ವೈಜ್ಞಾನಿಕ ಕಥಾ ಸ್ಪರ್ಧೆ

ವಿಜ್ಞಾನ - ತಂತ್ರಜ್ಞಾನ ನಮ್ಮ ದಿನನಿತ್ಯದ ಬದುಕನ್ನು ತುಂಬಾ ಸುಲಭಗೊಳಿಸಿವೆ.ನಮ್ಮ ಜೀವನ ಕ್ರಮ ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೇಲೆ ಎಷ್ಟು ಅವಲಂಬಿತವಾಗಿವೆ ಎಂದರೆ ಒಂದು ಕ್ಷಣ, ನಾವು ಬಳಸುವ ಎಲ್ಲಾ ಉಪಕರಣಗಳು,ಜಾಲಗಳು ಸಂಪರ್ಕ ಕಳೆದುಕೊಂಡು ಬಿಟ್ಟರೆ ಪ್ರಪಂಚದಾದ್ಯಂತ ಅಲ್ಲೋಲ ಕಲ್ಲೋಲ ಉಂಟಾಗಿಬಿಡುತ್ತದೆ.ಎಷ್ಟೋ ಲಕ್ಷ ಕೋಟಿಗಳ ವ್ಯಾಪಾರ ವ್ಯವಹಾರ ನಿಂತೇ ಹೋಗುತ್ತದೆ. ಇಷ್ಟೇ ಅಲ್ಲ ಮಾನಸಿಕವಾಗಿ ನಾವು ಈ ರೀತಿಯ ವಿಜ್ಞಾನ ತಂತ್ರಜ್ಞಾನಗಳು ಒದಗಿಸುವ ಸೌಲಭ್ಯಗಳು ಮತ್ತು ಮನರಂಜನೆಗೆ ಎಷ್ಟು ದಾಸರಾಗಿದ್ದೇವೆಂದರೆ ಮನೋ ವೈದ್ಯಕೀಯ ಶಿಕ್ಷಣದಲ್ಲಿ ಈ ರೀತಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ದಾಸರಾಗುವುದನ್ನು ಅಧ್ಯಯನ ಮಾಡಲು ಹೊಸ ವಿಭಾಗವನ್ನೇ ತೆರೆಯಲಾಗಿದೆ.ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಪ್ರತಿ ದಿನದ ಪ್ರತಿ ಕ್ಷಣದ ಪ್ರತಿ ಆಗುಹೋಗುಗಳ ಅವಿಭಾಜ್ಯ ಅಂಗಗಳಾಗಿರುವುದು ನಮಗೆಲ್ಲ ತಿಳಿದ ವಿಚಾರವೇ ಆಗಿದೆ.

ವೈಜ್ಞಾನಿಕ ವಿಚಾರಗಳನ್ನು ತುಂಬಿದ ಕಲ್ಪನೆಯನ್ನು ಕಥೆಯಾಗಿಸಿದರೆ,ವಿಜ್ಞಾನ ತಂತ್ರಜ್ಞಾನದ ವಿವಿಧ ಸೌಲಭ್ಯಗಳನ್ನು/ಅನುಕೂಲತೆಗಳನ್ನು/ಅನಾನುಕೂಲತೆಗಳನ್ನೂ/ಅಪಾಯಗಳನ್ನೂ ಕಥೆಯ ಹರಿವಿಗೆ ಪೂರಕಗೊಳಿಸಿ,ವಸ್ತುವಾಗಿಸಿ,ಅದನ್ನೇ ಕಥೆಯ ಮುಖ್ಯ ತಿರುವಿಗೆ ಕಾರಣವಾಗಿಸಿ ಕಥೆಗಳನ್ನು ರಚಿಸಿದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಕನ್ನಡದ ಓದುಗರೂ ಸಹಾ ಹೊಸ ರೀತಿಯ ಕಥೆಗಳನ್ನು ಓದಿ ಆನಂದಿಸಬಹುದು.ಇನ್ನೂ ಕಂಡುಹಿಡಿಯದ ಸೌಲಭ್ಯಗಳನ್ನು ವೈಜ್ಞಾನಿಕ ಉಪಕರಣಗಳನ್ನು ಕಥೆಯಲ್ಲಿ  ಕಲ್ಪಿಸಿ ಮುಂದಿನ ಜೀವನದ ಆಗುಹೋಗುಗಳನ್ನು ಕಥೆಯಾಗಿಸಿ ಪ್ರಕಟಿಸಬಹುದು.ಇದು ಓದುಗರಿಗೆ ಹೊಸ ಅನುಭವವನ್ನೂ ಕಲ್ಪನಾ ಲೋಕವನ್ನೂ ಪರಿಚಯಿಸುವುದರ ಜೊತೆಗೆ ಬರಹಗಾರರ ಸೃಜನಶೀಲತೆಗೂ ಕೂಡಾ ಸಾಣೆ ಹಿಡಿದು ಹೊಸ ಬಗೆಯ ಕೃತಿಗಳ ರಚನೆಗೆ ಪ್ರೇರಣೆಯಾಗಬಲ್ಲದು.

ಈ ಸಲದ ಪ್ರತಿಲಿಪಿ ಕಥಾ ಸ್ಪರ್ಧೆಯ ವಿಷಯ - ವೈಜ್ಞಾನಿಕ ತಳಹದಿಯ, ವಿಜ್ಞಾನ ತಂತ್ರಜ್ಞಾನ ಆಧಾರಿತ ಕಥೆಗಳು. 

ತಡ ಮಾಡಬೇಡಿ.ಇಂದೇ ಬರೆಯಲು ಪ್ರಾರಂಭಿಸಿ. ಬರಹಗಳನ್ನು ಸಬ್ಮಿಟ್ ಮಾಡಲು ಕೊನೆಯ ದಿನಾಂಕ ಅಕ್ಟೊಬರ್10,2019. 

ವಿಜೇತರ ಆಯ್ಕೆ : 
೧.ತೀರ್ಪುಗಾರರು ಆಯ್ಕೆ ಮಾಡುವ ನಾಲ್ಕು ಕಥೆಗಳನ್ನು ವಿಜೇತ ಕೃತಿಗಳು ಎಂದು ತೀರ್ಮಾನಿಸುತ್ತೇವೆ.
೨.ತೀರ್ಪುಗಾರರ ಆಯ್ಕೆಯ ಮೊದಲ ಇಪ್ಪತ್ತು ಕಥೆಗಳಿಗೆ ಪ್ರಮಾಣಪತ್ರ ನೀಡಲಾಗುವುದು.
 
ಪ್ರಥಮ ಬಹುಮಾನ - ೪,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
ದ್ವಿತೀಯ ಬಹುಮಾನ - ೩,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
ತೃತೀಯ ಬಹುಮಾನ - ೨,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
ನಾಲ್ಕನೆಯ ಬಹುಮಾನ -೧,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
 
ನಿಯಮಗಳು:
೧.ಕೇವಲ ಕಥೆಗಳಿಗೆ ಮಾತ್ರಾ ಅವಕಾಶ.ಲೇಖನ ಮತ್ತು ಕವಿತೆಗಳು ಈ ಸ್ಪರ್ಧೆಗೆ ಅನರ್ಹ.
೨.ಕಥೆಯು ನಿಮ್ಮಿಂದಲೇ ರಚಿಸಲ್ಪಟ್ಟಿರಬೇಕು.(ನಕಲಿಸುವುದು ಕಾನೂನಿನ ಪ್ರಕಾರ ಅಪರಾಧ)
೩.ಗರಿಷ್ಠ ಪದ ಸಂಖ್ಯೆ ೫೦೦೦ ಪದಗಳು.
೪.ನೀವು ಬರೆದ ಕೃತಿ ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟವಾಗಿರಬಾರದು. 
೫.ಒಬ್ಬರು ಐದು ಬರಹಗಳನ್ನು ಕಳುಹಿಸಬಹುದು.
 
ಗಮನಿಸಬೇಕಾದ ದಿನಾಂಕಗಳು:
೧.ನಿಮ್ಮ ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೧೦, ೨೦೧೯
೨.ಸಲ್ಲಿಸಲ್ಪಟ್ಟ ಕಥೆಗಳು ಓದುಗರಿಗೆ ಅಕ್ಟೋಬರ್ ೧೧ ರಿಂದ ಓದಸಿಗುತ್ತವೆ.
೩.ಫಲಿತಾಂಶದ ದಿನಾಂಕವನ್ನು ಅಕ್ಟೋಬರ್ ೧೧ ರಂದು ಘೋಷಿಸಲಾಗುವುದು.
 
ಸ್ಪರ್ಧೆಗೆ ಬರಹಗಳನ್ನು ಸಲ್ಲಿಸುವುದು ಹೇಗೆ ?
ಸ್ಪರ್ಧೆಗೆ ಬರಹಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರಾ ಸಲ್ಲಿಸಲು ಅವಕಾಶವಿದೆ.
ಸಲ್ಲಿಸುವ ವಿಧಾನ:
೧.ಕೆಳಗಿನ 'ಭಾಗವಹಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ. 'ಅಧ್ಯಾಯದ ಶೀರ್ಷಿಕೆ' ನಮೂದಿಸಿ.
೨.ನಿಮ್ಮ ಕಥೆಯನ್ನು 'ಬರಹವನ್ನು ಇಲ್ಲಿ ನಮೂದಿಸಿ' ಜಾಗದಲ್ಲಿ ಟೈಪ್ ಮಾಡಿ ಅಥವಾ ಇತರೆಡೆಯಿಂದ ಕಾಪಿ ಮಾಡಿ ಪೇಸ್ಟ್ ಮಾಡಿ.
೩.ಬಲ ಮೇಲ್ಭಾಗದಲ್ಲಿರುವ 'ಸಬ್ಮಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿ.
೪.ಕಥೆಯ ಶೀರ್ಷಿಕೆ, ಸಾರಾಂಶ,ಮತ್ತು ಆಂಗ್ಲ ಭಾಷೆಯಲ್ಲಿ ಕಥೆಯ ಶೀರ್ಷಿಕೆ ನಮೂದಿಸಿ.
೫.ಕೆಳ ಬಲಭಾಗದಲ್ಲಿರುವ 'ನಂತರ' ದ ಮೇಲೆ ಕ್ಲಿಕ್ ಮಾಡಿ.
೬.ಕಥೆಗೆ ಸರಿಹೊಂದುವ ಚಿತ್ರವನ್ನು ಸೇರಿಸಿ.
೭.ಪುನಃ ಕೆಳ ಬಲಭಾಗದಲ್ಲಿರುವ 'ನಂತರ' ದ ಮೇಲೆ ಕ್ಲಿಕ್ ಮಾಡಿ
೮.ಪ್ರಭೇದ ಆಯ್ಕೆ ಮಾಡಿ.
೯.ಕೆಳ ಬಲಭಾಗದಲ್ಲಿರುವ 'ಸಲ್ಲಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
೧೦.ಮುಂದಿನ ಸ್ಕ್ರೀನ್ ನಲ್ಲಿ 'ನೀವು ಸಲ್ಲಿಸಿದ ಕೃತಿಗಳು' ಅಡಿಯಲ್ಲಿ ನಿಮ್ಮ ಬರಹ ದೊರಕುತ್ತದೆ. ಅದನ್ನು ಅಕ್ಟೋಬರ್ ೧೦ ರ ಒಳಗೆ ನಿಮಗೆ ಅಗತ್ಯವಾದಲ್ಲಿ ಎಡಿಟ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು.
 
ಮೇಲೆ ನಮೂದಿಸಿದ ಮೂರನೆಯ ನಿಯಮ 'ಸಬ್ಮಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿದ ಬಳಿಕ ಇನ್ನೂ  ೭ ನಿಯಮಗಳಿವೆ ದಯವಿಟ್ಟು ಎಲ್ಲಾ ಹತ್ತೂ ನಿಯಮಗಳನ್ನೂ ಪಾಲಿಸಿ.ನಿಮ್ಮ ಬರಹ ಡ್ರಾಫ್ಟ್ ಅಲ್ಲಿ ವ್ಯಯವಾಗುವುದನ್ನು ತಡೆಯಿರಿ.
 
ಈ ಅದ್ಭುತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿಲಿಪಿಯ ಮೂಲಕ ದೇಶ ವಿದೇಶಗಳ ಲಕ್ಷಾಂತರ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ನಿಮ್ಮ ಬರಹದ ರಸದೌತಣ ನೀಡಿ.
 
ನಿಮ್ಮಿಂದ ಅದ್ಭುತ ಕೃತಿಗಳ ನಿರೀಕ್ಷೆಯಲ್ಲಿ ನಾವಿದ್ದೇವೆ.

ಕಾರ್ಯಕ್ರಮ ನಮೂದುಗಳು

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.