ಅಗಲಿಕೆಯ ನೋವು ತಿಳಿಯಿತು ಇಂದು,
ಜೋತೆಗಿಲ್ಲ ನನ್ನೊಂದಿಗೆ ನೀ ಎಂದು,
ಕೊರಗುತಿದೆ ಹೃದಯ ನೀ ಬರಲಿಲ್ಲವೆಂದು,
ಸೋಲುತಿಹುದು ಬೇಸರದ ಮಳೆಯಲ್ಲಿ ನೊಂದು...

ಇರುವೆ ಒಂಟಿಯಾಗಿ,
ಬರುವೆಯಾ ನನಗಾಗಿ,
ಕಂಬನಿಯು ಮಳೆಯಾಗಿ,
ಸುರಿದಿದೆ ನಿನಗಾಗಿ...

ಬೇಡಿಹೆನು ನಿನ್ನಯ ಸಂಘ,
ಬಾಡಿಹುದು ನನ್ನಯ ಮೊಗ,
ಬಳಲಿಹೆನು ನೋವಿಂದ ಈಗ,
ಬರುವೆಯಾ ದಯಮಾಡಿ ಬೇಗ..?!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.