೇನೆ ಎಂದು ಅಣ್ಣನ ಬಳಿ ಹಠ ಮಾಡಿದ್ದರಿಂದ ಮಾಧವನು ಅದಕ್ಕೆ ಒಪ್ಪಿ ಕಾರನ್ನು ಅವಳೆ ಹೊಡಿಸಲು ಬಿಟ್ಟಿದ್ದ. ಅದರ ಪ್ರತಿಫಲವೆಂಬಂತೆ ಇಷ್ಟೆಲ್ಲಾ ಆಗಿತ್ತು.

ಕೆಳಗೆ ಬಿದ್ದಿದ್ದ ಮೀರಾಳ ಬಳಿ ಬಂದ ಮಾಧವ ಅವಳನ್ನೇ ನೋಡುತ್ತಾ ನಿಂತ! ಮನಸ್ಸಿನಲ್ಲೇ "ಎಂಥಾ ಸೌಂದರ್ಯವತಿ, ಎಷ್ಟು ಮುಗ್ಧವಾಗಿದ್ದಾಳೆ ಎಂದು ಒಂದೇ ಸಮನೆ ಅವಳನ್ನೇ ನೋಡುತ್ತಾ ನಿಂತವನಿಗೆ, ಕೆಳಗೆ ಬಿದ್ದ ಮೀರಾಳನ್ನು ಮೇಲೆ ಎತ್ತಿ ನಿಲ್ಲಿಸುವುದೇ ಮರೆತಂತೆ ಇತ್ತು.

ಇತ್ತಾ ಮೀರಾ ಬಿದ್ದ ರಭಸಕ್ಕೆ ಕಾಲಿನ ಮಂಡಿಚಿಪ್ಪು ಉಳುಕಿತ್ತು. ಮೇಲೆ ಹೇಳುವ ಮುನ್ನ ಮಾಧವನ ಕಡೆ ನೋಡಿದವಳಿಗೆ ಮತ್ತಷ್ಟು ಕೋಪ ಬಂತು. ಜೊತೆಗೆ ಕಾಲು ಉಳಿಕಿದ್ದರಿಂದ ವಿಪರೀತ ನೋವುತಿತ್ತು, ಮಾಧವನ ಕಡೆ ತಿರುಗಿ" ಏನ್ರಿ ಶ್ರೀಮಾಂತರು ಅನ್ನೊ ಅಹಂಕಾರನ ನಮ್ಮಂಥ ಬಡವರ ಮೇಲೆ ಕಾರು ಬಿಟ್ಟು ತೋರಿಸುತ್ತಿರ! ಕಾರಿನಲ್ಲಿ ಬಂದು ಗುದ್ದಿ ಕೆಳಗೆ ಬೀಳಿಸಿದ್ದು ಅಲ್ಲದೆ ಈಗ ಏನು ಆಗಿಲ್ಲ ಅನ್ನುವವರ ಹಾಗೆ ಮುಖ ನೋಡುತ್ತಾ ನಿಂತಿದ್ದಿರಲ್ಲ ನೀವೇನು ಮನುಷ್ಯರ" ಎಂದು ಬಯ್ಯುತ್ತಲೆ ಮೇಲೆ ಏಳಲು ಪ್ರಯತ್ನಿಸಿದಳು.

ಕಾಲು ಉಳುಕಿದ್ದರಿಂದ ಮೇಲೆ ಏಳಲು ಪ್ರಯತ್ನಿಸುತ್ತಿದ್ದಂತೆ ಕಾಲು ಸ್ಥಿಮಿತಕ್ಕೆ ಸಿಗದೇ ಮತ್ತೆ ಕೆಳಗೆ ಬೀಳುವಂತೆ ಆಯಿತು. ತಕ್ಷಣಕ್ಕೆ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡ ಮಾಧವ ಅವಳನ್ನು ಕೆಳಗೆ ಬೀಳದಂತೆ ತನ್ನ ತೋಳಿನಲ್ಲಿ ಅವಳ ಭುಜವನ್ನು ಬಳಸಿ ಹಿಡಿದ.

ಒಂದು ಕ್ಷಣ ಏನಾಯಿತು ಎಂದು ಅರಿವಾಗದ ಮೀರಾ ತಲೆಸುತ್ತು ಬಂದ ಹಾಗೆ ಪ್ರಜ್ಞೆ ತಪ್ಪಿದಳು.
ಮಾಧವ ತನ್ನದೇ ಕಾರಿನಲ್ಲಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಇದನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಮಿತಾಗೆ ತನ್ನ ಅಣ್ಣ ಒಂದು ಗೊತ್ತಿಲ್ಲದ ಹುಡುಗಿಯ ಸಲುವಾಗಿ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವುದು ಆಶ್ಚರ್ಯ ತಂದಿತ್ತು.

ಚಿಕಿತ್ಸೆ ಮಾಡಿದ ಡಾಕ್ಟರ್ "ಏನು ತೊಂದರೆ ಇಲ್ಲ ಒಂದೆರಡು ದಿನ ವಿಶ್ರಾಂತಿ ತೆಗೆದುಕೊಂಡರೆ ಸರಿ ಹೊಗುತ್ತೆ ಅಂದರು. ಪ್ರಜ್ಞೆ ತಪ್ಪಿ ಮಲಗಿದ್ದ ಮೀರಾಳಿಗೆ ಎಚ್ಚರವಾಗಿ ತಾನು ಇಂಟರ್‌ವ್ಯೂಗೆ ಹೋಗಬೇಕಾಗಿರುವುದು ನೆನಪಾಗಿ ಸಮಯ ನೋಡಿದಳು. ಇದ್ದದ್ದು ಕಾಲುಘಂಟೆಯ ಸಮಯವಷ್ಟೆ.

ಮೇಲೆ ಎದ್ದವಳೆ ಮಾಧವನಿಗೆ ಥ್ಯಾಂಕ್ಸ್ ಹೇಳಿ ಹೊರಡುತ್ತೇನೆ ಎಂದಳು. ಆಗ ಮಾಧವ" ನಿಮಗೆ ಕಾಲಿಗೆ ತುಂಬಾ ಪೆಟ್ಟಾಗಿದೆ ನೀವು ಈ ನೋವಿನಲ್ಲಿ ನಡೆಯುವುದು ಕಷ್ಟ ಎಲ್ಲಿಗೆ ಹೋಗಬೇಕೆಂದು ಹೇಳಿದರೆ ನಾನು ಅದೇ ರಸ್ತೆಯಲ್ಲಿ ಹೊಗುವವನಿದ್ದರೆ ನಿಮಗೆ ಡ್ರಾಪ್ ನೀಡುತ್ತೆನೆ ಎಂದ"

ಮೊದಲೆ ಇಂಟರ್‌ವ್ಯೂಗೆ ತಡವಾಗಿದ್ದರಿಂದ ಅವನ ಕೋರಿಕೆಗೆ ಇಲ್ಲ ಎಂದು ಹೇಳಲಾಗದೆ ತಾನು ಹೋಗಬೇಕಿಗಿರುವ ಅಡ್ರೆಸ್ನನ್ನು ಹೇಳಿದಳು. ಆದರೆ ಗೊತ್ತಿಲ್ಲದವನಿಗೆ ನಾನು ಎಲ್ಲಿ ಹೋಗುತ್ತಿರುವುದು ಎಂದು ಪೂರ್ತಿ ವಿವರ ಕೊಡುವುದು ಸರಿಯಲ್ಲ ಎಂದುಕೊಂಡವಳೇ ಪಕ್ಕದ ಸರಿಯಾದ ಅಡ್ರಸ್ ಹೇಳಿದಳು. ಇದನ್ನು ಕೇಳಿದ ಮಾಧವ ನಾನು ಆ ಏರಿಯಾದ ಇನ್ನೊದು ರಸ್ತೆಗೆ ಹೊಗುವವನಿದ್ದೆನೆ ನೀವು ಹೇಳಿದ ಕಡೆ ನಿಮ್ಮನ್ನು ಬಿಡುತ್ತೇನೆ ಎಂದು ಅವಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿ ಅವಳು ಹೇಳಿದ ರಸ್ತೆಯಲ್ಲಿ ತಂದು ಇಳಿಸಿದ.

ಆಗಲೇ ಇಂಟರ್‌ವ್ಯೂ ಗೆ ತಡವಾಗಿದ್ದರಿಂದ ಮೀರಾ ಮಾಧವನೆಡೆಗೆ ತಿರುಗಿಯು ನೋಡದೇ ಹೊರಟು ಹೋದಳು. ಅವಳು ಹೋಗುವುದನ್ನೇ ನೋಡುತ್ತಾ ಕುಳಿತ ಮಾಧವ "ಜಂಭದ ಹುಡುಗಿಯಾದರೂ ಸೌಂದರ್ಯದ ಗಣಿ ಅಂದುಕೊಂಡು ಕಾರು ಚಲಾಯಿಸಿದ".

ಇತ್ತಾ ಇಂಟರ್‌ವ್ಯೂ ಕೂಡ ಆ ಕಂಪನಿಯ ಬಾಸ್ ಯಾವುದೋ ಕೆಲಸದ ನಿಮಿತ್ತಾ ಆಫೀಸ್ ಗೆ ಬರುವುದು ತಡವಾಗಿದ್ದರಿಂದ ಇಂಟರ್‌ವ್ಯೂ ಅನ್ನು ಅರ್ಧ ಗಂಟೆ ಮುಂದೆ ಹಾಕಲಾಗಿತ್ತು. ಇದನ್ನು ತಿಳಿದ ಮೀರಾ ಮನಸ್ಸಲ್ಲೆ ದೇವರಿಗೆ ನಮಸ್ಕಾರಿಸಿ ಕುಳಿತಳು.

ಇಂಟರ್‌ವ್ಯೂ ನಲ್ಲಿ ಅವಳ ಸರತಿ ಬಂದಾಗ ಅವಳ ಹೆಸರನ್ನು ಕರೆಯಲಾಯಿತು."ಈ ಕೆಲಸವಾದರೂ ದೊರೆಯುವಂತೆ ಮಾಡು ದೇವರೇ ಎಂದು ದೇವರನ್ನು ಬೇಡಿಕೊಳ್ಳುತ್ತಲೇ ಬಾಗಿಲ ಬಳಿ ಹೋಗಿ "may I come in sir" ಎಂದವಳಿಗೆ ಅತ್ತಕಡೆಯಿಂದ ಗಂಡು ಧ್ವನಿಯೊಂದು "yes come in " ಎಂದಿತು.

ಬಾಗಿಲು ತೆಗೆದು ಒಳಗೆ ಹೋದವಳಿಗೆ ಒಳಗೆ ಕುಳಿತಿದ್ದ ವ್ಯಕ್ತಿಯನ್ನ ನೋಡಿ ಒಮ್ಮೆಲೆ ತಲೆ ತಿರುಗಿದ ಹಾಗೆ ಆಯಿತು.....

**************
(ಮುಂದುವರೆಯುತ್ತದೆ.....)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.