ತಂಗಾಳಿಯ ರಾತ್ರಿಯಲ್ಲಿ

ಉದಯಿಸಿದ ರವಿ ಪಶ್ಚಿಮಕ್ಕೆ ವಾಲಿ ದಿನ ಮುಗಿಸುತ್ತಿದ್ದಾನೆ, ಬೆಳಕಿನ ತೆರೆ ಸರಿದು ಕತ್ತಲಿನ ಛಾಯೆಯು ಆವರಿಸುತ್ತಿದೆ, ಕತ್ತಲಿನ ಪ್ರಭೆ ಹೆಚ್ಚಿದಂತೆ ಆ ಊರಿನ ಒಂದೊಂದೆ ಬಾಗಿಲುಗಳು ಮುಚ್ಚಲಾರಂಭಿಸಿದವು, ಇಡೀ ಊರು ಸ್ಮಶಾನ ಮೌನ ಸೂಜಿ ಬಿದ್ದ ಶಬ್ದವು ಕೇಳುವಂತ ಭಯದಿಂದ ನಿಶಬ್ದದ ಸ್ಥಿತಿ, ಕರಾಳ ಒಂದೊಂದು ರಾತ್ರಿಯು ಒಂದೊಂದು ಯುಗದಂತೆ ಬಾಸವಾಗುತ್ತಿವೆ,ಬೆಳಗಾಗುತ್ತಿದಂತೆ ಲವಲವಿಕೆಯಿಂದಿರುವ ಊರು ದಿನಕರ ಇಳಿಮುಖವಾಗುತಿದ್ದಂತೆ ಊರ ಜನರ ಮುಖವು ಕಳೆಗುಂದಿ ಭಯದಿಂದಲೆ ನಿದ್ರಿಸುತ್ತಿದ್ದರು, ಇಡೀ ರಾತ್ರಿ ಹತ್ತುಗಂಟೆಯಾಗುತ್ತಲೆ ಯಾವುದೋ ಅಶರೀರ ಧ್ವನಿ ಇಡೀ ಊರನ್ನೇ ಆವರಿಸಿ, ಭಯ ಬೀಳಿಸುತ್ತಿತ್ತು , ಈ ಕರ್ಣ ಕಠೋರ ಧ್ವನಿಗೆ ಶ್ವಾನಗಳೂ ಸೇರಿ ಘೀಳಿಡುತ್ತಿದ್ದವು,ಇದರ ತೀವ್ರತೆಗೆ ಎಷ್ಟೊ ಜನರ ಬಟ್ಟೆಗಳೆ ಒದ್ದೆಯಾಗುತ್ತಿದ್ದವು.

ಅವ್ವ ಅವ್ವ ಅವ್ವ ಎಂಬ ಆ ಅಶರೀರ ಶಬ್ದ ಇಡೀ ಊರಿನ ಜನರ ನಿದ್ದೆಗೆಡಿಸಿತ್ತು, ಅದೇ ಊರಿನ ಕಾಳಯ್ಯ ರಾತ್ರಿ ಮನೆಗೆ ಬರುವುದು ತಡವಾಯಿತು. ಇತ್ತ ಮನೆಯವರು ಭಯದಿಂದಲೇ ಕಾಯುತ್ತಿದ್ದಾರೆ, ದಾರಿ ಮದ್ಯೆ ಬಸ್ಸ್ ಪಂಚರ್ ಆದ ಕಾರಣ ಬಸ್ ಬರುವುದು ಒಂದರ್ಧ ಗಂಟೆ ತಡವಾಯಿತು. ಕಾಳಯ್ಯ ಬಸ್ಸ್ ಇಳಿದು ಮನೆ ಕಡೆ ಭೀತಿಯಿಂದಲೆ ಹೆಜ್ಜೆಯಾಕಿದರು, ಮನೆ ತಲುಪಲು ಹತ್ತು ನಿಮಿಷಗಳ ಸಮಯ ಬೇಕು, ಭಯದಿಂದಲೆ ಬಸ್ಸಿಳಿದು ದಡದಡನೆ ಹೆಜ್ಜೆ ಇಡ ತೊಡಗಿದರು, ಬಲಗಡೆಯ ಬಾವಿಯನ್ನು ಕ್ರಾಸ್ ಮಾಡಿ ಎಡ ಭಾಗದ ದೇವಸ್ಥಾನದ ನಂತರ ಮೂರು ನಿಮಿಷಗಳ ದಾರಿ, ಇತ್ತ ಮನೆಯವರು ಚಡಪಡಿಕೆ ಕೂಡ ಹೆಚ್ಚಾಯಿತು, ಆ ರಾತ್ರಿ ಕಾಳಯ್ಯ ಮನೆ ತಲುಪಲೇ ಇಲ್ಲ, ಮನೆಯವರ ಗೋಳಾಟ ಅಧಿಕವಾಯಿತು, ಊರಿನ ಪ್ರಮುಖರು ಏನೂ ಆಗಿಲ್ಲ ತಡವಾದ ಕಾರಣ ಯಾವುದೋ ಪಕ್ಕದೂರಿನಲ್ಲಿ ತಂಗಿದ್ದು ಬರುತ್ತಾರೆ ಸಮಾಧಾನ ಮಾಡಿಕೊಳ್ಳಿ ಎಂದು ಧೈರ್ಯ ತುಂಬಿದರು, ಇದ್ಯಾವುದು ಅವರ ತಲೆಗೆ ಹೋಗಲೇ ಇಲ್ಲ. ಕಾಳಯ್ಯನ ಹೆಂಡತಿ ಇಬ್ಬರ ಮಕ್ಕಳು ಜೊತೆಗೆ ವೃದ್ದ ತಾಯಿ ಗೋಳಾಡುತ್ತಲೆ ಇದ್ದರು, ಎರಡು ದಿನವಾದರು ಕಾಳಯ್ಯ ಬರಲೇ ಇಲ್ಲ, ಮೂರನೇ ದಿನ ಬಾವಿಯ ಒಳಗಿಂದ ಕೆಟ್ಟ ವಾಸನೆ ಬರುತ್ತಿತ್ತು ಹದ್ದು ಕಾಗೆಗಳು ಮುತ್ತಿದ್ದವು, ಅದು ಕಾಳಯ್ಯನ ಶವವೇ ಎಂದು ಗುರುತಿಸಲು ಊರ ಜನಕ್ಕೆ ಸಮಯ ಬೇಕಾಗಲಿಲ್ಲ, ಹೆಣವನ್ನು ಮೇಲಕ್ಕೆ ಎತ್ತಿ ಶವಸಂಸ್ಕಾರ ಮಾಡಿದರು, ಆ ರಾತ್ರಿಯಿಂದ ಊರ ಜನಕ್ಕೆ ಮತ್ತೊಂದು ಕೂಗು ಕೂಡ ಕೇಳಿಸಲಾರಂಭಿಸಿತು, ಮೊದಲೇ ಹೆದರಿದ್ದ ಜನ ಈ ದಿಢೀರ್ ಕಾಳಯ್ಯನ ಶಬ್ದ ಕೇಳಿ ಮತ್ತಷ್ಟು ಭಯಗೊಂಡು, ರಾತ್ರಿ ಹೊರಗಡೆ ಬರದ ಜನ ಹಗಲೊತ್ತು ಓಡಾಡುವುದು ಕಷ್ಟವಾಯಿತು, ಕಾಳಯ್ಯನ ಮನೆ ಕಡೆ ಜನ ಹೋಗಲು ಹೆದರಿದರು, ಊರಿನ ಪ್ರಮುಖರೆಲ್ಲ ಸಭೆ ಸೇರಿ ಇನ್ನೆಷ್ಟು ದಿನ ಭಯದಿಂದ ಬಾಳುವುದು, ಊರಿನ ದೇವಿಗೆ ಪೂಜೆ ಪುರಸ್ಕಾರ ಮಾಡಿ ಆಯಿತು, ಯಾವುದಕ್ಕೂ ಈ ಆತ್ಮಗಳ ಕರಾಳ ಕಿವಿಗಡುಚುವ ಶಬ್ದ ನಿಲ್ಲುತ್ತಿಲ್ಲ ಪಂಡಿತರೊಬ್ಬರನ್ನು ಕರೆಸಿ ಇದಕ್ಕೆಲ್ಲ ಮುಕ್ತಿಯಾಡಲು ತೀರ್ಮಾನಿಸಿದರು.

ನಿಗಧಿತ ದಿನಕ್ಕೆ ಪಂಡಿತರು ಬಂದರು, ಹಲವಾರು ಪೂಜೆ ಬಲಿ ಕೊಟ್ಟು ಆ ಆತ್ಮಗಳ ಆಹ್ವಾನೆ ಮಾಡಿದರು, ಇಡೀ ಊರು ಆ ರಾತ್ರಿ ಪೂಜೆಯ ಸ್ಥಳಕ್ಕೆ ಸೇರಿದೆ, ಆ ಎರಡು ಆತ್ಮಗಳ ಕಿರುಚಾಟಕ್ಕೆ ಊರಿನ ಜನ ಮೂಖಸ್ಥಬ್ದರಾಗಿ ಭಯದಿಂದ ನೋಡುತ್ತಾ ನಿಂತಿದ್ದಾರೆ, ಪಂಡಿತ ತಾನು ಕರೆತಂದಿದ್ದ ಒಬ್ಬನ ದೇಹಕ್ಕೆ ಆ ಆತ್ಮಗಳನ್ನು ಆಹ್ವಾನಿಸಿದ, ಆತ್ಮಕ್ಕೆ ದೇಹ ಸಿಕ್ಕ ತಕ್ಷಣ ವಿಚಿತ್ರವಾಗಿ ಕಿರುಚಿ ಕುಣಿದು, ನೆಲಕ್ಕೆ ಕುಸಿದು ಗೋಳಾಡತೊಡಗಿತು, ಪಂಡಿತ ಯಾರು ನೀನು ನೀನ್ಯಾಕೆ ಈ ರೀತಿ ಕಿರುಚುತ್ತಿರುವೆ, ಒಂದನೇ ಆತ್ಮ ನಾನು ಪಕ್ಕದೂರಿನ ಶಾಂತಮ್ಮನ ಮಗ ನನ್ನ ತಾಯಿಗೆ ಔಷಧಿ ಕೊಡಲು ಹೋಗುತ್ತಿದ್ದಾಗ ಇದೇ ಊರಿನ ರಸ್ತೆಯಲ್ಲಿ ಅಪಘಾತವಾಗಿ ಸತ್ತು ಹೋಗಿದ್ದೇನೆ, ನಾನು ತಾಯಿ ನೋಡಬೇಕೆಂದು ಅಂಗಲಾಚಿತು, ನಂತರ ತಾಯಿಯನ್ನು ಕರೆಸುವ ಏರ್ಪಾಟು ಮಾಡಲಾಯಿತು, ನಂತರ ಅದೇ ದೇಹಕ್ಕೆ ಕಾಳಯ್ಯನ ದೇಹವನ್ನು ಆಹ್ವಾನಿಸಲಾಗಿ ಕಾಳಯ್ಯನ ಆತ್ಮ ಅಳುತ್ತ ಮಾತನಾಡ ತೊಡಗಿತು, ಅಂದು ಬಸ್ಸಿಳಿದು ಬರುವಾಗ ಮೊದಲೇ ಭಯಗೊಂಡಿದ್ದೆ ಬಾವಿಯ ಸಮೀಪ ಬಂದ ಕೂಡಲೇ ಆ ಆತ್ಮದ ಕಿರುಚಾಟ ನನ್ನ ಕಡೆ ಬಂತು ನಾನು ಭಯಗೊಂಡು ಓಡುವ ಭರದಲ್ಲಿ ಬಾವಿಗೆ ಬಿದ್ದೆ ಬಾವಿಯಲ್ಲಿ ನೀರಿಲ್ಲದ ಕಾರಣ ತಲೆಗೆ ಏಟು ಬಿದ್ದು ಪ್ರಾಣ ಹೋಯಿತು, ಎನ್ನುವಾಗ ಅಳು ಧಾರಾಕಾರವಾಗಿತ್ತು, ಜೊತೆಗೆ ಅವರ ಹೆಂಡತಿ ಮಕ್ಕಳ ರೋಧನೆಯೂ ಕೂಡ, ಇದಾದ ಬಳಿಕ ಮೊದಲನೇ ಆತ್ಮದ ತಾಯಿ ಬಂದಾಗ ಮತ್ತೆ ಆ ಆತ್ಮ ತಾಯಿಯ ಬಳಿ ಮಾತನಾಡಲು ಶುರು ಮಾಡಿತು, ಅಮ್ಮ ನಿನಗೆ ಔಷಧಿ ಕೊಡಲಾಗಲಿಲ್ಲ, ಈ ವಿಷಯವನ್ನು ಹೇಳಲು ಈ ಊರಿನವರಿಗೆ ಎಷ್ಟು ಹೇಳಿದರು ಅರ್ಥವಾಗಲಿಲ್ಲ, ಅಂದು ಕಾಳಯ್ಯನವರಿಗೂ ಹೇಳಲು ಬಂದೆ ಅವರು ಹೆದರಿ ಬಾವಿಗೆ ಬಿದ್ದರು ಎಂದು ಹೇಳಿ ಕ್ಷಮೆ ಕೇಳಿತು, ನಂತರ ಪಂಡಿತರು ಎರಡು ಆತ್ಮಗಳಿಗೆ ಮುಕ್ತಿ ಕೊಟ್ಟು ಸುಖಾಂತ್ಯವಾಡಿದರು ಊರು ಕೂಡ ಶಾಂತವಾಯಿತು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.