ಕನಸು ಗೆಲುವಲ್ಲ

(ಸಾಧಿಸೋ ಹಂಬಲ ಇರುವ ಮನಸ್ಸುಗಳಿಗೆ ಮಾತ್ರ...)

"ಚರಾಚರ ಜೀವ - ರಾಶಿಗಳಲ್ಲಿ ಮಾನವನು ಕೂಡಾ ದೇವರ ಸೃಷ್ಟಿ ಎನ್ನುವುದು ಬಹುತೇಕ ಮೇಧಾವಿಗಳ ನಂಬಿಕೆ. ಮಾನವ ತನ್ನ ಅಮೋಘವಾದ ಬುದ್ಧಿಶಕ್ತಿ, ಚಿಂತನೆ, ಕ್ರಿಯಾಶೀಲತೆಯಿಂದಾಗಿ ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನ - ವಿಭಿನ್ನ ಎಂಬುದನ್ನು ಸಾಬೀತುಪಡಿಸಿದ್ದಾನೆ‌. ನಾವೆಲ್ಲರೂ ಹುಟ್ಟುವಾಗ ಒಂದೇ ತರಹನಾಗಿ ಹುಟ್ಟುತ್ತವೆ. ನಂತರ ನಮ್ಮ ಗುರಿ, ಧೋರಣೆ, ಚಿಂತನೆಯ ಮೂಲಕ ಬೇರೆ - ಬೇರೆ ಕ್ಷೇತ್ರದಲ್ಲಿ ಭಿನ್ನವಾಗಿ ಬೆಳೆಯುತ್ತವೆ".

"ಮಾನವನ ಯಶೋಗಾಥೆಯ ಆದಿಯನ್ನು ಅರಿಯುವುದೇ ಒಂದು ರೋಮಾಂಚನಕಾರಿ ಅನುಭವ. ಬೆಂಕಿಯ ಅನ್ವೇಷಣೆ, ಚಕ್ರದ ಅನ್ವೇಷಣೆ, ಆದಿಕಾಲದಿಂದಲೂ - ಆಧುನಿಕ ಕಾಲದವರೆಗೂ ಅವನ ಸಾಧನೆ ನಿಜಕ್ಕೂ ಅಚ್ಚರಿಯೇ ಸರಿ.! ಇಷ್ಟೊಂದು ಸುಂದರವಾಗಿ ಈ ಜಗತ್ತನ್ನು ನಿರ್ಮಾಣ ಮಾಡಿರೋ ಮಾನವನ ಸಾಧನೆಗೆ ಹಿಡಿದ ಕೈಗನ್ನಡಿ".

ಹಾಗೇ ವಿಚಾರ ಮಾಡಿದರೆ ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಾಧಕನೇ.! ಸುಮ್ಮನೇ ಕಲ್ಪನೆ ಮಾಡಿಕೊಳ್ಳಿ, ಒಂದು ಹುಟ್ಟಿದ ಮಗು ಅಂಬೆಗಾಲಿಡುವುದಕ್ಕೆ ಕಲಿತಿದ್ದು, ಆ ಮಗುವಿನ ಪಾಲಿಗೆ ಮೊದಲ ಬಹುದೊಡ್ಡ ಸಾಧನೆ. ಎದ್ದು ನಿಲ್ಲಲು ಕಲಿತದ್ದು ಮುಂದಿನ ಬಹುದೊಡ್ಡ ಸಾಧನೆ. ಹೀಗೆ ಆರಂಭವಾಗುವ ಪ್ರತಿಯೊಬ್ಬ ಮನುಷ್ಯನ ಬದುಕಿನ ಸಾಧನೆಯ ಸರಮಾಲೆ ಅವನ ಬದುಕಿನುದ್ದಕ್ಕೂ, ಜೀವನದ ಉದ್ದಕ್ಕೂ ಉಸಿರಿನ ಕೊನೆಯ ಅಂತ್ಯದವರೆಗೂ ಸಾಗುತ್ತದೆ. ಕೆಲವೊಬ್ಬರ ಸಾಧನೆಯ ಸರಮಾಲೆ ಉದ್ದವಾಗಿ, ದೊಡ್ಡದಾಗಿ ದೇಶಕ್ಕೆ, ರಾಷ್ಟ್ರಕ್ಕೆ, ಸಮಾಜಕ್ಕೆ ಅರ್ಪಿತವಾದರೆ, ಇನ್ನೂ ಕೆಲವರ ಸಾಧನೆ ನಮ್ಮ - ನಿಮ್ಮೆಲ್ಲರ ತರಹ ನಮ್ಮ ಬದುಕಿಗೆ ಮಾತ್ರ ಸಿಮೀತವಾಗಿರುತ್ತದೆ. ಸಾಧನೆಯ ಸರಮಾಲೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ, ಯಾರೊಬ್ಬ ವ್ಯಕ್ತಿಯ ಬದುಕು ನಿರರ್ಥಕವಲ್ಲ. ಒಂದು ಟೈಮ್'ನಲ್ಲಿ ಸಣ್ಣ - ಸಣ್ಣ ವ್ಯಕ್ತಿಗಳೇ ತುಂಬಾ ಉಪಯೋಗವಾಗತ್ತಾರೆ. ಈ ದೇಶಕ್ಕೆ ಎಲ್ಲರೂ ಬೇಕು, ಎಲ್ಲರಿಂದಲೂ ಈ ಜಗತ್ತು, ಯಾವೊಬ್ಬ ವ್ಯಕ್ತಿಯಿಂದಲ್ಲ. ಈ ದೇಶಕ್ಕೆ ದೇಶವನ್ನಾಳುವ ನಾಯಕನು ಬೇಕು. ಅದೇ ತರಹ ಅವರ ಸೇವೆ ಮಾಡುವ ಸೇವಕನೂ ಬೇಕು. ಇದರಲ್ಲಿ ಒಬ್ಬ ವ್ಯಕ್ತಿ ಇಲ್ಲಾದರೂ ಸಮಾಜಿಕ ವ್ಯವಸ್ಥೆಯ ದಿಕ್ಕೆ ಬದಲಾಗುತ್ತದೆ. ಇಲ್ಲಿ ಎಲ್ಲರೂ ಕೂಡಾ ಅಮೂಲ್ಯವಾದ ರತ್ನಗಳೇ. ಯಾರು ಮೇಲಲ್ಲ, ಯಾರು ಕೀಳಲ್ಲ.. ಈ ಸಮಾಜದಲ್ಲಿ ಯಾವುದೇ ವ್ಯಕ್ತಿಗೆ ಏನೇ ದೊರಕಿದ್ದರೂ ಅದು ಅವನ ಶಕ್ತಿ, ಸಾಮರ್ಥ್ಯ, ಪ್ರಯತ್ನ, ಸಾಧನೆಯ ಮೂಲಕ ಸ್ಥಾನ ದೊರಕಿರುತ್ತದೆ".

"ಈ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಗಳು ಒಂದೊಂದು ರೀತಿ; ತಮ್ಮ ಬದುಕಿಗೆ ಅವರು ಕೊಟ್ಟುಕೊಳ್ಳುವ ಅರ್ಥಗಳು ಭಿನ್ನ - ಭಿನ್ನ.. ಸಮಾಜದಲ್ಲಿನ ಬದುಕುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಈ ಸಮಾಜದಲ್ಲಿ ನಾವು ಚೆನ್ನಾಗಿ - ಬದುಕಿ - ಬಾಳಬೇಕು ಏನಾದರೂ ಒಂದು ದೊಡ್ಡ ಸಾಧನೆ ಮಾಡಬೇಕು ಅಂತ ಕನಸನ್ನು ಕಟ್ಟಿಕೊಂಡಿರುತ್ತಾನೆ. ಹುಟ್ಟಿದ ಮಗುವಿನಿಂದ ಹಿಡಿದು, ಬದುಕಿನ ಪಯಣದಲ್ಲಿ ಅಂತ್ಯದ ಅಂಚಿನಲ್ಲಿರುವ ವ್ಯಕ್ತಿಯವರೆಗೂ ಸಮಾಜ ತನ್ನ ಸದಾ ಕಾಲ ಗೌರವಿಸುವ ಹಾಗೆ, ಪ್ರೀತಿಸುವ ಹಾಗೆ, ಆರಾಧಿಸುವ ಹಾಗೆ, ಪೂಜಿಸುವ ಹಾಗೆ ಏನಾದರೂ ಸಾಧನೆ ಮಾಡಬೇಕು ಅನ್ನುವ ಆಸೆಯಿರುತ್ತೆ, ಕನಸಿರುತ್ತೆ. ಕೆಲವರಿಗೆ ಶ್ರೇಷ್ಠ ರಾಜಕಾರಣಿಗಳು, ಇನ್ನೂ ಕೆಲವರಿಗೆ ಅಧಿಕಾರಿಗಳು, ನ್ಯಾಯಧೀಶರು, ವೈದ್ಯರು, ಇಂಜಿನಿಯರ್, ಮತ್ತೆ ಕೆಲವರಿಗೆ ಸಿನಿಮಾ ತಾರೆ, ಕ್ರೀಡಾಪಟು, ಉದ್ಯಮಿ ಆಗಬೇಕು ಅಂತ ಕನಸು ಕಾಣತ್ತಾರೆ. ಆದರೆ ಆ ಕನಸು ನನಸು ಮಾಡಿಕೊಳ್ಳುವರು ಕೆಲವರು ಮಾತ್ರ. ಸಾಧನೆಯ ಹಾದಿಯಲ್ಲಿ ಕಲ್ಲು - ಮುಳ್ಳುಗಳು ಇರುತ್ತವೆ. ನೋವು- ನಲಿವು, ಸಂಕಷ್ಟ, ಹತಾಶೆ, ನಿರಾಶೆ, ಒಂಟಿತನ, ಕಷ್ಟ, ಸಮಸ್ಯೆ ಕಾಡುತ್ತವೆ. ಯಾವುದಕ್ಕೂ ಹಿಗ್ಗದೆ- ಕುಗ್ಗದೆ, ಹಗಲು - ರಾತ್ರಿ ಎನ್ನದೆ ಪ್ರಯತ್ನ ಪಟ್ಟು ತಮ್ಮ ಕನಸು ನನಸು ಮಾಡಕೊಳ್ಳತ್ತಾರೆ. ಆ ಮೂಲಕ ಶ್ರೇಷ್ಠ ವ್ಯಕ್ತಿಯಾಗಿ ಇತಿಹಾಸದ ಪುಟಗಳಲ್ಲಿ ಅಮರವಾಗಿರುತ್ತಾರೆ. ತಾವು ಕಂಡ ಕನಸು ನನಸು ಮಾಡಿಕೊಳ್ಳುವ ಮೂಲಕ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳತ್ತಾರೆ. ಮತ್ತೆ ಹಲವರು ಸುಮ್ಮನೆ ಕನಸು ಕಾಣತ್ತಾ ಕಾಲ ಕಳೆಯುತ್ತಾರೆ." "ಮನಸ್ಸೆಂಬ ನೆಲದಲ್ಲಿ ಬೇವಿನ ಬೀಜಗಳನ್ನು ಬಿತ್ತಿದರೆ ಬೆಲ್ಲದಂತಹ ಫಲಿತಾಂಶ ಪಡೆಯಲು ಸಾಧ್ಯವಿಲ್ಲ".

"ಯಾಕೆ ಈ ಮಾತ ಹೇಳತ್ತೀನಿ ಅಂದರೆ ನಾವು ಏನೇ ಮಾಡಿದರೂ ಎಲ್ಲದಕ್ಕೂ ಮೂಲಾಧಾರ ನಮ್ಮ ಮನಸ್ಸು. ನಾವು ಎಲ್ಲರೂ ಏನೇನೋ ಮಾಡಬೇಕು ಅನ್ನಕೊಳ್ಳತ್ತೀವಿ.! ಬಟ್ ಗೆಲುವಿನ ಹಾದಿಯಲ್ಲಿ ಬಲಗಾಲಿಟ್ಟು ಸೋತು ಹೋಗತ್ತೀವಿ. ಸಾಧನೆ ಸುಲಭವಲ್ಲ. ಆದರೆ ಏನೇ ಆಗಲಿ ಸಾಧಿಸಬೇಕು ಅಂತ ತೀರ್ಮಾನ ಮಾಡಿದವನು ಸಾಧಕನಾಗತ್ತಾನೆ. ಪ್ರತಿಯೊಬ್ಬ ಸಾಧಕನು ತಮ್ಮ ತರಹ ಸಾಮಾನ್ಯ ಮನುಷ್ಯನೇ. ಆದರೆ ಅವನು ನಮಗೆ ಕೆಲವೊಮ್ಮೆ ದೇವರಾಗತ್ತಾನೆ, ಉದಾಹರಣೆ ಆಗತ್ತಾನೆ. ಅವನು ಆ ಸ್ಥಾನಕ್ಕೆ ಬರಬೇಕಾದರೆ ಅವನು ಅನುಭವಿಸಿದ ನೋವು, ಯಾತನೆ, ಕಷ್ಟ ಅವನಿಗೆ ಮಾತ್ರ ಗೊತ್ತು. ಅವನ ಗಟ್ಟಿ ಮನಸ್ಸು ಆ ಮಟ್ಟಕ್ಕೆ ಬೆಳೆಯುವಂತೆ ಮಾಡುತ್ತೆ. ನಾವೆಲ್ಲರೂ ಕನಸು ಕಾಣತ್ತೀವಿ, ಆದರೆ ಗಟ್ಟಿ ಮನಸ್ಸು ಮಾಡಿ ಎಷ್ಟೋ ಕಷ್ಟಗಳು ಎದುರಾದರೂ ಪರವಾಗಿಲ್ಲ ಕನಸು ನನಸು ಮಾಡಕೊಳ್ಳಬೇಕು ಅಂತ ಪ್ರಯತ್ನ ಇರಲ್ಲ. ಅದಕ್ಕೆ ನಾವು ಸಾಮಾನ್ಯರು".

"ನೋವು, ಹತಾಶೆ, ನಿರಾಶೆ, ಬಡತನ, ಕಷ್ಟಗಳ ಮಧ್ಯೆ ಬೆಳೆದ ಆ ಪುಟ್ಟ ಬಾಲಕ ಮುಂದೆ ತನ್ನ ಗಟ್ಟಿ ಮನಸ್ಸಿನ ಮೂಲಕ ಶ್ರೇಷ್ಠ ಸಾಧನೆ ಮಾಡಿ ಕೇರಳದ ಇತಿಹಾಸದ ಪುಟಗಳಲ್ಲಿ ಸೇರಿ ಪಡೆದದ್ದು ಮೊದಲನೆಯ ಸ್ಥಾನ! ಕೇರಳದ ಒಂದು ಪುಟ್ಟ ಗ್ರಾಮದಲ್ಲಿ ಒಂದು ಸುಂದರವಾದ ಕುಟುಂಬಯಿತ್ತು. ಆ ಕುಟುಂಬದಲ್ಲಿ ಗಂಡ - ಹೆಂಡತಿ ಒಂದು ಮುದ್ದಾದ ಮಗು. ಆ ಮಗುವಿನ ಹೆಸರು ನಾರಾಯಣ. ನೋವುಗಳೇ ಈ ಕುಟುಂಬದ ದೈನಂದಿನ ಊಟವಾಗಿರುತ್ತವೆ. ಈ ಸಂಸಾರಕ್ಕೆ ಕೂಲಿ ಕೆಲಸವೇ ಜೀವನಾಧಾರ. ಹೀಗೆ ಇರುವಾಗ ಆ ಮಗುವಿಗೆ ಹತ್ತು ವರ್ಷ ಆಗೋ ವೇಳೆಗೆ, ಒಂದು ಅಪಘಾತದಲ್ಲಿ ಆ ದಂಪತಿಗಳು ಇಬ್ಬರೂ ಮರಣ ಹೊಂದತ್ತಾರೆ. ಆ ಪುಟ್ಟ ಬಾಲಕ ನಾರಾಯಣ ಅನಾಥವಾಗುತ್ತೆ. ದಂಪತಿಗಳಿಬ್ಬರ ಅಕಾಲಿಕ ಮರಣ ಕಂಡು ಬಂಧುಗಳು, ಊರಿನ ಜನರು 'ಗೋಳೋ' ಅಂತ ಅತ್ತು ಬೀಡತ್ತಾರೆ. ಅವರು ಇಲ್ಲದ ಜೀವನಯಿಲ್ಲ, ಅವರು ಇಲ್ಲದ ಬದುಕು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅನ್ನುವ ತರಹ ದುಃಖಿತರಾಗತ್ತಾರೆ. ಒಂದೆರಡು ದಿನ ಕಳೆದ ಮೇಲೆ ಏನು ನಡೆದೆಯಿಲ್ಲಾ ಅನ್ನುವ ತರಹ ನಗು - ನಗುತ್ತಾ ಖುಷಿ-ಖುಷಿಯಾಗಿ ಇರತ್ತಾರೆ. ಅಪ್ಪ- ಅಮ್ಮ ಸತ್ತಾಗ ನಾನು ಇದ್ದೀನಿ ಚಿಂತೆ ಮಾಡಬೇಡ ಮಗು ಅನ್ನುವ ಎಲ್ಲರೂ ಎರಡು ದಿನದಲ್ಲಿ.... ಆ ಮಗುವನ್ನು ತಿರುಗಿ ನೋಡುವರು ಯಾರು ಇರುವುದಿಲ್ಲ. ಆ ಮಗುವಿಗೆ ಆಶ್ಚರ್ಯವಾಗುತ್ತೆ, 'ಏನಪ್ಪಾ'! ಇವರು ಏನು ನಡೆದೆಯಿಲ್ಲ ಅನ್ನುವ ತರಹ ಇದ್ದಾರಲ್ಲ. ಆಮೇಲೆ ಪುಟ್ಟ ಬಾಲಕ ನಾರಾಯಣ ವಿಚಾರ ಮಾಡತ್ತಾನೆ 'ಈ ಜಗತ್ತಿನಲ್ಲಿ ಎಲ್ಲಾ ಸುಳ್ಳು, ಈ ಭೂಮಿ ಮೇಲೆ ನಿಜವಾದ ಪ್ರೀತಿಯಿಲ್ಲ. ಒಂದು ವೇಳೆ ನಿಜವಾದ ಪ್ರೀತಿಯಿದ್ದರೆ ಅದು ತಾಯಿ ಪ್ರೀತಿ. ಅದು ತಂದೆ ಪ್ರೀತಿ ಮಾತ್ರ. ಈ ಬದುಕಲ್ಲಿ, ಈ ಜೀವನದಲ್ಲಿ ಯಾರಿಗೂ ಯಾರು ಅಲ್ಲ. ನಮಗೆ ನಾವೇ ಎಲ್ಲ. ನಮಗಾಗಿ ನಾವು ಬದುಕಬೇಕು. ಈ ಸಂಬಂಧಗಳೆಲ್ಲವೂ ಮೋಹದಿಂದ, ಈ ಜಗತ್ತು ವ್ಯಾಮೋಹದಿಂದ ತುಂಬಿದೆ. ಈ ಎಲ್ಲವನ್ನೂ ಮೀರಿ ನಾವು ಬೆಳೆಯ ಬೇಕು. ಈ ಜಗತ್ತು ನಾವು ಅನ್ನಕೊಂಡ ತರಹಯಿಲ್ಲಾ, ನಾವು 10 ಕಿಲೋಮೀಟರ್ ದೂರದಲ್ಲಿದ್ದರೆ, ಜಗತ್ತು ಇನ್ನೂ ನಮ್ನಿಂದ ಲಕ್ಷ ಸಾವಿರ ಕಿಲೋಮೀಟರ್ ದೂರದಲ್ಲಿದೆ. ಜೀವನದಲ್ಲಿ ಗುರಿ ಮುಖ್ಯ. ನಾವು ಏನ್ ಆಗಬೇಕು ಅಂತ ಅಂದುಕೊಂಡಿರುತ್ತೇವೋ ಅದನ್ನು ಮಾಡಿ ತೋರಿಸಬೇಕು. ಆಗ ನಮ್ಮನ್ನು ಎಲ್ಲರೂ, ಎಲ್ಲವೂ ಹುಡುಕಿಕೊಂಡು ಬರುತ್ತೆ.! ಈ ಜಗತ್ತು, ಈ ಸಮಾಜ ಗೆದ್ದವರಿಗೆ ಮಾತ್ರ ಸಲಾಂ ಹೊಡೆಯುತ್ತೆ.!! ಗೆದ್ದವರಿಗೆ ಮಾತ್ರ ಇಲ್ಲಿ ಬೆಲೆಯಿದೆ. ಸೋತವರಿಗೆ ಇಲ್ಲಿ ನೆಲೆಯಿಲ್ಲ. ಈ ಜನರು ,ಈ ಜಗತ್ತು, ಈ ಸಮಾಜ ತಮ್ಮ ಜೀವನದ ಜಂಜಾಟದಲ್ಲಿ ಯಾರನ್ನು ಬೇಕಾದರೂ ಮರೆತು ಬೀಡುತ್ತೇ.! ನಾಳೆ ನಾ ಸತ್ತ ಮೇಲೆ ಹೀಗೆ ಅಲ್ಲವಾ.? ಇರುವಷ್ಟು ದಿನ ಮಾತ್ರ ಜೀವನ, ಇರುವಷ್ಟು ದಿನ ನಾವು ಹೇಗೆ ಇರತ್ತೀವಿ ಅನ್ನೋದು ಮುಖ್ಯ. ನಾವು ಈಗ ಏನು ತಿಳಕೊಂಡಿದ್ದೀವಿ ಅದು ಜೀವನಲ್ಲ..!? ಜೀವನ ಬೇರೆಯಿದೆ 'ಅಂತ ಏನೆಲ್ಲಾ ವಿಚಾರ ಮಾಡಿದ ಆ ಪುಟ್ಟ ಮಗು ನಾರಾಯಣ 'ಈ ಕ್ಷಣ ನನ್ನದಲ್ಲ. ಈಗ ನನ್ನವರು ಅಂತ ಯಾರು ಇಲ್ಲ. ಈ ಜಗತ್ತಿನಲ್ಲಿ ಯಾರು ಸಾಧನೆ ಮಾಡಿರಬಾರದು ಅಂತ ಸಾಧನೆ ನಾ ಮಾಡಬೇಕು. ಈ ಅನಾಥನಿಗೆ ಒಂದೊಂದು ದಿನ ಇಡೀ ಜಗತ್ತಿನ ಜನರೇ ಸಂಬಂಧಿಕರಾಗಬೇಕು' ಅಂತ ಆ ಹುಡುಗ ಗಟ್ಟಿ ಮನಸ್ಸು ಮಾಡಿ ದಟ್ಟವಾದ ಕಾಡಿನಲ್ಲಿ ಸುಮ್ಮನೆ ಕುಳಿತುಕೊಂಡು ಬೀಡತ್ತಾನೆ‌. ಅವನಿಗೆ ಮೊದಮೊದಲು ತುಂಬಾ ನೋವಾಗತ್ತಿತ್ತು. ಕಾಡುಪ್ರಾಣಿಗಳ ಭಯ. ಈ ಸಮಾಜದ ಜನರ ಹೀಯಾಳಿಕೆಯ ಮಾತುಗಳಿಂದ ಅವನಿಗೆ ಎಷ್ಟೋ ಸಲ ಅನ್ನಿಸಿದ್ದು ಇದೆ ನಾನು ಸುಮ್ಮನೆ ನಾಡಿಗೆ ಹೋಗಿ ಸಾಮಾನ್ಯರಂತೆ ಏನೋ ಮಾಡಿಕೊಂಡು ಆರಾಮಾಗಿ ಬದುಕಬೆಕೇಂದು. ಆದರೆ ಅವನ ಮನಸ್ಸು ಎಷ್ಟು ಗಟ್ಟಿತನದಿಂದ ಕೂಡಿತ್ತು ಅಂದರೆ ಏನೇ ಆದರೂ ಪರವಾಗಿಲ್ಲ ನಾನು ಏನು ಅಂತ ಇಡೀಯ ಜಗತ್ತಿಗೆ ತೋರಿಸಬೇಕು ಅಂತ ಧ್ಯಾನಕ್ಕೆ ಕುಳಿತುಕೊಂಡು ಬೀಡುತ್ತಾನೆ. ಆ ಹುಡುಗ ಮುಂದೆ ಎಂತಹ ಅಧ್ಬುತವಾದ ವ್ಯಕ್ತಿಯಾಗತ್ತಾನೆ ಅಂದರೆ ಬಹುಶಃ ಅದು ಕಲ್ಪನೆಗೂ ಅಸಾಧ್ಯವಾದದ್ದು. ಯಾವ ಕೇರಳವನ್ನು ಸ್ವಾಮೀ ವಿವೇಕಾನಂದರು 'ಪಾಪಿಗಳ ನಾಡು' ಅಂತ ಕರಿತ್ತಿದ್ದರೋ, ಅದೇ ಕೇರಳ ರಾಜ್ಯವನ್ನು ಇವತ್ತು ಕಡಲತೀರದ ಸ್ವರ್ಗವಾಗಿ ಮಾಡಿರೋದು ಅದೇ ಮಗು ನಾರಾಯಣ. ಅವರೇ ಇವತ್ತು ಇಡೀ ಕೇರಳ ಜನರ ಆರಾಧ್ಯ ದೇವ, ಉದ್ಬವ ಮೂರ್ತಿ ಅಂತ ಭಾವಿಸಿರುವ ನಾರಾಯಣ ಗುರುಗಳು. ಒಂದು ಕಾಲದಲ್ಲಿ ನಿರಾಶೆ, ದುಃಖ, ವೈಫಲ್ಯ, ಬೇಸರ, ಸೋಲು, ಅವಮಾನ, ಅನಾಥಪ್ರಜ್ಞೆಗಳ ಮಧ್ಯೆ ಬದುಕಿದ್ದ ನಾರಾಯಣ ಇವತ್ತು ಇಡೀ ಕೇರಳ ಜನರೆಲ್ಲರೂ ಅವರ ಬಂಧು-ಬಳಗ. ಸಾಧನೆ ಅಂದರೆ ಇದು ಅಲ್ಲವಾ"..??

"ನೀವು ಬೇಕಾದರೆ ಯಾರನ್ನಾದರೂ ಕೇಳಿ ನೋಡಿ ಮನುಷ್ಯನ ಜೀವಿತಾವಧಿ ಎಷ್ಟು ಅಂತ ಕೇಳಿದರೆ ನೂರು ವರ್ಷ ಅಂತ ಹೇಳತ್ತೀವಿ.! ಅಂದರೆ ನಮ್ಮ ಬದುಕು 100 ಪುಟಗಳ ಸುಂದರವಾದ ಪುಸ್ತಕ. ಈ ಪುಸ್ತಕದ ಶಿಲ್ಪಕಾರರು, ರಚನಕಾರರು, ನಿರ್ದೇಶಕರು ಎಲ್ಲವೂ ನಾವೇ..! ಅಬ್ಬಾಬ್ಬ .!! ಅಂದರೆ ನಿಮಗೆ ಕೆಲವರಿಗೆ 20 ವರ್ಷ, ಕೆಲವರಿಗೆ 25 ವರ್ಷ ಆಗಿರಬಹುದು. ಅಂದರೆ ನಮ್ಮ ಬದುಕಿನ 20, 25 ಪುಟಗಳು ವೇಸ್ಟ್ ಆದ್ದಂತೆ. ಆದರೂ ಪರವಾಗಿಲ್ಲ ಇನ್ನೂ ಬಾಕಿಯಿದೆ. ಮುಂದಿನ ಒಂದೊಂದು ಪುಟದಲ್ಲಿ ನಮ್ಮ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣತ್ತಾಯಿರಬೇಕು. ಬದುಕು ಅನ್ನುವುದು ಮುಗಿಯದ ಅಧ್ಯಾಯ. ಇದಕ್ಕೆ ಅಂತ್ಯಯಿಲ್ಲ. ಇದಕ್ಕೆ ಅಂತ್ಯ ಯಾವಾಗ ಅಂದರೆ ನಮ್ಮ ಉಸಿರು ನಿಂತಾಗ ಮಾತ್ರ. ಒಂದು ಬೀಜ ಸಣ್ಣದಿರಬಹುದು. ಆದರೆ ಅದರಲ್ಲಿ ಹೆಮ್ಮರವೇ ಹಡಗಿದೆ. ಒಂದಿಷ್ಟು ನೀರು, ಮಣ್ಣು, ಗಾಳಿ ದೊರೆತರೆ ಸಾಕು ಅದೇ ಬೀಜವು ಬೃಹತ ವೃಕ್ಷವಾಗಿ, ಮರವಾಗಿ ಬೆಳೆದು ನಿಲುತ್ತದೆ. ನಾವು ಕೂಡಾ ಬೀಜದಂತಹೇ ಚಿಕ್ಕವರಾಗಿರಬಹುದು. ನಮ್ಮಲ್ಲಿ ಒಂದು ಬೃಹತ ವೃಕ್ಷವಾಗುವ, ಒಂದು ಹೆಮ್ಮರವಾಗುವ ಶಕ್ತಿಯಿದೆಯಲ್ಲಾ? ನಮ್ಮಲ್ಲಿ ಶಕ್ತಿ, ಸಾಮರ್ಥ್ಯಯಿದ್ದರೂ ನಮ್ಮ ಕೈಯಿಂದ ಏನು ಮಾಡೋಕೆ ಆಗತ್ತಿಲ್ಲ.!! ಯಾಕೆ ನಮ್ಮ ಮನಸ್ಸು, ಮನಸ್ಥಿತಿ ಇಷ್ಟೊಂದು ದುರ್ಬಲವಾಗಿದೆ? ನಾವೆಲ್ಲರೂ ಚಿಕ್ಕ ಮಗುವಾಗಿದ್ದಾಗ ನಮ್ಮನ್ನು ತೊಟ್ಟಿಲಲ್ಲಿ ಹಾಕತ್ತಾರೆ, ಯಾಕೆ ಗೊತ್ತಾ..?? ಈ ಜಗತ್ತಿನ ಬಗ್ಗೆ ಈ ಮಗುವಿಗೆ ಜ್ಞಾನ ಕಡಿಮೆ ಅಂತ.! ಆ ತೊಟ್ಟಿಲು ಬಿಟ್ಟು ಬಂದರೆ ಆ ಮಗು ಏನಾದರೂ ಮಾಡಿಕೊಂಡು ಬಿಡುತ್ತೆ ಅಂತ.!! ಆ ಮಗುವಿಗೆ ತಾಯಿ ನಿರ್ಬಂಧ ಅಥವಾ ಬೇಲಿ ಹಾಕಿ ಬಿಟ್ಟಿರುತ್ತಾಳೆ. ನೀನು ಇಷ್ಟರಲ್ಲಿಯೇ ಆಟ ಆಡಬೇಕು, ನೀನು ಇಷ್ಟರಲ್ಲಿಯೇ ಏನು ಬೇಕೋ ಅದನ್ನಾ ಮಾಡಕೋ.!! ಇದೇ ನಿನ್ನ ಪ್ರಪಂಚ. ಯೇಸ್..!! ನಾವು ಇವತ್ತು ಏನಾಗಿ ಬಿಟ್ಟಿದ್ದೀವಿ ಅಂದರೆ ತೊಟ್ಟಲಲ್ಲಿ ಆಡುವ ಮಗುವಾಗಿ ಬಿಟ್ಟಿದ್ದೀವಿ. ಒಂದು ನಿರ್ಬಂಧಿತ ಜೀವನ ನಮ್ಮದಾಗಿದೆ. ನಿರ್ಬಂಧಿತ ಜೀವನ ಅಂದರೆ ಕೆಲಸಕ್ಕೆ ಹೋಗಿ ಬರೋದು.! ಆಟ ಆಡೋಡು, ಟಿ.ವಿ ನೋಡೋಡು, ಸಿನಿಮಾ ನೋಡೋಡು, ಸುಮ್ಮನೆ ಏನು ಮಾಡದೇ ಟೈಮ್ ವೆಸ್ಟ್ ಮಾಡೋದು. ಮತ್ತೆ ಯಾರಾದರೂ ಸಾಧಕರನ್ನು ಅಥವಾ ದೊಡ್ಡ ವ್ಯಕ್ತಿಗಳನ್ನು ನೋಡಿದಾಗ ನಾವು ಹಾಗೆ ಆಗಬೇಕು ಅಂತ ಕನಸು ಕಾಣೋದು.!! ಪ್ರಯತ್ನ ಮಾತ್ರ ಶೂನ್ಯ. ಅದಕ್ಕೆ ಹೇಳೋದು ಕನಸು ಗೆಲುವಲ್ಲ."

ಇವತ್ತು ಜಗತ್ತು ಎಷ್ಟೊಂದು ಬದಲಾಗಿದೆ ಅಂತ ನಮಗೆ ಗೊತ್ತು. ಬದಲಾದ ಜಗತ್ತಿನಲ್ಲಿ ನಾವು ಬದಲಾಗದಿದ್ದರೆ ಬೆಲೆಯಿಲ್ಲ, ನೆಲೆಯಿಲ್ಲ.!! ಕನಸು ಕಾಣೋದು ಅಷ್ಟೇ ಅಲ್ಲ. ನಾ ಕನಸು ನನಸು ಮಾಡಬಲ್ಲೇ, ನಾನು ಗೆಲ್ಲಬಲ್ಲೇ, ನಾನು ಕಷ್ಟಪಟ್ಟು ರಾತ್ರಿ- ಹಗಲು ಗೆಲುವಿಗೆ ದುಡಿಯಬಲ್ಲೇ, ನನ್ನ ಕನಸು ನನಸು ಮಾಡಿ ತೋರಿಸಬಲ್ಲೇ ಅನ್ನುವ ನಂಬಿಕೆಯಿದ್ದರೆ, ಆತ್ಮವಿಶ್ವಾಸವಿದ್ದರೆ, ಅಷ್ಟೇ ಪ್ರಯತ್ನವಿದ್ದರೆ ಕನಸು - ನನಸು".

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.