ರಾಹುಲ್ ರಾಜುವನ್ನು ಉದ್ದೇಶಿಸಿ... ಏನೋ ನೀನು ಬೆರಳು ತೋರಿಸಿದರೆ ಹಸ್ತ ನುಂಗುವೆ... ಬಾರಿ ಇದ್ದೀಯೋ ಎನ್ನಲು, ರಾಜು ನಗುತ್ತಾ... ಹೇಗಿತ್ತು ನನ್ನ ಆಕ್ಟಿಂಗ್ ಅವ ನಂಬಿದ್ನಾ ನಮ್ಮನ್ನು ಅಷ್ಟೇ ಸಾಕು ಎಂದು ಯಪ್ಪಾ ನನಗೆ ನಿದ್ದೆ ಬರ್ತಿದೆ ನಾ ಮಲಗಬೇಕು ಎಂದು ಚಾಪೆ ಹಾಸಿ ಮಲಗುತ್ತಾನೆ. ಅವನ ನಂತರ ರಾಹುಲ್ ಸಹ ಮಲಗುತ್ತಾನೆ.

ಮಾರನೇ ದಿನ ಬೆಳಗ್ಗೆ ಎಂಟು ಗಂಟೆಗೆ ಎದ್ದ ಇವರಿಬ್ಬರೂ ಎದ್ದು ಮನೆಯನ್ನು ನೋಡಲು ಆ ಬಾರ್ ಡ್ಯಾನ್ಸರ್ ಹುಡುಗಿಯು ಮನೆಯನ್ನೆಲ್ಲ ಸ್ವಚ್ಛ ಮಾಡಿ ನೀಟಾಗಿ ಬಟ್ಟೆಗಳನ್ನು ಜೋಡಿಸಿ ಹಾಲ್ ತುಂಬೆಲ್ಲ ಬಿದ್ದಿದ್ದ ಸಿಗರೇಟ್ ತುಂಡುಗಳನ್ನು ಎತ್ತಿ‌ ಕಸದ ಬುಟ್ಟಿಗೆ ಹಾಕಿ ಇವರಿಬ್ಬರೂ ಕಣ್ಣು ಬಿಡುವಾಗ ಎದುರಿಗೆ ಕಾಫಿ ಕಪ್ ಸಹ ತಂದಿರುತ್ತಾಳೆ.

ಇಬ್ಬರೂ ಅವಳಿಗೆ thanks ಹೇಳಿ. ಕಾಫಿ ಹೀರಿ ಅನಂತರ ರಾಜು ಸರಿ ನೀವು ಹೊರಡಿ ತಗೊಳ್ಳಿ ಎಂದು ಮತ್ತಷ್ಟು ಹಣ ಕೊಡುವನು. ಆಗವಳು ನಿಮ್ಮಷ್ಟು ಒಳ್ಳೆಯವರನ್ನು ನಾ ಇದೇ ಮೊದಲು ನೋಡುತ್ತಿರುವುದು, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ನುಡಿದು ‌ಅನಂತರ ನಿಮಗೆ ಏನಾದರೂ ಬೇಕಾದರೆ ಎನ್ನಲು ರಾಜು‌ ಓಯ್ ನನ್ನ ತಂಗಿಗೆ ಗೊತ್ತಾದರೆ ಪ್ರಾಣ ತೆಗೀತಾಳೆ, ನೀ‌ ಹೋಗಮ್ಮ ಮೊದಲು ಎನ್ನುವನು.

ಇತ್ತ ಇಬ್ಬರೂ ಟಿವಿ ನೋಡುತ್ತಾ ಕೂತಿರಕು ರೂಪ ಕಾಣದಂತೆ ರಾಜುವಿನ ಕಿವಿ ಹಿಂಡಿ ಬಲಾರೆ ಕಣೋ ನೀನು ನಾನು ದೂರ ಹೋದರೆ? ಮತ್ತೆ ಅವಳನ್ನು ಕರೆಸಿಕೊಳ್ಳುವ ಪ್ಲಾನ್ ಇದ್ಯಾ? ಏನ್ ಕಥೆ, ಅವಳು ಹೋಗುವಾಗ ಆ ತರಹದ ನೋಟ ನೆಟ್ಟಿದ್ದೆ, ‌ಆಗ ರಾಜು ಇಲ್ಲ ಕಣೇ ಆಯ್ತು ಬಿಡೇ ಎಂದು ಕೇಳಿಕೊಳ್ಳಲು, ಅವಳು ಸುಮ್ಮನಾಗುತ್ತಾಳೆ. ‌ಆಗ ಎಷ್ಟು ಒಳ್ಳೆಯ ಹುಡುಗಿ ನೋಡು ಕಾಫಿ ಕೊಟ್ಟು ಹೋಗಿದ್ದಾಳೆ ಎನ್ನಲು ರಾಹುಲ್... ನಗುತ್ತಾ ರೂಪ... ಅಣ್ಣಂದಿರ ನನಗಾಗಿ ನೀವು ಕೆಟ್ಟವರ ತರಹ ಆಕ್ಟ್ ಮಾಡುವಂತಾಯ್ತಲ್ಲ ಎನ್ನಲು, ರಾಹುಲ್ don't feel. ಮತ್ತೆ ಸಮಾಚಾರ ಎನ್ನುವನು.

ಆಗ ಮಧ್ಯೆ ಬಾಯ್ಬಿಟ್ಟ ರಾಜು, ನಿನಗೆ ದಿನಾ ನಾವೇ ಮೂರ್ ಮೂರ್ ಪ್ಲೇಟ್ ತಂದುಕೊಡಬೇಕು. ಒಂದು ದಿನವಾದರೂ ಟೀ ಕಾಫಿ ಮಾಡಿಕೊಡೋದಿರಲಿ, ಕನಿಷ್ಠ ಕುಡಿದ್ರಾ ಅಂಥ ಕೇಳಿಲ್ಲ ಎನ್ನುತ್ತಿರುವಾಗಲೇ ರಾಜು ಹೊದ್ದು ಮಲಗಿದ್ದ ರಗ್ಗನ್ನು ರೂಪ ರಾಜುವಿನ ಮೇಲೆ ಎಸೆದು ಕೋಪದ ಮುಖ ತೋರುವಳು.

ಇತ್ತ ರಾಮು ತನ್ನ ಪ್ರೇಯಸಿಯಾದ ಲಾವಣ್ಯಗೆ ಫೋನ್ ಮಾಡುತ್ತಾನೆ. ಅವಳು ಇವನು ರಾಮು ಎಷ್ಟು ಬಾರಿ ಕರೆ ಮಾಡಿದರೂ ಆಕೆಯು ಫೋನ್ ಪಿಕ್ ಮಾಡುವುದಿಲ್ಲ. ಕೊನೆಗೆ ಅವಳಿಗೆ ಏನಾಗಿರಬಹುದು! ಆರೋಗ್ಯ ಕೆಟ್ಟಿರಬಹುದಾ ಎಂಬ ಆತಂಕದಿಂದ ರಾಮು ಅವಳ ಮನೆಯ ಬಳಿಗೆ ಬರುತ್ತಾನೆ. ಅವನು ಬಂದು ಬಾಗಿಲು ಬಡಿಯುತ್ತಿರಲು ಅವಳು ಇವನೇ ಬಂದಿರಬಹುದು ಎಂದು ಊಹಿಸಿ ನಿಧಾನವಾಗಿ ಬಾಗಿಲು ತೆರೆಯುತ್ತಾಳೆ.

ಅನಂತರ ಅವಳು ನಿನ್ನ ಬಗ್ಗೆ ಎಲ್ಲಿ ಕೇಳಿದರೂ ಕೆಟ್ಟದ್ದೆ ಹೇಳುತ್ತಾರೆ. ಅಷ್ಟು ಮೈ ಹುಷಾರ್ ಇರಲಿಲ್ಲ ಎದ್ದು ಟಿವಿ ನೋಡಿದರೆ ನಿನ್ನ ರಾಸಲೀಲೆ ಟಿವಿಯಲ್ಲಿ ಬರ್ತಿತ್ತು. ನಿನ್ನ ಒಳ್ಳೆಯವ ಅಂದುಕೊಂಡಿದ್ದೆ. ಆ ಲಾಯರ್ ಸಹ ನನ್ನ ಕೆಟ್ಟದಾಗಿ ‌ನೋಡಿ ಮಾತಾಡಿದ. ‌ಅವನೇನಾ ನಿನಗೆ ಪರ್ಸನಲ್ ಲಾಯರ್. ಎಲ್ಲ ಹುಡುಗರಂತೆ ನೀನು ಸೇಮ್ ಮೆಂಟಾಲಿಟಿ ಬಿಡು. ಅಸಲಿಗೆ ಹೆಣ್ಣು ಅಂದರೆ ಏನ್‌ ಅನ್ಕೊಂಡಿರುವೆ. ನಿನ್ನ ಲವ್ ಮಾಡಿ ದೊಡ್ಡ ತಪ್ಪು ಮಾಡಿದೆ ನಾನು. ಯಾಕೋ ಬಂದೆ ನನ್ನ ಬದುಕಲ್ಲಿ ಹೋಗು ಇಲ್ಲಿಂದ ಎಂದು ಬಾಗಿಲು ಹಾಕುತ್ತಾಳೆ.

ಆಗ ರಾಮು ಏಯ್ ಅದೆಲ್ಲವೂ ಕುತಂತ್ರ ಕಣೇ. ನನ್ನ ಮಾತು ಕೇಳು... ಯಾರೋ ಆಗದವರ ಪಿತೂರಿ ಎಂದು ಅವಳ ಮನ ಕರಗಿಸಲು ಯತ್ನಿಸುತ್ತಾನೆ. ಅದಕ್ಕವಳು ಈಗ ಹೋದರೆ ಸರಿ ಇಲ್ಲ ಅಂದರೆ ನಾನು ಸತ್ತೋಗ್ತೀನಿ. ಆಗ ನೆಮ್ಮದಿಯಿಂದ ಇರಬಹುದು ನೀನು ಎನ್ನಲು... ರಾಮು ಒಕೆ ನಿನಗೆ ಈಗ ಮನಸ್ಸು ಸರಿಯಲ್ಲ, ಪರವಾಗಿಲ್ಲ ಕೂಲ್ ಆಗು ಅನಂತರ ಮಾತಾಡೋಣ ಎನ್ನುವನು.

ಅದನ್ನು ಕೇಳಿಸಿಕೊಂಡ ಲಾವಣ್ಯ ಅವನು ಕೊಡಿಸಿದ್ದ ಕೆಲ ಗಿಪ್ಟ್ ಗಳನ್ನು ಕಿಟಕಿಯಿಂದ ಹೊರಗೆಸೆದು ನೀನು ಮತ್ತೆ ಬರಬೇಡ ನನ್ನ ಬದುಕಲ್ಲಿ, ನೀ ಸತ್ತಂತೆ, ಮತ್ತೆ ನನ್ನ ಕಣ್ಣಿಗೆ ಕಂಡ್ಯೋ ನಾನು ಸತ್ತಂತೆ ಎಂದು ರಫ್ ಆಗಿ ವಾರ್ನ್ ಮಾಡಲು ‌ಮೊದಲೇ ಹಣದ ದರ್ಪ ಇದ್ದ ರಾಮು... ನಾನೇಕೆ ಹೋಗಬೇಕು ಇದು ನನ್ನ ಮನೆ. ‌ಎಲ್ಲೋ ತುಕಾಲಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದವಳು ನೀನು. ಅಷ್ಟು ಟ್ರೈನಿಂಗ್ ಕೊಡಿಸಿ, ಇಷ್ಟು ಮಟ್ಟಕ್ಕೆ ತಂದೆನಲ್ಲ ಇಷ್ಟು ಮಾತು ಕೇಳೋಕಾ? ಕೋಪ ಬಿಡು I love you a lot. ನೀ ನೋಡಿದ್ದೆಲ್ಲ ನಿಜ ಅಲ್ಲ. ಅದೊಂದು ಕಟ್ಟು ಕತೆ. ಈ ಸಮಾಜದಲ್ಲಿ ಇಂತಹ ಘಟನೆಗಳು ಮಾಮೂಲಿ.‌ ಅದರಲ್ಲಿ ಹಣ ಇದ್ರೆ ಶತ್ರುಗಳು ಹೆಚ್ಚು ಎನ್ನುವನು.

ಅವಳು ಇವನ ಒಂದು ಮಾತನ್ನು ಕೇಳುವ ಸಂಯಮ ಇಲ್ಲದ ಕಾರಣ ಇವನು ಹೊರಗೆ ಒಬ್ಬನೇ ಒದರಿ ಒದರಿ ಅಲ್ಲಿಂದ ಮನೆಗೆ ಹೊರಟುಬಿಡುವನು. ಮನೆಯಲ್ಲಿ ಅವಳ ಬಗ್ಗೆ ಯೋಚಿಸುತ್ತಾ ಕೊಂಚ ಟೆನ್ಷನ್ ಗೊಂಡು ಕೂತಿರುತ್ತಾನೆ. ಅವನೊಡನೆ ಅವನಿಗೆ ಟ್ರೂ ಲವ್ ಆಗಿರುತ್ತದೆ. ಹೇಗಾದರೂ ಅವಳ ಮನಸ್ಸನ್ನು ತಹಬಂಧಿಗೆ ತಂದು ಪುನಃ ಅವಳ ಸಖ್ಯ ಪಡೆಯಬೇಕು ಎಂದು ಆಲೋಚಿಸಿ ಆ ದಿನವನ್ನು ಕಳೆಯುತ್ತಾನೆ.

ಮಾರನೇ ದಿನವು ಅವಳದು ಅದೇ ಹಠ. ಹಾಗಾಗಿ ಅವನ ಪಿತ್ತ ನೆತ್ತಿಗೇರಿರುತ್ತೆ. ಅಂದು ಸಂಜೆ ಫ್ರೇಷ್ ಆಗಿ ಕೆಲ ಸಮಯ ಕೂತಿದ್ದು, ಅನಂತರ ರಾಹುಲ್ ಗೆ ಕಾಲ್ ಮಾಡುತ್ತಾನೆ. ಸಂಜೆ ಸಿಗು ನಿನ್ನ ಬಳಿ ಮಾತಾಡುವುದಿದೆ ಎನ್ನುವನು.

ಆಗ ರಾಹುಲ್... ಓ ಸಾರಿ, ಇವತ್ತು ಹೊರಗೆ ಇರುವೆನು, ನಾಳೆ ಸಿಗುವೆ ಎನ್ನುವನು. ರಾಮು ಬೇಸರದಿಂದ ಮನೆಯಲ್ಲೇ ಕುಡಿದು ಮಲಗುತ್ತಾನೆ. ಮಾರನೇ ದಿನ ಸಂಜೆ ರಾಹುಲ್ ಕರೆ ಮಾಡಿ ಏನ್ ಪ್ರಾಬ್ಲಮ್ ಏನಾಯ್ತು? ಎಂದು ಕೇಳಲು...ಸಿಗು ಎಂದು ‌ಹೇಳಿ, ಪಬ್ ನಲ್ಲಿದ್ದೇನೆ ಬೇಗ ಬಾ ಎನ್ನುವನು. ಅದನ್ನು ಕೇಳಿದ ರಾಹುಲ್ ಸರಿ ಬರುವೆ ಎಂದು ಹೇಳಿ ರಾಜು ಜೊತೆ ಪಬ್'ಗೆ ತೆರಳುತ್ತಾನೆ. ‌

ಅಲ್ಲಿ ಪಬ್ ಫುಲ್ ಖಾಲಿ ಖಾಲಿ. ಇವನೊಬ್ಬನೇ ಅಂದು ಪಬ್ ಬುಕ್ ಮಾಡಿಕೊಂಡು ಕುಡಿಯುತ್ತಾ ಕೂತಿರುತ್ತಾನೆ. ಅವನನ್ನು ಕಂಡ ರಾಜು ಏನಾಯ್ತು? ಒಬ್ಬನೇ ಇದ್ದೀಯಾ? ಯಾಕೆ ಇಷ್ಟು ಕುಡಿಯುತ್ತಿರುವೆ ಎಂದು ಕೇಳಲು

ರಾಮು ಆ ಮಾತಿಗೆ... ಏಯ್‌ ನಥಿಂಗ್ ನನಗೆ ಈಗ ಬೇಕು? ಫುಲ್ ಬೇಜಾರ್ ಆಗಿದೆ ನ ಎಷ್ಟು ‌ಲವ್ ಮಾಡ್ತಿದ್ದೀನಿ ಅವಳನ್ನು, ಹೀಗೆಲ್ಲ ಮಾಡಿದಳು ಎಂದು ಎಲ್ಲ ವಿವರಿಸುತ್ತಾನೆ.

ಅವನ ಮಾತುಗಳನ್ನು ಆಲಿಸುತ್ತಾ! ನೋಡೋ ಟ್ರೂ ಲವ್ ಅಂತೀಯಾ? ಮತ್ತೆ ಬಹಳ ಚಿಂತೆ ಮಾಡುವ ಅವಶ್ಯಕತೆ ಏನಿದೆ? ಎಂಥ ಲವ್ ಮದುವೆ ಆಗೋದಾ? ಅಥವಾ ರಸ ಹೀರಿ ಬಿಡೋದಾ? ಎನ್ನುವನು.

ರಾಜುವಿನ ಮಾತು ಕೇಳಿ ಕೋಪಗೊಂಡ ರಾಮು ತಾನು ಕುಡಿಯುತ್ತಿದ್ದ ಬಾಟಲ್ ಹೊಡೆದು ತಿವಿದು ಸಾಯಿಸಿಬಿಡುವೆ. ಅವಳ ಬಗ್ಗೆ ಮಾತಾಡಿದ್ರೆ ನಮ್ಮದು ಗ್ರೇಟ್ ಲವ್ ಎನ್ನುವನು.

ಆಗ ಅವರಿಬ್ಬರ ಮಧ್ಯೆ ಬಂದ ರಾಹುಲ್... ರಾಮುವಿನ ಕೈನಲ್ಲಿದ್ದ ಬಾಟಲ್ ಕಿತ್ತು ಬಿಸಾಡಿ... ‌ಏಯ್ ಸ್ಟುಪಿಡ್ ನಿನಗೆ ಟೆನ್ಷನ್ ಇದೆ. ಮೊದಲು ಕೂಲ್ ಆಗು. ಮೈಂಡ್ ಫ್ರೇಷ್ ಆಗಲಿ. ನಿನ್ನ ಜೊತೆ ನಾವಿಲ್ವಾ ಎಲ್ಲ ಸೆಟ್ ಮಾಡುತ್ತೇವೆ. ಕೂಲ್ ಆಗಿರು ಎನ್ನುವನು.

ಎಷ್ಟು ತಿಳಿ ಹೇಳಿದರೂ ತಹಬಂಧಿಗೆ ಬಾರದ ರಾಮು ಕೋಪದಲ್ಲಿ ತನ್ನ ಡ್ರೈವರ್ ಕರೆದು ಕಾರ್ ಹತ್ತಿ ಹೊರಟೆ ಬಿಡುವನು . ಇತ್ತ ರಾಜು ಮತ್ತು ರಾಹುಲ್ ಸಿಕ್ಕ ಚಾನ್ಸ್ ಮಿಸ್ ಆಯ್ತು ಎಂಬ ಪ್ರಸ್ಟೇಷನ್ ನಲ್ಲಿ ಮತ್ತೆರಡು ಪೆಗ್ ಕುಡಿದು ಮನೆಗೆ ಮರಳುತ್ತಾರೆ.

ಮನೆಗೆ ಬಂದ ನಂತರ ಇಬ್ಬರೂ ಹೇಗಾದರೂ ಮಾಡಿ ಅವನನ್ನು ಇನ್ನೂ ಹೆಚ್ಚು ದಿನ ಬಿಡಬಾರದು. ಕಬ್ಬಿಣ ಕಾದಿದೆ. ಈಗ ನಮಗೆ ಹೇಗೆ ಬೇಕೋ ಹಾಗೆ ತಟ್ಕೋಂಡುಬಿಡಬೇಕು ಎಂದು ಮಾತಾಡುತ್ತಾ ಹಾಗೇಯೇ ನಶೆ ಮೇಲೆ ಮಲಗಿಬಿಡುತ್ತಾರೆ.

ಇತ್ತ ರೂಪ ಇವರಿಬ್ಬರೂ ತನಗಾಗಿ ಪಡುತ್ತಿರುವ ಟೆನ್ಷನ್ ಗಮನಿಸಿ ನಾ ಇದ್ದಾಗಲೂ ‌ಖುಷಿ ಇಲ್ಲ, ಸತ್ತ ನಂತರ ಇವರಿಗೆ ತೊಂದರೆ ಕೊಡುತ್ತಿರುವೆ ಎಂದುಕೊಂಡು ಅವರನ್ನು ನೀಟಾಗಿ ಮಲಗಿಸಿ ಅವರ ಮೇಲೆ ರಗ್ಗು ಹೊದ್ದಿಸಿ ತಾನು ಮಲಗುತ್ತಾಳೆ.

ಮಾರನೇ ದಿನ ಬೆಳಗ್ಗೆ ಇಬ್ಬರೂ ಎದ್ದು ತಮ್ಮ‌‌ ಯೋಜನೆಗೆ ಶೀಘ್ರ ಗತಿ ನೀಡಬೇಕು ‌ತಂದ ಹಣ ಎಲ್ಲ ಖಾಲಿ ಆಗುತ್ತಾ ಬಂದಿದೆ ಎಂದು ಯೋಚಿಸುತ್ತಿರಲು... ರಾಜು ಮೊಬೈಲ್ ನಲ್ಲಿ ಯಾವುದೋ ಒಂದು ಕ್ರೈಮ್ ಸ್ಟೋರಿ ಓಪನ್ ಮಾಡುತ್ತಾನೆ. ಅದರಲ್ಲಿ ಟೆಕ್ಕಿಯನ್ನು ಕಿಡ್ನಾಪ್ ಮಾಡಿ ಕೊಲೆ ಎಂದು ಬರುತ್ತದೆ.

ಆಗ ಅವರಿಬ್ಬರೂ ತಮ್ಮ‌ ತಮ್ಮಲ್ಲಿ ನಾವು ಹೀಗೆ ಮಾಡಲು ಆಗಲ್ಲ. ಅವನು ಹೈ ಕಾಂಟಾಕ್ಟ್ ಇರುವವನು. ಹೀಗೆ ಮಾಡಿದರೆ ಅರ್ಧ ಗಂಟೆಯಲ್ಲಿ ಅವನಿರುವ ಲೊಕೇಷನ್ ಹುಡುಕಿ ಬಿಸಾಕುತ್ತಾರೆ. ‌ಅವನಾಗೆ ನಮ್ಮ ಜೊತೆ ಬರಬೇಕು, ಬಂದಿದ್ದು ಯಾರಿಗೂ ಗೊತ್ತಾಗಬಾರದು. even ಅವನ ಡ್ರೈವರ್ ಗೆ ಸಹ ಎಂದು ಮಾತಾಡಿಕೊಂಡು... ಅವನನ್ನು ‌ಖೆಡ್ಡಾಗೆ ಬೀಳಿಸಲು ಬಹಳ ಆಲೋಚನೆ ಮಾಡುತ್ತಾರೆ.

ಹೀಗೆಯೇ ವಾರ ಕಳೆದಿರಲು ಅದೊಂದು ‌ದಿನ ವೇದಾ ರಾಹುಲ್ ನ ಬಳಿಗೆ ಬರುತ್ತಾಳೆ. ಇವನು ಅವಳು ಬಂದಿದ್ದನು ಗಮನಿಸದೆ ಚಿಂತನೆಯಲ್ಲಿರಲು ಅವನನ್ನು ಕಂಡು ಯಾಕೋ ಏನಾಯ್ತು? ಎಂದು ಕೇಳುವಳು.

ಅವಳ ಮಾತಿಗೆ ತಿರುಗಿ ನೋಡಿ ನಾವ್ ಬಂದ ಕೆಲಸ ಮುಗಿಯುತ್ತಲೇ ಇಲ್ಲ. ನಮ್ಮ ಬಳಿ ಇದ್ದ ಹಣವೆಲ್ಲ ಖಾಲಿ ಖಾಲಿ. ಹೀಗೆ ಆದರೆ ಏನ್ ಮಾಡೋದು? ಎಷ್ಟು ದಿನ ಅಂಥ ಮನೆಯವರಿಗೆ ಕೆಲಸಕ್ಕೆ ಬಂದಿದ್ದೀವಿ‌ ಅಂಥ ಸುಳ್ಳು ಹೇಳೋದು. ಏನಾದರೂ ಬೇಗ ಮಾಡಬೇಕು ಎನ್ನುವನು .

ಆಗ ವೇದಾ... ಅದಕ್ಕೇಕೆ ಚಿಂತೆ, ನಿನ್ನ ಅಕೌಂಟ್ ನಂಬರ್ ಕೊಡು ನಾನು ಹಣ ಕಳುಹಿಸುವೆ. ನಿನ್ನ ಕೆಲಸ ಮುಗಿಸು ಅನಂತರ ವಾಪಸು ಮಾಡುವೆಯಂತೆ ಎನ್ನುವಳು.

ನಾವ್ ಬಂದ ಕೆಲಸ ಮುಗಿಸೋದೆ ಕಷ್ಟ ಆಗಿದೆ. ‌ ಅವನ ಬಳಿ ಬಾಯಿ ಬಿಡಿಸಬೇಕು ಅಂದರೆ ನಮ್ಮ ಹಳ್ಳಕ್ಕೆ ಅವನು ಬೀಳಬೇಕು. ಕ್ಲೋಸ್ ಆಗಿದ್ದಾನೆ ಆದರೆ... ನಾವು ಕರೆದಲ್ಲಿಗೆ ಬರಲಾರ. ನಾವ್ ಎತ್ತಾಕೊಂಡ್ ಹೋಗಲು ಆಗಲ್ಲ! ಅವನು ವಿಐಪಿ. ಅದೇ ತೊಂದರೆ ಆಗಿರೋದು ಎಂದು ರಾಹುಲ್ ವಿವರಿಸಲು...

ಆಗ ವೇದಾ... ಲೇ ರಾಹುಲ್ ಇದಕ್ಕೆ ಒಂದು ಬೊಂಬಾಟ್ ಪ್ಲಾನ್ ಮಾಡಿ ಪಕ್ಕಾ ಸ್ಕ್ರೀನ್ ಪ್ಲೇ ನಾನು‌ ಕೊಡುವೆ ಎಂದು ಅವನ ಕಿವಿಯಲ್ಲಿ ಎಲ್ಲವನ್ನೂ ವಿವರಿಸುವಳು.

ಆಗ ರಾಜು...

***********

(ಮುಂದುವರೆಯುತ್ತದೆ....)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.