ಗುಪ್ತಗಾಮಿನಿ ಹುಡುಗಿ

ಹುಡ್ಗೀರು ಅಂದ್ರೆ ಅರ್ಥನೇ ಆಗಲ್ವಂತೆ ಕಣ್ರೀ. ಏನ್ಹುಡ್ಗೀರೋ ಅದ್ಯಾಕ್ಹಿಂಗಾಡ್ತಾರೋ, ಅಂತ ತುಂಬಾ ಹುಡ್ಗುರು ಮಾತಾಡೋದ್ದನ್ನ ನೋಡ್ತಾನೇ ಇರ್ತೀವಿ. ಹೀಗ್ಯಾಕೆ ಅಂತ ನಾವು ಯೋಚಿಸೋಕೆ ಶುರು ಮಾಡಿದ್ರೆ, ಹುಡ್ಗೀರು ಯಾವ ಥರ ಯೋಚಿಸ್ತಾರೆ ಅನ್ನೋದು ಇಂಪಾರ್ಟೆಂಟ್! ಹುಡ್ಗೀರು ತುಂಬಾನೆ ಚ್ಯೂಸಿ, ಅವ್ರು ತಮ್ಮ ಮನಸ್ಸಲ್ಲಿ ಇರೋದೆಲ್ಲ ಯಾರ ಹತ್ರಾನೂ ಶೇರ್ ಮಾಡಲ್ಲ. ಹಾಗೆ ಶೇರ್ ಮಾಡ್ಬೇಕಂದ್ರು ಅದನ್ನ ಒಬ್ಬ ವ್ಯಕ್ತಿ ಬಗ್ಗೆ ತಿಳ್ಕೊಂಡು ಟೈಮ್ ತಗೊಂಡು ಆಮೇಲೆ ಶೇರ್ ಮಾಡ್ತಾರೆ. ಗುಟ್ಟು ಅಥ್ವ ಸೀಕ್ರೇಟ್ಸ್ ಅನ್ನೋ ಬಗ್ಗೆ ನಾವ್ ಮಾತಾಡೋದೇ ಆದ್ರೆ ಹುಡ್ಗೀರನ್ನ ಗುಟ್ಟಿನ ಗಣಿ ಅಂತಾನೇ ಕರೆಯಬಹುದು. ಗುಪ್ತಗಾಮಿನಿಯರು ಕಣ್ರೀ ಈ ಹುಡ್ಗೀರು. ಇನ್ನು ಈ ತರ ಯೋಚ್ನೆ ಮಾಡ್ತಾ ಹೋದ್ರೆ ಮೊದ್ಲು ಯಾವ್ದೇ ಹುಡ್ಗಿ ಸೀಕ್ರೇಟ್ ಮಾಡ್ತಾಳೆ ಅಂದ್ರೆ ಬಾಯ್‍ಫ್ರೆಂಡ್ ಅಂತಾನೆ ಥಿಂಕ್ ಮಾಡೋರು ಸಾಕಷ್ಟು ಮಂದಿ ಸಿಕ್ತಾರೆ. ಏನೇ ಹೇಳಿ ಹುಡ್ಗೀರು ಆ ವಿಷ್ಯದ ಬಗ್ಗೆ ಗುಟ್ಟು ಮಾಡೋದು ಜಾಸ್ತಿನೇ. ಯಾಕಂದ್ರೆ ಈಗ ಅಪ್ಪ ಅಮ್ಮ ಓವರ್ ಪ್ರೊಟೆಕ್ಟೀವ್ ಆಗ್ತಿರ್ತಾರೆ. ಮತ್ತೆ ಈ ರೀತಿ ವಿಷ್ಯಾನ ಬೇಗ ಅಕ್ಸೆಪ್ಟ್ ಮಾಡ್ಕೊಳ್ಳೋ ಸ್ಥಿತಿಯಲ್ಲಿ ಇರಲ್ಲ. ಅದು ಒಂದು ರೀತಿ ಈ ಸೊಸೈಟಿ ಮೇಲಿನ ಭಯದಿಂದ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಯಾರೇ ತಪ್ಪು ಮಾಡಿದ್ರೂ ಅದು ಹುಡ್ಗಿ ಮತ್ತು ಅವ್ಳನ್ನ ಬೆಳ್ಸಿರೋ ತಂದೆ ತಾಯಿ ಮೇಲೆ ಬರತ್ತೆ. ಆದ್ರಿಂದ್ಲೇ ಯಾವ್ದೇ ಹುಡ್ಗಿ ಆಗ್ಲಿ ಅದು ಬರಿ ಯಾರೋ ರೇಗ್ಸಿರೋ ಚಿಕ್ಕ ವಿಷ್ಯದಿಂದ ಹಿಡಿದು ಬ್ಲ್ಯಾಕ್‍ಮೇಲ್ ಅನ್ನೋ ದೊಡ್ಡ ವಿಷ್ಯದ ತನಕ ಎಲ್ಲಾನೂ ಎಲ್ಲಾರಿಂದಲೂ ಮುಚ್ಚಿಡ್ತಾನೇ ಇನ್ನು ಹುಡ್ಗೀರು ಯಾರ್ ಮೇಲಾದ್ರೂ ಕ್ರಷ್ ಆಗಿದ್ರೇ ಅದನ್ನ ಮನಸ್ಸಲ್ಲೇ ತುಂಬಾ ದಿನದ ತನಕ ಇಟ್ಕೊಂಡಿರ್ತಾರೆ. ಅವ್ರ ಹತ್ರ ಅಲ್ಲ, ಒಂದೊಂದು ಸಾರಿ ತಮ್ಮ ಬೆಸ್ಟ್‍ಫ್ರೆಂಡ್ ಹತ್ರಾನೂ ಶೇರ್ ಮಾಡಲ್ಲ. ಆದ್ರೇ ಅವ್ಳೇ ಅಪ್ಪಿ ತಪ್ಪಿ ಇವ್ಳ ಹತ್ರ ಆ ಹುಡ್ಗನ್ ಬಗ್ಗೆ ಪಾಸಿಟೀವಾಗಿ ಮಾತಾಡಿದ್ರೆ ಆಗ ಅವ್ಳ ಹತ್ರ ಅದನ್ನ ಶೇರ್ ಮಾಡ್ತಾಳೆ. ಆ ಹುಡ್ಗ ಬಂದ ತಕ್ಷಣ ಒಂಥರಾ ನಾಚಿಕೆಯಿಂದ ಹೈಪರ್ ಆಗ್ತಾಳೆ. ಮತ್ತೆ ಅವ್ನ ಹತ್ರ ಮಾತಾಡೋಕೆ ಕಾಯ್ತಾಯಿರ್ತಾಳೆ. ಫುಲ್ ಸ್ಟೈಲಿಷಾಗಿ ಡ್ರಸ್ ಹಾಕೋದೇನೂ, ಲವಲವಿಕೆಯಿಂದ ಓಡಾಡೋದೇನೂ, ಸಿಂಗಾರ ಮಾಡ್ಕೊಂಡು ಸೆಲ್ಫಿಗಳನ್ನ ತೆಕ್ಕೊಂಡು ಚೆನ್ನಾಗಿದ್ದಿನಾ ಅಂತ ನೋಡೋದು ಇವೆಲ್ಲಾ ನಾವು ಕಾಣ್ಬೋದು. ಅದಕ್ಕೆ ಅನ್ಸತ್ತೆ ಹುಡ್ಗುರಿಗೆ ಇವ್ರ ಬಗ್ಗೆ ಅರ್ಥಾನೇ ಆಗಲ್ಲ.

ಇನ್ನು ಆ ಹುಡ್ಗನ್ ಬಗ್ಗೆ ಮಾಹಿತಿ ಕಲೆ ಹಾಕೋಕೆ ಫ್ರೆಂಡ್ಸ್ ಸಹಾಯಾನೂ ಇನ್ನು ಹುಡ್ಗೀರಲ್ಲಿ ಸೀಕ್ರೇಟ್ ಅಂತ ಬರಿ ಬಾಯ್‍ಫ್ರೆಂಡ್ ಮತ್ತೆ ಕ್ರಷ್ ಬಗ್ಗೆ ಬಿಟ್ಟು ಬೇರೆ ಅನೇಕ ವಿಚಾರಗಳಿವೆ. ಅವ್ರು ಸಾಧ್ಯ ಆದಷ್ಟು ಅದನ್ನ ಶೇರ್ ಮಾಡೋದಿಲ್ಲ. ಯಾರಾದ್ರೂ ರೇಗ್ಸಿರೋ ವಿಷ್ಯ ಇರ್ಬೋದು ಅಥ್ವ ಕಾಲೇಜಿನಲ್ಲಿ ತಮಗಾಗೋ ಅವಮಾನಾನೇ ಇರ್ಬೋದು. ಅಥ್ವ ಮತ್ತಿನ್ಯಾವ್ದೋ ಹುಡ್ಗಿ ಬಗ್ಗೆ ಅಸೂಯೆ ಇರ್ಬೋದು. ಯಾವ್ದೇ ವಿಷ್ಯಾನೇ ಆಗ್ಲಿ ಅದನ್ನ ಶೇರ್ ಮಡೋದು ತುಂಬಾ ಕಮ್ಮಿ. ಅದ್ರಲ್ಲೂ ಯಾವ್ದಾದ್ರೂ ಹುಡ್ಗಿ ತನಗಿಂತ ಚೆನ್ನಾಗಿ ಕಾಣ್ತಾಳೆ ಅನ್ಸಿದ್ರೆ ಮಾತ್ರ ತನ್ನಲ್ಲೇ ಏನೇನೋ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಶುರು ಮಾಡ್ತಾಳೆ. ಅವ್ಳ ಮುಂದೆ ತೋರೊಸೋದೆ ಇಲ್ಲ. ಹೀಗೆ ಸಾಕಷ್ಟು ವಿಚಾರಗಳು ಸಿಕ್ತಾವೆ ಹುಡ್ಗೀರ ಬಗ್ಗೆ. ಈ ರೀತಿ ಗುಟ್ಟುಗಳು ಯಾರಿಗಾದ್ರೂ ಗೊತ್ತಿರತ್ತಾ? ಅನ್ನೋ ಯೋಚ್ನೆ ಹುಟ್ಳೋದು ಸಹಜ. ಅದಕ್ಕೆ ಉತ್ತರ, ಅವ್ರು ಯಾರನ್ನ ತಮ್ಮ ಬೆಸ್ಟ್ ಫ್ರೆಂಡ್ ಅಂತ ಕನ್ಸಿಡರ್ ಮಾಡ್ತಾರೋ ಅವ್ರ ಹತ್ರ ಶೇರ್ ಮಾಡೋದನ್ನ ನಾವು ಕಾಣ್ಬೋದು. ಆದ್ರೆ ಅಪ್ಪಿತಪ್ಪಿ ಕೂಡ ತಮ್ಮ ಪೇರೆಂಟ್ಸ್ ಹತ್ರ ಶೇರ್ ಮಾಡಲ್ಲ. ಅದೆಲ್ಲಾ ಕನಸು ಅನ್ಕೊಳ್ಳಿ. ಇನ್ನು ಕೆಲವ್ರು ಫ್ರೆಂಡ್ಸ್ ಹತ್ರ ಶೇರ್ ಮಾಡಿದ್ರೆ ಏನನ್ಕೋತಾರೋ ಅನ್ನೋ ಭಯ ಇರೋರು ಅದನ್ನ ತಮ್ಮ ಪರ್ಸನಲ್ ಡೈರಿಯಲ್ಲಿ ಬರೀತಾರೆ. ಮತ್ತೆ ಕೆಲವ್ರು ಅದನ್ನ ಜೀವಾನೇ ಇಲ್ದಿರೋ ತಮ್ಮಿಷ್ಟದ ಗೊಂಬೆಗಳ ಜೊತೆ ಶೇರ್ ಮಾಡ್ತಾರೆ. ಮತ್ತೆ ಕೆಲವ್ರು ಅದನ್ನ ಮಾತೆ ಬಾರದ ತಮ್ಮ ಮೂಕ ಪೆಟ್‍ಗಳೊಂದಿಗೆ ಶೇರ್ ಮಾಡ್ಕೊತಾರೆ. ಇನ್ನು ಕೆಲವು ಹುಡ್ಗೀರಿಗೆ ಯಾರ ಬಗ್ಗೇನೂ ನಂಬಿಕೆ ಇಲ್ದೇ ಇರೋರು ಗುಟ್ಟನ್ನ ತಮ್ಮ ಡೈರಿನಲ್ಲಿ ಯಾರಿಗೂ ಅರ್ಥ ಆಗ್ದೇ ಇರೋ ಲಿಪಿನಲ್ಲಿ ಬರ್ದು ಆಗಾಗ ಅದನ್ನ ಓದಿ ಖುಷಿ ಪಡೋದ್ದನ್ನು ನಾ ನೋಡಿದ್ದೀನಿ. ನಾನು ಅರ್ಥ ಮಾಡ್ಕೊಳ್ಳೋ ಪ್ರಯತ್ನದಲ್ಲಿ ವಿಫಲನೂ ಆಗ್ಗಿದ್ದೀನಿ. ತುಂಬಾ ಮಾತಾಡೋ ಹುಡ್ಗೀರು ಮನಸ್ಸಲ್ಲಿ ತುಂಬಾ ವಿಚಾರಗಳನ್ನ ಬಚ್ಚಿಟ್ಟುಕೊಂಡಿರ್ತಾರೆ. ಅವ್ರು ಯೋಚ್ನೆ ಮಾಡೋ ವಿಷ್ಯಾನೇ ಬೇರೆ, ಮುಖದಲ್ಲಿ ವ್ಯಕ್ತ ಪಡಿಸೋ ಭಾವನೆನೇ ಬೇರೆ. ಅವ್ರ ಹತ್ರ ಗುಟ್ಟು ರಟ್ಟು ಮಾಡ್ಸೋದು ಬಹಳ ಕಷ್ಟ.

ಮತ್ತೆ ಕೆಲವು ಹುಡ್ಗೀರು ತುಂಬಾ ಮೂಡಿ ಆಗಿ ಬಿಹೇವ್ ಮಾಡ್ತಾರೆ. ಸಣ್ಣ ಪುಟ್ಟ ವಿಷ್ಯಕ್ಕೂ ತುಂಬಾ ಖುಷಿ ಪಡೋ ಹುಡ್ಗೀರು ಮನಸ್ಸಲ್ಲಿ ತುಂಬಾ ಒಂಟಿತನ ಅನುಭವಿಸ್ತಿರ್ತಾರೆ. ಯಾವುದೇ ವಿಷ್ಯದಿಂದ ಹೊರಗೆ ಬರಕ್ಕೂ ತುಂಬಾ ಟೈಮ್ ತಗೋತಾರೆ. ಆದ್ರೆ ಯಾವುದಾದ್ರೂ ವಿಚಾರದ ಬಗ್ಗೆ ಒಂದು ಸಾರಿ ಡಿಸಿಷನ್ ತಗೊಂಡ್ರೆ ಅಂಥ ವಿಷ್ಯಗಳನ್ನಾಗಲೀ, ವ್ಯಕ್ತಿಗಳನ್ನಾಗಲೀ ಮತ್ತೆ ಜೀವನದಲ್ಲಿ ನೆನಪಿಸಿಕೊಳ್ಳೋಕೆ ಇಷ್ಟ ಪಡಲ್ಲ. ಒಟ್ಟಿನಲ್ಲಿ ಎಲ್ಲಾ ಹುಡ್ಗೀರಲ್ಲೂ ಯಾರ ಹತ್ರಾನೂ ಶೇರ್ ಮಾಡ್ಕೊಳ್ಳೋಕೆ ಆಗ್ದೇ ಇರೋ ಸಾಕಷ್ಟು ಗುಟ್ಟುಗಳು ಇದ್ದೇ ಇರತ್ತೆ. ಅವ್ರು ಅದರ ಬಗ್ಗೇನೆ ಯೋಚ್ನೆ ಮಾಡ್ತಿರ್ತಾರೆ. ಮತ್ತೆ ಆ ವಿಚಾರನ ಯಾರ ಹತ್ರ ಶೇರ್ ಮಾಡ್ಲೇ ಬಾರ್ದು ಅನ್ಕೊಂಡಿರ್ತಾರೋ ಅಂತಹ ವ್ಯಕ್ತಿಗಳನ್ನ ಅವೋಯಡ್ ಮಾಡ್ತಾರೆ, ಮತ್ತು ಅವ್ರ ಹತ್ರ ಮಾತಾಡೋಕೆ ಬಹಳ ಹೆದರ್ತಾರೆ. ಇನ್ನು ಕೆಲವ್ರು ತಾವು ಗುಟ್ಟು ಮಾಡ್ತಾಯಿರೋ ವಿಷ್ಯದ ನಂಗೆ ಎಳ್ಳಷ್ಟು ಗೊತ್ತಿಲ್ಲ ಅನ್ನೋ ತರ ಎಲ್ಲರನ್ನು ನಂಬಿಸಿರ್ತಾರೆ. ಒಟ್ಟಿನಲ್ಲಿ ಸಮಾಜಕ್ಕೆ ಹೆದ್ರಿನೋ ಅಥ್ವ ನನ್ ಬಗ್ಗೆ ಯಾರೇನು ತಿಳ್ಕೋತಾರೆ ಅಂತಾನೋ, ಬೈ ಡಿಫಾಲ್ಟ್ ಎಲ್ಲಾ ಹುಡ್ಗೀರಲ್ಲೂ ಸೀಕ್ರೇಟ್ಸ್ ಇದ್ದೇ ಇರತ್ತೆ. ಅದನ್ನ ಮುಚ್ಚಾಕೋಕೆ ಅಂತ ಅದನ್ನ ಟ್ವಿಸ್ಟ್ ಮಾಡಿ ಹೇಳೋದು, ತಮ್ಮಲ್ಲೇ ಅದರ ಬಗ್ಗೆ ಚರ್ಚೆ ನಡಿಸ್ತಾ ಅದನ್ನ ಮೆಲುಕು ಹಾಕೋದು, ಮತ್ತೆ ಅದು ತಿಳೀದೇ ಇರ್ಲಿ ಅಂತ ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಅಂತ ನಂಬಿಸೋ ವ್ಯರ್ಥ ಪ್ರಯತ್ನಗಳನ್ನ ನಡಿಸೋದು, ಆ ಟಾಪಿಕ್ ಬಂದ ತಕ್ಷಣ ಭಯ ಪಡೋದು ಮತ್ತೆ ಟಾಪಿಕ್ ಚೇಂಜ್ ಮಾಡೋ ಪ್ರಯತ್ನ ಪಡೋದು ಇವೆಲ್ಲಾ ಹದಿಹರೆಯದ ಹುಡುಗಿಯರಲ್ಲಿ ಮಾಮೂಲಿ. ಇದನ್ನ ಅರ್ಥ ಮಾಡ್ಕೋತೀನಿ ಅಂತ ಹೋಗೋ ಹುಡ್ಗುರಿಗೆ ಯಾವತ್ತೂ ಉತ್ತರ ಸಿಗದ ಯಕ್ಷ ಪ್ರಶ್ನೆ ಕಣ್ರೀ ಹುಡ್ಗೀರು ಏನ್ ಯೋಚಿಸ್ತಾರೆ ಅನ್ನೋದು. ವೆನ್ ಇಟ್ ಇಸ್ ಗರ್ಲ್ ಬಿವೇರ್ ಬಾಯ್ಸ್.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.