Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಒಂದು ಧನುವಿಂಗೆ ಮೂರಂಬ ಹಿಡಿದೆ. ಒಂದು ಬಾಣದ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು. ಮತ್ತೊಂದು ಬಾಣವ ಬಿಡಲಾಗಿ ಪದ್ಮನಾಭನ ಹೆಡಗಯ್ಯ ಕಟ್ಟಿತ್ತು. ಕಡೆಯ ಬಾಣ ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು; ಗರಿ ಜಾರಿತ್ತು; ನಾರಿಯ ಹೂಡುವ ...
ತಲೆಯ ಮೇಲೆ ತಲೆಯುಂಟೆ? ಗಳದಲ್ಲಿ ವಿಷವುಂಟೆ? ಹಣೆಯಲ್ಲಿ ಕಣ್ಣುಂಟೆ? ದೇವರೆಂಬವರಿಗೆಂಟೊಡಲುಂಟೆ? ತಂದೆ ಇಲ್ಲದವರುಂಟೆ? ತಾಯಿ ಇಲ್ಲದವರುಂಟೆ? ಎಲೊ! ನಿನ್ನ ನೊಸಲಲ್ಲಿ ನೇಸರು ಮೂಡದೆ? ಶಂಭು ತೆಲುಗೇಶ್ವರಾ, ನಿನಗಲ್ಲದುಳಿದ ದೈವಂಗಳಿಗುಂಟೆ ಕಾಲೊಳು ...
ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು ಕಾಣಲೆಂದು ಬಂದ ಸುಖ ಕಂಡಲ್ಲದೆ ಹರಿಯದು. ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದ ನೋಡಿದರು. ಪಾತಾಳವಿತ್ತತ್ತ, ಪದಂಗಳತ್ತತ್ತ, ದಶದಿಕ್ಕು ಇತ್ತಿತ್ತ, ...
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ. ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ. ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ. ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ. ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ? ...
ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ, ಅಜಾತರಿಗುಂಟೆ ಅಯ್ಯಾ? ಈಸಕ್ಕಿಆಸೆ ನಿಮಗೇಕೆ? ಈಶ್ವರನೊಪ್ಪ. ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ. ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ...
ಎನ್ನ ಕುಲಸೂತಕವ ಕಳೆದಾತ ಬಸವಣ್ಣ ಎನ್ನ ಮನಸೂತಕವ ಕಳೆದಾತ ಬಸವಣ್ಣ ಎನ್ನ ತನುಸೂತಕವ ಕಳೆದಾತ ಬಸವಣ್ಣ ಎನ್ನ ನೆನಹು ಸೂತಕವ ಕಳೆದಾತ ಬಸವಣ್ಣ ಎನ್ನ ಕುರುಹು ಸೂತಕವ ಕಳೆದಾತ ಬಸವಣ್ಣ ಎನ್ನ ಭಾವಸೂತಕವ ಕಳೆದಾತ ಬಸವಣ್ಣ ಎನ್ನ ತನ್ನೊಳಗೆ ...
ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು; ಆ ಅರಿದ ನಿಶ್ಚಯವೆ ಲಿಂಗ; ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ; ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ! ಇಂತು ಪ್ರಮಥರ ಸಚ್ಚಿದಾನಂದಲೀಲೆಯ ಅರಿದಾನಂದಿಸ! ಸಂಗನ ಬಸವೇಶ್ವರ! ಒಂದಲ್ಲ ...
ಅಂತರಂಗದಲ್ಲಿ ಅರಿವಿಲ್ಲದವಂಗೆ ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ? ಅದು ಕಣ್ಣಿಲ್ಲದವನ ಬಾಳುವೆಯಂತೆ. ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ ಅಂತರಂಗದಲ್ಲಿ ಅರಿವಿದ್ದು ಫಲವೇನು ? ಅದು ಶೂನ್ಯಾಲಯದ ದೀಪದಂತೆ. ಅಂತರಂಗದ ಅರಿವು, ಬಹಿರಂಗದ ಕ್ರಿಯೆ- ಈ ...
*************************** “ಕಾಯಕವೇ ಕೈಲಾಸ” ವೆಂದು ಸಾರಿದ ಬಸವಣ್ಣ, ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ "ಆವ ಕಾಯಕ ಮಾಡಿದೊಡೆ ಒಂದೇ ಕಾಯಕ" ಎಂದು ಗಂಗಮ್ಮ ಹೇಳಿದಂತೆ ಕಾಯಕದಲ್ಲಿ ಮೇಲು-ಕೀಳಿಲ್ಲ. ಕಾಯಕದ ಮಹತ್ವವನ್ನು ತಿಳಿದುಕೊಂಡ ಶರಣೆ ...
ಏಕಾಕ್ಷರ ದ್ವ್ಯಕ್ಷರ ತ್ರ್ಯಕ್ಷರ ಪಂಚಾಕ್ಷರ. ಅಕಾರವೇ ಬೀಜ, ಆಕಾರವೇ ಮೂರ್ತಿ. ಕಕಾ ಕಿಕೀ ಕುಕೂ ಧಾಂ ಧೀಂ ಧೋಂ ಧಾಂ ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ. ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು, ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ? ...
ಕಾಗೆಯ ನಾಯ ತಿಂದವರಿಲ್ಲದ ವ್ರತಭ್ರಷ್ಟನ ಕೂಡಿದವರಿಲ್ಲ. ನಾಯಿಗೆ ನಾರಂಗವಕ್ಕುವುದೆ ? ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ? ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ. ****************************** ಗ್ರಂಥ ಋಣ : ...
ಎನ್ನ ಮನವೆ ಬಸವಣ್ಣನು. ಎನ್ನ ಬುದ್ಧಿಯೆ ಚನ್ನಬಸವಣ್ಣನು. ಎನ್ನ ಚಿತ್ತವೆ ಸಿದ್ಧರಾಮಯ್ಯನು. ಎನ್ನ ಅಹಂಕಾರವೆ ಮಡಿವಾಳಯ್ಯನು. ಎನ್ನ ಕ್ಷಮೆಯೆ ನಿಜಗುಣದೇವರು. ಎನ್ನ ದಮೆಯೆ ಘಟ್ಟಿವಾಳಯ್ಯನು. ಎನ್ನ ಶಾಂತಿಯೆ ಅಜಗಣ್ಣನು. ಎನ್ನ ಸೈರಣೆಯೆ ...
ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ? ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕಯ್ಯಾ ? ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ? ಅಗಮ್ಯವಾಗಿ ಚರಿಸುವಂಗೆ ಅಂಗನೆಯರ ಹಂಗೇತಕಯ್ಯಾ ? ಅಮುಗೇಶ್ವರಲಿಂಗವನರಿದ ಶರಣಂಗೆ ಕಾವಿ ...
ತನುವಿನಲ್ಲಿ ವೇಷವನಾರು ಧರಿಸರು? ಪಟದಲ್ಲಿರದೆ ವೇಷ? ಘಟದಲ್ಲಿರದೆ ವೇಷ? ಕೊಂಬಿನಲ್ಲಿರದೆ ವೇಷ? ಅಂಬರದಲ್ಲಿರದೆ ವೇಷ? ವೇಶಿಯಲ್ಲಿರದೆ ವೇಷ? ಮೇಘದಲ್ಲಿರದೆ ವೇಷ? ಇವು ರಾಶಿಯ ದೈವವಲ್ಲದೆ, ಪರಮನ ವೇಷ ಕಾವಿಯಲಿಲ್ಲ, ಜಡೆ ಮುಡಿ ಬೋಳಿನಲಿಲ್ಲ, ...
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ ಕ್ರಿಮಿ ಎನ್ನಂಗದೊಳು ಹುಟ್ಟಿ, ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು ಅವ ನಾ ರಕ್ಷಿಸಿದೆನೆ? ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ? ಇಂತೀ ಜೀವದ ದೃಷ್ಟವ ಕಂಡು ಎನಗಿದೆತ್ತಣ ಸರ್ವ ಜೀವದಯ ಈ ರಕ್ತದ ಲೇಪವ ...