ಕಥನ ಕವನ ಸ್ಪರ್ಧೆ

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

ಕುವೆಂಪು ವಿರಚಿತ 'ಬೊಮ್ಮನಹಳ್ಳಿಯ ಕಿಂದರಜೋಗಿ' - ಈ ಹೆಸರನ್ನು ಕೇಳಿರದ ಕನ್ನಡ ಸಾಹಿತ್ಯಾಭಿಮಾನಿಗಳು ಯಾರೂ ಇರಲಿಕ್ಕಿಲ್ಲ.ಕವನ ರೂಪದಲ್ಲಿ ಕಥಾನಕವನ್ನು ಓದುವ ಅನುಭೂತಿಯೇ ಬೇರೆ! ಲಯ,ಯತಿ(ನಿಲುಗಡೆಯ ಸ್ಥಾನ) ಮತ್ತು ಪ್ರಾಸಗಳನ್ನೊಳಗೊಂಡ ಕವಿತೆಯ ಮೂಲಕ ಹೇಳುವ ಸ್ವಾರಸ್ಯಕರ ಕಥೆಯನ್ನು ಓದುವ ಓದುಗ ರೋಮಾಂಚಿತನಾಗುವುದು ಶತಸಿದ್ಧ! ಅದು ಪ್ರೀತಿ ಪ್ರೇಮ ಸ್ನೇಹ ಬಾಂಧವ್ಯಗಳ ಕಥೆಯಿರಬಹುದು,ಯಾವುದೋ ರೋಚಕ ಘಟನೆಯನ್ನು ಕವಿತೆಯನ್ನಾಗಿಸಿ ಹೇಳುವ ಕಥೆಯಿರಬಹುದು,ಹಾಸ್ಯ ವ್ಯಂಗ್ಯದ ವಿಷಯ ವಸ್ತುವನ್ನಿಟ್ಟುಕೊಂಡು ಮೂಡಿದ ಹಾಸ್ಯ ಕಥನ ಕವನವಿರಬಹುದು - ಒಟ್ಟಿನಲ್ಲಿ ಪ್ರತಿಲಿಪಿಯ ಓದುಗ ನಿಮ್ಮ ಕವನರೂಪದ ಕಥೆಯನ್ನು ಓದುತ್ತಾ ಆನಂದಿಸಲು ಈ ಬಾರಿಯ ಸ್ಪರ್ಧೆಯಲ್ಲಿ ಅವಕಾಶ ನೀಡುತ್ತಿದ್ದೇವೆ.

ತಡ ಮಾಡಬೇಡಿ.ಇಂದೇ 'ಕಥಾಕವನ'ವನ್ನು ರಚಿಸಲು ಪ್ರಾರಂಭಿಸಿ.ಬರಹಗಳನ್ನು ಸಬ್ಮಿಟ್ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 10,2019.

ವಿಜೇತರ ಆಯ್ಕೆ :
೧.ತೀರ್ಪುಗಾರರು ಆಯ್ಕೆ ಮಾಡುವ ಐದು ಕಥೆಗಳನ್ನು ವಿಜೇತ ಕೃತಿಗಳು ಎಂದು ತೀರ್ಮಾನಿಸುತ್ತೇವೆ.
೨.ತೀರ್ಪುಗಾರರ ಆಯ್ಕೆಯ ಮೊದಲ ಇಪ್ಪತ್ತು ಕಥೆಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಪ್ರಥಮ ಬಹುಮಾನ - ೫,೦೦೦/- ರೂಪಾಯಿಗಳು ಮತ್ತು ಪ್ರಮಾಣಪತ್ರ
ದ್ವಿತೀಯ ಬಹುಮಾನ - ೩,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
ತೃತೀಯ ಬಹುಮಾನ - ೨,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ
ನಾಲ್ಕನೆಯ ಬಹುಮಾನ - ೧,೦೦೦/-ರೂಪಾಯಿಗಳು ಮತ್ತು ಪ್ರಮಾಣಪತ್ರ

ನಿಯಮಗಳು:
೧.ಕವಿತೆಯ ರೂಪದ ಕಥೆಗಳು ಮಾತ್ರಾ ಸ್ಪರ್ಧೆಗೆ ಅರ್ಹ.ನಿಯಮಗಳಿಗೆ ಹೊರತಾದ ಬರಹಗಳನ್ನುಬಹುಮಾನಕ್ಕೆ ಪರಿಗಣಿಸುವುದಿಲ್ಲ.
೨.ಬರಹವು ನಿಮ್ಮಿಂದಲೇ ರಚಿಸಲ್ಪಟ್ಟಿರಬೇಕು.(ನಕಲಿಸುವುದು ಕಾನೂನಿನ ಪ್ರಕಾರ ಅಪರಾಧ)
೩.ಗರಿಷ್ಠ ಪದ ಸಂಖ್ಯೆ ೨೦೦೦ ಪದಗಳು.
೪.ನೀವು ಬರೆದ ಕೃತಿ ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟವಾಗಿರಬಾರದು.
೫.ಬರಹದ ವಿಧ - ಕವಿತೆ, ಪ್ರಭೇದ - 'ಕಥನ-ಕವನ' ಆಯ್ಕೆ ಮಾಡಿಕೊಳ್ಳಬೇಕು

ಗಮನಿಸಬೇಕಾದ ದಿನಾಂಕಗಳು:
೧.ನಿಮ್ಮ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ ೧೦, ೨೦೧೯
೨.ಸಲ್ಲಿಸಲ್ಪಟ್ಟ ಕಥೆಗಳು ಓದುಗರಿಗೆ ಸೆಪ್ಟೆಂಬರ್ ೧೧ ರಿಂದ ಓದಸಿಗುತ್ತವೆ.
೩.ಫಲಿತಾಂಶದ ದಿನಾಂಕವನ್ನು ಸೆಪ್ಟೆಂಬರ್ ೧೧ ರಂದು ಘೋಷಿಸಲಾಗುವುದು.

ಸ್ಪರ್ಧೆಗೆ ಬರಹಗಳನ್ನು ಸಲ್ಲಿಸುವುದು ಹೇಗೆ ?
ಸ್ಪರ್ಧೆಗೆ ಬರಹಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರಾ ಸಲ್ಲಿಸಲು ಅವಕಾಶವಿದೆ.
ಸಲ್ಲಿಸುವ ವಿಧಾನ:
೧.ಕೆಳಗಿನ 'ಭಾಗವಹಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ. 'ಅಧ್ಯಾಯದ ಶೀರ್ಷಿಕೆ' ನಮೂದಿಸಿ.
೨.ನಿಮ್ಮ ಕಥೆಯನ್ನು 'ಬರಹವನ್ನು ಇಲ್ಲಿ ನಮೂದಿಸಿ' ಜಾಗದಲ್ಲಿ ಟೈಪ್ ಮಾಡಿ ಅಥವಾ ಇತರೆಡೆಯಿಂದ ಕಾಪಿ ಮಾಡಿ ಪೇಸ್ಟ್ ಮಾಡಿ.
೩.ಬಲ ಮೇಲ್ಭಾಗದಲ್ಲಿರುವ 'ಸಬ್ಮಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿ.
೪.ಬರಹದ ಶೀರ್ಷಿಕೆ, ಸಾರಾಂಶ,ಮತ್ತು ಆಂಗ್ಲ ಭಾಷೆಯಲ್ಲಿ ಕಥೆಯ ಶೀರ್ಷಿಕೆ ನಮೂದಿಸಿ.
೫.ಕೆಳ ಬಲಭಾಗದಲ್ಲಿರುವ 'ನಂತರ' ದ ಮೇಲೆ ಕ್ಲಿಕ್ ಮಾಡಿ.
೬.ಕಥೆಗೆ ಸರಿಹೊಂದುವ ಚಿತ್ರವನ್ನು ಸೇರಿಸಿ.
೭.ಪುನಃ ಕೆಳ ಬಲಭಾಗದಲ್ಲಿರುವ 'ನಂತರ' ದ ಮೇಲೆ ಕ್ಲಿಕ್ ಮಾಡಿ
೮.'ಕಥನ ಕವನ'ಪ್ರಭೇದ ಆಯ್ಕೆ ಮಾಡಿ - ಇದು ಬರಹದ ವಿಧ - 'ಕವಿತೆ' ಆಯ್ಕೆ ಮಾಡಿಕೊಂಡಾಗ ಮಾತ್ರಾ ಲಭ್ಯ
೯.ಕೆಳ ಬಲಭಾಗದಲ್ಲಿರುವ 'ಸಲ್ಲಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
೧೦.ಮುಂದಿನ ಸ್ಕ್ರೀನ್ ನಲ್ಲಿ 'ನೀವು ಸಲ್ಲಿಸಿದ ಕೃತಿಗಳು' ಅಡಿಯಲ್ಲಿ ನಿಮ್ಮ ಬರಹ ದೊರಕುತ್ತದೆ. ಅದನ್ನು ಸೆಪ್ಟೆಂಬರ್ ೧೦ ರ ಒಳಗೆ ನಿಮಗೆ ಅಗತ್ಯವಾದಲ್ಲಿ ಎಡಿಟ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು.

ಮೇಲೆ ನಮೂದಿಸಿದ ಮೂರನೆಯ ನಿಯಮ 'ಸಬ್ಮಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿದ ಬಳಿಕ ಇನ್ನೂ ೭ ನಿಯಮಗಳಿವೆ ದಯವಿಟ್ಟು ಎಲ್ಲಾ ಹತ್ತೂ ನಿಯಮಗಳನ್ನೂ ಪಾಲಿಸಿ.ನಿಮ್ಮ ಬರಹ ಡ್ರಾಫ್ಟ್ ಅಲ್ಲಿ ವ್ಯಯವಾಗುವುದನ್ನು ತಡೆಯಿರಿ.

ಎಲ್ಲಾ ನಿಯಮಗಳು, ದಿನಾಂಕಗಳು ಮತ್ತು ಸಲ್ಲಿಸುವ ವಿಧಾನವನ್ನು ದಯವಿಟ್ಟು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ. ಮತ್ತು ಈ ಕುರಿತು ನಿಮ್ಮಲ್ಲಿ ಸಂಶಯವೇನಾದರೂ ಇದ್ದಲ್ಲಿ 9480165516 ಸಂಖ್ಯೆಗೆ ಸಂಜೆ ಆರರ ಬಳಿಕ ಕರೆ ಮಾಡಿ.

ಈ ಅದ್ಭುತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿಲಿಪಿಯ ಮೂಲಕ ದೇಶ ವಿದೇಶಗಳ ಲಕ್ಷಾಂತರ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ನಿಮ್ಮ ಬರಹದ ರಸದೌತಣ ನೀಡಿ.

ನಿಮ್ಮಿಂದ ಅದ್ಭುತ ಕೃತಿಗಳ ನಿರೀಕ್ಷೆಯಲ್ಲಿ ನಾವಿದ್ದೇವೆ.

ಕಾರ್ಯಕ್ರಮ ನಮೂದುಗಳು

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.